ಆಲ್-ಇಮ್ರಾನ್ · 118/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
يَا أَيُّهَا الَّذِينَ آمَنُوا لَا تَتَّخِذُوا بِطَانَةً مِّن دُونِكُمْ لَا يَأْلُونَكُمْ خَبَالًا وَدُّوا مَا عَنِتُّمْ قَدْ بَدَتِ الْبَغْضَاءُ مِنْ أَفْوَاهِهِمْ وَمَا تُخْفِي صُدُورُهُمْ أَكْبَرُ ۚ قَدْ بَيَّنَّا لَكُمُ الْآيَاتِ ۖ إِن كُنتُمْ تَعْقِلُونَ ۝١١٨
Yaaa ayyuhal lazeena aamanoo laa tattakhizoo bitaanatam min doonikum laa yaaloonakum khabaalanw waddoo maa `anittum qad badatil baghdaaa`u min afwaahihim; wa maa tukhfee sudooruhum akbar; qad baiyannaa lakumul Aayaati in kuntum ta`qiloon
📖 ಕನ್ನಡ ಅರ್ಥ
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮವರನ್ನಲ್ಲದೇ ಇತರರನ್ನು ನಿಮ್ಮ ರಹಸ್ಯದ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಅವರು ನಿಮ್ಮ ಅವನತಿಗಾಗಿ ಸ್ವಲ್ಪವೂ ದಾಕ್ಷಿಣ್ಯವನ್ನು ತೋರಲಾರರು. ನೀವು ತೊಂದರೆಗೊಳಗಾಗಬೇಕೆAಬುದೇ ಅವರ ಉದ್ದೇಶವಾಗಿದೆ. ಅವರ ವಿದ್ವೇಷವು ಸ್ವತಃ ಅವರ ಬಾಯಿಯಿಂದಲೇ ಪ್ರಕಟವಾಗಿಬಿಟ್ಟಿದೆ. ಮತ್ತು ಅವರ ಹೃದಯಗಳಲ್ಲಿ ಅಡಕವಾಗಿರುವುದು ಇನ್ನೂ ಘೋರವಾಗಿದೆ. ನಾವು ನಿಮಗಾಗಿ ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ, ನೀವು ಚಿಂತಿಸಿ ಗ್ರಹಿಸುವವರಾಗಿದ್ದರೆ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 116-120 — ಸೂರಾ ಆಲ್-ಇಮ್ರಾನ್

116إِنَّ الَّذِينَ كَفَرُوا لَن تُغْنِيَ عَنْهُمْ أَمْوَالُهُمْ وَلَا أَوْلَادُهُم مِّنَ اللَّهِ شَيْئًا ۖ وَأُولَٰئِكَ أَصْحَابُ النَّارِ ۚ هُمْ فِيهَا خَالِدُونَ
(ಇದಕ್ಕೆ ತದ್ವಿರುದ್ಧವಾಗಿ) ಸತ್ಯನಿ಼ಷೇಧಿಗಳಿಗೆ ತಮ್ಮ ಸಂಪತ್ತಾಗಲೀ ಮತ್ತು ತಮ್ಮ ಸಂತಾನವಾಗಲೀ ಅಲ್ಲಾಹನ ಶಿಕ್ಷೆಯಿಂದ ಯಾವ ಪ್ರಯೋಜನವನ್ನೂ ನೀಡಲಾರದು. ಅವರು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿರುವರು.
117مَثَلُ مَا يُنفِقُونَ فِي هَٰذِهِ الْحَيَاةِ الدُّنْيَا كَمَثَلِ رِيحٍ فِيهَا صِرٌّ أَصَابَتْ حَرْثَ قَوْمٍ ظَلَمُوا أَنفُسَهُمْ فَأَهْلَكَتْهُ ۚ وَمَا ظَلَمَهُمُ اللَّهُ وَلَٰكِنْ أَنفُسَهُمْ يَظْلِمُونَ
ಇಹಲೋಕದಲ್ಲಿ ಸತ್ಯನಿಷೇಧಿಗಳು ವ್ಯಯಿಸುವ (ದಾನಧರ್ಮಗಳ) ಉಪಮೆಯು ಅತೀ ಶೀತವಿರುವ ಒಂದು ಭಯಂಕರ ಗಾಳಿಯು ಅಕ್ರಮಿ ಜನಾಂಗದ ಕೃಷಿಗೆ ಬೀಸಿ ಅದನ್ನು ಸಂಪೂರ್ಣ ನಾಶಗೊಳಿಸಿದಂತಿದೆ. ಅಲ್ಲಾಹನು ಅವರ ಮೇಲೆ ಅಕ್ರಮ ಮಾಡಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದಾರೆ.
118يَا أَيُّهَا الَّذِينَ آمَنُوا لَا تَتَّخِذُوا بِطَانَةً مِّن دُونِكُمْ لَا يَأْلُونَكُمْ خَبَالًا وَدُّوا مَا عَنِتُّمْ قَدْ بَدَتِ الْبَغْضَاءُ مِنْ أَفْوَاهِهِمْ وَمَا تُخْفِي صُدُورُهُمْ أَكْبَرُ ۚ قَدْ بَيَّنَّا لَكُمُ الْآيَاتِ ۖ إِن كُنتُمْ تَعْقِلُونَ
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮವರನ್ನಲ್ಲದೇ ಇತರರನ್ನು ನಿಮ್ಮ ರಹಸ್ಯದ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಅವರು ನಿಮ್ಮ ಅವನತಿಗಾಗಿ ಸ್ವಲ್ಪವೂ ದಾಕ್ಷಿಣ್ಯವನ್ನು ತೋರಲಾರರು. ನೀವು ತೊಂದರೆಗೊಳಗಾಗಬೇಕೆAಬುದೇ ಅವರ ಉದ್ದೇಶವಾಗಿದೆ. ಅವರ ವಿದ್ವೇಷವು ಸ್ವತಃ ಅವರ ಬಾಯಿಯಿಂದಲೇ ಪ್ರಕಟವಾಗಿಬಿಟ್ಟಿದೆ. ಮತ್ತು ಅವರ ಹೃದಯಗಳಲ್ಲಿ ಅಡಕವಾಗಿರುವುದು ಇನ್ನೂ ಘೋರವಾಗಿದೆ. ನಾವು ನಿಮಗಾಗಿ ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ, ನೀವು ಚಿಂತಿಸಿ ಗ್ರಹಿಸುವವರಾಗಿದ್ದರೆ?
119هَا أَنتُمْ أُولَاءِ تُحِبُّونَهُمْ وَلَا يُحِبُّونَكُمْ وَتُؤْمِنُونَ بِالْكِتَابِ كُلِّهِ وَإِذَا لَقُوكُمْ قَالُوا آمَنَّا وَإِذَا خَلَوْا عَضُّوا عَلَيْكُمُ الْأَنَامِلَ مِنَ الْغَيْظِ ۚ قُلْ مُوتُوا بِغَيْظِكُمْ ۗ إِنَّ اللَّهَ عَلِيمٌ بِذَاتِ الصُّدُورِ
(ಚಿಂತಿಸಿರಿ) ನೀವು ಅವರನ್ನು ಪ್ರೀತಿಸುತ್ತೀರಿ. ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲಿ ಸಂಪೂರ್ಣವಾಗಿ ವಿಶ್ವಾವಿಡುತ್ತೀರಿ (ಅವರು ವಿಶ್ವಾಸವಿಡುವುದಿಲ್ಲ) ಅವರಂತೂ ನಿಮ್ಮನ್ನು ಭೇಟಿಯಾದಾಗ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಏಕಾಂತದಲ್ಲಿ ಆಕ್ರೋಶದಿಂದ ತಮ್ಮ ಬೆರಳುಗಳನ್ನು ಕಚ್ಚುವರು. ಹೇಳಿರಿ: ದುರ್ದೈವಿಗಳೇ ನೀವು ನಿಮ್ಮ ಆಕ್ರೋಶದಲ್ಲೇ ಸಾಯಿರಿ. ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯವನ್ನು ಚೆನ್ನಾಗಿ ಅರಿಯುತ್ತಾನೆ.
120إِن تَمْسَسْكُمْ حَسَنَةٌ تَسُؤْهُمْ وَإِن تُصِبْكُمْ سَيِّئَةٌ يَفْرَحُوا بِهَا ۖ وَإِن تَصْبِرُوا وَتَتَّقُوا لَا يَضُرُّكُمْ كَيْدُهُمْ شَيْئًا ۗ إِنَّ اللَّهَ بِمَا يَعْمَلُونَ مُحِيطٌ
ನಿಮಗೆ ಒಳಿತು ಲಭಿಸಿದರೆ ಅವರಿಗೆ ಸಂಕಟವಾಗುತ್ತದೆ. ಇನ್ನು ನಿಮಗೆ ಕೆಡಕು ಒದಗಿದರೆ ಅವರು ಹರ್ಷ ಪಡುತ್ತಾರೆ. ನೀವು ಸಹನೆ ಕೈಗೊಂಡರೆ ಮತ್ತು ಭಯಭಕ್ತಿಯನ್ನು ಪಾಲಿಸಿದರೆ ಅವರ ಕುತಂತ್ರವು ನಿಮಗೆ ಯಾವ ಹಾನಿಯುಂಟು ಮಾಡಲಾರದು. ಖಂಡಿತವಾಗಿಯು ಅಲ್ಲಾಹನು ಅವರ ಕೃತ್ಯಗಳನ್ನು ಆವರಿಸುವವನಾಗಿದ್ದಾನೆ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
118ಆಯತ್

ಅನುವಾದ — ಆಲ್-ಇಮ್ರಾನ್ 118

ಸೂರಾ ಆಲ್-ಇಮ್ರಾನ್ ಆಯತ್ 118 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮವರನ್ನಲ್ಲದೇ ಇತರರನ್ನು ನಿಮ್ಮ ರಹಸ್ಯದ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಅವರು…

ಸೂರಾ ಆಯತ್ 118/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 116–120. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers