ಅಲ್-ಆರಾಫ್ · 36/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
وَالَّذِينَ كَذَّبُوا بِآيَاتِنَا وَاسْتَكْبَرُوا عَنْهَا أُولَٰئِكَ أَصْحَابُ النَّارِ ۖ هُمْ فِيهَا خَالِدُونَ ۝٣٦
Wallazeena kazzaboo bi Aayaatinaa wastakbaroo `anhhaaa ulaaa`ika Ashaabun naari hum feehaa khaalidoon
📖 ಕನ್ನಡ ಅರ್ಥ
ಮತ್ತು ಯಾರು ನಮ್ಮ ಸೂಕ್ತಿ (ನಿಯಮ) ಗಳನ್ನು ನಿಷೇಧಿಸುತ್ತಾರೋ ಮತ್ತು ಅದರ (ಅನುಸರಣೆ ಮಾಡುವುದರ) ವಿರುದ್ಧ ಅಹಂಕಾರ ತೋರಿಸುತ್ತಾರೋ ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 34-38 — ಸೂರಾ ಅಲ್-ಆರಾಫ್

34وَلِكُلِّ أُمَّةٍ أَجَلٌ ۖ فَإِذَا جَاءَ أَجَلُهُمْ لَا يَسْتَأْخِرُونَ سَاعَةً ۖ وَلَا يَسْتَقْدِمُونَ
ಪ್ರತಿಯೊಂದು ಸಮುದಾಯಕ್ಕೂ (ಮರಣದ) ಒಂದು ನಿಶ್ಚಿತ ಅವಧಿಯಿದೆ. ಹಾಗೆ ಅವರ ನಿಶ್ಚಿತಾವಧಿಯು ಬಂದರೆ ಅವರಿಗೆ ಒಂದು ಗಳಿಗೆಯಷ್ಟು ಹಿಂದಾಗಲಿಕ್ಕಾಗಲೀ, ಮುಂದಕ್ಕಾಗಲೀ ಸರಿಯಲು ಸಾಧ್ಯವಿಲ್ಲ.
35يَا بَنِي آدَمَ إِمَّا يَأْتِيَنَّكُمْ رُسُلٌ مِّنكُمْ يَقُصُّونَ عَلَيْكُمْ آيَاتِي ۙ فَمَنِ اتَّقَىٰ وَأَصْلَحَ فَلَا خَوْفٌ عَلَيْهِمْ وَلَا هُمْ يَحْزَنُونَ
ಓ ಆದಮ್ ಸಂತತಿಗಳೇ, ನಿಮ್ಮ ಬಳಿಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾ ನಿಮ್ಮಿಂದಲೇ ಆದ ಸಂದೇಶವಾಹಕರು ಬಂದರೆ ಯಾರು ಭಯಭಕ್ತಿ ಪಾಲಿಸುತ್ತಾನೋ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾನೋ ಅವರಿಗೆ ಯಾವುದೇ ಭಯವಿರುವುದಿಲ್ಲ. ಮತ್ತು ಅವರು ದುಃಖಿತರಾಗಲಾರರು.
36وَالَّذِينَ كَذَّبُوا بِآيَاتِنَا وَاسْتَكْبَرُوا عَنْهَا أُولَٰئِكَ أَصْحَابُ النَّارِ ۖ هُمْ فِيهَا خَالِدُونَ
ಮತ್ತು ಯಾರು ನಮ್ಮ ಸೂಕ್ತಿ (ನಿಯಮ) ಗಳನ್ನು ನಿಷೇಧಿಸುತ್ತಾರೋ ಮತ್ತು ಅದರ (ಅನುಸರಣೆ ಮಾಡುವುದರ) ವಿರುದ್ಧ ಅಹಂಕಾರ ತೋರಿಸುತ್ತಾರೋ ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.
37فَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا أَوْ كَذَّبَ بِآيَاتِهِ ۚ أُولَٰئِكَ يَنَالُهُمْ نَصِيبُهُم مِّنَ الْكِتَابِ ۖ حَتَّىٰ إِذَا جَاءَتْهُمْ رُسُلُنَا يَتَوَفَّوْنَهُمْ قَالُوا أَيْنَ مَا كُنتُمْ تَدْعُونَ مِن دُونِ اللَّهِ ۖ قَالُوا ضَلُّوا عَنَّا وَشَهِدُوا عَلَىٰ أَنفُسِهِمْ أَنَّهُمْ كَانُوا كَافِرِينَ
ಅಲ್ಲಾಹನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಅಥವಾ ಅವನ ದೃಷ್ಟಾಂತಗಳನ್ನು ಸುಳ್ಳೆಂದು ವಾದಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರ ವಿಧಿಯಲ್ಲಿ ಬಂದಿರುವ ತಮ್ಮ ಪಾಲನ್ನು ಇಹದಲ್ಲಿ ಪಡೆದುಕೊಳ್ಳಲಿರುವರು. ಕೊನೆಗೆ ಅವರ ಪ್ರಾಣವನ್ನು ವಶಪಡಿಸಿಕೊಳ್ಳಲು ನಮ್ಮ ದೂತರು ಬರುವಾಗ ಹೇಳುವರು: ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದವರು ಎಲ್ಲಿರುವರು? ಅವರು ಹೇಳುವರು: ಅವರು ನಮ್ಮಿಂದ ಕಣ್ಮರೆಯಾಗಿದ್ದಾರೆ ಮತ್ತು ತಾವು ಸತ್ಯನಿಷೇಧಿಗಳಾಗಿದ್ದೇವೆಂದು ಅವರು ಸಾಕ್ಷö್ಯವಹಿಸುವರು.
38قَالَ ادْخُلُوا فِي أُمَمٍ قَدْ خَلَتْ مِن قَبْلِكُم مِّنَ الْجِنِّ وَالْإِنسِ فِي النَّارِ ۖ كُلَّمَا دَخَلَتْ أُمَّةٌ لَّعَنَتْ أُخْتَهَا ۖ حَتَّىٰ إِذَا ادَّارَكُوا فِيهَا جَمِيعًا قَالَتْ أُخْرَاهُمْ لِأُولَاهُمْ رَبَّنَا هَٰؤُلَاءِ أَضَلُّونَا فَآتِهِمْ عَذَابًا ضِعْفًا مِّنَ النَّارِ ۖ قَالَ لِكُلٍّ ضِعْفٌ وَلَٰكِن لَّا تَعْلَمُونَ
ಅಲ್ಲಾಹನು ಹೇಳುವನು: ನಿಮಗಿಂತ ಮುಂಚೆ ಗತಿಸಿದ ಯಕ್ಷ ಮತ್ತು ಮನುಷ್ಯ ಸತ್ಯನಿಷೇಧಿ ಸಮುದಾಯದೊಂದಿಗೆ ನೀವು ನರಕವನ್ನು ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವು ನರಕವನ್ನು ಪ್ರವೇಶಿಸುವಾಗ ತನಗಿಂತ ಮುಂಚೆ ಬಂದ ಇನ್ನೊಂದು ಸಮುದಾಯವನ್ನು ಶಪಿಸುವುದು ಅವರೆಲ್ಲರನ್ನು ಅಲ್ಲಿ ಒಟ್ಟು ಸೇರಿಸಲಾದಾಗ ಅವರ ಪೈಕಿ ನಂತರ ಬಂದವರು ತಮಗಿಂತ ಮೊದಲು ಬಂದವರ ಕುರಿತು ಹೇಳುವರು: ಓ ನಮ್ಮ ಪ್ರಭು, ನಮ್ಮನ್ನು ದಾರಿಗೆಡಿಸಿದವರು ಇವರೇ. ಆದ್ದರಿಂದ ನೀನು ಅವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು. ಅಲ್ಲಾಹನು ಹೇಳುವನು: ಪ್ರತಿಯೊಬ್ಬರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ಅರಿವಿಲ್ಲ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
36ಆಯತ್

ಅನುವಾದ — ಅಲ್-ಆರಾಫ್ 36

ಸೂರಾ ಅಲ್-ಆರಾಫ್ ಆಯತ್ 36 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಯಾರು ನಮ್ಮ ಸೂಕ್ತಿ (ನಿಯಮ) ಗಳನ್ನು ನಿಷೇಧಿಸುತ್ತಾರೋ ಮತ್ತು ಅದರ (ಅನುಸರಣೆ…

ಸೂರಾ ಆಯತ್ 36/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 34–38. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers