PDF —
19 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಅಲಕ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಅಲಕ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಅಲಕ್ ಅನುವಾದ. ಸೂರಾ ಅಲ್-ಅಲಕ್ (Meccan) 19 ಆಯತ್.

← ಅತ್-ತೀನ್ಸೂರಾ ಅಲ್-ಅಲಕ್ ಅಲ್-ಖದ್ರ್ →


19 ಆಯತ್ · Meccan · ಕನ್ನಡ
bismillah
ﮕﮖﮗﮘﮙﮚ
96:1 ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದಿಂದ ಓದಿರಿ.
ﮛﮜﮝﮞﮟ
96:2 ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
ﮠﮡﮢﮣ
96:3 ಓದಿರಿ, ನಿಮ್ಮ ಪ್ರಭು ಔದರ‍್ಯ ಉಳ್ಳವನಾಗಿರುವನು.
ﮤﮥﮦﮧ
96:4 ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.
ﮨﮩﮪﮫﮬﮭ
96:5 ಅವನು ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟನು.
ﮮﮯﮰﮱﯓ
96:6 ವಾಸ್ತವದಲ್ಲಿ ಮನುಷ್ಯ ದ್ರೋಹವೆಸಗುತ್ತಾನೆ.
ﯔﯕﯖﯗ
96:7 ಅವನು ತನ್ನನ್ನು ರ‍್ಥಿಕ ನಿರಾವಲಂಬಿ ಎಂದು ತಿಳಿದುಕೊಂಡಿರುವುದರಿಂದ.
ﯘﯙﯚﯛﯜ
96:8 ಖಂಡಿತವಾಗಿಯೂ (ಎಲ್ಲರ) ಮರಳುವಿಕೆಯು ನಿಮ್ಮ ಪ್ರಭುವಿನೆಡೆಗಾಗಿದೆ.
ﯝﯞﯟﯠ
96:9 ನೀವು ತಡೆಯುವವನನ್ನು ನೋಡಿದಿರಾ ?
ﯡﯢﯣﯤ
96:10 ನಮ್ಮ ದಾಸನು ನಮಾಜ್ ನರ‍್ವಹಿಸುತ್ತಿರುವಾಗ (ತಡೆಯುವವನನ್ನು)
ﯥﯦﯧﯨﯩﯪ
96:11 ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.
ﯫﯬﯭﯮ
96:12 ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !
ﭑﭒﭓﭔﭕ
96:13 ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
ﭖﭗﭘﭙﭚﭛ
96:14 ಅಲ್ಲಾಹನು ನೋಡುತ್ತಿದ್ದಾ ನೆಂದು ಅವನು ಅರಿತು ಕೊಂಡಿಲ್ಲವೇ ?
ﭜﭝﭞﭟﭠﭡﭢ
96:15 ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.
ﭣﭤﭥﭦ
96:16 ಸುಳ್ಳು ನುಡಿಯುವ ಮತ್ತು ಪಾಪವೆಸಗುವ ಮುಂದಲೆಯನ್ನು.
ﭧﭨﭩ
96:17 ಅವನು ತನ್ನ ಸಭೆಯವರನ್ನು ಕರೆದುಕೊಳ್ಳಲಿ.
ﭪﭫﭬ
96:18 ಸದ್ಯದಲ್ಲೇ ನಾವು (ನರಕದ) ಕಾವಲುಗಾರರನ್ನು ಕರೆಯುವೆವು.
ﭭﭮﭯﭰﭱﭲﭳ
96:19 ಜಾಗ್ರತೆ! ನೀವು ಅವನನ್ನು ಅನುಸರಿಸಬೇಡಿರಿ. ನೀವು (ಅಲ್ಲಾಹನಿಗೆ) ಸಾಷ್ಟಾಂಗ ವೆÀರಗಿರಿ ಮತ್ತು ಸಾಮಿಪ್ಯವನ್ನು ಪಡೆಯಿರಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers