ಸೂರಾ ಅಲ್-ಲೈಲ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಲೈಲ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (21 ಆಯತ್ — مكية). ಅಲ್-ಲೈಲ್ ಆಲಿಸಿ, ಅಲ್-ಲೈಲ್ ಅನುವಾದ, ಅಲ್-ಲೈಲ್ mp3, ಅಲ್-ಲೈಲ್ pdf.

ಸೂರಾ ಅಲ್-ಲೈಲ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَاللَّيْلِ إِذَا يَغْشَىٰ ۝١
📖 ಅನುವಾದ ಆಯತ್ 1
ರಾತ್ರಿಯಾಣೆ, ಅದು ಕವಿಯುತ್ತಿರುವಾಗ.
وَالنَّهَارِ إِذَا تَجَلَّىٰ ۝٢
📖 ಅನುವಾದ ಆಯತ್ 2
ಮತ್ತು ಹಗಲಿನಾಣೆ! ಅದು ಪ್ರಕಾಶಮಯವಾಗುವಾಗ.
وَمَا خَلَقَ الذَّكَرَ وَالْأُنثَىٰ ۝٣
📖 ಅನುವಾದ ಆಯತ್ 3
ಪ್ರತಿಯೊಂದರಲ್ಲೂ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನಾಣೆ.
إِنَّ سَعْيَكُمْ لَشَتَّىٰ ۝٤
📖 ಅನುವಾದ ಆಯತ್ 4
ಖಂಡಿತವಾಗಿಯೂ ನಿಮ್ಮ ಪರಿಶ್ರಮವು ವಿಭಿನ್ನವಾಗಿದೆ
فَأَمَّا مَنْ أَعْطَىٰ وَاتَّقَىٰ ۝٥
📖 ಅನುವಾದ ಆಯತ್ 5
ಯಾರು (ಅಲ್ಲಾಹನ ಮರ‍್ಗದಲ್ಲಿ) ರ‍್ಚುಮಾಡುತ್ತಾನೋ ಮತ್ತು ಭಯಭಕ್ತಿ ಪಾಲಿಸುತ್ತಾನೋ.
وَصَدَّقَ بِالْحُسْنَىٰ ۝٦
📖 ಅನುವಾದ ಆಯತ್ 6
ಮತ್ತು ಅತ್ತುö್ಯತ್ತಮ ಮಾತನ್ನು ದೃಢೀಕರಿಸುತ್ತಾನೋ.
فَسَنُيَسِّرُهُ لِلْيُسْرَىٰ ۝٧
📖 ಅನುವಾದ ಆಯತ್ 7
ಸಧ್ಯವೇ ನಾವು ಅವನಿಗೆ (ಸತ್ಯದ) ಅನುಕೂಲಕರ ಮರ‍್ಗವನ್ನು ಸುಗಮಗೊಳಿಸುವೆವು.
وَأَمَّا مَن بَخِلَ وَاسْتَغْنَىٰ ۝٨
📖 ಅನುವಾದ ಆಯತ್ 8
ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.
وَكَذَّبَ بِالْحُسْنَىٰ ۝٩
📖 ಅನುವಾದ ಆಯತ್ 9
ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ.
فَسَنُيَسِّرُهُ لِلْعُسْرَىٰ ۝١٠
📖 ಅನುವಾದ ಆಯತ್ 10
ಆಗ ನಾವು ಅವನಿಗೆ ದರ‍್ಮಾರ‍್ಗವನ್ನು ಸುಗಮಗೊಳಿಸಿಕೊಡುವೆವು.
وَمَا يُغْنِي عَنْهُ مَالُهُ إِذَا تَرَدَّىٰ ۝١١
📖 ಅನುವಾದ ಆಯತ್ 11
ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ ನೀಡದು.
إِنَّ عَلَيْنَا لَلْهُدَىٰ ۝١٢
📖 ಅನುವಾದ ಆಯತ್ 12
ನಿಸ್ಸಂದೇಹವಾಗಿಯೂ ಮರ‍್ಗರ‍್ಶನ ಮಾಡುವುದು ನಮ್ಮ ಹೊಣೆಯಾಗಿದೆ.
وَإِنَّ لَنَا لَلْآخِرَةَ وَالْأُولَىٰ ۝١٣
📖 ಅನುವಾದ ಆಯತ್ 13
ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕದ ಒಡೆಯರು ನಾವೇ ಆಗಿದ್ದೇವೆ.
فَأَنذَرْتُكُمْ نَارًا تَلَظَّىٰ ۝١٤
📖 ಅನುವಾದ ಆಯತ್ 14
ಆದ್ದರಿಂದ ನಾನು ನಿಮಗೆ ಧಗಧಗಿಸುತ್ತಿರುವ ಅಗ್ನಿಯಿಂದ ಎಚ್ಚರಿಸಿರುವೆನು.
لَا يَصْلَاهَا إِلَّا الْأَشْقَى ۝١٥
📖 ಅನುವಾದ ಆಯತ್ 15
ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.
الَّذِي كَذَّبَ وَتَوَلَّىٰ ۝١٦
📖 ಅನುವಾದ ಆಯತ್ 16
ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.
وَسَيُجَنَّبُهَا الْأَتْقَى ۝١٧
📖 ಅನುವಾದ ಆಯತ್ 17
ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
الَّذِي يُؤْتِي مَالَهُ يَتَزَكَّىٰ ۝١٨
📖 ಅನುವಾದ ಆಯತ್ 18
ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು ರ‍್ಚು ಮಾಡುತ್ತಾನೆ.
وَمَا لِأَحَدٍ عِندَهُ مِن نِّعْمَةٍ تُجْزَىٰ ۝١٩
📖 ಅನುವಾದ ಆಯತ್ 19
ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.
إِلَّا ابْتِغَاءَ وَجْهِ رَبِّهِ الْأَعْلَىٰ ۝٢٠
📖 ಅನುವಾದ ಆಯತ್ 20
ಕೇವಲ ತನ್ನ ಅತ್ಯುನ್ನತನಾದ ಪ್ರಭುವಿನ ಸಂತೃಪ್ತಿಯನ್ನು ಬಯಸುವುದಕ್ಕಾಗಿಯೇ (ಮಾಡುತ್ತಾನೆ.)
وَلَسَوْفَ يَرْضَىٰ ۝٢١
📖 ಅನುವಾದ ಆಯತ್ 21
ಖಂಡಿತವಾಗಿಯೂ ಅವನು ಸದ್ಯವೇ ಸಂತೃಪ್ತಗೊಳ್ಳುವನು.
← 91 ಅಲ್-ಲೈಲ್ (92/114) 93 →
ಓದಿ ಸೂರಾ ಅಲ್-ಲೈಲ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

92الليل Al-Layl 📚 21 ಆಯತ್ مكية

ಆಯತ್‌ವಾರು – ಸೂರಾ ಅಲ್-ಲೈಲ್ — 21 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers