ಮುಹಮ್ಮದ್ · 13/38
ಅನುವಾದ ಉಚ್ಚಾರಣೆ — ಸೂರಾ ಮುಹಮ್ಮದ್
وَكَأَيِّن مِّن قَرْيَةٍ هِيَ أَشَدُّ قُوَّةً مِّن قَرْيَتِكَ الَّتِي أَخْرَجَتْكَ أَهْلَكْنَاهُمْ فَلَا نَاصِرَ لَهُمْ ۝١٣
Wa ka ayyim min qaryatin hiya ashaddu quwwatam min qaryatikal lateee akhrajatka ahlaknaahum falaa naasira lahum
📖 ಕನ್ನಡ ಅರ್ಥ
ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತಲೂ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳು ಹಿಂದೆ ಗತಿಸಿವೆ ನಾವು ಅವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಅವರ ಸಹಾಯಕನಾರೂ ಇರಲಿಲ್ಲ.

🎧 ಆಲಿಸಿ


📜 ಆಯತ್ 11-15 — ಸೂರಾ ಮುಹಮ್ಮದ್

11ذَٰلِكَ بِأَنَّ اللَّهَ مَوْلَى الَّذِينَ آمَنُوا وَأَنَّ الْكَافِرِينَ لَا مَوْلَىٰ لَهُمْ
ಇದೇಕೆಂದರೆ ಖಂಡಿತವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ರಕ್ಷಕಮಿತ್ರನಾಗಿ ರುವನು ಮತ್ತು ನಿಶ್ಚಯವಾಗಿಯು ಸತ್ಯನಿಷೇಧಿಗಳಿಗೆ ಯಾವೊಬ್ಬ ರಕ್ಷಕಮಿತ್ರನಿಲ್ಲ.
12إِنَّ اللَّهَ يُدْخِلُ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِن تَحْتِهَا الْأَنْهَارُ ۖ وَالَّذِينَ كَفَرُوا يَتَمَتَّعُونَ وَيَأْكُلُونَ كَمَا تَأْكُلُ الْأَنْعَامُ وَالنَّارُ مَثْوًى لَّهُمْ
ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡಿರುವವರನ್ನು ಖಂಡಿತ ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು ಮತ್ತು ಸತ್ಯನಿಷೇಧಿಸಿರುವವರು ಇಹಲೋಕದಲ್ಲಿ ಸುಖಭೋಗಗಳನ್ನು ಅನುಭವಿಸುತ್ತಾ ಜಾನುವಾರುಗಳು ತಿನ್ನುವಂತೆ ತಿನ್ನುತ್ತಿದ್ದಾರೆ. ನರಕಾಗ್ನಿಯೇ ಅವರ ನೆಲೆಯಾಗಿದೆ.
13وَكَأَيِّن مِّن قَرْيَةٍ هِيَ أَشَدُّ قُوَّةً مِّن قَرْيَتِكَ الَّتِي أَخْرَجَتْكَ أَهْلَكْنَاهُمْ فَلَا نَاصِرَ لَهُمْ
ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತಲೂ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳು ಹಿಂದೆ ಗತಿಸಿವೆ ನಾವು ಅವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಅವರ ಸಹಾಯಕನಾರೂ ಇರಲಿಲ್ಲ.
14أَفَمَن كَانَ عَلَىٰ بَيِّنَةٍ مِّن رَّبِّهِ كَمَن زُيِّنَ لَهُ سُوءُ عَمَلِهِ وَاتَّبَعُوا أَهْوَاءَهُم
ತನ್ನ ಪ್ರಭುವಿನ ಕಡೆಯಿಂದ ಸುಸ್ಪಷ್ಟ ಆಧಾರದಲ್ಲಿರುವ ಒಬ್ಬ ವ್ಯಕ್ತಿಯು ತನ್ನ ದುಷ್ಕರ್ಮವು ಸುಂದರಗೊಳಿಸಲಾದ, ಮತ್ತು ತನ್ನ ಸ್ವೇಚ್ಛೆಗಳನ್ನು ಅನುಸರಿಸುತ್ತಿರುವ ಮತ್ತೊಬ್ಬ ವ್ಯಕ್ತಿಯಂತಾಗುವನೇ ?
15مَّثَلُ الْجَنَّةِ الَّتِي وُعِدَ الْمُتَّقُونَ ۖ فِيهَا أَنْهَارٌ مِّن مَّاءٍ غَيْرِ آسِنٍ وَأَنْهَارٌ مِّن لَّبَنٍ لَّمْ يَتَغَيَّرْ طَعْمُهُ وَأَنْهَارٌ مِّنْ خَمْرٍ لَّذَّةٍ لِّلشَّارِبِينَ وَأَنْهَارٌ مِّنْ عَسَلٍ مُّصَفًّى ۖ وَلَهُمْ فِيهَا مِن كُلِّ الثَّمَرَاتِ وَمَغْفِرَةٌ مِّن رَّبِّهِمْ ۖ كَمَنْ هُوَ خَالِدٌ فِي النَّارِ وَسُقُوا مَاءً حَمِيمًا فَقَطَّعَ أَمْعَاءَهُمْ
ಭಯಭಕ್ತಿಯುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಸ್ವರ್ಗೋದ್ಯಾನದ ಗುಣವಿಶೇಷ ಹೀಗಿದೆ – ಅದರಲ್ಲಿ ಬದಲಾವಣೆ ಹೊಂದದAತಹ ನೀರಿನ ನದಿಗಳಿವೆ. ರುಚಿ ಬದಲಾಗದಂತಹ ಹಾಲಿನ ನದಿಗಳಿವೆ. ಕುಡಿಯುವವರಿಗೆ ಅತ್ಯಂತ ಸ್ವಾದಿಷ್ಟವಾದ ಮದ್ಯದ ನದಿಗಳಿವೆ ಮತ್ತು ಪರಿಶುದ್ಧಗೊಳಿಸಲಾದ ಜೇನಿನ ನದಿಗಳು ಇವೆ. ಅದರಲ್ಲಿ ಅವರಿಗೆ ಎಲ್ಲ ವಿಧದ ಹಣ್ಣು ಹಂಪಲುಗಳಿವೆ ಮತ್ತು ಅವರಿಗೆ ಅವರ ಪ್ರಭುವಿನ ಕ್ಷಮೆಯೂ ಇದೆ. ಇಂತಹಾ ಸ್ವರ್ಗವಾಸಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುವ ವ್ಯಕ್ತಿಗಳಂತಾಗುವರೇ ? ಅವರಿಗೆ ಕರುಳುಗಳನ್ನು ಕತ್ತರಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವುದು.
ಮುಹಮ್ಮದ್ಕುರಾನ್ ಸೂಚಿ
38ಆಯತ್
MedinanRevelation
13ಆಯತ್

ಅನುವಾದ — ಮುಹಮ್ಮದ್ 13

ಸೂರಾ ಮುಹಮ್ಮದ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತಲೂ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳು ಹಿಂದೆ ಗತಿಸಿವೆ ನಾವು…

ಸೂರಾ ಆಯತ್ 13/38 — ಸೂರಾ ಮುಹಮ್ಮದ್ محمد (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮುಹಮ್ಮದ್ ಆಲಿಸಿ, ಸೂರಾ ಮುಹಮ್ಮದ್ ಅನುವಾದ, ಸೂರಾ ಮುಹಮ್ಮದ್ mp3, ಸೂರಾ ಮುಹಮ್ಮದ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers