ಆಲ್-ಇಮ್ರಾನ್ · 64/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
قُلْ يَا أَهْلَ الْكِتَابِ تَعَالَوْا إِلَىٰ كَلِمَةٍ سَوَاءٍ بَيْنَنَا وَبَيْنَكُمْ أَلَّا نَعْبُدَ إِلَّا اللَّهَ وَلَا نُشْرِكَ بِهِ شَيْئًا وَلَا يَتَّخِذَ بَعْضُنَا بَعْضًا أَرْبَابًا مِّن دُونِ اللَّهِ ۚ فَإِن تَوَلَّوْا فَقُولُوا اشْهَدُوا بِأَنَّا مُسْلِمُونَ ۝٦٤
Qul yaa Ahlal Kitaabi ta`aalaw ilaa Kalimatin sawaaa`im bainanaa wa bainakum allaa na`buda illal laaha wa laa nushrika bihee shai`anw wa laa yattakhiza ba`dunaa ba`dan arbaabam min doonil laah; fa in tawallaw faqoolush hadoo bi annaa muslimoon
📖 ಕನ್ನಡ ಅರ್ಥ
ಓ ಪೈಗಂಬರರೇ ಹೇಳಿರಿ: 'ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ಅಲ್ಲಾಹನನ್ನು ಹೊರತುಪಡಿಸಿ ನಾವು ಪರಸ್ಪರರಲ್ಲಿ ಇತರ ಯಾರನ್ನೂ ನಮ್ಮ ಪ್ರಭುವಾಗಿರಿಸದಿರೋಣ. ಇನ್ನು ಅವರು ವಿಮುಖರಾದರೆ ಅವರೊಡನೆ ಹೇಳಿರಿ: 'ನಾವು (ಅಲ್ಲಾಹನಿಗೆ) ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'

🎧 ಆಲಿಸಿ


📜 ಆಯತ್ 62-66 — ಸೂರಾ ಆಲ್-ಇಮ್ರಾನ್

62إِنَّ هَٰذَا لَهُوَ الْقَصَصُ الْحَقُّ ۚ وَمَا مِنْ إِلَٰهٍ إِلَّا اللَّهُ ۚ وَإِنَّ اللَّهَ لَهُوَ الْعَزِيزُ الْحَكِيمُ
ಖಂಡಿತವಾಗಿಯು ಇದು ನೈಜ ಘಟನೆಗಳ ವಿವರಣೆಯಾಗಿದೆ ಮತ್ತು ಅಲ್ಲಾಹನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಮತ್ತು ನಿಸ್ಸಂದೇಹವಾಗಿಯು ಪ್ರತಾಪಶಾಲಿಯು, ಯುಕ್ತಿಪೂರ್ಣನು ಅಲ್ಲಾಹನಾಗಿದ್ದಾನೆ.
63فَإِن تَوَلَّوْا فَإِنَّ اللَّهَ عَلِيمٌ بِالْمُفْسِدِينَ
ಇನ್ನು ಅವರು ವಿಮುಖರಾದರೆ ಖಂಡಿತವಾಗಿಯು ಅಲ್ಲಾಹನು ಕಿಡಿಗೇಡಿಗಳ ಕುರಿತು ಚೆನ್ನಾಗಿ ಬಲ್ಲನು.
64قُلْ يَا أَهْلَ الْكِتَابِ تَعَالَوْا إِلَىٰ كَلِمَةٍ سَوَاءٍ بَيْنَنَا وَبَيْنَكُمْ أَلَّا نَعْبُدَ إِلَّا اللَّهَ وَلَا نُشْرِكَ بِهِ شَيْئًا وَلَا يَتَّخِذَ بَعْضُنَا بَعْضًا أَرْبَابًا مِّن دُونِ اللَّهِ ۚ فَإِن تَوَلَّوْا فَقُولُوا اشْهَدُوا بِأَنَّا مُسْلِمُونَ
ಓ ಪೈಗಂಬರರೇ ಹೇಳಿರಿ: 'ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ಅಲ್ಲಾಹನನ್ನು ಹೊರತುಪಡಿಸಿ ನಾವು ಪರಸ್ಪರರಲ್ಲಿ ಇತರ ಯಾರನ್ನೂ ನಮ್ಮ ಪ್ರಭುವಾಗಿರಿಸದಿರೋಣ. ಇನ್ನು ಅವರು ವಿಮುಖರಾದರೆ ಅವರೊಡನೆ ಹೇಳಿರಿ: 'ನಾವು (ಅಲ್ಲಾಹನಿಗೆ) ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'
65يَا أَهْلَ الْكِتَابِ لِمَ تُحَاجُّونَ فِي إِبْرَاهِيمَ وَمَا أُنزِلَتِ التَّوْرَاةُ وَالْإِنجِيلُ إِلَّا مِن بَعْدِهِ ۚ أَفَلَا تَعْقِلُونَ
ಓ ಗ್ರಂಥದವರೇ, ನೀವು ಇಬ್ರಾಹೀಮರ ವಿಷಯದಲ್ಲಿ ಏಕೆ ತರ್ಕಿಸುತ್ತೀರಿ? ವಸ್ತುತಃ ತೌರಾತ್ ಮತ್ತು ಇಂಜೀಲ್‌ಗಳAತು ಅವರ ನಂತರ ಅವತೀರ್ಣಗೊಂಡಿವೆ. ಹಾಗಿದ್ದು ನೀವು ತಿಳಿದುಕೊಳ್ಳುವುದಿಲ್ಲವೇ?
66هَا أَنتُمْ هَٰؤُلَاءِ حَاجَجْتُمْ فِيمَا لَكُم بِهِ عِلْمٌ فَلِمَ تُحَاجُّونَ فِيمَا لَيْسَ لَكُم بِهِ عِلْمٌ ۚ وَاللَّهُ يَعْلَمُ وَأَنتُمْ لَا تَعْلَمُونَ
ನಿಮಗೆ ಜ್ಞಾನವಿರುವ ವಿಷಯದಲ್ಲಿ ನೀವು ತರ್ಕಿಸದಿರಿ. ಇನ್ನು ನಿಮಗೆ ಯಾವುದೇ ಜ್ಞಾನವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತಿರುವಿರಿ? ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಅರಿಯುವುದಿಲ್ಲ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
64ಆಯತ್

ಅನುವಾದ — ಆಲ್-ಇಮ್ರಾನ್ 64

ಸೂರಾ ಆಲ್-ಇಮ್ರಾನ್ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರರೇ ಹೇಳಿರಿ: 'ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ…

ಸೂರಾ ಆಯತ್ 64/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 62–66. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers