ಅನ್-ನಹ್ಲ್ · 11/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
يُنبِتُ لَكُم بِهِ الزَّرْعَ وَالزَّيْتُونَ وَالنَّخِيلَ وَالْأَعْنَابَ وَمِن كُلِّ الثَّمَرَاتِ ۗ إِنَّ فِي ذَٰلِكَ لَآيَةً لِّقَوْمٍ يَتَفَكَّرُونَ ۝١١
Yumbitu lakum bihiz zar`a wazzaitoona wanna kheela wal-a`naaba wa min kullis samaraat, inna fee zaalika la Aayatal liqawminy yatafakkaroon
📖 ಕನ್ನಡ ಅರ್ಥ
ಅದರಿಂದಲೇ ಅವನು ನಿಮಗೆ ಕೃಷಿಯನ್ನು, ಝೈತೂನನ್ನು (ಆಲೀವ್), ಖರ್ಜೂರವನ್ನು, ದ್ರಾಕ್ಷೆಗಳನ್ನು ಮತ್ತು ನಾನಾ ವಿಧದ ಹಣ್ಣು ಹಂಪಲುಗಳನ್ನು ಬೆಳೆಸುತ್ತಾನೆ. ನಿಸ್ಸಂಶಯವಾಗಿಯು ಇದರಲ್ಲಿ ಚಿಂತಿಸುವ ಜನರಿಗೆ ನಿದರ್ಶನವಿದೆ.

🎧 ಆಲಿಸಿ


📜 ಆಯತ್ 9-13 — ಸೂರಾ ಅನ್-ನಹ್ಲ್

9وَعَلَى اللَّهِ قَصْدُ السَّبِيلِ وَمِنْهَا جَائِرٌ ۚ وَلَوْ شَاءَ لَهَدَاكُمْ أَجْمَعِينَ
ಕೆಲವು ಅಡ್ಡಮಾರ್ಗಗಳಿರುವಾಗ ಅಲ್ಲಾಹನ ಮೇಲೆಯೇ ಸನ್ಮಾರ್ಗವನ್ನು ತೋರಿಸಿ ಕೊಡುವ ಹೊಣೆಯಿದೆ ಮತ್ತು ಅವನು ಇಚ್ಛಿಸಿರುತ್ತಿದ್ದರೆ ನಿಮ್ಮೆಲ್ಲರನ್ನು (ಬಲವಂತವಾಗಿ) ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದನು (ಆದರೆ ಇದು ಅವನ ಯುಕ್ತಿಗೆ ವಿರುದ್ಧವಾಗಿದೆ.)
10هُوَ الَّذِي أَنزَلَ مِنَ السَّمَاءِ مَاءً ۖ لَّكُم مِّنْهُ شَرَابٌ وَمِنْهُ شَجَرٌ فِيهِ تُسِيمُونَ
ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದನು. ಅದನ್ನು ನೀವು ಕುಡಿಯುತ್ತೀರಿ ಮತ್ತು ಅದರಿಂದಲೇ ಬೆಳೆದ ಮರಗಳನ್ನು ನಿಮ್ಮ ಜಾನುವಾರುಗಳಿಗೆ ಮೇಯಿಸುತ್ತೀರಿ.
11يُنبِتُ لَكُم بِهِ الزَّرْعَ وَالزَّيْتُونَ وَالنَّخِيلَ وَالْأَعْنَابَ وَمِن كُلِّ الثَّمَرَاتِ ۗ إِنَّ فِي ذَٰلِكَ لَآيَةً لِّقَوْمٍ يَتَفَكَّرُونَ
ಅದರಿಂದಲೇ ಅವನು ನಿಮಗೆ ಕೃಷಿಯನ್ನು, ಝೈತೂನನ್ನು (ಆಲೀವ್), ಖರ್ಜೂರವನ್ನು, ದ್ರಾಕ್ಷೆಗಳನ್ನು ಮತ್ತು ನಾನಾ ವಿಧದ ಹಣ್ಣು ಹಂಪಲುಗಳನ್ನು ಬೆಳೆಸುತ್ತಾನೆ. ನಿಸ್ಸಂಶಯವಾಗಿಯು ಇದರಲ್ಲಿ ಚಿಂತಿಸುವ ಜನರಿಗೆ ನಿದರ್ಶನವಿದೆ.
12وَسَخَّرَ لَكُمُ اللَّيْلَ وَالنَّهَارَ وَالشَّمْسَ وَالْقَمَرَ ۖ وَالنُّجُومُ مُسَخَّرَاتٌ بِأَمْرِهِ ۗ إِنَّ فِي ذَٰلِكَ لَآيَاتٍ لِّقَوْمٍ يَعْقِلُونَ
ಅವನೇ ನಿಮಗೆ ರಾತ್ರಿಯನ್ನು, ಹಗಲನ್ನು, ಸೂರ್ಯನನ್ನು ಮತ್ತು ಚಂದ್ರನನ್ನು ಅಧೀನಗೊಳಿಸಿದನು ಮತ್ತು ನಕ್ಷತ್ರಗಳು ಸಹ ಅವನ ಆಜ್ಞೆಯನುಸಾರ ಅಧೀನದಲ್ಲಿವೆ. ಇದರಲ್ಲಿ ಬುದ್ಧಿವಂತ ಜನರಿಗೆ ಅನೇಕ ನಿದರ್ಶನಗಳಿವೆ.
13وَمَا ذَرَأَ لَكُمْ فِي الْأَرْضِ مُخْتَلِفًا أَلْوَانُهُ ۗ إِنَّ فِي ذَٰلِكَ لَآيَةً لِّقَوْمٍ يَذَّكَّرُونَ
ಅವನೇ ನಿಮಗಾಗಿ ಭೂಮಿಯಲ್ಲಿ ಅನೇಕ ವಸ್ತುಗಳನ್ನು ವಿವಿಧ ಬಣ್ಣಗಳಲ್ಲಿ ಸೃಷ್ಟಿಸಿದನು. ನಿಸ್ಸಂಶಯವಾಗಿಯೂ ಇದರಲ್ಲಿ ಉಪದೇಶ ಸ್ವೀಕರಿಸುವವರಿಗೆ ದೃಷ್ಟಾಂತವಿದೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
11ಆಯತ್

ಅನುವಾದ — ಅನ್-ನಹ್ಲ್ 11

ಸೂರಾ ಅನ್-ನಹ್ಲ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಅದರಿಂದಲೇ ಅವನು ನಿಮಗೆ ಕೃಷಿಯನ್ನು, ಝೈತೂನನ್ನು (ಆಲೀವ್), ಖರ್ಜೂರವನ್ನು, ದ್ರಾಕ್ಷೆಗಳನ್ನು ಮತ್ತು ನಾನಾ…

ಸೂರಾ ಆಯತ್ 11/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 9–13. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers