PDF —
30 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಫಜ್ರ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಫಜ್ರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಫಜ್ರ್ ಅನುವಾದ. ಸೂರಾ ಅಲ್-ಫಜ್ರ್ (Meccan) 30 ಆಯತ್.

← ಅಲ್-ಗಾಶಿಯಾಸೂರಾ ಅಲ್-ಫಜ್ರ್ ಅಲ್-ಬಲದ್ →


30 ಆಯತ್ · Meccan · ಕನ್ನಡ
bismillah
ﭤﭥ
89:1 ಪ್ರಭಾತದಾಣೆ
ﭦﭧﭨ
89:2 ಮತ್ತು ಹತ್ತು ರಾತ್ರಿಗಳಾಣೆ
ﭩﭪﭫ
89:3 ಸಮ ಮತ್ತು ವಿಷಮಗಳಾಣೆ.
ﭬﭭﭮﭯ
89:4 ಸಂಚಲಿತ ರಾತ್ರಿಯಾಣೆ
ﭰﭱﭲﭳﭴﭵﭶ
89:5 ಬುದ್ಧಿವಂತರಿಗೆ ಇವುಗಳಲ್ಲಿ ಸಾಕಷ್ಟು ಆಣೆಯಿಲ್ಲವೇ?
ﭷﭸﭹﭺﭻﭼﭽ
89:6 ಆದ್ ಸಮುದಾಯದವರೊಂದಿಗೆ ನಿಮ್ಮ ಪ್ರಭು ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ?
ﭾﭿﮀﮁ
89:7 ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.
ﮂﮃﮄﮅﮆﮇﮈ
89:8 ಅಂತಹ ಜನಾಂಗವನ್ನು ಯಾವ ನಾಡುಗಳಲ್ಲಿಯು ಸೃಷ್ಟಿಸಲಾಗಿಲ್ಲ.
ﮉﮊﮋﮌﮍﮎ
89:9 ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.
ﮏﮐﮑﮒ
89:10 ಮತ್ತು ಮೊಳೆಗಳವನಾಗಿದ್ದ ಫಿರ್ಔನ್ನೊಂದಿಗೆ.
ﮓﮔﮕﮖﮗ
89:11 ಅವರೆಲ್ಲರೂ ನಾಡುಗಳಲ್ಲಿ ಅತಿರೇಕವೆಸಗುತ್ತಿದ್ದರು.
ﮘﮙﮚﮛ
89:12 ಮತ್ತು ಅವರು ಆ ನಾಡುಗಳಲ್ಲಿ ತುಂಬಾಕ್ಷೆÆÃಭೆ ಹರಡಿದ್ದರು.
ﮜﮝﮞﮟﮠﮡ
89:13 ಆಗ ನಿಮ್ಮ ಪ್ರಭು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬಾರಿಸಿದನು.
ﮢﮣﮤﮥ
89:14 ಖಂಡಿತವಾಗಿಯೂ ನಿಮ್ಮ ಪ್ರಭು ಹೊಂಚಿನಲ್ಲಿದ್ದಾನೆ.
ﮦﮧﮨﮩﮪﮫﮬﮭﮮﮯﮰﮱ
89:15 ಆದರೆ ಮನುಷ್ಯನನ್ನು ಅವನ ಪ್ರಭು ಅವನನ್ನು ಪರೀಕ್ಷಿಸಲು ಗೌರವ ಹಾಗು ಅನುಗ್ರಹವನ್ನು ನೀಡಿದರೆ ಅವನು ನನ್ನ ಪ್ರಭುವು ನನ್ನನ್ನು ಗೌರವಿಸಿದನು ಎಂದು ಹೇಳತೊಡಗುತ್ತಾನೆ.
ﯓﯔﯕﯖﯗﯘﯙﯚﯛﯜﯝ
89:16 ಮತ್ತು ಅವನನ್ನು ಪರೀಕ್ಷಿಸಲು, ಅವನ ಜೀವನಾಧಾರವನ್ನು ಸಂಕುಚಿತಗೊಳಿಸಿದರೆ ಅವನು ನನ್ನ ಪ್ರಭು ನನ್ನನ್ನು ಅಪಮಾನಿಸಿ ಬಿಟ್ಟನು ಎಂದು ಹೇಳುತ್ತಾನೆ.
ﯞﯟﯠﯡﯢﯣﯤ
89:17 ಖಂಡಿತವಾಗಿಯೂ ನಿಮ್ಮ ನಿಲುವು ಸರಿಯಿಲ್ಲ ನೀವು ಅನಾಥರನ್ನು ಗೌರವಿಸುವುದಿಲ್ಲ.
ﯥﯦﯧﯨﯩﯪ
89:18 ಬಡವರಿಗೆ ಉಣಬಡಿಸಲು ನೀವು ಪರಸ್ಪರರನ್ನು ಪ್ರೇರೇಪಿಸುವುದಿಲ್ಲ.
ﯫﯬﯭﯮﯯ
89:19 ಮತ್ತು ನೀವು ವಾರೀಸು ಸೊತ್ತನ್ನು ಕಬಳಿಸಿ ಬಿಡುತ್ತೀರಿ.
ﯰﯱﯲﯳﯴ
89:20 ಮತ್ತು ನೀವು ಸಂಪತ್ತನ್ನು ಮಿತಿಮೀರಿ ಪ್ರೀತಿಸುತ್ತೀರಿ.
ﯵﯶﯷﯸﯹﯺﯻﯼ
89:21 ಖಂಡಿತವಾಗಿಯೂ ಭೂಮಿಯನ್ನು ನಿರಂತರವಾಗಿ ಗುದ್ದಿ ಪುಡಿಗಟ್ಟಿಸಲಾದಾಗ.
ﯽﯾﯿﰀﰁﰂ
89:22 ಮಲಕ್ಗಳು ಸಾಲುಸಾಲಾಗಿ ನಿಂತಿರುವ ಸ್ಥಿತಿಯಲ್ಲಿ ನಿಮ್ಮ ಪ್ರಭು ಬರುವನು.
ﭑﭒﭓﭔﭕﭖﭗﭘﭙﭚﭛ
89:23 ನರಕವನ್ನು ಮುಂದೆತರಲಾಗುವ ದಿನ ಮನುಷ್ಯನು ಮನವರಿಕೆ ಮಾಡಿಕೊಳ್ಳುವನು. ಆದರೆ ಅವನು ಅಂದು ಮನವರಿಕೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನವಾದರೂ ಏನು ?
ﭜﭝﭞﭟﭠ
89:24 ಅವನು ಹೇಳುವನು, ಅಯ್ಯೋ ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಮುಂಚೆಯೇ ಮಾಡಿರುತ್ತಿದ್ದರೆ !
ﭡﭢﭣﭤﭥﭦ
89:25 ಆದರೆ ಅಂದು ಅಲ್ಲಾಹನು ಶಿಕ್ಷಿಸಿದಂತೆ ಬೇರಾರೂ ಶಿಕ್ಷಿಸಲಾರರು.
ﭧﭨﭩﭪﭫ
89:26 ಅವನು ಕಟ್ಟುವ ರೀತಿಯಲ್ಲಿ ಬೇರಾರೂ ಕಟ್ಟಲಾರರು.
ﭬﭭﭮﭯ
89:27 ಓ ಶಾಂತಿಪಡೆದ ಆತ್ಮವೇ,
ﭰﭱﭲﭳﭴﭵ
89:28 ನೀನು ಅವನಿಂದ ಸಂತೃಪ್ತನಾಗಿ ಮತ್ತು ಅವನು ನಿನ್ನಿಂದ ಸಂತುಷ್ಟನಾಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನೆಡೆಗೆ ಮರಳು.
ﭶﭷﭸﭹ
89:29 ತರುವಾಯ ನನ್ನ ಸಜ್ಜನದಾಸರೊಂದಿಗೆ ಸೇರಿಕೋ.
ﭺﭻﭼ
89:30 ಮತ್ತು ನನ್ನ ಸ್ರ‍್ಗವನ್ನು ಪ್ರವೇಶಿಸು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers