ಸೂರಾ ಅತ್-ತಾರಿಕ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅತ್-ತಾರಿಕ್ pdf ಕನ್ನಡ — ಡೌನ್‌ಲೋಡ್ ಸೂರಾ ಅತ್-ತಾರಿಕ್ ಅನುವಾದ. ಸೂರಾ ಅತ್-ತಾರಿಕ್ (Meccan) 17 ಆಯತ್.
Related
- ಸೂರಾ ಅತ್-ತಾರಿಕ್ ಅನುವಾದಕನ್ನಡ
- ಸೂರಾ ಅತ್-ತಾರಿಕ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅತ್-ತಾರಿಕ್

ﭑﭒﭓ
86:1
ಆಕಾಶದ ಮೇಲಾಣೆ ಮತ್ತು ರಾತ್ರಿಯಲ್ಲಿ ಪ್ರಕಟವಾಗುವುದರಾಣೆ.
ﭔﭕﭖﭗﭘ
86:2
ರಾತ್ರಿ ಪ್ರಕಟವಾಗುವಂತಹದು ಏನೆಂದು ನಿಮಗೇನು ಗೊತ್ತು.
ﭙﭚﭛ
86:3
ಅದು ಪ್ರಕಾಶಮಯ ನಕ್ಷತ್ರವಾಗಿದೆ.
ﭜﭝﭞﭟﭠﭡﭢ
86:4
ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,
ﭣﭤﭥﭦﭧ
86:5
ಮನುಷ್ಯನು ತಾನು ಯಾವುದರಿಂದ ಸೃಷ್ಟಿಸಲಾಗಿರುವೆನೆಂಬುದನ್ನು ನೋಡಲಿ.
ﭨﭩﭪﭫﭬ
86:6
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.
ﭭﭮﭯﭰﭱﭲ
86:7
ಅದು ಬೆನ್ನು ಮತ್ತು ಎದೆಯ ನಡುವಿನಿಂದ ಹೊರಬರುತ್ತದೆ
ﭳﭴﭵﭶﭷ
86:8
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.
ﭸﭹﭺﭻ
86:9
ಅಂದು ರಹಸ್ಯ ಸಂಗತಿಗಳನ್ನು ಪರಿಶೋಧಿಸಲಾಗುವುದು.
ﭼﭽﭾﭿﮀﮁﮂ
86:10
ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.
ﮃﮄﮅﮆ
86:11
ಮಳೆ ಸುರಿಸುವ ಆಕಾಶದಾಣೆ.
ﮇﮈﮉﮊ
86:12
ಬಿರಿಯುವ ಭೂಮಿಯಾಣೆ.
ﮋﮌﮍﮎ
86:13
ನಿಸ್ಸಂಶಯವಾಗಿಯೂ ಇದು (ಕುರ್ಆನ್) ನರ‍್ಣಾಯಕ ಮಾತಾಗಿದೆ.
ﮏﮐﮑﮒ
86:14
ಇದು ತಮಾಷೆಯ ಮಾತಲ್ಲ.
ﮓﮔﮕﮖ
86:15
ಖಂಡಿತವಾಗಿಯೂ ಸತ್ಯನಿಷೇಧಿಗಳು ಕುತಂತ್ರ ಹೂಡುತ್ತಿದ್ದಾರೆ.
ﮗﮘﮙ
86:16
ನಾನೂ (ಅಲ್ಲಾಹನು) ಪ್ರತಿ ತಂತ್ರವನ್ನು ಹೂಡುತ್ತಿದ್ದೇನೆ.
ﮚﮛﮜﮝﮞ
86:17
ಆದ್ದರಿಂದ (ಓ ಸಂದೇಶವಾಹಕರೇ) ಸತ್ಯನಿಷೇಧಿಗಳನ್ನು ಅವರ ಪಾಡಿಗೆ ಸ್ವಲ್ಪದಿನ ಬಿಟ್ಟುಬಿಡಿರಿ ಮತ್ತು ನೀವು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







