ಸೂರಾ ಅಲ್-ಅಲಕ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಅಲಕ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (19 ಆಯತ್ — مكية). ಅಲ್-ಅಲಕ್ ಆಲಿಸಿ, ಅಲ್-ಅಲಕ್ ಅನುವಾದ, ಅಲ್-ಅಲಕ್ mp3, ಅಲ್-ಅಲಕ್ pdf.

ಸೂರಾ ಅಲ್-ಅಲಕ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
اقْرَأْ بِاسْمِ رَبِّكَ الَّذِي خَلَقَ ۝١
📖 ಅನುವಾದ ಆಯತ್ 1
ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದಿಂದ ಓದಿರಿ.
خَلَقَ الْإِنسَانَ مِنْ عَلَقٍ ۝٢
📖 ಅನುವಾದ ಆಯತ್ 2
ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
اقْرَأْ وَرَبُّكَ الْأَكْرَمُ ۝٣
📖 ಅನುವಾದ ಆಯತ್ 3
ಓದಿರಿ, ನಿಮ್ಮ ಪ್ರಭು ಔದರ‍್ಯ ಉಳ್ಳವನಾಗಿರುವನು.
الَّذِي عَلَّمَ بِالْقَلَمِ ۝٤
📖 ಅನುವಾದ ಆಯತ್ 4
ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.
عَلَّمَ الْإِنسَانَ مَا لَمْ يَعْلَمْ ۝٥
📖 ಅನುವಾದ ಆಯತ್ 5
ಅವನು ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟನು.
كَلَّا إِنَّ الْإِنسَانَ لَيَطْغَىٰ ۝٦
📖 ಅನುವಾದ ಆಯತ್ 6
ವಾಸ್ತವದಲ್ಲಿ ಮನುಷ್ಯ ದ್ರೋಹವೆಸಗುತ್ತಾನೆ.
أَن رَّآهُ اسْتَغْنَىٰ ۝٧
📖 ಅನುವಾದ ಆಯತ್ 7
ಅವನು ತನ್ನನ್ನು ರ‍್ಥಿಕ ನಿರಾವಲಂಬಿ ಎಂದು ತಿಳಿದುಕೊಂಡಿರುವುದರಿಂದ.
إِنَّ إِلَىٰ رَبِّكَ الرُّجْعَىٰ ۝٨
📖 ಅನುವಾದ ಆಯತ್ 8
ಖಂಡಿತವಾಗಿಯೂ (ಎಲ್ಲರ) ಮರಳುವಿಕೆಯು ನಿಮ್ಮ ಪ್ರಭುವಿನೆಡೆಗಾಗಿದೆ.
أَرَأَيْتَ الَّذِي يَنْهَىٰ ۝٩
📖 ಅನುವಾದ ಆಯತ್ 9
ನೀವು ತಡೆಯುವವನನ್ನು ನೋಡಿದಿರಾ ?
عَبْدًا إِذَا صَلَّىٰ ۝١٠
📖 ಅನುವಾದ ಆಯತ್ 10
ನಮ್ಮ ದಾಸನು ನಮಾಜ್ ನರ‍್ವಹಿಸುತ್ತಿರುವಾಗ (ತಡೆಯುವವನನ್ನು)
أَرَأَيْتَ إِن كَانَ عَلَى الْهُدَىٰ ۝١١
📖 ಅನುವಾದ ಆಯತ್ 11
ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.
أَوْ أَمَرَ بِالتَّقْوَىٰ ۝١٢
📖 ಅನುವಾದ ಆಯತ್ 12
ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !
أَرَأَيْتَ إِن كَذَّبَ وَتَوَلَّىٰ ۝١٣
📖 ಅನುವಾದ ಆಯತ್ 13
ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
أَلَمْ يَعْلَم بِأَنَّ اللَّهَ يَرَىٰ ۝١٤
📖 ಅನುವಾದ ಆಯತ್ 14
ಅಲ್ಲಾಹನು ನೋಡುತ್ತಿದ್ದಾ ನೆಂದು ಅವನು ಅರಿತು ಕೊಂಡಿಲ್ಲವೇ ?
كَلَّا لَئِن لَّمْ يَنتَهِ لَنَسْفَعًا بِالنَّاصِيَةِ ۝١٥
📖 ಅನುವಾದ ಆಯತ್ 15
ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.
نَاصِيَةٍ كَاذِبَةٍ خَاطِئَةٍ ۝١٦
📖 ಅನುವಾದ ಆಯತ್ 16
ಸುಳ್ಳು ನುಡಿಯುವ ಮತ್ತು ಪಾಪವೆಸಗುವ ಮುಂದಲೆಯನ್ನು.
فَلْيَدْعُ نَادِيَهُ ۝١٧
📖 ಅನುವಾದ ಆಯತ್ 17
ಅವನು ತನ್ನ ಸಭೆಯವರನ್ನು ಕರೆದುಕೊಳ್ಳಲಿ.
سَنَدْعُ الزَّبَانِيَةَ ۝١٨
📖 ಅನುವಾದ ಆಯತ್ 18
ಸದ್ಯದಲ್ಲೇ ನಾವು (ನರಕದ) ಕಾವಲುಗಾರರನ್ನು ಕರೆಯುವೆವು.
كَلَّا لَا تُطِعْهُ وَاسْجُدْ وَاقْتَرِب ۩ ۝١٩
📖 ಅನುವಾದ ಆಯತ್ 19
ಜಾಗ್ರತೆ! ನೀವು ಅವನನ್ನು ಅನುಸರಿಸಬೇಡಿರಿ. ನೀವು (ಅಲ್ಲಾಹನಿಗೆ) ಸಾಷ್ಟಾಂಗ ವೆÀರಗಿರಿ ಮತ್ತು ಸಾಮಿಪ್ಯವನ್ನು ಪಡೆಯಿರಿ.
← 95 ಅಲ್-ಅಲಕ್ (96/114) 97 →
ಓದಿ ಸೂರಾ ಅಲ್-ಅಲಕ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

96العلق Al-'Alaq 📚 19 ಆಯತ್ مكية

ಆಯತ್‌ವಾರು – ಸೂರಾ ಅಲ್-ಅಲಕ್ — 19 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers