ಅರ್-ರೂಮ್ · 33/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
وَإِذَا مَسَّ النَّاسَ ضُرٌّ دَعَوْا رَبَّهُم مُّنِيبِينَ إِلَيْهِ ثُمَّ إِذَا أَذَاقَهُم مِّنْهُ رَحْمَةً إِذَا فَرِيقٌ مِّنْهُم بِرَبِّهِمْ يُشْرِكُونَ ۝٣٣
Wa izaa massan naasa durrun da`aw Rabbahum muneebeena ilaihi summa izaaa azaqahum minhu rahmatan izaa fareequm minhum be Rabbihim yushrikoon
📖 ಕನ್ನಡ ಅರ್ಥ
ಅವರಿಗೆ ಯಾವುದಾದರೂ ಸಂಕಷ್ಟವು ಬಾಧಿಸಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನನ್ನೇ ಕರೆದು ಬೇಡುತ್ತಾರೆ. ನಂತರ ಅವನು ಅವರಿಗೆ ತನ್ನೆಡೆಯಿಂದ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರ ಪೈಕಿ ಒಂದು ತಂಡದವರು ನಾವು ಅವರಿಗೆ ದಯಪಾಲಿಸಿರುವುದಕ್ಕೆ ಅವರು ಕೃತಘ್ನತೆ ತೋರಲೆಂದು ತಮ್ಮ ಪ್ರಭುವಿನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗುತ್ತಾರೆ.

🎧 ಆಲಿಸಿ


📜 ಆಯತ್ 31-35 — ಸೂರಾ ಅರ್-ರೂಮ್

31۞ مُنِيبِينَ إِلَيْهِ وَاتَّقُوهُ وَأَقِيمُوا الصَّلَاةَ وَلَا تَكُونُوا مِنَ الْمُشْرِكِينَ
ನೀವು ಅಲ್ಲಾಹನೆಡೆಗೆ ಮರಳಿ ಅವನನ್ನು ಭಯಪಡುತ್ತಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಬಹುದೇವಾರಾಧಕರೊಂದಿಗೆ ಸೇರಬೇಡಿರಿ.
32مِنَ الَّذِينَ فَرَّقُوا دِينَهُمْ وَكَانُوا شِيَعًا ۖ كُلُّ حِزْبٍ بِمَا لَدَيْهِمْ فَرِحُونَ
ತಮ್ಮ ಧರ್ಮವನ್ನು ಭಿನ್ನ ವಿಭಿನ್ನವಾಗಿಸಿ ತಾವೇ ವಿವಿಧ ಗುಂಪುಗಳಾಗಿ ಬಿಟ್ಟವರಲ್ಲಿ (ಸೇರಿದಿರಿ). ಪ್ರತಿಯೊಂದು ಗುಂಪಿನವರುತಮ್ಮ ಬಳಿಯಿರುವುದರಲ್ಲಿ ಸಂತುಷ್ಟರಾಗಿದ್ದಾರೆ.
33وَإِذَا مَسَّ النَّاسَ ضُرٌّ دَعَوْا رَبَّهُم مُّنِيبِينَ إِلَيْهِ ثُمَّ إِذَا أَذَاقَهُم مِّنْهُ رَحْمَةً إِذَا فَرِيقٌ مِّنْهُم بِرَبِّهِمْ يُشْرِكُونَ
ಅವರಿಗೆ ಯಾವುದಾದರೂ ಸಂಕಷ್ಟವು ಬಾಧಿಸಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನನ್ನೇ ಕರೆದು ಬೇಡುತ್ತಾರೆ. ನಂತರ ಅವನು ಅವರಿಗೆ ತನ್ನೆಡೆಯಿಂದ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರ ಪೈಕಿ ಒಂದು ತಂಡದವರು ನಾವು ಅವರಿಗೆ ದಯಪಾಲಿಸಿರುವುದಕ್ಕೆ ಅವರು ಕೃತಘ್ನತೆ ತೋರಲೆಂದು ತಮ್ಮ ಪ್ರಭುವಿನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗುತ್ತಾರೆ.
34لِيَكْفُرُوا بِمَا آتَيْنَاهُمْ ۚ فَتَمَتَّعُوا فَسَوْفَ تَعْلَمُونَ
ಸರಿ, ನೀವು ಸುಖಭೋಗಗಳನ್ನು ಸವಿಯಿರಿ. ಬಹುಬೇಗನೇ ನೀವು ಅರಿತುಕೊಳ್ಳಲಿದ್ದೀರಿ.
35أَمْ أَنزَلْنَا عَلَيْهِمْ سُلْطَانًا فَهُوَ يَتَكَلَّمُ بِمَا كَانُوا بِهِ يُشْرِكُونَ
ಇವರು ಅಲ್ಲಾಹನಿಗೆ ಸಹಭಾಗಿಯನ್ನಾಗಿ ನಿಶ್ಚಯಿಸುವಂತೆ ಹೇಳುವ ಯಾವುದಾದರೂ ಪುರಾವೆಯನ್ನು ನಾವು ಇವರ ಮೇಲೆ ಇಳಿಸಿರುತ್ತೇವೆಯೇ?
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
33ಆಯತ್

ಅನುವಾದ — ಅರ್-ರೂಮ್ 33

ಸೂರಾ ಅರ್-ರೂಮ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೆ ಯಾವುದಾದರೂ ಸಂಕಷ್ಟವು ಬಾಧಿಸಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನನ್ನೇ ಕರೆದು…

ಸೂರಾ ಆಯತ್ 33/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 31–35. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers