ಹೂದ್ · 27/123
ಅನುವಾದ ಉಚ್ಚಾರಣೆ — ಸೂರಾ ಹೂದ್
فَقَالَ الْمَلَأُ الَّذِينَ كَفَرُوا مِن قَوْمِهِ مَا نَرَاكَ إِلَّا بَشَرًا مِّثْلَنَا وَمَا نَرَاكَ اتَّبَعَكَ إِلَّا الَّذِينَ هُمْ أَرَاذِلُنَا بَادِيَ الرَّأْيِ وَمَا نَرَىٰ لَكُمْ عَلَيْنَا مِن فَضْلٍ بَلْ نَظُنُّكُمْ كَاذِبِينَ ۝٢٧
Faqaalal mala ul lazeena kafaroo min qawmihee ma naraaka illaa basharam mislanaa wa maa naraakat taba`aka illal lazeena hum araazilunaa baadiyar raayi wa maa naraa lakum `alainaa min fadlim bal nazunnukum kaazibeen
📖 ಕನ್ನಡ ಅರ್ಥ
ಆಗ ಅವರ ಜನಾಂಗದ ಸತ್ಯನಿಷೇಧಿಗಳಾದ ಮುಖಂಡರು ಉತ್ತರಿಸಿದರು : ನಾವಂತೂ ನಿಮ್ಮನ್ನು ನಮ್ಮಂತಿರುವ ಒಬ್ಬ ಮನುಷ್ಯನಾಗಿಯೇ ಕಾಣುತ್ತೇವೆ ಮತ್ತು ನಮ್ಮ ಜನಾಂಗದ ಕೀಳು ವರ್ಗದವರು ಮುಂದಾಲೋಚನೆಯಿಲ್ಲದೆ ನಿಮ್ಮನ್ನು ಅನುಸರಿಸುತ್ತಿರುವುದಾಗಿ ನಾವು ಕಾಣುತ್ತೇವೆ. ನಾವು ನಿಮ್ಮಲ್ಲಿ ನಮಗಿಂತ ಮಿಗಿಲಾದ ಯಾವ ಶ್ರೇಷ್ಟತೆಯನ್ನು ಕಾಣುತ್ತಿಲ್ಲ. ಮಾತ್ರವಲ್ಲ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.

🎧 ಆಲಿಸಿ


📜 ಆಯತ್ 25-29 — ಸೂರಾ ಹೂದ್

25وَلَقَدْ أَرْسَلْنَا نُوحًا إِلَىٰ قَوْمِهِ إِنِّي لَكُمْ نَذِيرٌ مُّبِينٌ
ನಿಶ್ಚಯವಾಗಿಯೂ ನಾವು ನೂಹ್‌ರವರನ್ನು ಅವರ ಜನಾಂಗದೆಡೆಗೆ ಸಂದೇಶವಾಹಕರಾಗಿ ಕಳುಹಿಸಿದೆವು. ನೂಹ್‌ರವರು ಹೇಳಿದರು: ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
26أَن لَّا تَعْبُدُوا إِلَّا اللَّهَ ۖ إِنِّي أَخَافُ عَلَيْكُمْ عَذَابَ يَوْمٍ أَلِيمٍ
ನೀವು ಅಲ್ಲಾಹನ ಹೊರತು ಇನ್ನಾರ ಆರಾಧನೆ ಮಾಡಬೇಡಿರಿ. ನಾನಂತೂ ನಿಮ್ಮ ಮೇಲೆ ಒಂದು ವೇದನಾಜನಕ ದಿನದ ಶಿಕ್ಷೆಯ ಬಗ್ಗೆ ಭಯಪಡುತ್ತೇನೆ.
27فَقَالَ الْمَلَأُ الَّذِينَ كَفَرُوا مِن قَوْمِهِ مَا نَرَاكَ إِلَّا بَشَرًا مِّثْلَنَا وَمَا نَرَاكَ اتَّبَعَكَ إِلَّا الَّذِينَ هُمْ أَرَاذِلُنَا بَادِيَ الرَّأْيِ وَمَا نَرَىٰ لَكُمْ عَلَيْنَا مِن فَضْلٍ بَلْ نَظُنُّكُمْ كَاذِبِينَ
ಆಗ ಅವರ ಜನಾಂಗದ ಸತ್ಯನಿಷೇಧಿಗಳಾದ ಮುಖಂಡರು ಉತ್ತರಿಸಿದರು : ನಾವಂತೂ ನಿಮ್ಮನ್ನು ನಮ್ಮಂತಿರುವ ಒಬ್ಬ ಮನುಷ್ಯನಾಗಿಯೇ ಕಾಣುತ್ತೇವೆ ಮತ್ತು ನಮ್ಮ ಜನಾಂಗದ ಕೀಳು ವರ್ಗದವರು ಮುಂದಾಲೋಚನೆಯಿಲ್ಲದೆ ನಿಮ್ಮನ್ನು ಅನುಸರಿಸುತ್ತಿರುವುದಾಗಿ ನಾವು ಕಾಣುತ್ತೇವೆ. ನಾವು ನಿಮ್ಮಲ್ಲಿ ನಮಗಿಂತ ಮಿಗಿಲಾದ ಯಾವ ಶ್ರೇಷ್ಟತೆಯನ್ನು ಕಾಣುತ್ತಿಲ್ಲ. ಮಾತ್ರವಲ್ಲ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.
28قَالَ يَا قَوْمِ أَرَأَيْتُمْ إِن كُنتُ عَلَىٰ بَيِّنَةٍ مِّن رَّبِّي وَآتَانِي رَحْمَةً مِّنْ عِندِهِ فَعُمِّيَتْ عَلَيْكُمْ أَنُلْزِمُكُمُوهَا وَأَنتُمْ لَهَا كَارِهُونَ
ನೂಹ್‌ರವರು ಹೇಳಿದರು : ಓ ನನ್ನ ಜನಾಂಗದವರೇ ಸ್ವಲ್ಪ ಯೋಚಿಸಿರಿ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣವನ್ನು ಹೊಂದಿದ್ದು ಮತ್ತು ಅವನು ತನ್ನ ಬಳಿಯ ಕೃಪೆಯನ್ನು(ಪ್ರವಾದಿತ್ವ) ನೀಡಿರುವನು. ಅದು ನಿಮಗೆ ಪರೋಕ್ಷವಾಗಿದೆ. ನೀವು ಅದನ್ನು ಇಷ್ಟಪಡದಿದ್ದರೂ ನಾನದನ್ನು ನಿಮ್ಮ ಮೇಲೆ ಬಲವಂತವಾಗಿ ಹೇರಿಬಿಡುತ್ತೇನೆಯೇ ?
29وَيَا قَوْمِ لَا أَسْأَلُكُمْ عَلَيْهِ مَالًا ۖ إِنْ أَجْرِيَ إِلَّا عَلَى اللَّهِ ۚ وَمَا أَنَا بِطَارِدِ الَّذِينَ آمَنُوا ۚ إِنَّهُم مُّلَاقُو رَبِّهِمْ وَلَٰكِنِّي أَرَاكُمْ قَوْمًا تَجْهَلُونَ
ಓ ನನ್ನ ಜನಾಂಗದವರೇ ನಾನು ಇದಕ್ಕಾಗಿ ನಿಮ್ಮಿಂದ ಧನವನ್ನೇನೂ ಬೇಡುತ್ತಿಲ್ಲ, ನನ್ನ ಪ್ರತಿಫಲವಂತೂ ಕೇವಲ ಅಲ್ಲಾಹನ ಬಳಿಯಲ್ಲಿದೆ ಮತ್ತು ನಾನು ಸತ್ಯ ವಿಶ್ವಾಸಿಗಳನ್ನು ನನ್ನ ಬಳಿಯಿಂದ ದೂರಕ್ಕಟ್ಟುವುದೂ ಇಲ್ಲ. ಅವರಿಗೆ ತಮ್ಮ ಪ್ರಭುವನ್ನು ಭೇಟಿಯಾಗಲಿಕ್ಕಿದೆ, ಆದರೆ ನಾನು ನಿಮ್ಮನ್ನು ಅವಿವೇಕ ತೋರುತ್ತಿರುವುದಾಗಿ ಕಾಣುತ್ತಿದ್ದೇನೆ.
ಹೂದ್ಕುರಾನ್ ಸೂಚಿ
123ಆಯತ್
MeccanRevelation
27ಆಯತ್

ಅನುವಾದ — ಹೂದ್ 27

ಸೂರಾ ಹೂದ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಅವರ ಜನಾಂಗದ ಸತ್ಯನಿಷೇಧಿಗಳಾದ ಮುಖಂಡರು ಉತ್ತರಿಸಿದರು : ನಾವಂತೂ ನಿಮ್ಮನ್ನು ನಮ್ಮಂತಿರುವ…

ಸೂರಾ ಆಯತ್ 27/123 — ಸೂರಾ ಹೂದ್ هود (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಹೂದ್ ಆಲಿಸಿ, ಸೂರಾ ಹೂದ್ ಅನುವಾದ, ಸೂರಾ ಹೂದ್ mp3, ಸೂರಾ ಹೂದ್ pdf. ಆಯತ್ 25–29. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers