ಸೂರಾ ಅಜ್-ಝಾರಿಯಾತ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಜ್-ಝಾರಿಯಾತ್ pdf ಕನ್ನಡ — ಡೌನ್‌ಲೋಡ್ ಸೂರಾ ಅಜ್-ಝಾರಿಯಾತ್ ಅನುವಾದ. ಸೂರಾ ಅಜ್-ಝಾರಿಯಾತ್ (Meccan) 60 ಆಯತ್.
Related
More ಸೂರಾ PDF
ಸೂರಾ ಅಜ್-ಝಾರಿಯಾತ್

ﯤﯥﯦ
51:1
ಧೂಳೆಬ್ಬಿಸುವ ಮಾರುತಗಳ ಆಣೆ.
ﯧﯨﯩ
51:2
ಜಲಭರಿತ ಮೇಘಗಳನ್ನು ಹೊತ್ತೊಯ್ಯುವ ಮಾರುತಗಳಾಣೆ.
ﯪﯫﯬ
51:3
ಸುಗಮವಾಗಿ ಹಡಗುಗಳನ್ನು ಚಲಿಸುವ ಮಾರುತಗಳಾಣೆ.
ﯭﯮﯯ
51:4
ಕಾರ್ಯಗಳನ್ನು ಹಂಚುವ ಮಲಕ್‌ಗಳಾಣೆ.
ﯰﯱﯲﯳ
51:5
ನಿಜವಾಗಿಯೂ ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು ಸತ್ಯವಾಗಿದೆ.
ﯴﯵﯶﯷ
51:6
ಕರ್ಮಗಳ ಪ್ರತಿಫಲವು ಖಂಡಿತವಾಗಿಯೂ ಬರಲಿದೆ.
ﭑﭒﭓﭔ
51:7
ಪಥಗಳುಳ್ಳ ಆಕಾಶದಾಣೆ.
ﭕﭖﭗﭘﭙ
51:8
ನಿಜವಾಗಿಯೂ ನೀವು ಭಿನ್ನಾಭಿಪ್ರಾಯ ಹೊಂದಿರುವಿರಿ.
ﭚﭛﭜﭝﭞ
51:9
ಸತ್ಯದಿಂದ ವಿಮುಖನಾದವನೇ ಇದರಿಂದ (ಕುರ್‌ಆನ್‌ನಿಂದ) ತಿರುಗಿಸಲ್ಪಡುತ್ತಾನೆ.
ﭟﭠﭡ
51:10
ಅನುಮಾನದ ಆಧಾರದಲ್ಲಿ ಮಾತನ್ನಾಡುವವರು ನಾಶವಾಗಿಬಿಟ್ಟರು.
ﭢﭣﭤﭥﭦﭧ
51:11
ಅವರು ಅಲಕ್ಷö್ಯತೆಯಲ್ಲಿ ಪರಲೋಕವನ್ನು ಮರೆತುಬಿಟ್ಟವರು.
ﭨﭩﭪﭫﭬ
51:12
ಪ್ರತಿಫಲದ ದಿನ ಯಾವಾಗ ಬರಲಿದೆ ಎಂದು ಅವರು ಕೇಳುತ್ತಾರೆ.
ﭭﭮﭯﭰﭱﭲ
51:13
(ಹೇಳಿರಿ) ಅವರು ನರಕಾಗ್ನಿಯಲ್ಲಿ ಸುಡಲಾಗುವ ದಿನ.
ﭳﭴﭵﭶﭷﭸﭹﭺ
51:14
(ಹೇಳಲಾಗುವುದು) ನಿಮ್ಮ ವಿನಾಶ ಕೃತ್ಯದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕೊಸ್ಕರ ಆತುರ ಪಡುತ್ತಿದ್ದಿರೋ ಅದುವೇ ಇದು.
ﭻﭼﭽﭾﭿﮀ
51:15
ನಿಸ್ಸಂಶಯವಾಗಿಯು ಭಯ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ ಇರುವರು.
ﮁﮂﮃﮄﮅﮆﮇﮈﮉﮊﮋ
51:16
ಅವರ ಪ್ರಭುವು ಅವರಿಗೆ ಕರುಣಿಸಿರುವುದನ್ನು ಸ್ವೀಕರಿಸುವರು, ಅವರು ಇದಕ್ಕೆ ಮೊದಲೇ ಸಜ್ಜನರಾಗಿದ್ದರು.
ﮌﮍﮎﮏﮐﮑﮒ
51:17
ಅವರು ರಾತ್ರಿಯಲ್ಲಿ ಅತ್ಯಲ್ಪವೇ ಮಲಗುತ್ತಿದ್ದರು.
ﮓﮔﮕﮖ
51:18
ಅವರು ರಾತ್ರಿಯ ಕೊನೆಯ ಭಾಗಗಳಲ್ಲಿ ಪಾಪ ವಿಮೋಚನೆಯನ್ನು ಬೇಡುತ್ತಿದ್ದರು.
ﮗﮘﮙﮚﮛﮜ
51:19
ಅವರ ಸಂಪತ್ತುಗಳಲ್ಲಿ ಬೇಡುವವನಿಗೂ ಬೇಡದವನಿಗೂ ಪಾಲು ಇರುತ್ತಿತ್ತು.
ﮝﮞﮟﮠﮡ
51:20
ದೃಢನಂಬಿಕೆಯುಳ್ಳವರಿಗೆ ಭೂಮಿಯಲ್ಲಿ ಹಲವಾರು ನಿದರ್ಶನಗಳಿವೆ.
ﮢﮣﮤﮥﮦﮧ
51:21
ಸ್ವತಃ ನಿಮ್ಮೊಳಗೂ ಹಾಗಿದ್ದೂ ನೀವು ನೋಡುವುದಿಲ್ಲವೇ?
ﮨﮩﮪﮫﮬﮭ
51:22
ನಿಮ್ಮಜೀವನಾಧಾರವು ಹಾಗು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದೆಲ್ಲವೂ ಆಕಾಶದಲ್ಲಿದೆ.
ﮮﮯﮰﮱﯓﯔﯕﯖﯗﯘ
51:23
ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಖಂಡಿತವಾಗಿಯು ಪುನರುತ್ಥಾನವು ನೀವು ಮಾತನಾಡುತ್ತಿರುವ ಹಾಗೆಯೇ ಖಚಿತವಾಗಿದೆ.
ﯙﯚﯛﯜﯝﯞﯟ
51:24
ಸಂದೇಶವಾಹಕರೇ ಇಬ್ರಾಹೀಮರ ಗೌರವಾನ್ವಿತ ಅತಿಥಿಗಳ ವೃತ್ತಾಂತವು ನಿಮಗೆ ತಲುಪಿದೆಯೇ ?
ﯠﯡﯢﯣﯤﯥﯦﯧﯨﯩﯪ
51:25
ಅವರು ಇಬ್ರಾಹೀಮರ ಬಳಿ ಬಂದಾಗ ಸಲಾಮ್ ಹೇಳಿದರು; ಇಬ್ರಾಹೀಮರು ಮರು ಸಲಾಮ್ ಹೇಳಿದರು ಅಪರಿಚಿತ ಜನರಾಗಿರುವಿರಿ.
ﯫﯬﯭﯮﯯﯰﯱ
51:26
ತರುವಾಯ ಮೆಲ್ಲನೆ ತಮ್ಮ ಮನೆಯವರ ಬಳಿಗೆ ಹೋದರು. ನಂತರ ಒಂದು ಕೊಬ್ಬಿದ ಹುರಿದ ಕರುವನ್ನು ತಂದರು.
ﯲﯳﯴﯵﯶﯷ
51:27
ಮತ್ತು ಅದನ್ನು ಅವರ ಮುಂದಿಟ್ಟು ಹೇಳಿದರು; ನೀವು ತಿನ್ನುವುದಿಲ್ಲವೇಕೆ ?
ﯸﯹﯺﯻﯼﯽﯾﯿﰀﰁﰂﰃ
51:28
ಆಗ ಅವರು ತಮ್ಮ ಮನಸ್ಸಿನಲ್ಲಿ ಅವರ ಕುರಿತು ಭಯಪಡ ತೊಡಗಿದರು. ಅವರು ಹೇಳಿದರು; ನೀವು ಭಯಪಡಬೇಡಿರಿ. ಅವರು (ಇಬ್ರಾಹೀಮರಿಗೆ) ಒಬ್ಬಜ್ಞಾನಿಯಾದ ಪುತ್ರನ ಸುವಾರ್ತೆಯನ್ನು ನೀಡಿದರು.
ﰄﰅﰆﰇﰈﰉﰊﰋﰌﰍ
51:29
ಆಗ ಅವರ ಪತ್ನಿಯು ಮುಂದೆ ಬಂದು ದಿಗ್ಭçಮೆಯಿಂದ ತನ್ನ ಮುಖ ಬಡಿದು ಹೇಳಿದಳು; ನಾನಂತು ಓರ್ವ ವೃದ್ಧೆ ಹಾಗು ಬಂಜೆಯಾಗಿರುವೆ. (ನಾನು ಮಗುವನ್ನು ಹಡೆಯುವುದಾದರೂ ಹೇಗೆ ?)
ﰎﰏﰐﰑﰒﰓﰔﰕﰖﰗ
51:30
ಅವರು ಹೇಳಿದರು; ನಿನ್ನ ಪ್ರಭುವು ಇದೇಪ್ರಕಾರ ಹೇಳಿದ್ದಾನೆ. ನಿಸ್ಸಂಶಯವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿದ್ದಾನೆ.
ﭑﭒﭓﭔﭕﭖﭗ
51:31
ಇಬ್ರಾಹೀಮರು ಕೇಳಿದರು; ಓ ದೇವದೂತರೇ, ನಿಮ್ಮ ಮುಂದಿನ ಕಾರ್ಯಾಚರಣೆ ಏನು?
ﭘﭙﭚﭛﭜﭝﭞ
51:32
ಅವರು ಉತ್ತರಿಸಿದರು; ನಾವು ಒಂದು ಅಪರಾಧಿ (ಲೂತರ)ಜನಾಂಗದೆಡೆಗೆ ಕಳುಹಿಸಲಾಗಿದ್ದೇವೆ.
ﭟﭠﭡﭢﭣﭤ
51:33
ನಾವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಮಳೆಗರಿಸಲಿಕ್ಕಾಗಿ.
ﭥﭦﭧﭨﭩ
51:34
ಅವು ಮಿತಿಮೀರಿದವರಿಗಾಗಿ ನಿಮ್ಮ ಪ್ರಭುವಿನ ಕಡೆಯಿಂದ ಗುರುತು ಹಾಕಲ್ಪಟ್ಟಿವೆ.
ﭪﭫﭬﭭﭮﭯﭰ
51:35
ಆಗ ನಾವು ಸತ್ಯವಿಶ್ವಾಸಿಗಳನ್ನು ಅಲ್ಲಿಂದ ಹೊರತೆಗೆದೆವು,
ﭱﭲﭳﭴﭵﭶﭷﭸ
51:36
ಅಲ್ಲಿ ನಾವು ಮುಸ್ಲಿಮರ ಒಂದು ಮನೆಯ ಹೊರತು ಇನ್ನಾವ ಮನೆಯನ್ನು ಕಾಣಲಿಲ್ಲ.
ﭹﭺﭻﭼﭽﭾﭿﮀ
51:37
ಅನಂತರ ನಾವು ವೇದನಾಜನಕ ಯಾತನೆಯ ಈ ಘಟನೆಯನ್ನು ಭಯಪಡುವವರಿಗೆ ನಿದರ್ಶನವೊಂದನ್ನಾಗಿ ಉಳಿಸಿಬಿಟ್ಟೆವು
ﮁﮂﮃﮄﮅﮆﮇﮈﮉ
51:38
ಮೂಸಾರವರ ವೃತ್ತಾಂತದಲ್ಲೂ ನಿದರ್ಶನವಿದೆ. ನಾವು ಅವರನ್ನು ಫಿರ್‌ಔನನೆಡೆಗೆ ಸುಸ್ಪಷ್ಟವಾದ ದೃಷ್ಟಾಂತದೊAದಿಗೆ ಕಳುಹಿಸಿದೆವು.
ﮊﮋﮌﮍﮎﮏﮐ
51:39
ಆಗ ಅವನು ತನ್ನ ಶಕ್ತಿ ಸಾಮರ್ಥ್ಯದ ನಿಮಿತ್ತ ವಿಮುಖನಾಗಿ ಬಿಟ್ಟನು ಮತ್ತು ಇವನು (ಮೂಸಾ) ಜಾದೂಗಾರನು ಅಥವ ಹುಚ್ಚನೆಂದು ಹೇಳಿದನು.
ﮑﮒﮓﮔﮕﮖﮗﮘ
51:40
ಆದುದರಿಂದ ನಾವು ಅವನನ್ನೂ, ಅವನ ಸೈನ್ಯಗಳನ್ನು ಹಿಡಿದೆವು. ಅನಂತರ ಸಮುದ್ರಕ್ಕೆಸೆದು ಬಿಟ್ಟೆವು, ಅವನು ನಿಂದ್ಯಾರ್ಹನಾಗಿದ್ದನು.
ﮙﮚﮛﮜﮝﮞﮟﮠ
51:41
ಇದೇ ಪ್ರಕಾರ ಆದ್‌ಜನಾಂಗದಲ್ಲೂ ನಿದರ್ಶನವಿದೆ, ನಾವು ಅವರ ಮೇಲೆ ವಿನಾಶಕಾರಿ ಚಂಡಮಾರುತವನ್ನು ಕಳುಹಿಸಿದ ಸಂದರ್ಭವನ್ನು ಸ್ಮರಿಸಿರಿ.
ﮡﮢﮣﮤﮥﮦﮧﮨﮩﮪ
51:42
ಅದು ಹಾದು ಹೋದ ಯಾವುದೇ ವಸ್ತುವನ್ನು ಶಿಥಿಲವಾದ ಎಲುಬಿನಂತೆ (ನುಚ್ಚುನೂರು) ಮಾಡಿಬಿಡುತ್ತಿತ್ತು.
ﮫﮬﮭﮮﮯﮰﮱﯓﯔ
51:43
ಸಮೂದ್ ಜನಾಂಗದಲ್ಲೂ ನಿದರ್ಶನವಿದೆ, ನೀವು ಕೆಲವು ದಿನಗಳವರೆಗೆ ಸುಖಭೋಗಗಳನ್ನು ಅನುಭವಿಸಿರಿ ಎಂದು ಅವರೊಂದಿಗೆ ಹೇಳಲಾದ ಸಂದರ್ಭ.
ﯕﯖﯗﯘﯙﯚﯛﯜﯝ
51:44
ಆದರೆ ಅವರು ತಮ್ಮ ಪ್ರಭುವಿನ ಆದೇಶವನ್ನು ಉಲ್ಲಂಘಿಸಿದರು, ಆದುದರಿಂದ ಅವರು ನೋಡುತ್ತಿದ್ದಂತೆಯೇ ಆರ್ಭಟವೊಂದು ಅವರ ಮೇಲೆ ಎರಗಿತು.
ﯞﯟﯠﯡﯢﯣﯤﯥ
51:45
ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ, ಪ್ರತಿಕಾರ ಪಡೆಯುವ ಸಾಮರ್ಥ್ಯವಾಗಲಿ ಇರಲಿಲ್ಲ.
ﯦﯧﯨﯩﯪﯫﯬﯭﯮﯯ
51:46
ಇದಕ್ಕೂ ಮುಂಚೆ ನಾವು ನೂಹರಜನಾಂಗವನ್ನು ನಾಶಗೊಳಿಸಿದೆವು, ನಿಶ್ಚಯವಾಗಿಯೂ ಅವರೊಂದು ಕರ್ಮ ಭ್ರಷ್ಟ ಜನಾಂಗದವರಾಗಿದ್ದರು.
ﯰﯱﯲﯳﯴﯵ
51:47
ಆಕಾಶವನ್ನು ನಾವು (ನಮ್ಮ) ಕೈಗಳಿಂದ ನಿರ್ಮಿಸಿರುತ್ತೇವೆ ಮತ್ತು ನಿಶ್ಚಯವಾಗಿಯು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ.
ﯶﯷﯸﯹﯺ
51:48
ಭೂಮಿಯನ್ನು ನಾವು ಹಾಸನ್ನಾಗಿ ಮಾಡಿದೆವು, ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ.
ﯻﯼﯽﯾﯿﰀﰁﰂ
51:49
ಮತ್ತು ಪ್ರತಿಯೊಂದು ವಸ್ತುವಿಗೂ ನಾವು ಜೋಡಿಗಳನ್ನು ಸೃಷ್ಟಿಸಿರುತ್ತೇವೆ, ನೀವು ಉದ್ಭೋದೆ ಪಡೆಯಲೆಂದು.
ﰃﰄﰅﰆﰇﰈﰉﰊﰋﰌ
51:50
ಆದ್ದರಿಂದ ನೀವು ಅಲ್ಲಾಹನೆಡೆಗೆ ಧಾವಿಸಿರಿ, ನಿಶ್ಚಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಸುಷ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
ﰍﰎﰏﰐﰑﰒﰓﰔﰕﰖﰗﰘﰙ
51:51
ನೀವು ಅಲ್ಲಾಹನೊಂದಿಗೆ ಬೇರೆ ಆರಾಧ್ಯನನ್ನು ಮಾಡಿಕೊಳ್ಳಬೇಡಿರಿ, ನಿಸ್ಸಂಶಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೆನೆ.
ﭑﭒﭓﭔﭕﭖﭗﭘﭙﭚﭛﭜﭝﭞ
51:52
ಇದೇ ಪ್ರಕಾರ ಇವರಿಗಿಂತ ಮುಂಚಿನ ಸಮುದಾಯಗಳ ಬಳಿ ಯಾವ ಸಂದೇಶವಾಹಕರು ಬಂದರೂ ಅವರು ಇವರನ್ನು ಜಾದುಗಾರ ಅಥವ ಹುಚ್ಚನೆಂದು ಹೇಳದೇ ಬಿಟ್ಟಿಲ್ಲ.
ﭟﭠﭡﭢﭣﭤﭥﭦ
51:53
ಅವರು ಈ ಬಗ್ಗೆ ಪರಸ್ಪರ ಉಯಿಲು ಮಾಡುತ್ತಾ ಬಂದಿರುವರೇ ? ಇಲ್ಲ ಅವರು ಅತಿಕ್ರಮಿ ಜನರಾಗಿದ್ದರು.
ﭧﭨﭩﭪﭫﭬ
51:54
ಆದ್ದರಿಂದ ನೀವು ಅವರಿಂದ ಮುಖ ತಿರುಗಿಸಿಕೊಳ್ಳಿರಿ, ನೀವು ಆಕ್ಷೇಪಾರ್ಹರಲ್ಲ.
ﭭﭮﭯﭰﭱﭲ
51:55
ನೀವು ಉಪದೇಶಿಸುತ್ತಿರಿ, ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ.
ﭳﭴﭵﭶﭷﭸﭹ
51:56
ನಾನು ಯಕ್ಷಗಳನ್ನು, ಮನುಷ್ಯರನ್ನು, ನನ್ನ ಆರಾಧನೆಗಲ್ಲದೇ ಸೃಷ್ಟಿಸಿಲ್ಲ.
ﭺﭻﭼﭽﭾﭿﮀﮁﮂﮃ
51:57
ನಾನು ಅವರಿಂದ ಜೀವನಾಧಾರವನ್ನು ಬಯಸುವುದಿಲ್ಲ, ಮತ್ತು ಅವರು ನನಗೆ ಉಣಿಸಬೇಕೆಂದೂ ಬಯಸುವುದಿಲ್ಲ.
ﮄﮅﮆﮇﮈﮉﮊﮋ
51:58
ನಿಶ್ಚಯವಾಗಿಯು ಅಲ್ಲಾಹನು ಮಹಾ ಅನ್ನದಾತನೂ, ಶಕ್ತಿ ಸಾಮರ್ಥ್ಯವುಳ್ಳವನೂ ಆಗಿದ್ದಾನೆ.
ﮌﮍﮎﮏﮐﮑﮒﮓﮔﮕ
51:59
ಆದ್ದರಿಂದ ಅಕ್ರಮವೆಸಗಿದವರಿಗೂ ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಶಿಕ್ಷೆಯಪಾಲಿದೆ, ಆದ್ದರಿಂದ ಅವರು ನನ್ನಲ್ಲಿ ಆತುರಪಡದಿರಲಿ.
ﮖﮗﮘﮙﮚﮛﮜﮝ
51:60
ಆದ್ದರಿಂದ ಎಚ್ಚರಿಕೆ ನೀಡಲಾಗುತ್ತಿರುವ ಆ ದಿನದಂದು ಸತ್ಯನಿಷೇಧಿಗಳಿಗೆ ನಾಶವಿದೆ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







