ಅಲ್-ಅನ್ಆಮ್ · 33/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
قَدْ نَعْلَمُ إِنَّهُ لَيَحْزُنُكَ الَّذِي يَقُولُونَ ۖ فَإِنَّهُمْ لَا يُكَذِّبُونَكَ وَلَٰكِنَّ الظَّالِمِينَ بِآيَاتِ اللَّهِ يَجْحَدُونَ ۝٣٣
Qad na`lamu innahoo layahzunukal lazee yaqooloona fa innahum laa yukazziboonaka wa laakinnaz zaalimeena bi Aayaatil laahi yajhadoon
📖 ಕನ್ನಡ ಅರ್ಥ
ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು ನಿಮ್ಮನ್ನು ಸುಳ್ಳಾಗಿಸುತ್ತಿಲ್ಲ ಈ ಅಕ್ರಮಿಗಳಂತು ಅಲ್ಲಾಹನ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 31-35 — ಸೂರಾ ಅಲ್-ಅನ್ಆಮ್

31قَدْ خَسِرَ الَّذِينَ كَذَّبُوا بِلِقَاءِ اللَّهِ ۖ حَتَّىٰ إِذَا جَاءَتْهُمُ السَّاعَةُ بَغْتَةً قَالُوا يَا حَسْرَتَنَا عَلَىٰ مَا فَرَّطْنَا فِيهَا وَهُمْ يَحْمِلُونَ أَوْزَارَهُمْ عَلَىٰ ظُهُورِهِمْ ۚ أَلَا سَاءَ مَا يَزِرُونَ
ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ ಬಂದೆರಗಿದರೆ ಅವರು ಹೇಳುವರು: 'ಅಯ್ಯೋ ನಮ್ಮ ದುರ್ಗತಿಯೆ ನಾವು ಈ ವಿಷಯದ ಕುರಿತು ಪ್ರಮಾದವೆಸಗಿದೆವಲ್ಲಾ'. ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊತ್ತಿರುವರು. ಎಚ್ಚರಿಕೆ! ಅವರು ಹೊರುವ ಭಾರವು ಅದೆಷ್ಟು ನಿಕೃಷ್ಟವಾದದ್ದು!
32وَمَا الْحَيَاةُ الدُّنْيَا إِلَّا لَعِبٌ وَلَهْوٌ ۖ وَلَلدَّارُ الْآخِرَةُ خَيْرٌ لِّلَّذِينَ يَتَّقُونَ ۗ أَفَلَا تَعْقِلُونَ
ಐಹಿಕ ಜೀವನವು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಉತ್ತಮವಾಗಿದೆ. ನೀವು ಚಿಂತಿಸುವುದಿಲ್ಲವೇ?
33قَدْ نَعْلَمُ إِنَّهُ لَيَحْزُنُكَ الَّذِي يَقُولُونَ ۖ فَإِنَّهُمْ لَا يُكَذِّبُونَكَ وَلَٰكِنَّ الظَّالِمِينَ بِآيَاتِ اللَّهِ يَجْحَدُونَ
ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು ನಿಮ್ಮನ್ನು ಸುಳ್ಳಾಗಿಸುತ್ತಿಲ್ಲ ಈ ಅಕ್ರಮಿಗಳಂತು ಅಲ್ಲಾಹನ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದಾರೆ.
34وَلَقَدْ كُذِّبَتْ رُسُلٌ مِّن قَبْلِكَ فَصَبَرُوا عَلَىٰ مَا كُذِّبُوا وَأُوذُوا حَتَّىٰ أَتَاهُمْ نَصْرُنَا ۚ وَلَا مُبَدِّلَ لِكَلِمَاتِ اللَّهِ ۚ وَلَقَدْ جَاءَكَ مِن نَّبَإِ الْمُرْسَلِينَ
ಖಂಡಿತವಾಗಿಯು ನಿಮಗಿಂತ ಮುಂಚೆ ಅದೆಷ್ಟೋ ಸಂದೇಶವಾಹಕರು ಧಿಕ್ಕರಿಸಲ್ಪಟ್ಟಿದ್ದಾರೆ. ಆದರೆ ಅವರು ತಮ್ಮನ್ನು ನಿರಾಕರಿಸಿದ್ದನ್ನು ಹಿಂಸಿಸಲಾಗಿದ್ದನ್ನು ಸಹಿಸಿಕೊಂಡರು. ಕೊನೆಗೆ ನಮ್ಮ ಸಹಾಯವು ಅವರಿಗೆ ತಲುಪಿತು. ಅಲ್ಲಾಹನ ನಿರ್ಣಯಗಳನ್ನು ಬದಲಾಯಿಸುವವನಾರಿಲ್ಲ. ಮತ್ತು ನಿಮ್ಮ ಬಳಿಗೆ ಕೆಲವು ಸಂದೇಶವಾಹಕರ ವೃತ್ತಾಂತಗಳು ತಲುಪಿರುತ್ತವೆ.
35وَإِن كَانَ كَبُرَ عَلَيْكَ إِعْرَاضُهُمْ فَإِنِ اسْتَطَعْتَ أَن تَبْتَغِيَ نَفَقًا فِي الْأَرْضِ أَوْ سُلَّمًا فِي السَّمَاءِ فَتَأْتِيَهُم بِآيَةٍ ۚ وَلَوْ شَاءَ اللَّهُ لَجَمَعَهُمْ عَلَى الْهُدَىٰ ۚ فَلَا تَكُونَنَّ مِنَ الْجَاهِلِينَ
ಮತ್ತು ಅವರ ವಿಮುಖತೆಯು ನಿಮಗೆ ಅಸಹನೀಯವಾಗಿ ತೋರುವುದಾದರೆ ನಿಮಗೆ ಸಾಧ್ಯವಿದ್ದರೆ ಭೂಮಿಯಲ್ಲಿ ಒಂದು ಸುರಂಗವನ್ನು ತೋಡಿರಿ ಅಥವಾ ಆಕಾಶದಲ್ಲಿ ಒಂದು ಏಣಿಯನ್ನು ಹುಡುಕಿ ಅನಂತರ ಅವರಿಗೆ ದೃಷ್ಟಾಂತವೊAದನ್ನು (ಕುರುಹನ್ನು) ತಂದು ಕೊಡಲಿಕ್ಕಾಗುವುದಾದರೆ ಹಾಗೆ ಮಾಡಿರಿ.ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದುದರಿಂದ ನೀವು ಅವಿವೇಕಿಗಳ ಪೈಕಿ ಸೇರದಿರಿ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
33ಆಯತ್

ಅನುವಾದ — ಅಲ್-ಅನ್ಆಮ್ 33

ಸೂರಾ ಅಲ್-ಅನ್ಆಮ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು…

ಸೂರಾ ಆಯತ್ 33/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 31–35. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers