ಸೂರಾ ಅಲ್-ಬುರುಜ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಬುರುಜ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಬುರುಜ್ ಅನುವಾದ. ಸೂರಾ ಅಲ್-ಬುರುಜ್ (Meccan) 22 ಆಯತ್.
Related
- ಸೂರಾ ಅಲ್-ಬುರುಜ್ ಅನುವಾದಕನ್ನಡ
- ಸೂರಾ ಅಲ್-ಬುರುಜ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಬುರುಜ್

ﭛﭜﭝﭞ
85:1
ನಕ್ಷತ್ರ ಮಂಡಲಗಳಿರುವ ಆಕಾಶದಾಣೆ
ﭟﭠﭡ
85:2
ವಾಗ್ದಾನ ಮಾಡಲಾದ ದಿನದಾಣೆ.
ﭢﭣﭤ
85:3
ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!
ﭥﭦﭧﭨ
85:4
ಹೊಂಡದವರು ನಾಶಗೊಳಿಸಲಾದರು.
ﭩﭪﭫﭬ
85:5
ಅದು ಇಂಧನ ತುಂಬಲಾದ ಒಂದು ಬೆಂಕಿಯಾಗಿತ್ತು.
ﭭﭮﭯﭰﭱ
85:6
ಅವರು ಅದರ ಸುತ್ತಮುತ್ತ ಕುಳಿತಿದ್ದ ಸಂರ‍್ಭ.
ﭲﭳﭴﭵﭶﭷﭸ
85:7
ಅವರು ಸತ್ಯವಿಶ್ವಾಸಿಗಳೊಡನೆ ಮಾಡುತ್ತಿದ್ದಂತಹ ಕೃತ್ಯಕ್ಕೆ ಸ್ವತಃ ಅವರೇ ಪ್ರತ್ಯಕ್ಷರ‍್ಶಿಗಳಾಗಿದ್ದರು.
ﭹﭺﭻﭼﭽﭾﭿﮀﮁﮂ
85:8
ಅವರು ಪ್ರತಾಪಶಾಲಿಯು ಸ್ತುತ್ರ‍್ಹನೂ ಆದ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದರು ಎಂಬ ಕಾರಣದ ಹೊರತು ಇನ್ನಾವುದೇ ದೋಷಕ್ಕೆ ಅವರು ಸತ್ಯ ವಿಶ್ವಾಸಿಗಳೊಡನೆ ಪ್ರತಿಕಾರ ತೀರಿಸುತ್ತಿರಲಿಲ್ಲ.
ﮃﮄﮅﮆﮇﮈﮉﮊﮋﮌﮍﮎ
85:9
ಅವನಿಗೇ ಆಕಾಶಗಳ ಮತ್ತು ಭೂಮಿಯ ಅಧಿಪತ್ಯವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ವೀಕ್ಷಿಸುತ್ತಿರುವನು.
ﮏﮐﮑﮒﮓﮔﮕﮖﮗﮘﮙﮚﮛﮜﮝ
85:10
ನಿಸ್ಸಂಶಯವಾಗಿಯೂ ಯಾರು ಸತ್ಯವಿಶ್ವಾಸಿ ಪುರಷರನ್ನು ಮತ್ತು ಸ್ತಿçÃಯರನ್ನು ಹಿಂಸಿಸಿದರೋ, ಅನಂತರ ಪಶ್ಚಾತ್ತಾಪ ಪಡಲಿಲ್ಲವೋ ಅವರಿಗೆ ನರಕದಶಿಕ್ಷೆಯಿದೆ ಮತ್ತು ಸುಡುವಯಾತನೆಯಿದೆ.
ﮞﮟﮠﮡﮢﮣﮤﮥﮦﮧﮨﮩﮪﮫﮬﮭ
85:11
ನಿಸ್ಸಂಶಯವಾಗಿಯೂ ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ರ‍್ಮವೆಸಗಿದವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಿವೆ. ಇದುವೇ ಮಹಾ ವಿಜಯವಾಗಿದೆ.
ﮮﮯﮰﮱﯓ
85:12
ಖಂಡಿತವಾಗಿಯೂ ನಿಮ್ಮ ಪ್ರಭುವಿನ ಹಿಡಿತವೂ ಅತ್ಯುಗ್ರವಾಗಿದೆ.
ﯔﯕﯖﯗﯘ
85:13
ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.
ﯙﯚﯛﯜ
85:14
ಅವನು ಕ್ಷಮಾಶೀಲನು ಅತ್ಯಂತ ಪ್ರೀತಿಸುವವನು ಆಗಿದ್ದಾನೆ.
ﯝﯞﯟﯠ
85:15
ಸಿಂಹಾಸನದ ಒಡೆಯನು, ಔನ್ನತ್ಯವುಳ್ಳವನು ಆಗಿದ್ದಾನೆ.
ﯡﯢﯣﯤ
85:16
ತಾನಿಚ್ಛಿಸುವುದನ್ನು ಮಾಡಿಯೇ ತೀರುವವನಾಗಿದ್ದಾನೆ.
ﯥﯦﯧﯨﯩ
85:17
ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?
ﯪﯫﯬ
85:18
(ಅಂದರೆ) ಫಿರ್ಔನ್ ಮತ್ತು ಸಮೂದ್ನ ವೃತ್ತಾಂತ ?
ﯭﯮﯯﯰﯱﯲ
85:19
ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ﯳﯴﯵﯶﯷ
85:20
ಮತ್ತು ಅಲ್ಲಾಹನು ಅವರನ್ನು ಎಲ್ಲಾ ಕಡೆಯಿಂದ ಆವರಿಸಿಕೊಂಡಿದ್ದಾನೆ.
ﯸﯹﯺﯻﯼ
85:21
ಆದರೆ ಇದು ಗೌರವಾನ್ವಿತ ಕುರ್ಆನ್ ಆಗಿದೆ.
ﯽﯾﯿﰀ
85:22
ಸುರಕ್ಷಿತ ಫಲಕದಲ್ಲಿದೆ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







