ಅತ್-ತೌಬಾ · 119/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
يَا أَيُّهَا الَّذِينَ آمَنُوا اتَّقُوا اللَّهَ وَكُونُوا مَعَ الصَّادِقِينَ ۝١١٩
Yaaa aiyuhal lazeena aamanut taqul laaha wa koonoo ma`as saadiqeen
📖 ಕನ್ನಡ ಅರ್ಥ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿಕೊಳ್ಳಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 117-121 — ಸೂರಾ ಅತ್-ತೌಬಾ

117لَّقَد تَّابَ اللَّهُ عَلَى النَّبِيِّ وَالْمُهَاجِرِينَ وَالْأَنصَارِ الَّذِينَ اتَّبَعُوهُ فِي سَاعَةِ الْعُسْرَةِ مِن بَعْدِ مَا كَادَ يَزِيغُ قُلُوبُ فَرِيقٍ مِّنْهُمْ ثُمَّ تَابَ عَلَيْهِمْ ۚ إِنَّهُ بِهِمْ رَءُوفٌ رَّحِيمٌ
ಅಲ್ಲಾಹನು ಪೈಗಂಬರರನ್ನು ಮತ್ತು ಕಷ್ಟಕಾಲದಲ್ಲಿ ಪೈಗಂಬರರನ್ನು ಅನುಸರಿಸಿದ ಮುಹಾಜಿರ್ ಹಾಗೂ ಅನ್ಸಾರರನ್ನು ಕ್ಷಮಿಸಿಬಿಟ್ಟನು. (ಸಹಿಸಲು ಅಸಾಧ್ಯವಾದ ಶ್ರಮದ ನಿಮಿತ್ತ) ಅವರ ಪೈಕಿಯ ಒಂದು ಗುಂಪಿನವರ ಹೃದಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಚಲನೆ ಸಂಭವಿಸಿದ ಬಳಿಕ ಅಲ್ಲ್ಲಾಹನು ಅವರನ್ನು ಕ್ಷಮಿಸಿಬಿಟ್ಟನು. ನಿಸ್ಸಂದೇಹವಾಗಿಯೂ ಅಲ್ಲಾಹನು ಅವರೆಲ್ಲರ ಮೇಲೆ ಮಹಾ ಕೃಪೆಯುಳ್ಳವನೂ, ಕರುಣಾನಿಧಿಯೂ ಆಗಿದ್ದಾನೆ.
118وَعَلَى الثَّلَاثَةِ الَّذِينَ خُلِّفُوا حَتَّىٰ إِذَا ضَاقَتْ عَلَيْهِمُ الْأَرْضُ بِمَا رَحُبَتْ وَضَاقَتْ عَلَيْهِمْ أَنفُسُهُمْ وَظَنُّوا أَن لَّا مَلْجَأَ مِنَ اللَّهِ إِلَّا إِلَيْهِ ثُمَّ تَابَ عَلَيْهِمْ لِيَتُوبُوا ۚ إِنَّ اللَّهَ هُوَ التَّوَّابُ الرَّحِيمُ
ಮತ್ತು ವಿಷಯವನ್ನು ಮುಂದೂಡಲಾಗಿದ್ದ ಆ ಮೂವರು ವ್ಯಕ್ತಿಗಳನ್ನು ಕ್ಷಮಿಸಿದನು. ಭೂಮಿಯು ವಿಶಾಲವಾಗಿದ್ದರು ಅವರ ಪಾಲಿಗೆ ಇಕ್ಕಟ್ಟಾಗಿ ಮಾರ್ಪಟ್ಟಿತು. ಅವರ ಜೀವಗಳೇ ಅವರ ಮೇಲೆ ಹೊರೆಯಾಗಿ ಸಂಕುಚಿತವಾಗಿ ಬಿಟ್ಟವು. ಮತ್ತು ಅವರು ಅಲ್ಲಾಹನ ಹೊರತು ಎಲ್ಲೂ ರಕ್ಷಣೆ ಸಿಗಲಾರದೆಂದು ತಿಳಿದುಕೊಂಡರು. ಅನಂತರ ಅವನು ಅವರ ಸ್ಥಿತಿಯೆಡೆಗೆ ಪಶ್ಚಾತ್ತಾಪ ಪಟ್ಟುಕೊಳ್ಳಲೆಂದು ಗಮನಹರಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
119يَا أَيُّهَا الَّذِينَ آمَنُوا اتَّقُوا اللَّهَ وَكُونُوا مَعَ الصَّادِقِينَ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿಕೊಳ್ಳಿರಿ.
120مَا كَانَ لِأَهْلِ الْمَدِينَةِ وَمَنْ حَوْلَهُم مِّنَ الْأَعْرَابِ أَن يَتَخَلَّفُوا عَن رَّسُولِ اللَّهِ وَلَا يَرْغَبُوا بِأَنفُسِهِمْ عَن نَّفْسِهِ ۚ ذَٰلِكَ بِأَنَّهُمْ لَا يُصِيبُهُمْ ظَمَأٌ وَلَا نَصَبٌ وَلَا مَخْمَصَةٌ فِي سَبِيلِ اللَّهِ وَلَا يَطَئُونَ مَوْطِئًا يَغِيظُ الْكُفَّارَ وَلَا يَنَالُونَ مِنْ عَدُوٍّ نَّيْلًا إِلَّا كُتِبَ لَهُم بِهِ عَمَلٌ صَالِحٌ ۚ إِنَّ اللَّهَ لَا يُضِيعُ أَجْرَ الْمُحْسِنِينَ
ಮದೀನ ನಿವಾಸಿಗಳಿಗಾಗಲೀ, ಅವರ ಸುತ್ತುಮುತ್ತಲಲ್ಲಿರುವ ಗ್ರಾಮೀಣವಾಸಿಗಳಾಗಲಿ ಅಲ್ಲಾಹನ ಸಂದೇಶವಾಕರನ್ನುಬಿಟ್ಟು ಹಿಂದುಳಿದು ಬಿಡುವುದು ಮತ್ತು ತಮ್ಮ ಪ್ರಾಣವನ್ನು ಅವರ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯವಾಗಿ ತಿಳಿದುಕೊಳ್ಳುವುದು ಶೋಭಿಸುವುದಿಲ್ಲ. ಏಕೆಂದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗುಂಟಾಗುವ ದಾಹ, ದಣಿವು, ಹಸಿವು ಮತ್ತು ಸತ್ಯನಿಷೇಧಿಗಳನ್ನು ಕೆರಳಿಸುವಂತಹ ಯಾವುದೇ ಹೆಜ್ಜೆಯನ್ನು ಮುಂದಿಡುವುದು ಮತ್ತು ಶತ್ರುಗಳ ಯಾವುದೇ ಸುದ್ದಿಯನ್ನು ಪಡೆದುಕೊಳ್ಳುವುದು, ಇವುಗಳೆಲ್ಲದರ ಮೇಲೆ ಅವರ ಹೆಸರಲ್ಲಿ (ಒಂದೊAದು)ಪುಣ್ಯ ಕರ್ಮವನ್ನು ಬರೆದಿಡಲಾಗುವುದು. ಖಂಡಿತವಾಗಿಯೂ ಅಲ್ಲಾಹನು ಏಕನಿಷ್ಠರ ಪ್ರತಿಫಲವನ್ನು ವ್ಯರ್ಥ ಗೊಳಿಸುವುದಿಲ್ಲ.
121وَلَا يُنفِقُونَ نَفَقَةً صَغِيرَةً وَلَا كَبِيرَةً وَلَا يَقْطَعُونَ وَادِيًا إِلَّا كُتِبَ لَهُمْ لِيَجْزِيَهُمُ اللَّهُ أَحْسَنَ مَا كَانُوا يَعْمَلُونَ
ಮತ್ತು ಅವರು ಮಾಡಿದಂತಹ ಹೆಚ್ಚು ಕಡಿಮೆ ಅಥವಾ ಯಾವುದೇ ಖರ್ಚಾಗಲೀ ಮತ್ತು ಅವರು ಯಾವುದೇ ಕಣಿವೆಯನ್ನು ದಾಟಿ ಹೋಗಲಿ; ಅವೆಲ್ಲವೂ ಅವರ ಹೆಸರಲ್ಲಿ ಬರೆಯಲ್ಪಟ್ಟಿದೆ ಇದೇಕೆಂದರೆ ಅಲ್ಲಾಹನು ಅವರ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲೆಂದಾಗಿದೆ.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
119ಆಯತ್

ಅನುವಾದ — ಅತ್-ತೌಬಾ 119

ಸೂರಾ ಅತ್-ತೌಬಾ ಆಯತ್ 119 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿಕೊಳ್ಳಿರಿ.

ಸೂರಾ ಆಯತ್ 119/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 117–121. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers