PDF —
21 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಲೈಲ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಲೈಲ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಲೈಲ್ ಅನುವಾದ. ಸೂರಾ ಅಲ್-ಲೈಲ್ (Meccan) 21 ಆಯತ್.

← ಅಶ್-ಶಮ್ಸ್ಸೂರಾ ಅಲ್-ಲೈಲ್ ಅದ್-ದುಹಾ →


21 ಆಯತ್ · Meccan · ಕನ್ನಡ
bismillah
ﮡﮢﮣﮤ
92:1 ರಾತ್ರಿಯಾಣೆ, ಅದು ಕವಿಯುತ್ತಿರುವಾಗ.
ﮥﮦﮧﮨ
92:2 ಮತ್ತು ಹಗಲಿನಾಣೆ! ಅದು ಪ್ರಕಾಶಮಯವಾಗುವಾಗ.
ﮩﮪﮫﮬﮭ
92:3 ಪ್ರತಿಯೊಂದರಲ್ಲೂ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನಾಣೆ.
ﮮﮯﮰﮱ
92:4 ಖಂಡಿತವಾಗಿಯೂ ನಿಮ್ಮ ಪರಿಶ್ರಮವು ವಿಭಿನ್ನವಾಗಿದೆ
ﯓﯔﯕﯖﯗ
92:5 ಯಾರು (ಅಲ್ಲಾಹನ ಮರ‍್ಗದಲ್ಲಿ) ರ‍್ಚುಮಾಡುತ್ತಾನೋ ಮತ್ತು ಭಯಭಕ್ತಿ ಪಾಲಿಸುತ್ತಾನೋ.
ﯘﯙﯚ
92:6 ಮತ್ತು ಅತ್ತುö್ಯತ್ತಮ ಮಾತನ್ನು ದೃಢೀಕರಿಸುತ್ತಾನೋ.
ﯛﯜﯝ
92:7 ಸಧ್ಯವೇ ನಾವು ಅವನಿಗೆ (ಸತ್ಯದ) ಅನುಕೂಲಕರ ಮರ‍್ಗವನ್ನು ಸುಗಮಗೊಳಿಸುವೆವು.
ﯞﯟﯠﯡﯢ
92:8 ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.
ﯣﯤﯥ
92:9 ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ.
ﭑﭒﭓ
92:10 ಆಗ ನಾವು ಅವನಿಗೆ ದರ‍್ಮಾರ‍್ಗವನ್ನು ಸುಗಮಗೊಳಿಸಿಕೊಡುವೆವು.
ﭔﭕﭖﭗﭘﭙﭚ
92:11 ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ ನೀಡದು.
ﭛﭜﭝﭞ
92:12 ನಿಸ್ಸಂದೇಹವಾಗಿಯೂ ಮರ‍್ಗರ‍್ಶನ ಮಾಡುವುದು ನಮ್ಮ ಹೊಣೆಯಾಗಿದೆ.
ﭟﭠﭡﭢﭣ
92:13 ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕದ ಒಡೆಯರು ನಾವೇ ಆಗಿದ್ದೇವೆ.
ﭤﭥﭦﭧ
92:14 ಆದ್ದರಿಂದ ನಾನು ನಿಮಗೆ ಧಗಧಗಿಸುತ್ತಿರುವ ಅಗ್ನಿಯಿಂದ ಎಚ್ಚರಿಸಿರುವೆನು.
ﭨﭩﭪﭫﭬ
92:15 ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.
ﭭﭮﭯﭰ
92:16 ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.
ﭱﭲﭳ
92:17 ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
ﭴﭵﭶﭷﭸ
92:18 ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು ರ‍್ಚು ಮಾಡುತ್ತಾನೆ.
ﭹﭺﭻﭼﭽﭾﭿ
92:19 ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.
ﮀﮁﮂﮃﮄﮅ
92:20 ಕೇವಲ ತನ್ನ ಅತ್ಯುನ್ನತನಾದ ಪ್ರಭುವಿನ ಸಂತೃಪ್ತಿಯನ್ನು ಬಯಸುವುದಕ್ಕಾಗಿಯೇ (ಮಾಡುತ್ತಾನೆ.)
ﮆﮇﮈ
92:21 ಖಂಡಿತವಾಗಿಯೂ ಅವನು ಸದ್ಯವೇ ಸಂತೃಪ್ತಗೊಳ್ಳುವನು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers