ಅಲ್-ಹಶ್ರ್ · 16/24
ಅನುವಾದ ಉಚ್ಚಾರಣೆ — ಸೂರಾ ಅಲ್-ಹಶ್ರ್
كَمَثَلِ الشَّيْطَانِ إِذْ قَالَ لِلْإِنسَانِ اكْفُرْ فَلَمَّا كَفَرَ قَالَ إِنِّي بَرِيءٌ مِّنكَ إِنِّي أَخَافُ اللَّهَ رَبَّ الْعَالَمِينَ ۝١٦
Kamasalish shaitaani izqaala lil insaanik fur falammaa kafara qaala innee bareee`um minka inneee akhaaful laaha rabbal `aalameen
📖 ಕನ್ನಡ ಅರ್ಥ
ಇವರ (ಕಪಟಿಗಳ) ಉದಾಹರಣೆಯು ಶೈತಾನನಂತಿದೆ ಅವನು ಮನುಷ್ಯನಿಗೆ ನೀನು ಸತ್ಯವನ್ನು ನಿಷೇಧಿಸು ಎಂದನು. ಅವನು ಸತ್ಯವನ್ನು ನಿಷೇಧಿಸಿದಾಗ ಹೇಳಿದನು; ನಾನಂತೂ ನಿನ್ನಿಂದ ಸಂಬAಧ ಮುಕ್ತನಾಗಿದ್ದೇನೆ. ನಾನು ಸಕಲ ಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ.

🎧 ಆಲಿಸಿ


📜 ಆಯತ್ 14-18 — ಸೂರಾ ಅಲ್-ಹಶ್ರ್

14لَا يُقَاتِلُونَكُمْ جَمِيعًا إِلَّا فِي قُرًى مُّحَصَّنَةٍ أَوْ مِن وَرَاءِ جُدُرٍ ۚ بَأْسُهُم بَيْنَهُمْ شَدِيدٌ ۚ تَحْسَبُهُمْ جَمِيعًا وَقُلُوبُهُمْ شَتَّىٰ ۚ ذَٰلِكَ بِأَنَّهُمْ قَوْمٌ لَّا يَعْقِلُونَ
ಕೋಟೆಗಳಿಂದ ಆವೃತವಾದ ಪ್ರದೇಶಗಳಿಂದ ಅಥವ ಗೋಡೆಗಳ ಮರೆಯಲ್ಲಿ ಅವಿತುಕೊಂಡು ಮಾತ್ರವಲ್ಲದೆ ಅವರು ಒಟ್ಟಾಗಿ ನಿಮ್ಮೊಂದಿಗೆ ಯುದ್ಧ ಮಾಡಲಾರರು. ಅವರ ಒಳಗೊಳಗಿನ ಜಗಳವು ಪ್ರಬಲವಾಗಿದೆ; ನೀವು ಅವರನ್ನು ಒಟ್ಟಾಗಿರುವರೆಂದು ಭಾವಿಸಿ ಕೊಂಡಿದ್ದೀರಾ. ಆದರೆ ಅವರ ಹೃದಯಗಳು ಪರಸ್ಪರ ಭಿನ್ನವಾಗಿವೆ, ಇದೇಕೆಂದರೆ ಅವರು ಬುದ್ಧಿ ಇಲ್ಲದ ಜನರಾಗಿದ್ದಾರೆ.
15كَمَثَلِ الَّذِينَ مِن قَبْلِهِمْ قَرِيبًا ۖ ذَاقُوا وَبَالَ أَمْرِهِمْ وَلَهُمْ عَذَابٌ أَلِيمٌ
ಇವರ ಸ್ಥಿತಿಯು ಇವರಿಗಿಂತ ಮೊದಲು ಹತ್ತಿರದಲ್ಲೇ ಗತಿಸಿದವರ ಸ್ಥಿತಿಯಂತಿದೆ. ಅವರು ತಮ್ಮ ಕೃತ್ಯಗಳ ದುಷ್ಪರಿಣಾಮವನ್ನು ಸವಿದಿದ್ದರು ಮತ್ತು ಅವರಿಗೆ ವೇದನಾಜನಕ ಯಾತನೆಯು ಸಿದ್ಧವಿದೆ.
16كَمَثَلِ الشَّيْطَانِ إِذْ قَالَ لِلْإِنسَانِ اكْفُرْ فَلَمَّا كَفَرَ قَالَ إِنِّي بَرِيءٌ مِّنكَ إِنِّي أَخَافُ اللَّهَ رَبَّ الْعَالَمِينَ
ಇವರ (ಕಪಟಿಗಳ) ಉದಾಹರಣೆಯು ಶೈತಾನನಂತಿದೆ ಅವನು ಮನುಷ್ಯನಿಗೆ ನೀನು ಸತ್ಯವನ್ನು ನಿಷೇಧಿಸು ಎಂದನು. ಅವನು ಸತ್ಯವನ್ನು ನಿಷೇಧಿಸಿದಾಗ ಹೇಳಿದನು; ನಾನಂತೂ ನಿನ್ನಿಂದ ಸಂಬAಧ ಮುಕ್ತನಾಗಿದ್ದೇನೆ. ನಾನು ಸಕಲ ಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ.
17فَكَانَ عَاقِبَتَهُمَا أَنَّهُمَا فِي النَّارِ خَالِدَيْنِ فِيهَا ۚ وَذَٰلِكَ جَزَاءُ الظَّالِمِينَ
ಕೊನೆಗೆ ಅವರಿಬ್ಬರ ಗತಿ ಏನಾಯಿತೆಂದರೆ ಅವರಿಬ್ಬರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು ಮತ್ತು ಅಕ್ರಮಿಗಳ ಪ್ರತಿಫಲವೂ ಇದೇ ಆಗಿರುತ್ತದೆ.
18يَا أَيُّهَا الَّذِينَ آمَنُوا اتَّقُوا اللَّهَ وَلْتَنظُرْ نَفْسٌ مَّا قَدَّمَتْ لِغَدٍ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ
ಓ ಸತ್ಯವಿಶ್ವಾಸಿಗಳೇ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಾನು ನಾಳೆ ಪರಲೋಕಕ್ಕಾಗಿ ಏನನ್ನು ಕಳುಹಿಸಿರುತ್ತಾನೆಂಬುದನ್ನು ನೋಡಲಿ ನೀವು ಸದಾ ಅಲ್ಲಾಹನನ್ನು ಭಯಪಡಿರಿ ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಅರಿವುಳ್ಳವನಾಗಿದ್ದಾನೆ.
ಅಲ್-ಹಶ್ರ್ಕುರಾನ್ ಸೂಚಿ
24ಆಯತ್
MedinanRevelation
16ಆಯತ್

ಅನುವಾದ — ಅಲ್-ಹಶ್ರ್ 16

ಸೂರಾ ಅಲ್-ಹಶ್ರ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಇವರ (ಕಪಟಿಗಳ) ಉದಾಹರಣೆಯು ಶೈತಾನನಂತಿದೆ ಅವನು ಮನುಷ್ಯನಿಗೆ ನೀನು ಸತ್ಯವನ್ನು ನಿಷೇಧಿಸು ಎಂದನು.…

ಸೂರಾ ಆಯತ್ 16/24 — ಸೂರಾ ಅಲ್-ಹಶ್ರ್ الحشر (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಶ್ರ್ ಆಲಿಸಿ, ಸೂರಾ ಅಲ್-ಹಶ್ರ್ ಅನುವಾದ, ಸೂರಾ ಅಲ್-ಹಶ್ರ್ mp3, ಸೂರಾ ಅಲ್-ಹಶ್ರ್ pdf. ಆಯತ್ 14–18. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers