ಅನ್-ನಮ್ಲ್ · 62/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
أَمَّن يُجِيبُ الْمُضْطَرَّ إِذَا دَعَاهُ وَيَكْشِفُ السُّوءَ وَيَجْعَلُكُمْ خُلَفَاءَ الْأَرْضِ ۗ أَإِلَٰهٌ مَّعَ اللَّهِ ۚ قَلِيلًا مَّا تَذَكَّرُونَ ٦٢
Transliteration
Ammany-yujeebul mud tarra izaa da`aahu wa yakshifussooo`a wa yaj`alukum khula faaa`al ardi `a-ilaahum ma`al laahi qaleelam maa tazak karoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅಥವಾ ಸಂಕಷ್ಟಕ್ಕೆ ಗುರಿಯಾದವನು ಕರೆದು ಬೇಡಿದಾಗ ಅವನ ಕರೆಗೆ ಓಗೊಟ್ಟು ಅವನ ಸಂಕಷ್ಟವನ್ನು ನೀಗಿಸುವವನು ಯಾರು?ಮತ್ತು ನಿಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿ ನಿಶ್ಚಯಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅತ್ಯಲ್ಪವೇ ನೀವು ಉಪದೇಶಗಳನ್ನು ಸ್ವೀಕರಿಸುತ್ತೀರಿ.
Additional reference in தமிழ்
🎧 ಆಲಿಸಿ
📜 ಆಯತ್ 60-64 — ಸೂರಾ ಅನ್-ನಮ್ಲ್
60أَمَّنْ خَلَقَ السَّمَاوَاتِ وَالْأَرْضَ وَأَنزَلَ لَكُم مِّنَ السَّمَاءِ مَاءً فَأَنبَتْنَا بِهِ حَدَائِقَ ذَاتَ بَهْجَةٍ مَّا كَانَ لَكُمْ أَن تُنبِتُوا شَجَرَهَا ۗ أَإِلَٰهٌ مَّعَ اللَّهِ ۚ بَلْ هُمْ قَوْمٌ يَعْدِلُونَ
(ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ?
61أَمَّن جَعَلَ الْأَرْضَ قَرَارًا وَجَعَلَ خِلَالَهَا أَنْهَارًا وَجَعَلَ لَهَا رَوَاسِيَ وَجَعَلَ بَيْنَ الْبَحْرَيْنِ حَاجِزًا ۗ أَإِلَٰهٌ مَّعَ اللَّهِ ۚ بَلْ أَكْثَرُهُمْ لَا يَعْلَمُونَ
ಭೂಮಿಯನ್ನು ಸ್ಥಿರತೆಯುಳ್ಳ ತಂಗುದಾಣವನ್ನಾಗಿ ಮಾಡಿಕೊಟ್ಟವನು ಮತ್ತು ಅದರ ನಡುವೆ ನದಿಗಳನ್ನು ಹರಿಸಿಕೊಟ್ಟವನು ಮತ್ತು ಅದಕ್ಕಾಗಿ ದೃಢ ಪರ್ವತಗಳನ್ನು ನಾಟಿದವನು ಮತ್ತು ಎರಡು ಸಮುದ್ರಗಳ ನಡುವೆ ತಡಯೊಂದನ್ನು ನಿಶ್ಚಯಿಸಿದವನು ಯಾರು? ಅಲ್ಲಾಹನೊಂದಿಗೆ ಇತರ ಆರಾಧ್ಯರೂ ಇದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
62أَمَّن يُجِيبُ الْمُضْطَرَّ إِذَا دَعَاهُ وَيَكْشِفُ السُّوءَ وَيَجْعَلُكُمْ خُلَفَاءَ الْأَرْضِ ۗ أَإِلَٰهٌ مَّعَ اللَّهِ ۚ قَلِيلًا مَّا تَذَكَّرُونَ
ಅಥವಾ ಸಂಕಷ್ಟಕ್ಕೆ ಗುರಿಯಾದವನು ಕರೆದು ಬೇಡಿದಾಗ ಅವನ ಕರೆಗೆ ಓಗೊಟ್ಟು ಅವನ ಸಂಕಷ್ಟವನ್ನು ನೀಗಿಸುವವನು ಯಾರು?ಮತ್ತು ನಿಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿ ನಿಶ್ಚಯಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅತ್ಯಲ್ಪವೇ ನೀವು ಉಪದೇಶಗಳನ್ನು ಸ್ವೀಕರಿಸುತ್ತೀರಿ.
63أَمَّن يَهْدِيكُمْ فِي ظُلُمَاتِ الْبَرِّ وَالْبَحْرِ وَمَن يُرْسِلُ الرِّيَاحَ بُشْرًا بَيْنَ يَدَيْ رَحْمَتِهِ ۗ أَإِلَٰهٌ مَّعَ اللَّهِ ۚ تَعَالَى اللَّهُ عَمَّا يُشْرِكُونَ
ನಿಮ್ಮನ್ನು ನೆಲ ಮತ್ತು ಸಮುದ್ರದ ಅಂಧಕಾರಗಳಲ್ಲಿ ದಾರಿ ತೋರಿಸುವವನು ಯಾರು? ತನ್ನ ಕರುಣೆಗೆ ಮುಂಚೆಯೇ ಸುವಾರ್ತೆ ನೀಡುವಂತಹ ಮಾರುತಗಳನ್ನು ಕಳುಹಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅವರು ಕಲ್ಪಿಸಿಕೊಳ್ಳುತ್ತಿರುವ ಸಹಭಾಗಿತ್ವದಿಂದ ಅವನು ಅದೆಷ್ಟೋ ಉನ್ನತನಾಗಿದ್ದಾನೆ.
64أَمَّن يَبْدَأُ الْخَلْقَ ثُمَّ يُعِيدُهُ وَمَن يَرْزُقُكُم مِّنَ السَّمَاءِ وَالْأَرْضِ ۗ أَإِلَٰهٌ مَّعَ اللَّهِ ۚ قُلْ هَاتُوا بُرْهَانَكُمْ إِن كُنتُمْ صَادِقِينَ
ಸೃಷ್ಟಿಯನ್ನು ಪ್ರಥಮ ಬಾರಿಗೆ ಉಂಟು ಮಾಡಿ, ತರುವಾಯ ಅದನ್ನು ಪುನರಾವರ್ತಿಸುವವನು ಯಾರು? ಆಕಾಶದಿಂದಲೂ, ಭೂಮಿಯಿಂದಲೂ ನಿಮಗೆ ಜೀವನಾಧಾರ ನೀಡುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಹೇಳಿರಿ, ನೀವು ಸತ್ಯವಂತರಾಗಿದ್ದರೆ ನಿಮ್ಮ ಆಧಾರ ಪುರಾವೆಯನ್ನು ತನ್ನಿರಿ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
62ಆಯತ್
ಅನುವಾದ — ಅನ್-ನಮ್ಲ್ 62
ಸೂರಾ ಅನ್-ನಮ್ಲ್ ಆಯತ್ 62 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ಸಂಕಷ್ಟಕ್ಕೆ ಗುರಿಯಾದವನು ಕರೆದು ಬೇಡಿದಾಗ ಅವನ ಕರೆಗೆ ಓಗೊಟ್ಟು ಅವನ ಸಂಕಷ್ಟವನ್ನು…ಸೂರಾ ಆಯತ್ 62/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 60–64. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








