ಅಲ್-ಇಸ್ರಾ · 46/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَجَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِي آذَانِهِمْ وَقْرًا ۚ وَإِذَا ذَكَرْتَ رَبَّكَ فِي الْقُرْآنِ وَحْدَهُ وَلَّوْا عَلَىٰ أَدْبَارِهِمْ نُفُورًا ۝٤٦
Wa ja`alnaa `alaa quloo bihim akinnatan any yafqahoohu wa feee aazaanihim waqraa; wa izaa zakarta Rabbaka fil Quraani wahdahoo wallaw `alaaa adbaarihim nufooraa
📖 ಕನ್ನಡ ಅರ್ಥ
ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ ಕಿವಿಗಳಲ್ಲಿ ಕಿವುಡುತನವನ್ನು ಹಾಕಿ ಬಿಟ್ಟಿರುತ್ತೇವೆ. ನೀವು ಕುರ್‌ಆನಿನಲ್ಲಿ ನಿಮ್ಮ ಏಕೈಕ ಪ್ರಭುವಿನ ಪ್ರಸ್ತಾಪವನ್ನು ಮಾಡಿದಾಗ ಅವರು ಅಸಹ್ಯಪಡುತ್ತಾ ತಮ್ಮ ಬೆನ್ನು ತಿರುಗಿಸಿ ಹೋಗ ತೊಡಗುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅಲ್-ಇಸ್ರಾ

44تُسَبِّحُ لَهُ السَّمَاوَاتُ السَّبْعُ وَالْأَرْضُ وَمَن فِيهِنَّ ۚ وَإِن مِّن شَيْءٍ إِلَّا يُسَبِّحُ بِحَمْدِهِ وَلَٰكِن لَّا تَفْقَهُونَ تَسْبِيحَهُمْ ۗ إِنَّهُ كَانَ حَلِيمًا غَفُورًا
ಎಳು ಆಕಾಶಗಳು ಮತ್ತು ಭೂಮಿಯೂ ಹಾಗೂ ಅವುಗಳಲ್ಲಿರುವ ಸಕಲವೂ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿವೆ. ಮತ್ತು ಅವನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡದ ಯಾವ ವಸ್ತುವೂ ಇಲ್ಲ. ಅದರೆ ಅವುಗಳ ಕೀರ್ತನೆಯನ್ನು ನೀವು ಗ್ರಹಿಸಿಕೊಳ್ಳಲಾರಿರಿ. ವಾಸ್ತವದಲ್ಲಿ ಅವನು ಸಹನಾಶೀಲನು ಕ್ಷಮಾಶೀಲನು ಆಗಿದ್ದಾನೆ.
45وَإِذَا قَرَأْتَ الْقُرْآنَ جَعَلْنَا بَيْنَكَ وَبَيْنَ الَّذِينَ لَا يُؤْمِنُونَ بِالْآخِرَةِ حِجَابًا مَّسْتُورًا
(ಓ ಪೈಗಂಬರರೇ) ನೀವು ಕುರ್‌ಆನನ್ನು ಪಠಿಸಿದಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಮಧ್ಯೆ ನಾವು ಅದೃಶ್ಯವಾಗಿರುವ ತೆರೆಯೊಂದನ್ನು ಹಾಕಿಬಿಡುತ್ತೇವೆ.
46وَجَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِي آذَانِهِمْ وَقْرًا ۚ وَإِذَا ذَكَرْتَ رَبَّكَ فِي الْقُرْآنِ وَحْدَهُ وَلَّوْا عَلَىٰ أَدْبَارِهِمْ نُفُورًا
ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ ಕಿವಿಗಳಲ್ಲಿ ಕಿವುಡುತನವನ್ನು ಹಾಕಿ ಬಿಟ್ಟಿರುತ್ತೇವೆ. ನೀವು ಕುರ್‌ಆನಿನಲ್ಲಿ ನಿಮ್ಮ ಏಕೈಕ ಪ್ರಭುವಿನ ಪ್ರಸ್ತಾಪವನ್ನು ಮಾಡಿದಾಗ ಅವರು ಅಸಹ್ಯಪಡುತ್ತಾ ತಮ್ಮ ಬೆನ್ನು ತಿರುಗಿಸಿ ಹೋಗ ತೊಡಗುತ್ತಾರೆ.
47نَّحْنُ أَعْلَمُ بِمَا يَسْتَمِعُونَ بِهِ إِذْ يَسْتَمِعُونَ إِلَيْكَ وَإِذْ هُمْ نَجْوَىٰ إِذْ يَقُولُ الظَّالِمُونَ إِن تَتَّبِعُونَ إِلَّا رَجُلًا مَّسْحُورًا
ಅವರು ನಿಮ್ಮೆಡೆಗೆ ಕಿವಿಗೊಟ್ಟು ಆಲಿಸುತ್ತಿರುವಾಗ ಅವರು ಯಾವ ಉದ್ದೇಶದಿಂದ ಆಲಿಸುತ್ತಿದ್ದಾರೆಂಬುದನ್ನೂ, (ನಾವು ಚೆನ್ನಾಗಿ ತಿಳಿದಿದ್ದೇವೆ) ಅವರು ಪರಸ್ಪರ ರಹಸ್ಯವಾಗಿ ಮಾತುಕತೆಯಲ್ಲಿರುವುದೂ (ಅದೂ ನಮಗೆ ಚೆನ್ನಾಗಿ ಗೊತ್ತು, ಅವರು ತಮ್ಮ ಬುಡಕಟ್ಟಿನ ಮುಸ್ಲಿಮರಿಗೆ) ನೀವು ಅನುಸರಿಸುತ್ತಿರುವ ವ್ಯಕ್ತಿಯು ಮಾಟಬಾಧಿತನಾಗಿದ್ದಾನೆ ಎಂದು ಈ ಅಕ್ರಮಿಗಳು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ.
48انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا
ಅವರು ನಿಮಗೆ ಹೇಗೆ ಉಪಮೆಗಳನ್ನು ಕೊಡುತ್ತಿದ್ದಾರೆಂಬುದನ್ನು ನೋಡಿರಿ. ಹೀಗೆ ಅವರು ಮಾರ್ಗ ಭ್ರಷ್ಟರಾದರು. ಇನ್ನು ಮಾರ್ಗ ಪಡೆಯುವುದು ಅವರ ಸಾಮರ್ಥ್ಯದಲ್ಲಿಲ್ಲ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
46ಆಯತ್

ಅನುವಾದ — ಅಲ್-ಇಸ್ರಾ 46

ಸೂರಾ ಅಲ್-ಇಸ್ರಾ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ…

ಸೂರಾ ಆಯತ್ 46/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers