ಅಲ್-ಮುಜಾದಿಲಾ · 6/22
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜಾದಿಲಾ
يَوْمَ يَبْعَثُهُمُ اللَّهُ جَمِيعًا فَيُنَبِّئُهُم بِمَا عَمِلُوا ۚ أَحْصَاهُ اللَّهُ وَنَسُوهُ ۚ وَاللَّهُ عَلَىٰ كُلِّ شَيْءٍ شَهِيدٌ ۝٦
Yawma yab`asuhumul laahu jamee`an fayunabbi`uhum bimaa `amiloo; ahsaahul laahu wa nasooh; wallaahu `alaa kulli shai`in shaheed
📖 ಕನ್ನಡ ಅರ್ಥ
ಅಲ್ಲಾಹನು ಅವರೆಲ್ಲರನ್ನು ಎಬ್ಬಿಸಿ ಅವರಿಗೆ ಅವರು ಮಾಡಿದಂತಹ ಕರ್ಮಗಳನ್ನು ತಿಳಿಸಿಕೊಡುವ ದಿನ. ಅಲ್ಲಾಹನು ಅದನ್ನು ಎಣಿಸಿ ದಾಖಲಿಸಿದ್ದಾನೆ. ಆದರೆ ಅವರು ಅದನ್ನು ಮರೆತುಬಿಟ್ಟಿದ್ದರು ಅಲ್ಲಾಹನು ಎಲ್ಲಾ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.

🎧 ಆಲಿಸಿ


📜 ಆಯತ್ 4-8 — ಸೂರಾ ಅಲ್-ಮುಜಾದಿಲಾ

4فَمَن لَّمْ يَجِدْ فَصِيَامُ شَهْرَيْنِ مُتَتَابِعَيْنِ مِن قَبْلِ أَن يَتَمَاسَّا ۖ فَمَن لَّمْ يَسْتَطِعْ فَإِطْعَامُ سِتِّينَ مِسْكِينًا ۚ ذَٰلِكَ لِتُؤْمِنُوا بِاللَّهِ وَرَسُولِهِ ۚ وَتِلْكَ حُدُودُ اللَّهِ ۗ وَلِلْكَافِرِينَ عَذَابٌ أَلِيمٌ
ಇನ್ನು ಯಾರಿಗಾದರೂ ಗುಲಾಮನು ಸಿಗದಿದ್ದರೆ ಅವರು ಪರಸ್ಪರ ಸ್ಪರ್ಶಿಸುವ ಮೊದಲು ಅವನು ನಿರಂತರವಾಗಿ ಎರಡು ತಿಂಗಳ ಕಾಲ ಉಪವಾಸ ಆಚರಿಸಬೇಕಾಗಿದೆ, ಇದು ಸಾಧ್ಯವಾಗದಿದ್ದರೆ ಅವನು ಅರವತ್ತು ನಿರ್ಗತಿಕರಿಗೆ ಉಣಬಡಿಸಬೇಕಾಗಿದೆ. ಇದು ನೀವು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿಡಲೆಂದಾಗಿದೆ. ಇವು ಅಲ್ಲಾಹನ ಮೇರೆಗಳಾಗಿವೆ. ಮತ್ತು ಸತ್ಯ ನಿಷೇಧಿಗಳಿಗೆ ವೇದನಾಜನಕ ಯಾತನೆ ಇದೆ.
5إِنَّ الَّذِينَ يُحَادُّونَ اللَّهَ وَرَسُولَهُ كُبِتُوا كَمَا كُبِتَ الَّذِينَ مِن قَبْلِهِمْ ۚ وَقَدْ أَنزَلْنَا آيَاتٍ بَيِّنَاتٍ ۚ وَلِلْكَافِرِينَ عَذَابٌ مُّهِينٌ
ನಿಸ್ಸಂದೇಹವಾಗಿಯೂ ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ವಿರೋಧಿಸುವವರು ತಮಗಿಂತ ಮುಂಚಿನವರು ನಿಂದಿಸಲ್ಪಟ್ಟAತೆ ಅವರೂ ನಿಂದಿಸಲ್ಪಡುವರು, ನಿಸ್ಸಂಶಯವಾಗಿಯೂ ನಾವು ಸುಸ್ಪಷ್ಟ ಪುರಾವೆಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಸತ್ಯ ನಿಷೇಧಿಗಳಿಗೆ ನಿಂದ್ಯತೆಯ ಯಾತನೆ ಇದೆ.
6يَوْمَ يَبْعَثُهُمُ اللَّهُ جَمِيعًا فَيُنَبِّئُهُم بِمَا عَمِلُوا ۚ أَحْصَاهُ اللَّهُ وَنَسُوهُ ۚ وَاللَّهُ عَلَىٰ كُلِّ شَيْءٍ شَهِيدٌ
ಅಲ್ಲಾಹನು ಅವರೆಲ್ಲರನ್ನು ಎಬ್ಬಿಸಿ ಅವರಿಗೆ ಅವರು ಮಾಡಿದಂತಹ ಕರ್ಮಗಳನ್ನು ತಿಳಿಸಿಕೊಡುವ ದಿನ. ಅಲ್ಲಾಹನು ಅದನ್ನು ಎಣಿಸಿ ದಾಖಲಿಸಿದ್ದಾನೆ. ಆದರೆ ಅವರು ಅದನ್ನು ಮರೆತುಬಿಟ್ಟಿದ್ದರು ಅಲ್ಲಾಹನು ಎಲ್ಲಾ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.
7أَلَمْ تَرَ أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ ۖ مَا يَكُونُ مِن نَّجْوَىٰ ثَلَاثَةٍ إِلَّا هُوَ رَابِعُهُمْ وَلَا خَمْسَةٍ إِلَّا هُوَ سَادِسُهُمْ وَلَا أَدْنَىٰ مِن ذَٰلِكَ وَلَا أَكْثَرَ إِلَّا هُوَ مَعَهُمْ أَيْنَ مَا كَانُوا ۖ ثُمَّ يُنَبِّئُهُم بِمَا عَمِلُوا يَوْمَ الْقِيَامَةِ ۚ إِنَّ اللَّهَ بِكُلِّ شَيْءٍ عَلِيمٌ
ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ಅರಿಯುತ್ತಾನೆ ಎಂದು ನೀವು ಕಾಣುವುದಿಲ್ಲವೇ? ಮೂವರ ಗೂಢಾಲೋಚನೆಯು ಅವರ ಪೈಕಿ ನಾಲ್ಕನೆಯವನಾಗಿ ಅಲ್ಲಾಹನಲ್ಲದೆ ನಡೆಯದು, ಮತ್ತು ಐವರ ಗೂಢಾಲೋಚನೆಯು ಅವರ ಪೈಕಿ ಆರನೇಯವನಾಗಿ ಅವನಿಲ್ಲದೆ ನಡೆಯದು. ಅದಕ್ಕಿಂತ ಕಡಿಮೆಯವರದ್ದಾಗಲಿ ಹೆಚ್ಚಿನವರದ್ದಾಗಲಿ ಅವರೆಲ್ಲೇ ಇರಲಿ ಅವನು ಅವರ ಜೊತೆಯಲ್ಲಿ ಇರುತ್ತಾನೆ. ಬಳಿಕ ಪುನರುತ್ಥಾನದಂದು ಅವನು ಅವರಿಗೆ ಅವರು ಮಾಡುತ್ತಿದ್ದುದ್ದನ್ನು ತಿಳಿಸಿ ಕೊಡುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಎಲ್ಲ ಸಂಗತಿಗಳನ್ನು ಅರಿಯುವವನಾಗಿರುವನು.
8أَلَمْ تَرَ إِلَى الَّذِينَ نُهُوا عَنِ النَّجْوَىٰ ثُمَّ يَعُودُونَ لِمَا نُهُوا عَنْهُ وَيَتَنَاجَوْنَ بِالْإِثْمِ وَالْعُدْوَانِ وَمَعْصِيَتِ الرَّسُولِ وَإِذَا جَاءُوكَ حَيَّوْكَ بِمَا لَمْ يُحَيِّكَ بِهِ اللَّهُ وَيَقُولُونَ فِي أَنفُسِهِمْ لَوْلَا يُعَذِّبُنَا اللَّهُ بِمَا نَقُولُ ۚ حَسْبُهُمْ جَهَنَّمُ يَصْلَوْنَهَا ۖ فَبِئْسَ الْمَصِيرُ
ಗೂಢಾಲೋಚನೆ ನಡೆಸುವುದರಿಂದ ತಡೆಯಲ್ಪಟ್ಟವರೆಡೆಗೆ ನೀವು ನೋಡಲಿಲ್ಲವೇ ?ಅವರು ತಮ್ಮನ್ನು ತಡೆಯಲಾದ ಕೆಲಸಗಳಿಗೆ ಪುನಃ ಮರಳುತ್ತಿದ್ದಾರೆ, ಮತ್ತು ಪರಸ್ಪರ ಪಾಪ, ಅತಿರೇಕ ಹಾಗೂ ಸಂದೇಶವಾಹಕರ ಧಿಕ್ಕಾರದ ವಿಚಾರದಲ್ಲಿ ಗೂಢಾಲೋಚನೆ ನಡೆಸುತ್ತಾರೆ, ಅವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಸಲಾಂ ಹೇಳದ ರೀತಿಯಲ್ಲಿ ಸಲಾಂ ಹೇಳುತ್ತಾರೆ ಮತ್ತು ನಾವು ಹೇಳುತ್ತಿರುವುದರ ನಿಮಿತ್ತ ಅಲ್ಲಾಹನು ನಮ್ಮನ್ನು ಶಿಕ್ಷಿಸುವುದಿಲ್ಲವೇಕೆ ? ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. ಇವರಿಗೆ ನರಕವೇ ಸಾಕು, ಅವರು ಅದನ್ನು ಪ್ರವೇಶಿಸುವರು, ಹಾಗೆಯೇ ಅದೆಷ್ಟು ಕೆಟ್ಟ ನೆಲೆಯಾಗಿದೆ.
ಅಲ್-ಮುಜಾದಿಲಾಕುರಾನ್ ಸೂಚಿ
22ಆಯತ್
MedinanRevelation
6ಆಯತ್

ಅನುವಾದ — ಅಲ್-ಮುಜಾದಿಲಾ 6

ಸೂರಾ ಅಲ್-ಮುಜಾದಿಲಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಅವರೆಲ್ಲರನ್ನು ಎಬ್ಬಿಸಿ ಅವರಿಗೆ ಅವರು ಮಾಡಿದಂತಹ ಕರ್ಮಗಳನ್ನು ತಿಳಿಸಿಕೊಡುವ ದಿನ. ಅಲ್ಲಾಹನು…

ಸೂರಾ ಆಯತ್ 6/22 — ಸೂರಾ ಅಲ್-ಮುಜಾದಿಲಾ المجادلة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜಾದಿಲಾ ಆಲಿಸಿ, ಸೂರಾ ಅಲ್-ಮುಜಾದಿಲಾ ಅನುವಾದ, ಸೂರಾ ಅಲ್-ಮುಜಾದಿಲಾ mp3, ಸೂರಾ ಅಲ್-ಮುಜಾದಿಲಾ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers