PDF —
11 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಆದಿಯಾತ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಆದಿಯಾತ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಆದಿಯಾತ್ ಅನುವಾದ. ಸೂರಾ ಅಲ್-ಆದಿಯಾತ್ (Meccan) 11 ಆಯತ್.

← ಅಜ್-ಜಲ್ಜಲಾಸೂರಾ ಅಲ್-ಆದಿಯಾತ್ ಅಲ್-ಖಾರಿಆ →


11 ಆಯತ್ · Meccan · ಕನ್ನಡ
bismillah
ﮱﯓﯔ
100:1 ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.
ﯕﯖﯗ
100:2 ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ.
ﯘﯙﯚ
100:3 ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.
ﯛﯜﯝﯞ
100:4 ಆಗ ಅವು ಧೂಳು ಎಬ್ಬಿಸುವುವು.
ﯟﯠﯡﯢ
100:5 ಬಳಿಕ ಶತ್ರು ಸೈನ್ಯಗಳ ನಡುವೆ ನುಗ್ಗಿಬಿಡುವುವು.
ﭑﭒﭓﭔﭕ
100:6 ಖಂಡಿತವಾಗಿಯೂ ಮನುಷ್ಯನು ತನ್ನ ಪ್ರಭುವಿಗೆ ಮಹಾ ಕೃತಘ್ನನಾಗಿದ್ದಾನೆ,
ﭖﭗﭘﭙﭚ
100:7 ಖಂಡಿತವಾಗಿಯೂ ಸ್ವತಃ ಅವನು ಇದಕ್ಕೆ ಸಾಕ್ಷಿಯಾಗಿದ್ದಾನೆ.
ﭛﭜﭝﭞﭟ
100:8 ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.
ﭠﭡﭢﭣﭤﭥﭦﭧﭨ
100:9 ಗೋರಿಗಳಲ್ಲಿರುವುದೆಲ್ಲವನ್ನು ಹೊರತರಲಾಗುವ ಕುರಿತು ಅವನಿಗೆ ಅರಿವಿಲ್ಲವೇ?
ﭩﭪﭫﭬﭭ
100:10 ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.
ﭮﭯﭰﭱﭲﭳ
100:11 ನಿಸ್ಸಂದೇಹವಾಗಿಯೂ ಅಂದು ಅವರ ಪ್ರಭು ಅವರ ಸ್ಥಿತಿಯ ಕುರಿತು ಸಂಪರ‍್ಣ ಅರಿವು ಉಳ್ಳವನಾಗಿರುವನು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers