ಅಲ್-ಮುಮ್ತಹಿನಾ · 8/13
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮ್ತಹಿನಾ
لَّا يَنْهَاكُمُ اللَّهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُم مِّن دِيَارِكُمْ أَن تَبَرُّوهُمْ وَتُقْسِطُوا إِلَيْهِمْ ۚ إِنَّ اللَّهَ يُحِبُّ الْمُقْسِطِينَ ۝٨
Laa yanhaakumul laahu `anil lazeena lam yuqaatilookum fid deeni wa lam yukhrijookum min diyaarikum an tabarroohum wa tuqsitooo ilaihim; innal laaha yuhibbul muqsiteen
📖 ಕನ್ನಡ ಅರ್ಥ
ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡದ ಮತ್ತು ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸದವರೊಂದಿಗೆ ಉಪಕಾರ ಮಾಡುವುದರಿಂದಲೂ ಮತ್ತು ನ್ಯಾಯ ನೀತಿ ಪಾಲಿಸುವುದರಿಂದಲೂ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ನೀತಿ ಪಾಲಿಸುವವರನ್ನು ಪ್ರೀತಿಸುತ್ತಾನೆ.

🎧 ಆಲಿಸಿ


📜 ಆಯತ್ 6-10 — ಸೂರಾ ಅಲ್-ಮುಮ್ತಹಿನಾ

6لَقَدْ كَانَ لَكُمْ فِيهِمْ أُسْوَةٌ حَسَنَةٌ لِّمَن كَانَ يَرْجُو اللَّهَ وَالْيَوْمَ الْآخِرَ ۚ وَمَن يَتَوَلَّ فَإِنَّ اللَّهَ هُوَ الْغَنِيُّ الْحَمِيدُ
ನಿಜವಾಗಿಯೂ ನಿಮಗೆ (ಅಂದರೆ ನಿಮ್ಮಲ್ಲಿ) ಅಲ್ಲಾಹನ ಹಾಗೂ ಪುನರುತ್ಥಾನದ ದಿನದ ಭೇಟಿಯನ್ನು ನಿರೀಕ್ಷಿಸುವವನಿಗೆ ಇಬ್ರಾಹೀಮ್ ಮತ್ತು ಅವರ ಸಂಗಡಿಗರಲ್ಲಿ ಒಂದು ಉತ್ತಮ ಮಾದರಿ ಇದೆ. ಯಾರಾದರೂ ವಿಮುಖರಾದರೆ ಅಲ್ಲಾಹನು ನಿರಪೇಕ್ಷಕನು ಮತ್ತು ಸ್ತುತ್ಯಾರ್ಹನಾಗಿದ್ದಾನೆ.
7۞ عَسَى اللَّهُ أَن يَجْعَلَ بَيْنَكُمْ وَبَيْنَ الَّذِينَ عَادَيْتُم مِّنْهُم مَّوَدَّةً ۚ وَاللَّهُ قَدِيرٌ ۚ وَاللَّهُ غَفُورٌ رَّحِيمٌ
ಸದ್ಯದಲ್ಲೇ ಅಲ್ಲಾಹನು ನಿಮ್ಮ ಮತ್ತು ನಿಮ್ಮ ಶತ್ರುಗಳ ನಡುವೆ ಸ್ನೇಹವನ್ನು ಉಂಟುಮಾಡಬಹುದು. ಅಲ್ಲಾಹನು ಸರ್ವಸಾಮರ್ಥ್ಯನೂ ಮತ್ತು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
8لَّا يَنْهَاكُمُ اللَّهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُم مِّن دِيَارِكُمْ أَن تَبَرُّوهُمْ وَتُقْسِطُوا إِلَيْهِمْ ۚ إِنَّ اللَّهَ يُحِبُّ الْمُقْسِطِينَ
ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡದ ಮತ್ತು ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸದವರೊಂದಿಗೆ ಉಪಕಾರ ಮಾಡುವುದರಿಂದಲೂ ಮತ್ತು ನ್ಯಾಯ ನೀತಿ ಪಾಲಿಸುವುದರಿಂದಲೂ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ನೀತಿ ಪಾಲಿಸುವವರನ್ನು ಪ್ರೀತಿಸುತ್ತಾನೆ.
9إِنَّمَا يَنْهَاكُمُ اللَّهُ عَنِ الَّذِينَ قَاتَلُوكُمْ فِي الدِّينِ وَأَخْرَجُوكُم مِّن دِيَارِكُمْ وَظَاهَرُوا عَلَىٰ إِخْرَاجِكُمْ أَن تَوَلَّوْهُمْ ۚ وَمَن يَتَوَلَّهُمْ فَأُولَٰئِكَ هُمُ الظَّالِمُونَ
ನಿಜವಾಗಿಯೂ ಅಲ್ಲಾಹನು ನಿಮಗೆ ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡಿರುವ ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸಿದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸಲು ಸಹಾಯ ನೀಡಿದವರೊಂದಿಗೆ ಸ್ನೇಹ ಬೆಳೆಸುವುದನ್ನು ತಡೆದಿರುವನು. ಅವರೊಂದಿಗೆ ಗೆಳೆತನ ಬೆಳೆಸುವರೇ ಅಕ್ರಮಿಗಳಾಗಿರುತ್ತಾರೆ.
10يَا أَيُّهَا الَّذِينَ آمَنُوا إِذَا جَاءَكُمُ الْمُؤْمِنَاتُ مُهَاجِرَاتٍ فَامْتَحِنُوهُنَّ ۖ اللَّهُ أَعْلَمُ بِإِيمَانِهِنَّ ۖ فَإِنْ عَلِمْتُمُوهُنَّ مُؤْمِنَاتٍ فَلَا تَرْجِعُوهُنَّ إِلَى الْكُفَّارِ ۖ لَا هُنَّ حِلٌّ لَّهُمْ وَلَا هُمْ يَحِلُّونَ لَهُنَّ ۖ وَآتُوهُم مَّا أَنفَقُوا ۚ وَلَا جُنَاحَ عَلَيْكُمْ أَن تَنكِحُوهُنَّ إِذَا آتَيْتُمُوهُنَّ أُجُورَهُنَّ ۚ وَلَا تُمْسِكُوا بِعِصَمِ الْكَوَافِرِ وَاسْأَلُوا مَا أَنفَقْتُمْ وَلْيَسْأَلُوا مَا أَنفَقُوا ۚ ذَٰلِكُمْ حُكْمُ اللَّهِ ۖ يَحْكُمُ بَيْنَكُمْ ۚ وَاللَّهُ عَلِيمٌ حَكِيمٌ
ಓ ಸತ್ಯ ವಿಶ್ವಾಸವಿರಿಸಿದವರೇ, ನಿಮ್ಮ ಬಳಿಗೆ ಸತ್ಯವಿಶ್ವಾಸಿನಿ ಸ್ತ್ರೀಯರು ವಲಸೆ ಬಂದುಬಿಟ್ಟರೆ ನೀವು ಅವರನ್ನು ಪರೀಕ್ಷಿಸಿರಿ ವಾಸ್ತವದಲ್ಲಿ ಅವರ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ಆದರೆ ನೀವು ಅವರನ್ನು ಸತ್ಯವಿಶ್ವಾಸಿನಿಗಳೆಂದು ಅರಿತುಕೊಂಡಲ್ಲಿ ಅವರನ್ನು ಸತ್ಯನಿಷೇಧಿಗಳ ಬಳಿಗೆ ಹಿಂದಿರುಗಿಸಬೇಡಿರಿ. ಅವರು ಅವರಿಗೆ ಧರ್ಮಸಮ್ಮತವಲ್ಲ ಮತ್ತು ಸತ್ಯ ನಿಷೇಧಿಗಳೂ ಅವರಿಗೆ ಧರ್ಮಸಮ್ಮತರಲ್ಲ ಮತ್ತು ಅವರ ಸತ್ಯನಿಷೇಧಿ ಪತಿಯರು ಮಾಡಿರುವ ಖರ್ಚನ್ನು ನೀವು ಅವರಿಗೆ ಕೊಟ್ಟುಬಿಡಿ, ನೀವು ಆ ಸ್ತ್ರೀಯರನ್ನು ಅವರ ಮಹರ್(ವಧುಧನ) ಪಾವತಿಸಿರಿ, ಅವರೊಂದಿಗೆ ವಿವಾಹ ಮಾಡಿಕೊಳ್ಳುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ, ನೀವು ಸತ್ಯನಿಷೆೆÃಧಿ ಸ್ತ್ರೀಯರನ್ನು ವಿವಾಹ ಬಂಧನದಲ್ಲಿರಿಸಿಕೊಳ್ಳಬೇಡಿರಿ. ಮತ್ತು ನೀವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಿರಿ ಮತ್ತು ಅವರೂ ಸಹ ತಾವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಲಿ. ಇದು ಅಲ್ಲಾಹನ ತೀರ್ಪು ಆಗಿದೆ. ಅವನು ನಿಮ್ಮ ನಡುವೆ ತೀರ್ಮಾನ ಮಾಡುತ್ತಾನೆ ಮತ್ತು ಅಲ್ಲಾಹನು ಮಹಾಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.
ಅಲ್-ಮುಮ್ತಹಿನಾಕುರಾನ್ ಸೂಚಿ
13ಆಯತ್
MedinanRevelation
8ಆಯತ್

ಅನುವಾದ — ಅಲ್-ಮುಮ್ತಹಿನಾ 8

ಸೂರಾ ಅಲ್-ಮುಮ್ತಹಿನಾ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡದ ಮತ್ತು ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸದವರೊಂದಿಗೆ…

ಸೂರಾ ಆಯತ್ 8/13 — ಸೂರಾ ಅಲ್-ಮುಮ್ತಹಿನಾ الممتحنة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮ್ತಹಿನಾ ಆಲಿಸಿ, ಸೂರಾ ಅಲ್-ಮುಮ್ತಹಿನಾ ಅನುವಾದ, ಸೂರಾ ಅಲ್-ಮುಮ್ತಹಿನಾ mp3, ಸೂರಾ ಅಲ್-ಮುಮ್ತಹಿನಾ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers