ಲುಕ್ಮಾನ್ · 13/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
وَإِذْ قَالَ لُقْمَانُ لِابْنِهِ وَهُوَ يَعِظُهُ يَا بُنَيَّ لَا تُشْرِكْ بِاللَّهِ ۖ إِنَّ الشِّرْكَ لَظُلْمٌ عَظِيمٌ ۝١٣
Wa iz qaala luqmaanu libnihee wa huwa ya`izuhoo ya bunaiya laa tushrik billaah; innash shirka lazulmun `azeem
📖 ಕನ್ನಡ ಅರ್ಥ
ಮತ್ತು ಲುಕ್ಮಾನರು ತಮ್ಮ ಮಗನಿಗೆ ಉಪದೇಶ ನೀಡುತ್ತಾ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಪ್ರಿಯ ಮಗನೇ, ನೀನು ಅಲ್ಲಾಹನೊಂದಿಗೆ ಸಹಭಾಗಿತ್ವ ಕಲ್ಪಿಸದಿರು. ನಿಸ್ಸಂದೇಹವಾಗಿಯು ಸಹಭಾಗಿತ್ವ ಕಲ್ಪಿಸುವುದು ಘೋರ ಅಕ್ರಮವಾಗಿದೆ.

🎧 ಆಲಿಸಿ


📜 ಆಯತ್ 11-15 — ಸೂರಾ ಲುಕ್ಮಾನ್

11هَٰذَا خَلْقُ اللَّهِ فَأَرُونِي مَاذَا خَلَقَ الَّذِينَ مِن دُونِهِ ۚ بَلِ الظَّالِمُونَ فِي ضَلَالٍ مُّبِينٍ
ಇದು ಅಲ್ಲಾಹನ ಸೃಷ್ಟಿಯಾಗಿದೆ. ಇನ್ನು ಅವನ ಹೊರತು ಮಿಥ್ಯ ದೇವರುಗಳು ಏನನ್ನು ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿರಿ. ವಸ್ತುತಃ ಅಕ್ರಮಿಗಳು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದಾರೆ.
12وَلَقَدْ آتَيْنَا لُقْمَانَ الْحِكْمَةَ أَنِ اشْكُرْ لِلَّهِ ۚ وَمَن يَشْكُرْ فَإِنَّمَا يَشْكُرُ لِنَفْسِهِ ۖ وَمَن كَفَرَ فَإِنَّ اللَّهَ غَنِيٌّ حَمِيدٌ
ಮತ್ತು ನಿಶ್ಚಯವಾಗಿಯು ನಾವು ಲುಕ್ಮಾನರಿಗೆ ಸುಜ್ಞಾನವನ್ನು ದಯಪಾಲಿಸಿದೆವು. ನೀವು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿರಿ ಎಂದು ಯಾರು ಕೃತಜ್ಞತೆ ಸಲ್ಲಿಸುವನೋ ಅವನು ತನ್ನದೇ ಒಳಿತಿಗಾಗಿ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರಿದನೋ ನಿಶ್ಚಯವಾಗಿ ಅಲ್ಲಾಹನು ನಿರಪೇಕ್ಷನು, ಸ್ತುತ್ಯರ್ಹನು ಆಗಿದ್ದಾನೆ.
13وَإِذْ قَالَ لُقْمَانُ لِابْنِهِ وَهُوَ يَعِظُهُ يَا بُنَيَّ لَا تُشْرِكْ بِاللَّهِ ۖ إِنَّ الشِّرْكَ لَظُلْمٌ عَظِيمٌ
ಮತ್ತು ಲುಕ್ಮಾನರು ತಮ್ಮ ಮಗನಿಗೆ ಉಪದೇಶ ನೀಡುತ್ತಾ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಪ್ರಿಯ ಮಗನೇ, ನೀನು ಅಲ್ಲಾಹನೊಂದಿಗೆ ಸಹಭಾಗಿತ್ವ ಕಲ್ಪಿಸದಿರು. ನಿಸ್ಸಂದೇಹವಾಗಿಯು ಸಹಭಾಗಿತ್ವ ಕಲ್ಪಿಸುವುದು ಘೋರ ಅಕ್ರಮವಾಗಿದೆ.
14وَوَصَّيْنَا الْإِنسَانَ بِوَالِدَيْهِ حَمَلَتْهُ أُمُّهُ وَهْنًا عَلَىٰ وَهْنٍ وَفِصَالُهُ فِي عَامَيْنِ أَنِ اشْكُرْ لِي وَلِوَالِدَيْكَ إِلَيَّ الْمَصِيرُ
ನಾವು ಮಾನವನಿಗೆ ಅವನ ಮಾತಾಪಿತರ ಕುರಿತು ಸದ್ವರ್ತನೆಯ ಉಪದೇಶ ನೀಡಿದ್ದೇವೆ. ಅವನ ತಾಯಿಯು ಬಲಹೀನತೆಯ ಮೇಲೆ ಬಲಹೀನತೆಯನ್ನು ಸಹಿಸಿ ಅವನನ್ನು ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡಿಸುವಿಕೆಯು ಎರಡು ವರ್ಷಗಳಲ್ಲಾಗಿದೆ. ನೀನು ನನಗೂ, ನಿನ್ನ ಮಾತಾಪಿತರಿಗೂ ಕೃತಜ್ಞತೆ ಸಲ್ಲಿಸು. (ನಿಮಗೆಲ್ಲರಿಗೂ) ನನ್ನೆಡೆಗೇ ಮರಳಲಿಕ್ಕಿರುವುದು.
15وَإِن جَاهَدَاكَ عَلَىٰ أَن تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا ۖ وَاتَّبِعْ سَبِيلَ مَنْ أَنَابَ إِلَيَّ ۚ ثُمَّ إِلَيَّ مَرْجِعُكُمْ فَأُنَبِّئُكُم بِمَا كُنتُمْ تَعْمَلُونَ
ಮತ್ತು ನಿನಗೆ ಯಾವುದೇ ಜ್ಞಾನವಿಲ್ಲದೆ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸಬೇಕೆಂದು ಅವರಿಬ್ಬರು (ತಂದೆತಾಯAದಿರು) ನಿನ್ನ ಮೇಲೆ ಬಲವಂತ ಮಾಡಿದರೆ ನೀನು ಅವರನ್ನು ಅನುಸರಿಸಬೇಡ. ಆದರೆ ಇಹಲೋಕದಲ್ಲಿ ಅವರಿಬ್ಬರೊಂದಿಗೆ ಸೌಜನ್ಯದೊಂದಿಗೆ ವರ್ತಿಸು ಮತ್ತು ನನ್ನೆಡೆಗೆ ವಿಧೇಯನಾದವನ ಮಾರ್ಗವನ್ನು ಅನುಸರಿಸು. ನಿಮ್ಮೆಲ್ಲರ ಮರಳುವಿಕೆಯು ನನ್ನೆಡೆಗೇ ಆಗಿದೆ. ಅನಂತರ ನಾನು ನೀವು ಮಾಡುತ್ತಿರುವುದನ್ನು ನಿಮಗೆ ತಿಳಿಸಿಕೊಡುವೆನು.
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
13ಆಯತ್

ಅನುವಾದ — ಲುಕ್ಮಾನ್ 13

ಸೂರಾ ಲುಕ್ಮಾನ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಲುಕ್ಮಾನರು ತಮ್ಮ ಮಗನಿಗೆ ಉಪದೇಶ ನೀಡುತ್ತಾ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ…

ಸೂರಾ ಆಯತ್ 13/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers