ಅಲ್-ಬಕರಾ · 176/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
ذَٰلِكَ بِأَنَّ اللَّهَ نَزَّلَ الْكِتَابَ بِالْحَقِّ ۗ وَإِنَّ الَّذِينَ اخْتَلَفُوا فِي الْكِتَابِ لَفِي شِقَاقٍ بَعِيدٍ ١٧٦
Transliteration
Zaalika bi annal laaha nazzalal kitaaba bilhaqq; wa innal lazeenakh talafoo fil kitaabi lafee shiqaaqim ba`eed
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಈ ಶಿಕ್ಷೆಗಳ ಕಾರಣ ಅಲ್ಲಾಹನಂತೂ ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದನು ಎಂಬುದೇ ಆಗಿದೆ. ನಿಸ್ಸಂದೇಹವಾಗಿಯೂ ಈ ಗ್ರಂಥದಲ್ಲಿ ಭಿನ್ನತೆ ತೋರುವವರು, ವಿರೋಧದಲ್ಲಿ ಬಹುದೂರ ಸಾಗಿದ್ದಾರೆ.
Additional reference in தமிழ்
🎧 ಆಲಿಸಿ
📜 ಆಯತ್ 174-178 — ಸೂರಾ ಅಲ್-ಬಕರಾ
174إِنَّ الَّذِينَ يَكْتُمُونَ مَا أَنزَلَ اللَّهُ مِنَ الْكِتَابِ وَيَشْتَرُونَ بِهِ ثَمَنًا قَلِيلًا ۙ أُولَٰئِكَ مَا يَأْكُلُونَ فِي بُطُونِهِمْ إِلَّا النَّارَ وَلَا يُكَلِّمُهُمُ اللَّهُ يَوْمَ الْقِيَامَةِ وَلَا يُزَكِّيهِمْ وَلَهُمْ عَذَابٌ أَلِيمٌ
ನಿಸ್ಸಂದೇಹವಾಗಿಯು ಅಲ್ಲಾಹನು ಅವತೀರ್ಣಗೊಳಿಸಿದಂತಹ ಗ್ರಂಥವನ್ನು ಅಡಗಿಸಿಡುವವರು ಹಾಗೂ ಅದನ್ನು ತುಚ್ಛ ಲಾಭಕ್ಕಾಗಿ ಮಾರುವವರು ಖಂಡಿತವಾಗಿಯು ತಮ್ಮ ಹೊಟ್ಟೆಗಳಲ್ಲಿ ಅಗ್ನಿಯನ್ನು ತುಂಬುತಿದ್ದಾರೆ. ಅಲ್ಲಾಹನು ಪುನರುತ್ಥಾನ ದಿನದಂದು ಅವರೊಂದಿಗೆ ಮಾತನಾಡುವುದಿಲ್ಲ ಮತ್ತು ಅವರನ್ನು ಸಂಸ್ಕರಿಸುವುದೂ ಇಲ್ಲ. ಮತ್ತು ಅವರಿಗೆ ವೇದನಾಜನಕ ಯಾತನೆಯಿರುವುದು.
175أُولَٰئِكَ الَّذِينَ اشْتَرَوُا الضَّلَالَةَ بِالْهُدَىٰ وَالْعَذَابَ بِالْمَغْفِرَةِ ۚ فَمَا أَصْبَرَهُمْ عَلَى النَّارِ
ಅವರು ಸನ್ಮಾರ್ಗದ ಬದಲಿಗೆ ದುರ್ಮಾಗವನ್ನೂ, ಕ್ಷಮೆಯ ಬದಲಿಗೆ ಶಿಕ್ಷೆಯನ್ನೂ ಖರೀದಿಸಿದವರಾಗಿದ್ದಾರೆ. ಮತ್ತು ಅವರು ನರಕಾಗ್ನಿಯ ಯಾತನೆಯನ್ನು ಎಷ್ಟು ಸಹಿಸಿಕೊಳ್ಳುವರು?
176ذَٰلِكَ بِأَنَّ اللَّهَ نَزَّلَ الْكِتَابَ بِالْحَقِّ ۗ وَإِنَّ الَّذِينَ اخْتَلَفُوا فِي الْكِتَابِ لَفِي شِقَاقٍ بَعِيدٍ
ಈ ಶಿಕ್ಷೆಗಳ ಕಾರಣ ಅಲ್ಲಾಹನಂತೂ ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದನು ಎಂಬುದೇ ಆಗಿದೆ. ನಿಸ್ಸಂದೇಹವಾಗಿಯೂ ಈ ಗ್ರಂಥದಲ್ಲಿ ಭಿನ್ನತೆ ತೋರುವವರು, ವಿರೋಧದಲ್ಲಿ ಬಹುದೂರ ಸಾಗಿದ್ದಾರೆ.
177۞ لَّيْسَ الْبِرَّ أَن تُوَلُّوا وُجُوهَكُمْ قِبَلَ الْمَشْرِقِ وَالْمَغْرِبِ وَلَٰكِنَّ الْبِرَّ مَنْ آمَنَ بِاللَّهِ وَالْيَوْمِ الْآخِرِ وَالْمَلَائِكَةِ وَالْكِتَابِ وَالنَّبِيِّينَ وَآتَى الْمَالَ عَلَىٰ حُبِّهِ ذَوِي الْقُرْبَىٰ وَالْيَتَامَىٰ وَالْمَسَاكِينَ وَابْنَ السَّبِيلِ وَالسَّائِلِينَ وَفِي الرِّقَابِ وَأَقَامَ الصَّلَاةَ وَآتَى الزَّكَاةَ وَالْمُوفُونَ بِعَهْدِهِمْ إِذَا عَاهَدُوا ۖ وَالصَّابِرِينَ فِي الْبَأْسَاءِ وَالضَّرَّاءِ وَحِينَ الْبَأْسِ ۗ أُولَٰئِكَ الَّذِينَ صَدَقُوا ۖ وَأُولَٰئِكَ هُمُ الْمُتَّقُونَ
ಪುಣ್ಯವು ನೀವು ನಿಮ್ಮ ಮುಖಗಳನ್ನು ಪೂರ್ವ ಹಾಗೂ ಪಶ್ಚಿಮಗಳ ದಿಕ್ಕುಗಳಿಗೆ ತಿರುಗಿಸುವುದರಲಿಲ್ಲ. ಆದರೆ ವಾಸ್ತವದಲ್ಲಿ ಪುಣ್ಯವು ಒಬ್ಬ ವ್ಯಕ್ತಿಯು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ, ದೇವದೂತರಲ್ಲೂ, ಗ್ರಂಥಗಳಲ್ಲೂ ವಿಶ್ವಾಸವಿರಿಸಿ ತನಗೆ ಪ್ರಿಯವಾದ ಸಂಪತ್ತನ್ನು ಆಪ್ತ ಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ಪ್ರಯಾಣಿಕರಿಗೂ, ಬೇಡಿ ಬರುವವರಿಗೂ ನೀಡುವವನು, ಹಾಗೂ ಗುಲಾಮರನ್ನು ವಿಮೋಚಿಸಲಿಕ್ಕಾಗಿ ನೀಡುವವನು ಮತ್ತು ನಮಾಝ್ ಸಂಸ್ಥಾಪಿಸುವವನು, ಝಕಾತ್ ಪಾವತಿಸುವವನು, ವಚನ ಪಾಲಕನು ಮತ್ತು ದಟ್ಟದಾರಿದ್ರö್ಯದಲ್ಲೂ ರೋಗರುಜಿನಗಳಲ್ಲೂ, ಯುದ್ಧ ಸಂದರ್ಭದಲ್ಲೂ ಸಹನೆಯನ್ನು ಪಾಲಿಸುವವನು ಅವರೇ ಸತ್ಯಸಂಧರು ಹಾಗೂ ಅವರೇ ಭಯಭಕ್ತಿ ಹೊಂದಿದವರಾಗಿದ್ದಾರೆ.
178يَا أَيُّهَا الَّذِينَ آمَنُوا كُتِبَ عَلَيْكُمُ الْقِصَاصُ فِي الْقَتْلَى ۖ الْحُرُّ بِالْحُرِّ وَالْعَبْدُ بِالْعَبْدِ وَالْأُنثَىٰ بِالْأُنثَىٰ ۚ فَمَنْ عُفِيَ لَهُ مِنْ أَخِيهِ شَيْءٌ فَاتِّبَاعٌ بِالْمَعْرُوفِ وَأَدَاءٌ إِلَيْهِ بِإِحْسَانٍ ۗ ذَٰلِكَ تَخْفِيفٌ مِّن رَّبِّكُمْ وَرَحْمَةٌ ۗ فَمَنِ اعْتَدَىٰ بَعْدَ ذَٰلِكَ فَلَهُ عَذَابٌ أَلِيمٌ
ಓ ಸತ್ಯವಿಶ್ವಾಸಿಗಳೇ, (ಕೊಲೆ ಮುಕದ್ದಮೆಗಳಲ್ಲಿ ಅನ್ಯಾಯವಾಗಿ) ಕೊಲೆಗೀಡಾದವರ ಪ್ರತಿಕಾರ ಪಡೆಯುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ ಕೊಲೆಗಾರನು ಸ್ವತಂತ್ರ ವ್ಯಕ್ತಿಯಾಗಿದ್ದರೆ, ಆ ಸ್ವತಂತ್ರ ವ್ಯಕ್ತಿಯನ್ನೇ ಕೊಲೆಗಾರನು ಗುಲಾಮನಾಗಿದ್ದರೆ ಆ ಗುಲಾಮನನ್ನೇ ಕೊಲೆಗಾರ, ಸ್ತಿçà ಆಗಿದ್ದರೆ ಆ ಸ್ತಿçÃಯನ್ನೇ, ಕೊಲ್ಲಲಾಗುವುದು. ಕೊಲೆಗೀಡಾದವರ ಸಹೋದರ (ವಾರಿಸುದಾರ) ನಿಂದ ಎನಾದರೂ ಕ್ಷಮೆ ನೀಡಲಾದರೆ ಅವನು ಸದಾಚಾರದೊಂದಿಗೆ ಅನುಸರಿಸಬೇಕು. ಮತ್ತು ಅವನಿಗೆ ರಕ್ತ ಪರಿಹಾರಧನವನ್ನು ನೀಡಬೇಕು. ಇದು ನಿಮ್ಮ ಪ್ರಭುವಿನ ಕಡೆಯ ಒಂದು ವಿನಾಯಿತಿ ಮತ್ತು ಕಾರುಣ್ಯವಾಗಿದೆ. ಇದಾದ ನಂತರವೂ ಯಾರು ಅತಿಕ್ರಮ ತೋರುತ್ತಾನೋ ಅವನಿಗೆ ವೇದನಾಜನಕ ಯಾತನೆಯಿರುವುದು.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
176ಆಯತ್
ಅನುವಾದ — ಅಲ್-ಬಕರಾ 176
ಸೂರಾ ಅಲ್-ಬಕರಾ ಆಯತ್ 176 - ಓದಿ, ಆಲಿಸಿ, ಅನುವಾದ, ಕನ್ನಡ : ಈ ಶಿಕ್ಷೆಗಳ ಕಾರಣ ಅಲ್ಲಾಹನಂತೂ ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದನು ಎಂಬುದೇ ಆಗಿದೆ. ನಿಸ್ಸಂದೇಹವಾಗಿಯೂ…ಸೂರಾ ಆಯತ್ 176/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 174–178. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








