ಅಲ್-ಬಕರಾ · 211/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
سَلْ بَنِي إِسْرَائِيلَ كَمْ آتَيْنَاهُم مِّنْ آيَةٍ بَيِّنَةٍ ۗ وَمَن يُبَدِّلْ نِعْمَةَ اللَّهِ مِن بَعْدِ مَا جَاءَتْهُ فَإِنَّ اللَّهَ شَدِيدُ الْعِقَابِ ۝٢١١
Sal Banee Israaa`eela kam aatainaahum min aayatim baiyinah; wa mai yubaddil ni`matal laahi mim ba`di maa jaaa`athu fa innallaaha shadeedul`iqaab
📖 ಕನ್ನಡ ಅರ್ಥ
ಇಸ್ರಾಯೀಲ್ ಸಂತತಿಗಳಲ್ಲಿ ವಿಚಾರಿಸಿರಿ, ನಾವು ಎಷ್ಟೆಲ್ಲಾ ಸುಸ್ಪಷ್ಟ ದೃಷ್ಟಾಂತಗಳನ್ನು ದಯಪಾಲಿಸಿದ್ದೇವೆ. ಮತ್ತು ಯಾರು ಅಲ್ಲಾಹನ ಅನುಗ್ರಹಗಳನ್ನು ತನ್ನ ಬಳಿಗೆ ಬಂದ ಬಳಿಕವು ಬದಲಾಯಿಸುತ್ತಾನೋ (ತಿಳಿದುಕೊಳ್ಳಲಿ) ಖಂಡಿತವಾಗಿಯು ಅಲ್ಲಾಹನು ಅತ್ಯುಗ್ರ ಶಿಕ್ಷೆಗಳನ್ನು ನೀಡುವವನಾಗಿದ್ದಾನೆ.

🎧 ಆಲಿಸಿ


📜 ಆಯತ್ 209-213 — ಸೂರಾ ಅಲ್-ಬಕರಾ

209فَإِن زَلَلْتُم مِّن بَعْدِ مَا جَاءَتْكُمُ الْبَيِّنَاتُ فَاعْلَمُوا أَنَّ اللَّهَ عَزِيزٌ حَكِيمٌ
ಇನ್ನು ಸುಸ್ಪಷ್ಟ ಪುರಾವೆಗಳು ನಿಮ್ಮ ಬಳಿಗೆ ಬಂದ ಬಳಿಕವೂ ನೀವು ಮಾರ್ಗಭ್ರಷ್ಟರಾದರೆ ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ.
210هَلْ يَنظُرُونَ إِلَّا أَن يَأْتِيَهُمُ اللَّهُ فِي ظُلَلٍ مِّنَ الْغَمَامِ وَالْمَلَائِكَةُ وَقُضِيَ الْأَمْرُ ۚ وَإِلَى اللَّهِ تُرْجَعُ الْأُمُورُ
(ಉಪದೇಶದ ಬಳಿಕ) ಅವರು ತಮ್ಮಲ್ಲಿಗೆ ಸಾಕ್ಷಾತ್ ಅಲ್ಲಾಹನು ದೇವದೂತರೊಂದಿಗೆ ಮೋಡಗಳ ನೆರಳುಗಳಲ್ಲಿ ಬಂದು. ಅವರ ಅಂತಿಮ ತೀರ್ಮಾನವನ್ನೇ ಮಾಡಿಬಿಡಬೇಕೆಂದು ನಿರೀಕ್ಷಿಸುತ್ತಿರುವರೇ? ಕೊನೆಗಂತು ಸಕಲ ಸಂಗತಿಗಳೂ ಅಲ್ಲಾಹನೆಡೆಗೇ ಮರಳಿ ಹೋಗುವುವು.
211سَلْ بَنِي إِسْرَائِيلَ كَمْ آتَيْنَاهُم مِّنْ آيَةٍ بَيِّنَةٍ ۗ وَمَن يُبَدِّلْ نِعْمَةَ اللَّهِ مِن بَعْدِ مَا جَاءَتْهُ فَإِنَّ اللَّهَ شَدِيدُ الْعِقَابِ
ಇಸ್ರಾಯೀಲ್ ಸಂತತಿಗಳಲ್ಲಿ ವಿಚಾರಿಸಿರಿ, ನಾವು ಎಷ್ಟೆಲ್ಲಾ ಸುಸ್ಪಷ್ಟ ದೃಷ್ಟಾಂತಗಳನ್ನು ದಯಪಾಲಿಸಿದ್ದೇವೆ. ಮತ್ತು ಯಾರು ಅಲ್ಲಾಹನ ಅನುಗ್ರಹಗಳನ್ನು ತನ್ನ ಬಳಿಗೆ ಬಂದ ಬಳಿಕವು ಬದಲಾಯಿಸುತ್ತಾನೋ (ತಿಳಿದುಕೊಳ್ಳಲಿ) ಖಂಡಿತವಾಗಿಯು ಅಲ್ಲಾಹನು ಅತ್ಯುಗ್ರ ಶಿಕ್ಷೆಗಳನ್ನು ನೀಡುವವನಾಗಿದ್ದಾನೆ.
212زُيِّنَ لِلَّذِينَ كَفَرُوا الْحَيَاةُ الدُّنْيَا وَيَسْخَرُونَ مِنَ الَّذِينَ آمَنُوا ۘ وَالَّذِينَ اتَّقَوْا فَوْقَهُمْ يَوْمَ الْقِيَامَةِ ۗ وَاللَّهُ يَرْزُقُ مَن يَشَاءُ بِغَيْرِ حِسَابٍ
ಸತ್ಯನಿಷೇಧಿಗಳಿಗೆ ಇಹಲೋಕ ಜೀವನವನ್ನು ಅಲಂಕೃತಗೊಳಿಸಲಾಗಿದೆ. ಅವರು ಸತ್ಯವಿಶ್ವಾಸಿಗಳನ್ನು ಅಪಹಾಸ್ಯ ಮಾಡುತ್ತಾರೆ. ವಸ್ತುತಃ ಭಯಭಕ್ತಿ ಹೊಂದಿದವರು ಪುನರುತ್ಥಾನ ದಿನದಂದು ಅತ್ಯುನ್ನತ ಸ್ಥಾನದಲ್ಲಿರುವರು. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತವಾಗಿ ಜೀವನಾಧಾರ ನೀಡುತ್ತಾನೆ.
213كَانَ النَّاسُ أُمَّةً وَاحِدَةً فَبَعَثَ اللَّهُ النَّبِيِّينَ مُبَشِّرِينَ وَمُنذِرِينَ وَأَنزَلَ مَعَهُمُ الْكِتَابَ بِالْحَقِّ لِيَحْكُمَ بَيْنَ النَّاسِ فِيمَا اخْتَلَفُوا فِيهِ ۚ وَمَا اخْتَلَفَ فِيهِ إِلَّا الَّذِينَ أُوتُوهُ مِن بَعْدِ مَا جَاءَتْهُمُ الْبَيِّنَاتُ بَغْيًا بَيْنَهُمْ ۖ فَهَدَى اللَّهُ الَّذِينَ آمَنُوا لِمَا اخْتَلَفُوا فِيهِ مِنَ الْحَقِّ بِإِذْنِهِ ۗ وَاللَّهُ يَهْدِي مَن يَشَاءُ إِلَىٰ صِرَاطٍ مُّسْتَقِيمٍ
ಮನುಷ್ಯರು ಒಂದೇ ಸಮುದಾಯವಾಗಿದ್ದರು(ಕಾಲಕ್ರಮೇಣ ಅವರಲ್ಲಿ ಭಿನ್ನಭಿಪ್ರಾಯ ಉಂಟಾದಾಗ) ಅಲ್ಲಾಹನು ಸುವಾರ್ತೆ ನೀಡುವವರನ್ನಾಗಿಯು ಎಚ್ಚರಿಕೆ ಕೊಡುವವರನ್ನಾಗಿಯು ಪೈಗಂಬರರÀನ್ನು ನಿಯೋಗಿಸಿದನು ಮತ್ತು ಜನರು ನಡುವಿನ ಭಿನ್ನತೆಯ ವಿಷಯಗಳಲ್ಲಿ ತೀರ್ಪುನೀಡಲೆಂದು ಅವರ ಜೊತೆ ಸತ್ಯದೊಂದಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಆದರೆ ಗ್ರಂಥ ನೀಡಲಾದವರು ತಮ್ಮಲ್ಲಿಗೆ ಸುಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಪರಸ್ಪರ ಹಟ ಹಾಗು ಹಗೆತನದ ಕಾರಣದಿಂದ ಅದರಲ್ಲಿ ಭಿನ್ನತೆಯನ್ನುಂಟು ಮಾಡಿದ್ದರು. ಆದ್ದರಿಂದ ಅಲ್ಲಾಹನು ಅವರು ಯಾವ ಸತ್ಯದಲ್ಲಿ ಭಿನ್ನತೆ ಹೊಂದಿದ್ದರೋ ಆ ಸತ್ಯದೆಡೆಗೆ ತನ್ನ ಇಚ್ಛೆ ಪ್ರಕಾರ ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಮಾಡಿದನು ಮತ್ತು ಅಲ್ಲಾಹನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
211ಆಯತ್

ಅನುವಾದ — ಅಲ್-ಬಕರಾ 211

ಸೂರಾ ಅಲ್-ಬಕರಾ ಆಯತ್ 211 - ಓದಿ, ಆಲಿಸಿ, ಅನುವಾದ, ಕನ್ನಡ : ಇಸ್ರಾಯೀಲ್ ಸಂತತಿಗಳಲ್ಲಿ ವಿಚಾರಿಸಿರಿ, ನಾವು ಎಷ್ಟೆಲ್ಲಾ ಸುಸ್ಪಷ್ಟ ದೃಷ್ಟಾಂತಗಳನ್ನು ದಯಪಾಲಿಸಿದ್ದೇವೆ. ಮತ್ತು ಯಾರು…

ಸೂರಾ ಆಯತ್ 211/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 209–213. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers