ಅಲ್-ಆರಾಫ್ · 55/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
ادْعُوا رَبَّكُمْ تَضَرُّعًا وَخُفْيَةً ۚ إِنَّهُ لَا يُحِبُّ الْمُعْتَدِينَ ۝٥٥
Ud`oo Rabbakum tadarru`anw wa khufyah; innahoo laa yuhibbul mu`tadeen
📖 ಕನ್ನಡ ಅರ್ಥ
ನೀವು ನಿಮ್ಮ ಪ್ರಭುವನ್ನು ವಿನಮ್ರತೆ ಹಾಗೂ ರಹಸ್ಯವಾಗಿ ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯು ಅವನು ಹದ್ದು ಮೀರಿರುವವರನ್ನು ಇಷ್ಟಪಡುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 53-57 — ಸೂರಾ ಅಲ್-ಆರಾಫ್

53هَلْ يَنظُرُونَ إِلَّا تَأْوِيلَهُ ۚ يَوْمَ يَأْتِي تَأْوِيلُهُ يَقُولُ الَّذِينَ نَسُوهُ مِن قَبْلُ قَدْ جَاءَتْ رُسُلُ رَبِّنَا بِالْحَقِّ فَهَل لَّنَا مِن شُفَعَاءَ فَيَشْفَعُوا لَنَا أَوْ نُرَدُّ فَنَعْمَلَ غَيْرَ الَّذِي كُنَّا نَعْمَلُ ۚ قَدْ خَسِرُوا أَنفُسَهُمْ وَضَلَّ عَنْهُم مَّا كَانُوا يَفْتَرُونَ
ಅವರು ಅದರ ಪ್ರಳಯದ ಅಂತ್ಯ ಪರಿಣಾಮವನ್ನಲ್ಲದೇ ಇನ್ನೇನಾದರು ನಿರೀಕ್ಷಿಸುತ್ತಿದ್ದಾರೆಯೇ? ಈ ಮುಂಚೆ ಅದನ್ನು ಮರೆತು ಬಿಟ್ಟವರು ಅದರ ಪರಿಣಾಮವು ಪ್ರಕಟವಾಗುವ ದಿನ ಹೇಳುವರು: ನಿಜವಾಗಿಯು ನಮ್ಮ ಪ್ರಭುವಿನ ಸಂದೇಶವಾಹಕರು ಸತ್ಯವನ್ನು ತಂದಿದ್ದರು. ಇನ್ನು ನಮಗಾಗಿ ಶಿಫಾರಸ್ಸು ಮಾಡುವ ಶಿಫಾರಸ್ಸುಗಾರರು ಯಾರಾದರೂ ಇದ್ದಾರೆಯೇ? ಅಥವಾ ನಮ್ಮನ್ನು (ಭೂಲೋಕಕ್ಕೆ) ಮರಳಿ ಕಳುಹಿಸಲಾಗುವುದೇ? ಹಾಗಿದ್ದರೆ ನಾವು ಮುಂಚೆ ಮಾಡುತ್ತಿದ್ದಂತಹ ಕರ್ಮಗಳಿಗೆ ವಿರುದ್ಧವಾದ ಕರ್ಮಗಳನ್ನು ಮಾಡುತ್ತಿದ್ದೆವು. ಖಂಡಿತವಾಗಿಯು ಅವರು ಸ್ವತಃ ತಮ್ಮನ್ನು ನಷ್ಟಕ್ಕೊಳಗಾಗಿಸಿದವರು. ಅವರು ಹೆಣೆಯುತ್ತಿದ್ದುದೆಲ್ಲವೂ ಕಣ್ಮರೆಯಾಗಿಬಿಟ್ಟವು.
54إِنَّ رَبَّكُمُ اللَّهُ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ يُغْشِي اللَّيْلَ النَّهَارَ يَطْلُبُهُ حَثِيثًا وَالشَّمْسَ وَالْقَمَرَ وَالنُّجُومَ مُسَخَّرَاتٍ بِأَمْرِهِ ۗ أَلَا لَهُ الْخَلْقُ وَالْأَمْرُ ۗ تَبَارَكَ اللَّهُ رَبُّ الْعَالَمِينَ
ನಿಸ್ಸಂಶಯವಾಗಿಯು ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ನಿಮ್ಮ ಪ್ರಭು ಅಲ್ಲಾಹನೆ. ನಂತರ ಅವನು ಸಿಂಹಾಸನದ ಮೇಲೆ ಆರೂಢನಾದನು ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ ಮತ್ತು ರಾತ್ರಿಯು ಕ್ಷಿಪ್ರಗತಿಯಲ್ಲಿ ಹಗಲನ್ನು ಬೆನ್ನತ್ತಿ ಬರುವುದು ಮತ್ತು ಸೂರ್ಯ, ಚಂದ್ರ ಹಾಗೂ ಇತರ ನಕ್ಷತ್ರಗಳನ್ನು ಅವನ ಆಜ್ಞೆಗೆ ವಿಧೇಯಗೊಳಿಸಿ ಸೃಷ್ಟಿಸಿದ್ದಾನೆ. ಗಮನಿಸಿ, ಸೃಷ್ಟಿಯು ಅವನದೇ ಹಾಗೂ ಆಜ್ಞಾಧಿಕಾರವು ಅವನದೇ. ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಅನುಗ್ರಹಪೂರ್ಣನಾಗಿದ್ದಾನೆ.
55ادْعُوا رَبَّكُمْ تَضَرُّعًا وَخُفْيَةً ۚ إِنَّهُ لَا يُحِبُّ الْمُعْتَدِينَ
ನೀವು ನಿಮ್ಮ ಪ್ರಭುವನ್ನು ವಿನಮ್ರತೆ ಹಾಗೂ ರಹಸ್ಯವಾಗಿ ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯು ಅವನು ಹದ್ದು ಮೀರಿರುವವರನ್ನು ಇಷ್ಟಪಡುವುದಿಲ್ಲ.
56وَلَا تُفْسِدُوا فِي الْأَرْضِ بَعْدَ إِصْلَاحِهَا وَادْعُوهُ خَوْفًا وَطَمَعًا ۚ إِنَّ رَحْمَتَ اللَّهِ قَرِيبٌ مِّنَ الْمُحْسِنِينَ
ಮತ್ತು ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಕ್ಷೆÆÃಭೆ ಹರಡಬೇಡಿರಿ ಮತ್ತು ಅಲ್ಲಾಹನನ್ನು ಭಯ ಹಾಗೂ ನಿರೀಕ್ಷೆಯೊಂದಿಗೆ ಕರೆದು ಪ್ರಾರ್ಥಿಸಿರಿ. ನಿಸ್ಸಂಶಯವಾಗಿಯು ಅಲ್ಲಾಹನ ಕರುಣೆಯು ಸತ್ಕರ್ಮಿಗಳಿಗೆ ನಿಕಟವಾಗಿದೆ.
57وَهُوَ الَّذِي يُرْسِلُ الرِّيَاحَ بُشْرًا بَيْنَ يَدَيْ رَحْمَتِهِ ۖ حَتَّىٰ إِذَا أَقَلَّتْ سَحَابًا ثِقَالًا سُقْنَاهُ لِبَلَدٍ مَّيِّتٍ فَأَنزَلْنَا بِهِ الْمَاءَ فَأَخْرَجْنَا بِهِ مِن كُلِّ الثَّمَرَاتِ ۚ كَذَٰلِكَ نُخْرِجُ الْمَوْتَىٰ لَعَلَّكُمْ تَذَكَّرُونَ
ಅವನು ತನ್ನ ಅನುಗ್ರಹಕ್ಕೆ ಮುಂಚಿತವಾಗಿ ಶುಭವಾರ್ತೆಯನ್ನು ತಿಳಿಸುವ ಮಾರುತಗಳನ್ನು ಕಳುಹಿಸುವವನಾಗಿದ್ದಾನೆ. ಆ ಮಾರುತಗಳು ಘನೀಕೃತ ಮೋಡಗಳನ್ನು ಹೊತ್ತುಕೊಂಡಾಗ ನಾವು ಆ ಮೋಡವನ್ನು ನಿರ್ಜೀವ ಭೂಮಿಯ ಕಡೆಗೆ ಸಾಗಿಸುತ್ತೇವೆ. ನಂತರ ಆ ಮೋಡದಿಂದ ನಾವು ನೀರನ್ನು ಸುರಿಸುತ್ತೇವೆ. ನಂತರ ಅದರಿಂದ ಸಕಲ ವಿಧದ ಫಲಗಳನ್ನು ಹೊರತರುತ್ತೇವೆ. ಇದೇ ರೀತಿ ನಾವು ಮೃತರನ್ನು ಹೊರತರುತ್ತೇವೆ. ಇದು ನೀವು ಅರಿತುಕೊಳ್ಳಲೆಂದಾಗಿದೆ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
55ಆಯತ್

ಅನುವಾದ — ಅಲ್-ಆರಾಫ್ 55

ಸೂರಾ ಅಲ್-ಆರಾಫ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನಿಮ್ಮ ಪ್ರಭುವನ್ನು ವಿನಮ್ರತೆ ಹಾಗೂ ರಹಸ್ಯವಾಗಿ ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯು ಅವನು…

ಸೂರಾ ಆಯತ್ 55/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 53–57. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers