ಅಲ್-ಬಕರಾ · 199/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
ثُمَّ أَفِيضُوا مِنْ حَيْثُ أَفَاضَ النَّاسُ وَاسْتَغْفِرُوا اللَّهَ ۚ إِنَّ اللَّهَ غَفُورٌ رَّحِيمٌ ۝١٩٩
Summa afeedoo min haisu afaadan naasu wastagh firullaah; innnal laaha Ghafoo rur-Raheem
📖 ಕನ್ನಡ ಅರ್ಥ
ತರುವಾಯ ನೀವು (ಖುರೈಷರೇ) ಜನರು ಎಲ್ಲಿಂದ ಮರುಳುತ್ತಾರೋ ಅಲ್ಲಿಂದಲೇ ಮರಳಿರಿ ಹಾಗೂ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ.

🎧 ಆಲಿಸಿ


📜 ಆಯತ್ 197-201 — ಸೂರಾ ಅಲ್-ಬಕರಾ

197الْحَجُّ أَشْهُرٌ مَّعْلُومَاتٌ ۚ فَمَن فَرَضَ فِيهِنَّ الْحَجَّ فَلَا رَفَثَ وَلَا فُسُوقَ وَلَا جِدَالَ فِي الْحَجِّ ۗ وَمَا تَفْعَلُوا مِنْ خَيْرٍ يَعْلَمْهُ اللَّهُ ۗ وَتَزَوَّدُوا فَإِنَّ خَيْرَ الزَّادِ التَّقْوَىٰ ۚ وَاتَّقُونِ يَا أُولِي الْأَلْبَابِ
ಹಜ್ಜಿನ ಮಾಸಗಳು ನಿಶ್ಚಿತವಾಗಿವೆ. ಆದ್ದರಿಂದ ಯಾರು ಆ ಮಾಸಗಳಲ್ಲಿ ಹಜ್ಜನ್ನು ಅನಿವಾರ್ಯವಾಗಿಸುತ್ತಾನೋ ಅವನು ಹಜ್ಜಿನ ಅವಧಿಯಲ್ಲಿ ತನ್ನ ಪತ್ನಿಯೊಂದಿಗೆ ಸರಸಸಲ್ಲಾಪವಾಗಲಿ, ಪಾಪವಾಗಲಿ, ಜಗಳವಾಗಲಿ ಮಾಡುವುದರಿಂದ ದೂರವಿರಬೇಕು ಮತ್ತು ನೀವು ಮಾಡುವ ಯಾವುದೇ ಒಳಿತಾಗಲೀ ಅದನ್ನು ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಯಾತ್ರಾ ಸಾಮಗ್ರಿಗಳ ಸಿದ್ಧತೆ ಮಾಡಿರಿ. ಎಲ್ಲಕ್ಕಿಂತ ಅತ್ಯತ್ತಮ ಯಾತ್ರಾ ಸಾಮಗ್ರಿಯು ಅಲ್ಲಾಹನ ಭಯಭಕ್ತಿಯಾಗಿದೆ. ಮತ್ತು ಓ ಬುದ್ಧಿ ಜೀವಿಗಳೇ, ನನ್ನನ್ನೇ ಭಯಪಡಿರಿ.
198لَيْسَ عَلَيْكُمْ جُنَاحٌ أَن تَبْتَغُوا فَضْلًا مِّن رَّبِّكُمْ ۚ فَإِذَا أَفَضْتُم مِّنْ عَرَفَاتٍ فَاذْكُرُوا اللَّهَ عِندَ الْمَشْعَرِ الْحَرَامِ ۖ وَاذْكُرُوهُ كَمَا هَدَاكُمْ وَإِن كُنتُم مِّن قَبْلِهِ لَمِنَ الضَّالِّينَ
ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು (ವ್ಯಾಪಾರ ವ್ಯವಹಾರಗಳಿಂದ) ಅರಸುವುದರಿಂದ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಇನ್ನು ನೀವು ಅರಫಾತ್‌ನಿಂದ ಮರಳಿದಾಗ ಮಶ್‌ಅರುಲ್ ಹರಾಮ್‌ನಲ್ಲಿ (ಮುಜ್‌ದಲಿಫಾ ಮೈದಾನದಲ್ಲಿ) ಅಲ್ಲಾಹನನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಮಾರ್ಗದರ್ಶನ ನೀಡಿದ ಪ್ರಕಾರವೇ ನೀವು ಅವನನ್ನು ಸ್ಮರಿಸಿರಿ. ವಸ್ತುತಃ ನೀವು ಇದಕ್ಕೆ ಮೊದಲು ಮಾರ್ಗ ಭ್ರಷ್ಟರಾಗಿದ್ದೀರಿ.
199ثُمَّ أَفِيضُوا مِنْ حَيْثُ أَفَاضَ النَّاسُ وَاسْتَغْفِرُوا اللَّهَ ۚ إِنَّ اللَّهَ غَفُورٌ رَّحِيمٌ
ತರುವಾಯ ನೀವು (ಖುರೈಷರೇ) ಜನರು ಎಲ್ಲಿಂದ ಮರುಳುತ್ತಾರೋ ಅಲ್ಲಿಂದಲೇ ಮರಳಿರಿ ಹಾಗೂ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ.
200فَإِذَا قَضَيْتُم مَّنَاسِكَكُمْ فَاذْكُرُوا اللَّهَ كَذِكْرِكُمْ آبَاءَكُمْ أَوْ أَشَدَّ ذِكْرًا ۗ فَمِنَ النَّاسِ مَن يَقُولُ رَبَّنَا آتِنَا فِي الدُّنْيَا وَمَا لَهُ فِي الْآخِرَةِ مِنْ خَلَاقٍ
ನೀವು ಹಜ್ಜಿನ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ನೀವು ನಿಮ್ಮ ಪೂರ್ವಜರನ್ನು ಸ್ಮರಿಸುವಂತೆ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಅಲ್ಲಾಹನನ್ನು ಸ್ಮರಿಸಿರಿ. ಆದರೆ ಜನರ ಪೈಕಿ ಕೆಲವರು; ನಮ್ಮ ಪ್ರಭುವೇ ನಮಗೆ ಈ ಇಹಲೋಕದಲ್ಲೇ (ಅನುಗ್ರಹವನ್ನು) ದಯಪಾಲಿಸು ಎಂದು ಹೇಳುವವರಿದ್ದಾರೆ. ಅಂಥವರಿಗೆ ಪರಲೋಕದಲ್ಲಿ ಯಾವುದೇ ಪಾಲು ಇರುವುದಿಲ್ಲ.
201وَمِنْهُم مَّن يَقُولُ رَبَّنَا آتِنَا فِي الدُّنْيَا حَسَنَةً وَفِي الْآخِرَةِ حَسَنَةً وَقِنَا عَذَابَ النَّارِ
ಇನ್ನು ಅವರ ಪೈಕಿ ಕೆಲವರು ಓ ನಮ್ಮ ಪ್ರಭುವೇ, ನಮಗೆ ಇಹಲೋಕದಲ್ಲಿ ಒಳಿತನ್ನು ನೀಡು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕಾಗ್ನಿಯ ಯಾತನೆಯಿಂದ ರಕ್ಷಿಸು ಎಂದು ಬೇಡುವವರಿದ್ದಾರೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
199ಆಯತ್

ಅನುವಾದ — ಅಲ್-ಬಕರಾ 199

ಸೂರಾ ಅಲ್-ಬಕರಾ ಆಯತ್ 199 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ನೀವು (ಖುರೈಷರೇ) ಜನರು ಎಲ್ಲಿಂದ ಮರುಳುತ್ತಾರೋ ಅಲ್ಲಿಂದಲೇ ಮರಳಿರಿ ಹಾಗೂ ಅಲ್ಲಾಹನಲ್ಲಿ…

ಸೂರಾ ಆಯತ್ 199/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 197–201. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers