ಅಲ್-ಅನ್ಆಮ್ · 31/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
قَدْ خَسِرَ الَّذِينَ كَذَّبُوا بِلِقَاءِ اللَّهِ ۖ حَتَّىٰ إِذَا جَاءَتْهُمُ السَّاعَةُ بَغْتَةً قَالُوا يَا حَسْرَتَنَا عَلَىٰ مَا فَرَّطْنَا فِيهَا وَهُمْ يَحْمِلُونَ أَوْزَارَهُمْ عَلَىٰ ظُهُورِهِمْ ۚ أَلَا سَاءَ مَا يَزِرُونَ ۝٣١
Qad khasiral lazeena kazzaboo biliqaaa`il laahi hattaaa izaa jaaa`at humus Saa`atu baghtan qaaloo yaa hasratanaa `alaa maa farratnaa feehaa wa hum yahmiloona awzaarahum `alaa zuhoorihim; alaa saaa`a ma yaziroon
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ ಬಂದೆರಗಿದರೆ ಅವರು ಹೇಳುವರು: 'ಅಯ್ಯೋ ನಮ್ಮ ದುರ್ಗತಿಯೆ ನಾವು ಈ ವಿಷಯದ ಕುರಿತು ಪ್ರಮಾದವೆಸಗಿದೆವಲ್ಲಾ'. ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊತ್ತಿರುವರು. ಎಚ್ಚರಿಕೆ! ಅವರು ಹೊರುವ ಭಾರವು ಅದೆಷ್ಟು ನಿಕೃಷ್ಟವಾದದ್ದು!

🎧 ಆಲಿಸಿ


📜 ಆಯತ್ 29-33 — ಸೂರಾ ಅಲ್-ಅನ್ಆಮ್

29وَقَالُوا إِنْ هِيَ إِلَّا حَيَاتُنَا الدُّنْيَا وَمَا نَحْنُ بِمَبْعُوثِينَ
ಮತ್ತು ಅವರು ಹೇಳುತ್ತಾರೆ: 'ನಮ್ಮ ಜೀವನವೆಂದರೆ ಕೇವಲ ಈ ಇಹಲೋಕ ಜೀವನವಲ್ಲದೆ ಇನ್ನೇನೂ ಇಲ್ಲ ಮತ್ತು ನಾವು (ಮರಣದ ನಂತರ) ಪುನರ್ಜೀವಗೊಳಿಸಲ್ಪಡುವವರಲ್ಲ.
30وَلَوْ تَرَىٰ إِذْ وُقِفُوا عَلَىٰ رَبِّهِمْ ۚ قَالَ أَلَيْسَ هَٰذَا بِالْحَقِّ ۚ قَالُوا بَلَىٰ وَرَبِّنَا ۚ قَالَ فَذُوقُوا الْعَذَابَ بِمَا كُنتُمْ تَكْفُرُونَ
ಮತ್ತು ಅವರು ತಮ್ಮ ಪ್ರಭುವಿನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! ಅಲ್ಲಾಹನು ಕೇಳುವನು: ಈ ಸಂಗತಿಯು ವಾಸ್ತವಿಕತೆಯಲ್ಲವೇ? ಅವರು ಹೇಳುವರು: ನಿಸ್ಸಂಶಯವಾಗಿಯೂ, ನಮ್ಮ ಪ್ರಭುವಿನ ಮೇಲಾಣೆ. ಅಲ್ಲಾಹನು ಹೇಳುವನು: ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಈ ಶಿಕ್ಷೆಯನ್ನು ಸವಿಯಿರಿ.
31قَدْ خَسِرَ الَّذِينَ كَذَّبُوا بِلِقَاءِ اللَّهِ ۖ حَتَّىٰ إِذَا جَاءَتْهُمُ السَّاعَةُ بَغْتَةً قَالُوا يَا حَسْرَتَنَا عَلَىٰ مَا فَرَّطْنَا فِيهَا وَهُمْ يَحْمِلُونَ أَوْزَارَهُمْ عَلَىٰ ظُهُورِهِمْ ۚ أَلَا سَاءَ مَا يَزِرُونَ
ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ ಬಂದೆರಗಿದರೆ ಅವರು ಹೇಳುವರು: 'ಅಯ್ಯೋ ನಮ್ಮ ದುರ್ಗತಿಯೆ ನಾವು ಈ ವಿಷಯದ ಕುರಿತು ಪ್ರಮಾದವೆಸಗಿದೆವಲ್ಲಾ'. ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊತ್ತಿರುವರು. ಎಚ್ಚರಿಕೆ! ಅವರು ಹೊರುವ ಭಾರವು ಅದೆಷ್ಟು ನಿಕೃಷ್ಟವಾದದ್ದು!
32وَمَا الْحَيَاةُ الدُّنْيَا إِلَّا لَعِبٌ وَلَهْوٌ ۖ وَلَلدَّارُ الْآخِرَةُ خَيْرٌ لِّلَّذِينَ يَتَّقُونَ ۗ أَفَلَا تَعْقِلُونَ
ಐಹಿಕ ಜೀವನವು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಉತ್ತಮವಾಗಿದೆ. ನೀವು ಚಿಂತಿಸುವುದಿಲ್ಲವೇ?
33قَدْ نَعْلَمُ إِنَّهُ لَيَحْزُنُكَ الَّذِي يَقُولُونَ ۖ فَإِنَّهُمْ لَا يُكَذِّبُونَكَ وَلَٰكِنَّ الظَّالِمِينَ بِآيَاتِ اللَّهِ يَجْحَدُونَ
ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು ನಿಮ್ಮನ್ನು ಸುಳ್ಳಾಗಿಸುತ್ತಿಲ್ಲ ಈ ಅಕ್ರಮಿಗಳಂತು ಅಲ್ಲಾಹನ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದಾರೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
31ಆಯತ್

ಅನುವಾದ — ಅಲ್-ಅನ್ಆಮ್ 31

ಸೂರಾ ಅಲ್-ಅನ್ಆಮ್ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ…

ಸೂರಾ ಆಯತ್ 31/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 29–33. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers