ಸೂರಾ ಅಶ್-ಶುಅರಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಶ್-ಶುಅರಾ pdf ಕನ್ನಡ — ಡೌನ್‌ಲೋಡ್ ಸೂರಾ ಅಶ್-ಶುಅರಾ ಅನುವಾದ. ಸೂರಾ ಅಶ್-ಶುಅರಾ (Meccan) 227 ಆಯತ್.
Related
- ಸೂರಾ ಅಶ್-ಶುಅರಾ ಅನುವಾದಕನ್ನಡ
- ಸೂರಾ ಅಶ್-ಶುಅರಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಶ್-ಶುಅರಾ

ﭑﭒ
26:1
ತ್ವಾ ಸೀನ್ ಮೀಮ್
ﭓﭔﭕﭖﭗ
26:2
ಇವು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ.
ﭘﭙﭚﭛﭜﭝﭞ
26:3
(ಓ ಪೈಗಂಬರರೇ) ಪ್ರಾಯಶಃ ಅವರು ಸತ್ಯವಿಶ್ವಾಸ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವನವನ್ನೇ ನಾಶಗೊಳಿಸಬಹುದು.
ﭟﭠﭡﭢﭣﭤﭥﭦﭧﭨﭩﭪ
26:4
ನಾವು ಇಚ್ಛಿಸಿದರೆ ಅವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸುತ್ತಿದ್ದೆವು ಆಗ ಅದರ ಮುಂದೆ ಅವರ ಕೊರಳುಗಳು ಬಾಗಿಬಿಡುತ್ತಿದ್ದವು.
ﭫﭬﭭﭮﭯﭰﭱﭲﭳﭴﭵﭶ
26:5
ಅವರ ಬಳಿ ಪರಮದಯಾಮಯನ ಕಡೆಯಿಂದ ಯಾವುದೇ ಹೊಸ ಉದ್ಭೋಧೆಯು ಬಂದರೂ ಅವರು ಅದರಿಂದ ವಿಮುಖರಾಗುವವರಾದರು.
ﭷﭸﭹﭺﭻﭼﭽﭾﭿ
26:6
ಕೊನೆಗೆ ಅವರು (ಸತ್ಯವನ್ನು) ಸುಳ್ಳಾಗಿಸಿಬಿಟ್ಟರು. ಇನ್ನು ಸದ್ಯದಲ್ಲೇ ಅವರು ಯಾವುದರ ಕುರಿತು ಪರಿಹಾಸ್ಯ ಮಾಡುತ್ತಿದ್ದರೋ ಅದರ ವೃತ್ತಾಂತಗಳು ಅವರ ಬಳಿಗೆ ಬರಲಿವೆ.
ﮀﮁﮂﮃﮄﮅﮆﮇﮈﮉﮊﮋ
26:7
ನಾವು ಎಲ್ಲಾ ವಿಧದ ಉತ್ತಮ ಜೋಡಿಗಳನ್ನು ಬೆಳಿಸಿದ್ದೇವೆಂದು, ಅವರು ಭೂಮಿಯೆಡೆಗೆ ನೋಡಲಿಲ್ಲವೇ?
ﮌﮍﮎﮏﮐﮑﮒﮓﮔﮕ
26:8
ನಿಸ್ಸಂಶಯವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರ ಪೈಕಿ ಅಧಿಕ ಮಂದಿ ಸತ್ಯವಿಶ್ವಾಸಿಗಳಲ್ಲ.
ﮖﮗﮘﮙﮚﮛ
26:9
ನಿಸ್ಸಂದೇಹವಾಗಿಯು ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
ﮜﮝﮞﮟﮠﮡﮢﮣﮤ
26:10
ಸಂದೇಶವಾಹಕರೇ ನಿಮ್ಮ ಪ್ರಭುವು ಮೂಸಾರವರನ್ನು ಕರೆದು ನೀನು ಅಕ್ರಮಿ ಜನಾಂಗದೆಡೆಗೆ ಹೋಗು ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
ﮥﮦﮧﮨﮩﮪ
26:11
ಫಿರ್‌ಔನನ ಜನಾಂಗದೆಡೆಗೆ. ಅವರು ಭಯಭಕ್ತಿ ತೋರುವುದಿಲ್ಲವೇ?
ﮫﮬﮭﮮﮯﮰﮱ
26:12
ಮೂಸಾ ಹೇಳಿದರು: ನನ್ನ ಪ್ರಭುವೇ, ನನ್ನನ್ನು ಅವರು ಸುಳ್ಳಾಗಿಸಬಹುದೆಂಬ ಭಯ ನನಗಿದೆ.
ﯓﯔﯕﯖﯗﯘﯙﯚﯛ
26:13
ನನ್ನ ಹೃದಯವು ಸಂಕುಚಿತಗೊಳ್ಳುತ್ತಿದೆ. ಮತ್ತು ನನ್ನ ನಾಲಗೆಯು ಚಲಿಸುತ್ತಿಲ್ಲ. ಆದ್ದರಿಂದ ನೀನು ಹಾರೂನನೆಡೆಗೂ ಸಂದೇಶವನ್ನು ಕಳುಹಿಸು.
ﯜﯝﯞﯟﯠﯡﯢ
26:14
ಮತ್ತು ಅವರ ಬಳಿ ನನ್ನ ಮೇಲಿನ ಒಂದು ಅಪರಾಧವೂ ಇದೆ. ಹಾಗಾಗಿ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತಿರುವೆನು.
ﯣﯤﯥﯦﯧﯨﯩﯪﯫﯬ
26:15
ಅಲ್ಲಾಹನು ಹೇಳಿದನು: ಖಂಡಿತ ಹಾಗಾಗದು. ನೀವಿಬ್ಬರು ನಮ್ಮ ದೃಷ್ಟಾಂತಗಳೊAದಿಗೆ ಹೋಗಿರಿ ನಾವು ನಿಮ್ಮ ಜೊತೆಯಲ್ಲಿದ್ದು ಚೆನ್ನಾಗಿ ಆಲಿಸುವವರಾಗಿದ್ದೇವೆ.
ﯭﯮﯯﯰﯱﯲﯳﯴ
26:16
ನೀವಿಬ್ಬರೂ ಫೀರ್‌ಔನನ ಬಳಿಗೆ ಹೋಗಿ ಹೇಳಿರಿ: ನಿಸ್ಸಂದೇಹವಾಗಿಯು ನಾವು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕರಾಗಿದ್ದೇವೆ.
ﯵﯶﯷﯸﯹﯺ
26:17
ನೀನು ನಮ್ಮೊಂದಿಗೆ ಇಸ್ರಾಯೀಲ್ ಸಂತತಿಗಳನ್ನು ಕಳುಹಿಸಿಕೊಡು.
ﯻﯼﯽﯾﯿﰀﰁﰂﰃﰄﰅ
26:18
ಫಿರ್‌ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು ನಮ್ಮೊಡನೆ ನೀನು ನಿನ್ನ ಜೀವನದ ಎಷ್ಟೋ ವರ್ಷಗಳನ್ನು ಕಳೆದಿರಲಿಲ್ಲವೆ?
ﰆﰇﰈﰉﰊﰋﰌﰍ
26:19
ನೀನು ಮಾಡುವುದನ್ನು ಮಾಡಿರುವೆ ಮತ್ತು ನೀನು ಕೃತಘ್ನರಲ್ಲಾಗಿರುವೆ.
ﭑﭒﭓﭔﭕﭖﭗ
26:20
ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.
ﭘﭙﭚﭛﭜﭝﭞﭟﭠﭡﭢﭣ
26:21
ಬಳಿಕ ನಾನು ನಿಮ್ಮನ್ನು ಭಯಪಟ್ಟು ನಿಮ್ಮಿಂದ ಓಡಿ ಹೋದೆನು. ಆಗ ನನ್ನ ಪ್ರಭುವು ನನಗೆ ಸುಜ್ಞಾನವನ್ನು ನೀಡಿದನು. ಮತ್ತು ನನ್ನನ್ನು ಅವನ ಸಂದೇಶವಾಹಕರಲ್ಲಿ ಸೇರಿಸಿದನು.
ﭤﭥﭦﭧﭨﭩﭪﭫﭬ
26:22
ಇಸ್ರಾಯೀಲ್ ಸಂತತಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೇ ನೀನು ನನ್ನ ಮೇಲೆ ಮಾಡಿದ ಉಪಕಾರವೇ?
ﭭﭮﭯﭰﭱﭲ
26:23
ಫಿರ್‌ಔನ್ ಹೇಳಿದನು “ಸರ್ವಲೋಕಗಳ ಪ್ರಭು ಎಂದರೇನು?”
ﭳﭴﭵﭶﭷﭸﭹﭺﭻﭼﭽ
26:24
ಮೂಸಾ ಹೇಳಿದರು: ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವೆ ಇರುವ ಸಕಲ ವಸ್ತುಗಳ ಪ್ರಭುವಾಗಿದ್ದಾನೆ. ನೀವು ದೃಢವಿಶ್ವಾಸಿಗಳಾಗಿದ್ದರೆ.
ﭾﭿﮀﮁﮂﮃ
26:25
ಫಿರ್‌ಔನನು ತನ್ನ ಸುತ್ತಮುತ್ತ ಇದ್ದವರಿಗೆ ಹೇಳಿದನು: ನೀವು ಕೇಳಿಸಿಕೊಳ್ಳುತ್ತಿಲ್ಲವೇ?
ﮄﮅﮆﮇﮈﮉ
26:26
ಮೂಸ ಹೇಳಿದರು: ಅವನು ನಿಮ್ಮ ಪ್ರಭುವೂ ಮತ್ತು ನಿಮ್ಮ ಪೂರ್ವಿಕರಾದಂತಹ ನಿಮ್ಮ ತಾತ ಮುತ್ತಾತಂದಿರ ಪ್ರಭುವೂ ಆಗಿದ್ದಾನೆ.
ﮊﮋﮌﮍﮎﮏﮐﮑ
26:27
ಫಿರ್‌ಔನನು ಹೇಳಿದನು: ನಿಮ್ಮೆಡೆಗೆ ಕಳುಹಿಸಲಾದ ಈ ನಿಮ್ಮ ಸಂದೇಶವಾಹಕನು ನಿಜವಾಗಿಯೂ ಹುಚ್ಚನಾಗಿದ್ದಾನೆ.
ﮒﮓﮔﮕﮖﮗﮘﮙﮚﮛﮜ
26:28
ಮೂಸಾ ಹೇಳಿದರು: ಅವನೇ ಪೂರ್ವ, ಪಶ್ಚಿಮ ಹಾಗೂ ಅವೆರಡರ ನಡುವೆಯಿರುವ ಎಲ್ಲದರ ಪ್ರಭುವಾಗಿದ್ದಾನೆ. ನೀವು ಯೋಚಿಸುವವರಾಗಿದ್ದರೆ.
ﮝﮞﮟﮠﮡﮢﮣﮤﮥ
26:29
ಫಿರ್‌ಔನ್ ಹೇಳಿದನು: ಕೇಳು, ನೀನು ನನ್ನನ್ನು ಬಿಟ್ಟು ಬೇರೆ ಆರಾಧ್ಯನನ್ನು ಮಾಡಿಕೊಂಡಲ್ಲಿ ಖಂಡಿತವಾಗಿಯು ನಾನು ನಿನ್ನನ್ನು ಕಾರಾಗೃಹ ವಾಸಿಗಳಲ್ಲಿ ಹಾಕಿ ಬಿಡುವೆನು.
ﮦﮧﮨﮩﮪﮫ
26:30
ಮೂಸಾ ಹೇಳಿದರು: ಒಂದು ವೇಳೆ ನಾನು ನಿನ್ನಲ್ಲಿಗೆ ಒಂದು ಸ್ಪಷ್ಟವಾದ ಪುರಾವೆಯನ್ನು ತಂದರೂ?
ﮬﮭﮮﮯﮰﮱﯓﯔ
26:31
ಫಿರ್‌ಔನನು ಹೇಳಿದನು: ನೀನು ಸತ್ಯವಂತರಲ್ಲಾಗಿದ್ದರೆ ಅದನ್ನು ಮುಂದೆ ತಾ.
ﯕﯖﯗﯘﯙﯚﯛ
26:32
ಮೂಸ ತನ್ನ ಲಾಠಿಯನ್ನು ಹಾಕಿದಾಗ ಅದು ಹಠಾತ್ತನೆ ಪ್ರತ್ಯಕ್ಷ ಹೆಬ್ಬಾವಾಗಿಬಿಟ್ಟಿತು.
ﯜﯝﯞﯟﯠﯡﯢ
26:33
ಮತ್ತು ಅವರು ತಮ್ಮ ಕೈಯನ್ನು ಪಾರ್ಶ್ವದಿಂದ ಹೊರಗೆಳೆದಾಗ. ಹಠಾತ್ತನೆ ಅದು ವೀಕ್ಷಕರ ಮುಂದೆ ಪ್ರಜ್ವಲಿಸತೊಡಿಗತು.
ﯣﯤﯥﯦﯧﯨﯩﯪ
26:34
ಫಿರ್‌ಔನ್ ತನ್ನ ಬಳಿಯಿದ್ದ ಸರದಾರರಿಗೆ ಹೇಳಿದನು: ನಿಶ್ಚಯವಾಗಿ ಇವನು ನುರಿತ ಜಾದುಗಾರನಾಗಿದ್ದಾನೆ.
ﯫﯬﯭﯮﯯﯰﯱﯲﯳ
26:35
ಇವನು ತನ್ನ ಜಾದುವಿನ ಶಕ್ತಿಯಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದು ಬಯಸುತ್ತಿದ್ದಾನೆ. ಇನ್ನು ನೀವು ಏನು ಸಲಹೆ ನೀಡುವಿರಿ?
ﯴﯵﯶﯷﯸﯹﯺﯻ
26:36
ಅವರು ಹೇಳಿದರು: ನೀವು ಅವನಿಗೂ, ಅವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಎಲ್ಲಾ ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿರಿ.
ﯼﯽﯾﯿﰀ
26:37
ಅವರು ನಿನ್ನೆಡೆಗೆ ಪ್ರತಿಯೊಬ್ಬ ನುರಿತ ಜಾದುಗಾರನನ್ನು ಕರೆತರಲಿ.
ﰁﰂﰃﰄﰅﰆ
26:38
ಅನಂತರ ಜಾದುಗಾರರೆಲ್ಲ ಒಂದು ನಿಗದಿತ ವೇಳೆಗೆ ಒಟ್ಟುಗೂಡಿಸಲ್ಪಟ್ಟರು.
ﰇﰈﰉﰊﰋﰌ
26:39
ಮತ್ತು ಸಾರ್ವಜನಿಕರೊಂದಿಗೂ ಹೇಳಲಾಯಿತು: ನೀವೂ ಸಮಾವೇಶದಲ್ಲಿ ಹಾಜರಾಗುವಿರಾ?
ﭑﭒﭓﭔﭕﭖﭗﭘ
26:40
ಇಂದು ಜಾದುಗಾರರು ಮೇಲುಗೈ ಸಾಧಿಸಿದರೆ, ನಾವು ಅವರನ್ನೇ ಅನುಸರಿಸಲೆಂದಾಗಿದೆ.
ﭙﭚﭛﭜﭝﭞﭟﭠﭡﭢﭣﭤﭥ
26:41
ಜಾದುಗಾರರು ಬಂದು ಫಿರ್‌ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ?
ﭦﭧﭨﭩﭪﭫﭬ
26:42
ಫಿರ್‌ಔನನು ಉತ್ತರಿಸಿದನು: ಹೌದು ಆಗ ನೀವು ನನ್ನ ಆಪ್ತರಲ್ಲಿ ಸೇರಿಬಿಡುವಿರಿ.
ﭭﭮﭯﭰﭱﭲﭳﭴ
26:43
ಮೂಸಾ(ಅ) ಅವರೊಡನೆ ಹೇಳಿದರು: ನೀವೇನನ್ನು ಹಾಕುವವರಿದ್ದೀರೋ ಅದನ್ನು ಹಾಕಿಬಿಡಿರಿ.
ﭵﭶﭷﭸﭹﭺﭻﭼﭽﭾ
26:44
ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್‌ಔನನ ಪ್ರತಾಪದಾಣೆ! ಖಂಡಿತ ನಾವು ಮೇಲುಗೈ ಸಾಧಿಸಲಿದ್ದೇವೆ.
ﭿﮀﮁﮂﮃﮄﮅﮆﮇ
26:45
ಆಗ ಮೂಸಾ ಸಹ ತನ್ನ ಲಾಠಿಯನ್ನು ಹಾಕಿದರು. ಆಗಲೇ ಅದು (ಹೆಬ್ಬಾವಾಗಿ) ಅವರು ಸೃಷ್ಟಿಸಿದ ಮಿಥ್ಯಗಳನ್ನೆಲ್ಲಾ ನುಂಗಿಹಾಕಿತು.
ﮈﮉﮊﮋ
26:46
ಕೂಡಲೇ ಜಾದುಗಾರರೆಲ್ಲರೂ ಸಾಷ್ಟಾಂಗವೆರಗಿದರು.
ﮌﮍﮎﮏﮐ
26:47
ಅವರು ಹೇಳಿದರು: ನಾವು ಸರ್ವಲೋಕಗಳ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
ﮑﮒﮓﮔ
26:48
ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ.
ﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬ
26:49
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನನ್ನು ನಂಬಿ ಬಿಟ್ಟಿರಾ? ನಿಜವಾಗಿಯು ಅವನೇ ನಿಮ್ಮೆಲ್ಲರಿಗೂ ಜಾದುವನ್ನು ಕಲಿಸಿಕೊಟ್ಟಂತಹ ನಿಮ್ಮ ಗುರು ಆಗಿದ್ದಾನೆ. ಇನ್ನು ಸದ್ಯದಲ್ಲೇ ಅರಿತುಕೊಳ್ಳಲಿದ್ದೀರಿ. ನಾನು ಖಂಡಿತ ನಿಮ್ಮ ಕೈ, ಕಾಲುಗಳನ್ನು ಒಂದಕ್ಕೊAದು ವಿರುದ್ಧ ದಿಕ್ಕಿನಲ್ಲಿ ಕತ್ತರಿಸಿ ಹಾಕುವೆನು ಮತ್ತು ಖಂಡಿತ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.
ﮭﮮﮯﮰﮱﯓﯔﯕﯖ
26:50
ಅವರು ಹೇಳಿದರು: ತೊಂದರೆಯಿಲ್ಲ. ನಾವು ನಮ್ಮ ಪ್ರಭುವಿನೆಡೆಗೆ ಮರಳಿಹೋಗುವವರೇ ಆಗಿದ್ದೇವೆ.
ﯗﯘﯙﯚﯛﯜﯝﯞﯟﯠﯡﯢ
26:51
ನಾವು ಸತ್ಯವಿಶ್ವಾಸಿಗಳಲ್ಲಿ ಮೊದಲಿಗರಾಗಿದ್ದೆವೆಂಬ ಕಾರಣಕ್ಕೆ ನಮ್ಮ ಪ್ರಭುವು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನೆಂದು ನಾವು ತೀವ್ರ ಆಕಾಂಕ್ಷೆಯನ್ನಿರಿಸಿದ್ದೇವೆ.
ﯣﯤﯥﯦﯧﯨﯩﯪﯫﯬ
26:52
ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ ರಾತ್ರಿ ಹೊರಡಿರಿ. ಖಂಡಿತ ನೀವು ಬೆನ್ನಟ್ಟಲ್ಪಡುವಿರಿ.
ﯭﯮﯯﯰﯱﯲ
26:53
ಫಿರ್‌ಔನನು ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿದನು.
ﯳﯴﯵﯶﯷ
26:54
ನಿಶ್ಚಯವಾಗಿಯು ಈ ಗುಂಪು ಅತ್ಯಲ್ಪ ಸಂಖ್ಯೆಯದ್ದಾಗಿದೆ.
ﯸﯹﯺﯻ
26:55
ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
ﯼﯽﯾﯿ
26:56
ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
ﰀﰁﰂﰃﰄ
26:57
ಕೊನೆಗೆ ನಾವು ಅವರನ್ನು ತೋಟಗಳಿಂದಲೂ, ಚಿಲುಮೆಗಳಿಂದಲೂ ಹೊರಕ್ಕಟ್ಟಿದೆವು.
ﰅﰆﰇﰈ
26:58
ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು.
ﰉﰊﰋﰌﰍﰎ
26:59
ಹೀಗೇ ಆಯಿತು ಮತ್ತು ನಾವು ಅವುಗಳಿಗೆ ಇಸ್ರಾಯೀಲ್ ಸಂತತಿಗಳನ್ನು ವಾರೀಸುದಾರರನ್ನಾಗಿ ಮಾಡಿದೆವು.
ﰏﰐﰑ
26:60
ಕೊನೆಗೆ ಫಿರ್‌ಔನಿಯರು ಸೂರ್ಯೋದಯದ ಹೊತ್ತಿನಲ್ಲೇ ಅವರನ್ನು ಬೆಂಬತ್ತಿ ಹೋದರು.
ﭑﭒﭓﭔﭕﭖﭗﭘﭙ
26:61
ಹಾಗೆಯೇ ಉಭಯ ತಂಡಗಳು ಪರಸ್ಪರರನ್ನು ನೋಡಿದಾಗ ಮೂಸಾರವರ ಸಂಗಡಿಗರು: ನಿಶ್ಚಯವಾಗಿಯು ನಾವಂತು ಸಿಕ್ಕಿಬಿದ್ದೆವು ಎಂದು ಹೇಳಿದರು.
ﭚﭛﭜﭝﭞﭟﭠﭡ
26:62
ಮೂಸಾ ಹೇಳಿದರು: ಖಂಡಿತ ಇಲ್ಲ! ನನ್ನ ಜೊತೆ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರಿಸಲಿರುವನು.
ﭢﭣﭤﭥﭦﭧﭨﭩﭪﭫﭬﭭﭮﭯﭰ
26:63
ನಾವು ಮೂಸಾರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನಿಮ್ಮ ಲಾಠಿಯನ್ನು ಸಮುದ್ರಕ್ಕೆ ಹೊಡೆಯಿರಿ. ಆಗಲೇ ಅದು ಇಬ್ಭಾಗವಾಯಿತು ಮತ್ತು ಪ್ರತಿಯೊಂದು ಭಾಗವು ಮಹಾ ಪರ್ವತದಂತಾಗಿಬಿಟ್ಟಿತು.
ﭱﭲﭳﭴ
26:64
ಮತ್ತು ನಾವು ಅಲ್ಲಿ ಇತರರನ್ನು ಸಮೀಪಗೊಳಿಸಿದೆವು.
ﭵﭶﭷﭸﭹﭺ
26:65
ಮತ್ತು ನಾವು ಮೂಸಾ ಮತ್ತು ಅವರ ಜೊತೆಯಿದ್ದವರನ್ನು ರಕ್ಷಿಸಿದೆವು.
ﭻﭼﭽﭾ
26:66
ಅನಂತರ ನಾವು ಇತರರನ್ನು ಮುಳುಗಿಸಿಬಿಟ್ಟೆವು.
ﭿﮀﮁﮂﮃﮄﮅﮆﮇﮈ
26:67
ನಿಶ್ಚಯವಾಗಿಯು ಇದರಲ್ಲಿ ಮಹಾ ನಿದರ್ಶನವಿದೆ ಮತ್ತು ಅವರ ಪೈಕಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
ﮉﮊﮋﮌﮍﮎ
26:68
ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಪ್ರಚಂಡನು, ಕರುಣಾನಿಧಿಯು ಆಗಿರುವನು.
ﮏﮐﮑﮒﮓ
26:69
ಅವರಿಗೆ ಇಬ್ರಾಹೀಮರ ವೃತ್ತಾಂತವನ್ನು ತಿಳಿಸಿಕೊಡಿ.
ﮔﮕﮖﮗﮘﮙﮚ
26:70
ಅವರು ತನ್ನ ತಂದೆ ಮತ್ತು ತಮ್ಮ ಜನಾಂಗದೊಡನೆ “ನೀವು ಯಾರನ್ನು ಆರಾಧಿಸುತ್ತಿರುವಿರಿ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
ﮛﮜﮝﮞﮟﮠﮡ
26:71
ಅವರು ಉತ್ತಿರಿಸಿದರು: ನಾವು ವಿಗ್ರಹಗಳನ್ನು ಆರಾಧಿಸುತ್ತೇವೆ. ಮತ್ತು ಅವುಗಳ ಉಪಾಸನೆಯಲ್ಲೇ ಕುಳಿತಿರುತ್ತೇವೆ.
ﮢﮣﮤﮥﮦﮧ
26:72
ಆಗ ಇಬ್ರಾಹೀಮರು ಹೇಳಿದರು: ನೀವು ಕರೆದು ಬೇಡುವಾಗ ಅವು ಕೇಳಿಸಿಕೊಳ್ಳುತ್ತವೆಯೇ?
ﮨﮩﮪﮫﮬ
26:73
ಆಗ ಇಬ್ರಾಹೀಮರು ಹೇಳಿದರು: ನೀವು ಕರೆದು ಬೇಡುವಾಗ ಅವು ಕೇಳಿಸಿಕೊಳ್ಳುತ್ತವೆಯೇ?
ﮭﮮﮯﮰﮱﯓﯔ
26:74
ಅವರು ಉತ್ತರಿಸಿದರು: (ಇಲ್ಲ) ಆದರೆ ನಾವು ನಮ್ಮ ತಂದೆ ತಾತಂದಿರನ್ನು ಹೀಗೇ ಮಾಡುತ್ತಿರುವುದಾಗಿ ಕಂಡಿರುತ್ತೇವೆ.
ﯕﯖﯗﯘﯙﯚ
26:75
75&76
ﯛﯜﯝﯞ
26:76
ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?
ﯟﯠﯡﯢﯣﯤﯥ
26:77
ನಿಶ್ಚಯವಾಗಿಯು ಅವೆಲ್ಲವೂ (ಆ ಮಿಥ್ಯದೇವರುಗಳು) ನನ್ನ ಶತ್ರುಗಳು. ಸರ್ವಲೋಕಗಳ ನೈಜ ಪ್ರಭುವಾದ ಅಲ್ಲಾಹನ ಹೊರತು.
ﯦﯧﯨﯩﯪ
26:78
ಅವನು ನನ್ನನ್ನು ಸೃಷ್ಟಿಸಿದವನು ಮತ್ತು ಅವನೇ ನನ್ನ ಮಾರ್ಗದರ್ಶನ ಮಾಡುತ್ತಾನೆ.
ﯫﯬﯭﯮﯯ
26:79
ಅವನೇ ನನಗೆ ತಿನಿಸುವವನು, ಕುಡಿಸುವವನು.
ﯰﯱﯲﯳﯴ
26:80
ಮತ್ತು ನಾನು ರೋಗಗ್ರಸ್ಥನಾದಾಗ ಅವನೇ ನನ್ನನ್ನು ಗುಣಪಡಿಸುತ್ತಾನೆ.
ﯵﯶﯷﯸﯹ
26:81
ಮತ್ತು ನನ್ನನ್ನು ಮರಣಗೊಳಿಸುವನು. ಅನಂತರ ನನಗೆ ಪುನಃ ಜೀವ ನೀಡುವನು.
ﯺﯻﯼﯽﯾﯿﰀﰁﰂ
26:82
ಮತ್ತು ಪ್ರತಿಫಲ ನೀಡುವ ದಿನ ಅವನು ನನ್ನ ಪಾಪಗಳನ್ನು ಕ್ಷಮಿಸುವವನೆಂದು ನಾನು ನಿರೀಕ್ಷಿಸಿದ್ದೇನೆ.
ﰃﰄﰅﰆﰇﰈﰉ
26:83
ನನ್ನ ಪ್ರಭುವೇ, ನನಗೆ ಸುಜ್ಞಾನವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
ﭑﭒﭓﭔﭕﭖﭗ
26:84
ಮತ್ತು ಮುಂದಿನ ಪೀಳಿಗೆಗಳಲ್ಲೂ ನನ್ನ ಸತ್ಕೀರ್ತಿಯನ್ನು ಉಳಿಸಿಬಿಡು.
ﭘﭙﭚﭛﭜﭝ
26:85
ನೀನು ನನ್ನನ್ನು ಅನುಗ್ರಹಪೂರ್ಣ ಸ್ವರ್ಗದ ವಾರೀಸುದಾರರಲ್ಲಿ ಸೇರಿಸು.
ﭞﭟﭠﭡﭢﭣﭤ
26:86
ನೀನು ನನ್ನ ತಂದೆಯನ್ನು ಕ್ಷಮಿಸು. ನಿಜವಾಗಿಯೂ ಅವನು ಮಾರ್ಗ ಭ್ರಷ್ಟರಲ್ಲಾಗಿದ್ದನು.
ﭥﭦﭧﭨﭩ
26:87
ಜನರನ್ನು ಪುನರುತ್ಥಾನಗೊಳಿಸುವ ದಿನ ನೀನು ನನ್ನನ್ನು ಅಪಮಾನಿಸದಿರು.
ﭪﭫﭬﭭﭮﭯﭰ
26:88
ಅಂದು ಸಂಪತ್ತಾಗಲೀ, ಸಂತತಿಗಳಾಗಲೀ ಪ್ರಯೋಜನಕ್ಕೆ ಬಾರದು.
ﭱﭲﭳﭴﭵﭶﭷ
26:89
ಆದರೆ ಅಲ್ಲಾಹನ ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬರುವವನ ಹೊರತು.
ﭸﭹﭺﭻ
26:90
ಭಯಭಕ್ತಿಯುಳ್ಳವರಿಗಾಗಿ ಸ್ವರ್ಗವನ್ನು ಸಮೀಪ ತರಲಾಗುವುದು.
ﭼﭽﭾﭿ
26:91
ಮಾರ್ಗಭ್ರಷ್ಟರಿಗೆ ನರಕವನ್ನು ಪ್ರಕಟಗೊಳಿಸಲಾಗವುದು.
ﮀﮁﮂﮃﮄﮅﮆ
26:92
ಮತ್ತು ಅವರೊಂದಿಗೆ ಕೇಳಲಾಗುವುದು: ನೀವು ಆರಾಧಿಸುತ್ತಿದ್ದವುಗಳೆಲ್ಲಾ ಎಲ್ಲಿವೆ?
ﮇﮈﮉﮊﮋﮌﮍﮎ
26:93
ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ ಸಹಾಯವನ್ನು ಮಾಡಿಕೊಳ್ಳಬಲ್ಲರೇ?
ﮏﮐﮑﮒﮓ
26:94
ಆಗ ಅವರೂ, ಸಕಲ ಮಾರ್ಗಭ್ರಷ್ಟರು ನರಕದಲ್ಲಿ ಅಧೋಮುಖಿಗಳಾಗಿ ಎಸೆಯಲಾಗುವರು.
ﮔﮕﮖﮗ
26:95
ಮತ್ತು ಇಬ್‌ಲೀಸನ ಸಕಲ ಸೈನ್ಯವೂ ಸಹ.
ﮘﮙﮚﮛﮜ
26:96
ಅಲ್ಲಿ ಅವರು ಪರಸ್ಪರ ಜಗಳವಾಡುತ್ತಾ ಹೇಳುವರು.
ﮝﮞﮟﮠﮡﮢﮣ
26:97
97&98
ﮤﮥﮦﮧﮨ
26:98
ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ ದ್ದೆವು.
ﮩﮪﮫﮬﮭ
26:99
ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.
ﮮﮯﮰﮱﯓ
26:100
ಈಗ ನಮ್ಮ ಶಿಫಾರಸ್ಸುದಾರರು ಯಾರೂ ಇಲ್ಲ.
ﯔﯕﯖﯗ
26:101
ಮತ್ತು ಅನುಕಂಪವಿರುವ ಮಿತ್ರರೂ ಇಲ್ಲ.
ﯘﯙﯚﯛﯜﯝﯞﯟ
26:102
ಇನ್ನೂ ನಮಗೇನಾದರು ಒಮ್ಮೆ ಮರಳುವ ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಾಗುತ್ತಿದ್ದೆವು.
ﯠﯡﯢﯣﯤﯥﯦﯧﯨﯩ
26:103
ನಿಜವಾಗಿಯೂ ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸ ಸ್ವೀಕರಿಸುವವರಲ್ಲ.
ﯪﯫﯬﯭﯮﯯ
26:104
ನಿಜವಾಗಿಯೂ ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
ﯰﯱﯲﯳﯴ
26:105
ನೂಹರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
ﯵﯶﯷﯸﯹﯺﯻﯼ
26:106
ಅವರ ಸಹೋದರ ನೂಹ್‌ರವರು “ನೀವು ಅಲ್ಲಾಹನನ್ನು ಭಯಪಡುವು ದಿಲ್ಲವೇ” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
ﯽﯾﯿﰀﰁ
26:107
ನಿಜವಾಗಿಯು ನಾನು ನಿಮ್ಮೆಡೆಗೆ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ.
ﰂﰃﰄﰅ
26:108
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ﰆﰇﰈﰉﰊﰋﰌﰍﰎﰏﰐﰑﰒ
26:109
ಈ ಕಾರ್ಯಕ್ಕಾಗಿ ನಾನು ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿಯಿದೆ.
ﰓﰔﰕﰖ
26:110
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
ﰗﰘﰙﰚﰛﰜﰝ
26:111
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
ﭑﭒﭓﭔﭕﭖﭗ
26:112
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
ﭘﭙﭚﭛﭜﭝﭞﭟﭠ
26:113
ಅವರ ಲೆಕ್ಕವಿಚಾರಣೆಯಂತು ನನ್ನ ಪ್ರಭುವಿನ ಹೊಣೆಯಲ್ಲಿದೆ. ನಿಮಗೆ ತಿಳಿದಿರುತ್ತಿದ್ದರೆ!
ﭡﭢﭣﭤﭥ
26:114
ಸತ್ಯವಿಶ್ವಾಸಿಗಳನ್ನು ನಾನು ಅಟ್ಟಿ ಓಡಿಸುವವನಲ್ಲ.
ﭦﭧﭨﭩﭪﭫ
26:115
ನಾನಂತು ಸುಸ್ಪಷ್ಟವಾಗಿ ಒಬ್ಬ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
ﭬﭭﭮﭯﭰﭱﭲﭳﭴ
26:116
ಅವರು ಹೇಳಿದರು: ಓ ನೂಹ್! ನೀನಿದನ್ನು ತೊರೆಯದಿದ್ದರೆ ಖಂಡಿತವಾಗಿಯು ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು.
ﭵﭶﭷﭸﭹﭺ
26:117
ನೂಹ್‌ರವರು ಪ್ರಾರ್ಥಿಸಿದರು: ನನ್ನ ಪ್ರಭುವೇ, ನನ್ನ ಜನರು ನನ್ನನ್ನು ಸುಳ್ಳಾಗಿಸಿಬಿಟ್ಟರು.
ﭻﭼﭽﭾﭿﮀﮁﮂﮃﮄ
26:118
ಆದ್ದದರಿಂದ ನೀನು ನನ್ನ ಮತ್ತು ಅವರ ನಡುವೆ ನಿರ್ಣಾಯಕ ತೀರ್ಮಾನವನ್ನು ಮಾಡಿಬಿಡು ಮತ್ತು ನನ್ನನ್ನೂ, ನನ್ನ ಸತ್ಯವಿಶ್ವಾಸಿ ಸಂಗಡಿಗರನ್ನೂ ರಕ್ಷಿಸು.
ﮅﮆﮇﮈﮉﮊﮋ
26:119
ಕೊನೆಗೆ ನಾವು ಅವರನ್ನೂ,ಮತ್ತು ತುಂಬಿದ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿದೆವು.
ﮌﮍﮎﮏﮐ
26:120
ತರುವಾಯ ಉಳಿದವರನ್ನು ನಾವು ಮುಳುಗಿಸಿಬಿಟ್ಟೆವು.
ﮑﮒﮓﮔﮕﮖﮗﮘﮙﮚ
26:121
ನಿಶ್ಚಯವಾಗಿಯು ಇದರಲ್ಲಿ ಮಹಾ ನಿದರ್ಶನವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸ ಸ್ವೀಕರಿಸುವವರಾಗಿರಲಿಲ್ಲ.
ﮛﮜﮝﮞﮟﮠ
26:122
ನಿಸ್ಸಂದೇಹವಾಗಿಯು ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
ﮡﮢﮣﮤ
26:123
ಆದ್ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
ﮥﮦﮧﮨﮩﮪﮫﮬ
26:124
ಅವರ ಸಹೋದರ ಹೂದ್‌ರವರು “ನೀವು (ಅಲ್ಲಾಹನನ್ನು) ಭಯ ಪಡುವುದಿಲ್ಲವೇ?” ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
ﮭﮮﮯﮰﮱ
26:125
ನಾನು ನಿಮ್ಮ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ.
ﯓﯔﯕﯖ
26:126
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ﯗﯘﯙﯚﯛﯜﯝﯞﯟﯠﯡﯢﯣ
26:127
ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿ ಇದೆ.
ﯤﯥﯦﯧﯨﯩ
26:128
ನೀವು ಪ್ರತಿಯೊಂದು ಎತ್ತರ ಪ್ರದೇಶದಲ್ಲಿ ವ್ಯರ್ಥವಾಗಿ ಸ್ಮಾರಕವನ್ನು ನಿರ್ಮಿಸುತ್ತಿದ್ದೀರಾ?
ﯪﯫﯬﯭﯮ
26:129
ನೀವು ಇಲ್ಲೇ ಶಾಶ್ವತರಾಗಿರುವಿರೇನೋ ಎಂಬAತೆ ಬೃಹತ್ ಸೌಧಗಳನ್ನು ನಿರ್ಮಿಸುತ್ತಿರುವಿರಿ.
ﯯﯰﯱﯲﯳ
26:130
ನೀವು ಯಾರನ್ನಾದರೂ ಹಿಡಿಯುವುದಾದರೆ ಅತ್ಯಂತ ದೌರ್ಜನ್ಯದೊಂದಿಗೆ ಹಿಡಿಯುತ್ತೀರಿ.
ﯴﯵﯶﯷ
26:131
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ﯸﯹﯺﯻﯼﯽ
26:132
ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ.
ﯾﯿﰀﰁ
26:133
ಅವನು ನಿಮಗೆ ಜಾನುವಾರುಗಳ ಮತ್ತು ಸಂತಾನಗಳ ಮೂಲಕ ಸಹಾಯ ಮಾಡಿದ್ದಾನೆ.
ﰂﰃﰄ
26:134
ತೋಟಗಳ ಮತ್ತು ಚಿಲುಮೆಗಳ ಮೂಲಕ (ಸಹಾಯ ಮಾಡಿದ್ದಾನೆ)
ﰅﰆﰇﰈﰉﰊﰋ
26:135
ನನಗೆ ನಿಮ್ಮ ವಿಚಾರವಾಗಿ ಒಂದು ಮಹಾ ದಿನದ ಯಾತನೆಯ ಭಯವಿದೆ.
ﰌﰍﰎﰏﰐﰑﰒﰓﰔﰕ
26:136
ಅವರು ಹೇಳಿದರು: ನೀನು ಉಪದೇಶ ಮಾಡಿದರೂ, ಮಾಡದಿದ್ದರೂ ನಮ್ಮ ಪಾಲಿಗೆ ಅವೆರೆಡೂ ಸಮವಾಗಿದೆ.
ﭑﭒﭓﭔﭕﭖ
26:137
ಇದಂತು ಪೂರ್ವಿಕರ ಸಂಪ್ರದಾಯವಾಗಿದೆ.
ﭗﭘﭙﭚ
26:138
ನಾವು ಎಂದಿಗೂ ಯಾತನೆಗೊಳಗಾಗುವವರಲ್ಲ.
ﭛﭜﭝﭞﭟﭠﭡﭢﭣﭤﭥﭦﭧ
26:139
ಕೊನೆಗೆ ಅವರು ಅವರನ್ನು ಸುಳ್ಳಾಗಿಸಿದರು. ಆದ್ದರಿಂದ ಅವರನ್ನು ನಾವು ನಾಶಮಾಡಿ ಬಿಟ್ಟೆವು. ನಿಜವಾಗಿಯು ಇದರಲ್ಲಿ ಒಂದು ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
ﭨﭩﭪﭫﭬﭭ
26:140
ನಿಸ್ಸಂದೇಹವಾಗಿಯೂ ನಿಮ್ಮ ಪ್ರಭುವೇ ಪ್ರಚಂಡನೂ, ಕರುಣಾನಿಧಿಯೂ ಆಗಿರುತ್ತಾನೆ.
ﭮﭯﭰﭱ
26:141
ಸಮೂದ್ ಜನಾಂಗದವರೂ ಸಂದೇಶವಾಹಕರನ್ನು ಸುಳ್ಳಾಗಿಸಿದರು.
ﭲﭳﭴﭵﭶﭷﭸﭹ
26:142
ಅವರ ಸಹೋದರ ಸ್ವಾಲಿಹ್: ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
ﭺﭻﭼﭽﭾ
26:143
ನಾನು ನಿಮ್ಮೆಡೆಗೆ ಪ್ರಮಾಣಿಕ ಸಂದೇಶವಾಹಕನಾಗಿದ್ದೇನೆ.
ﭿﮀﮁﮂ
26:144
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ﮃﮄﮅﮆﮇﮈﮉﮊﮋﮌﮍﮎﮏ
26:145
ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿ ಇದೆ.
ﮐﮑﮒﮓﮔﮕ
26:146
ನೀವು ಇಲ್ಲಿರುವ ವಸ್ತುಗಳಲ್ಲೇ ನಿರ್ಭಯರಾಗಿರಲು ನಿಮ್ಮನ್ನು ಬಿಟ್ಟು ಬಿಡಲಾಗುವುದೇ?
ﮖﮗﮘﮙ
26:147
ತೋಟಗಳಲ್ಲೂ, ಚಿಲುಮೆಗಳಲ್ಲೂ.
ﮚﮛﮜﮝﮞ
26:148
ತೋಟಗಳಲ್ಲೂ, ಚಿಲುಮೆಗಳಲ್ಲೂ.
ﮟﮠﮡﮢﮣﮤ
26:149
ನೀವು ಪರ್ವತಗಳನ್ನು ಕೊರೆದು ಹೆಗ್ಗಳಿಕೆಗಾಗಿ ನಿವಾಸಗಳನ್ನು ನಿರ್ಮಿಸುತ್ತೀರಿ.
ﮥﮦﮧﮨ
26:150
ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ﮩﮪﮫﮬﮭ
26:151
ಮತ್ತು ನೀವು ಹದ್ದು ಮೀರುತ್ತಿರುವವರ ಆಜ್ಞೆಯನ್ನು ಅನುಸರಿಸಬೇಡಿರಿ.
ﮮﮯﮰﮱﯓﯔﯕ
26:152
ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುವವರು ಮತ್ತು ಸುಧಾರಣೆಯನ್ನು ಮಾಡದವರಾಗಿದ್ದಾರೆ.
ﯖﯗﯘﯙﯚﯛ
26:153
ಅವರು ಹೇಳಿದರು: ಖಂಡಿತ ನೀನು ಮಾಟÀಬಾಧಿತರಲ್ಲಾಗಿರುವೆ.
ﯜﯝﯞﯟﯠﯡﯢﯣﯤﯥﯦﯧ
26:154
ನೀನು ನಮ್ಮಂತಹ ಮನುಷ್ಯನೇ ಆಗಿರುವೆ, ನೀನು ಸತ್ಯವಂತರಲ್ಲಾಗಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಾ.
ﯨﯩﯪﯫﯬﯭﯮﯯﯰﯱ
26:155
ಸ್ವಾಲಿಹ್ ಹೇಳಿದರು: ಇದೊಂದು ಒಂಟೆ, ನೀರು ಕುಡಿಯುವ ಒಂದು ಸರದಿಯು ಇದಕ್ಕಿರುವುದು ಮತ್ತು ನೀರು ಕುಡಿಯುವ ಒಂದು ನಿಶ್ಚಿತ ದಿನದ ಸರದಿಯು ನಿಮಗಿರುವುದು.
ﯲﯳﯴﯵﯶﯷﯸﯹ
26:156
ನೀವಿದನ್ನು ಕೆಡುಕಿನಿಂದ ಮುಟ್ಟಬೇಡಿರಿ. ಇಲ್ಲವಾದರೆ ಒಂದು ಘೋರ ದಿನದ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
ﯺﯻﯼﯽ
26:157
ಕೊನೆಗೆ ಅವರು ಅದರ ಮೊಣಕಾಲಿನ ಸ್ನಾಯು ಕತ್ತರಿಸಿಬಿಟ್ಟರು. ಆಗ ಅವರು ಪಶ್ಚಾತ್ತಾಪ ಪಟ್ಟರು.
ﯾﯿﰀﰁﰂﰃﰄﰅﰆﰇﰈﰉﰊ
26:158
ಆಗ ಅವರನ್ನು ಶಿಕ್ಷೆಯು ಬಾಧಿಸಿತು. ನಿಸ್ಸಂದೇಹವಾಗಿಯು ಇದರಲ್ಲಿ ಒಂದು ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
ﰋﰌﰍﰎﰏﰐ
26:159
ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಪ್ರಚಂಡನು, ಕರುಣಾನಿಧಿಯು ಆಗಿರುತ್ತಾನೆ.
ﭑﭒﭓﭔﭕ
26:160
ಲೂತರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
ﭖﭗﭘﭙﭚﭛﭜﭝ
26:161
ಅವರೊಂದಿಗೆ ಅವರ ಸಹೋದರ ಲೂತ್: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
ﭞﭟﭠﭡﭢ
26:162
ನಿಜವಾಗಿಯು ನಾನು ನಿಮ್ಮೆಡೆಗೆ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
ﭣﭤﭥﭦ
26:163
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ﭧﭨﭩﭪﭫﭬﭭﭮﭯﭰﭱﭲﭳ
26:164
ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಕೇವಲ ಸರ್ವಲೋಕಗಳ ಪ್ರಭುವಿನ ಬಳಿಯಿದೆ.
ﭴﭵﭶﭷﭸ
26:165
ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ?
ﭹﭺﭻﭼﭽﭾﭿﮀﮁﮂﮃﮄﮅ
26:166
ಮತ್ತು ನಿಮ್ಮ ಪ್ರಭುವು ನಿಮಗಾಗಿ ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ತೊರೆದು ಬಿಡುತ್ತಿರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ.
ﮆﮇﮈﮉﮊﮋﮌﮍﮎ
26:167
ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು ಮಾಡಲ್ಪಡುವೆ.
ﮏﮐﮑﮒﮓﮔ
26:168
ಲೂತ್ ಹೇಳಿದರು: ಖಂಡಿತವಾಗಿಯು ನಾನು ನಿಮ್ಮ ಕೃತ್ಯದಿಂದ ತೀವ್ರ ಬೇಸರಗೊಂಡಿರುವೆನು.
ﮕﮖﮗﮘﮙﮚ
26:169
ನನ್ನ ಪ್ರಭುವೇ, ನನ್ನನ್ನೂ, ನನ್ನ ಕುಟುಂಬವನ್ನೂ ಅವರು ಎಸಗುತ್ತಿರುವ ಹೀನಕೃತ್ಯದಿಂದ ರಕ್ಷಿಸು
ﮛﮜﮝﮞ
26:170
ಆಗ ನಾವು ಅವನನ್ನು ಮತ್ತು ಅವನ ಕುಟುಂಬದವರೆಲ್ಲರನ್ನು ರಕ್ಷಿಸಿದೆವು.
ﮟﮠﮡﮢﮣ
26:171
ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು.
ﮤﮥﮦﮧ
26:172
ಅನಂತರ ನಾವು ಉಳಿದವರನ್ನು ನಾಶ ಮಾಡಿಬಿಟ್ಟೆವು.
ﮨﮩﮪﮫﮬﮭﮮﮯ
26:173
ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಎರಗಿದ ಆ ಮಳೆಯು ಅದೆಷ್ಟು ನಿಕೃಷ್ಟವಾದುದು.
ﮰﮱﯓﯔﯕﯖﯗﯘﯙﯚ
26:174
ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
ﯛﯜﯝﯞﯟﯠ
26:175
ವಾಸ್ತವದಲ್ಲಿ ನಿಮ್ಮ ಪ್ರಭು ಪ್ರಚಂಡನು, ಕರಣಾನಿಧಿಯು ಆಗಿದ್ದಾನೆ.
ﯡﯢﯣﯤﯥ
26:176
ಐಕಾ ನಾಡಿನವರು ಸಂದೇಶವಾಹಕರನ್ನು ಸುಳ್ಳಾಗಿಸಿದರು.
ﯦﯧﯨﯩﯪﯫﯬ
26:177
ಅವರೊಂದಿಗೆ ಶುಐಬರು: “ನೀವು ಭಯಪಡುವುದಿಲ್ಲವೆ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
ﯭﯮﯯﯰﯱ
26:178
ನಿಶ್ಚಯವಾಗಿಯು ನಾನು ನಿಮ್ಮ ಕಡೆಗೆ ಒಬ್ಬ ಪ್ರಮಾಣಿಕ ಸಂದೇಶವಾಹಕನಾಗಿದ್ದೇನೆ.
ﯲﯳﯴﯵ
26:179
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ.
ﯶﯷﯸﯹﯺﯻﯼﯽﯾﯿﰀﰁﰂ
26:180
ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿಯಿದೆ.
ﰃﰄﰅﰆﰇﰈﰉﰊ
26:181
ನೀವು ಅಳತೆಯನ್ನು ಪೂರ್ತಿಯಾಗಿ ಕೊಡಿರಿ ಮತ್ತು ಕಡಿತಗೊಳಿಸುವವರಲ್ಲಿ ನೀವಾಗಬೇಡಿರಿ.
ﰋﰌﰍﰎ
26:182
ಸಮತೋಲನವುಳ್ಳ ಸರಿಯಾದ ತಕ್ಕಡಿಯಿಂದಲೇ ನೀವು ತೂಕ ಮಾಡಿರಿ.
ﰏﰐﰑﰒﰓﰔﰕﰖﰗﰘ
26:183
ಮತ್ತು ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ನೀಡದಿರಿ. ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ನಡೆಯದಿರಿ.
ﭑﭒﭓﭔﭕﭖ
26:184
ನಿಮ್ಮನ್ನೂ, ನಿಮ್ಮ ಪೂರ್ವಜರನ್ನು ಸೃಷ್ಟಿಸಿದವನನ್ನು ನೀವು ಭಯಪಡಿರಿ.
ﭗﭘﭙﭚﭛﭜ
26:185
ಅವರು ಹೇಳಿದರು: ನೀನಂತು ಮಾಟಬಾಧಿತರಲ್ಲಿ ಸೇರಿರುವೆ.
ﭝﭞﭟﭠﭡﭢﭣﭤﭥﭦ
26:186
ಮತ್ತು ನೀನು ನಮ್ಮಂತಹ ಒಬ್ಬ ಮನುಷ್ಯನಾಗಿರುವೆ ಹಾಗೂ ನಿಶ್ಚಯವಾಗಿಯು ನಾವು ನಿನ್ನನ್ನು ಸುಳ್ಳರಲ್ಲಿ ಸೇರಿದವನೆಂದು ಭಾವಿಸುತ್ತೇವೆ.
ﭧﭨﭩﭪﭫﭬﭭﭮﭯﭰ
26:187
ಆದುದರಿಂದ ನೀನು ಸತ್ಯವಂತರಲ್ಲಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.
ﭱﭲﭳﭴﭵﭶ
26:188
ಶುಐಬ್ ಹೇಳಿದರು: ನನ್ನ ಪ್ರಭುವು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
ﭷﭸﭹﭺﭻﭼﭽﭾﭿﮀﮁﮂ
26:189
ಅವರು ಶುಐಬ್‌ರವರನ್ನು ಸುಳ್ಳಾಗಿಸಿದರು. ಆಗ ಅವರನ್ನು ಛಾಯಾವೃತ ದಿನದ ಯಾತನೆಯು ಹಿಡಿದುಬಿಟ್ಟಿತು.ಅದು ಒಂದು ಘೋರ ದಿನದ ಯಾತನೆಯಾಗಿತ್ತು.
ﮃﮄﮅﮆﮇﮈﮉﮊﮋﮌ
26:190
ನಿಜವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗಿರಲಿಲ್ಲ.
ﮍﮎﮏﮐﮑﮒ
26:191
ನಿಜವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗಿರಲಿಲ್ಲ.
ﮓﮔﮕﮖﮗ
26:192
ನಿಸ್ಸಂದೇಹವಾಗಿಯು ಇದು (ಕುರ್‌ಆನ್) ಸರ್ವಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದ್ದಾಗಿದೆ.
ﮘﮙﮚﮛﮜ
26:193
ಓರ್ವ ಪ್ರಯಾಣಿಕ (ದೇವದೂತ) ಜಿಬ್ರೀಲ್ ತಂದಿಳಿಸಿದ್ದಾರೆ.
ﮝﮞﮟﮠﮡﮢ
26:194
ಓ ಪೈಗಂಬರರೇ ನಿಮ್ಮ ಹೃದಯದಲ್ಲಿ (ಇಳಿಸಲಾಗಿರುವುದು) ನೀವು ಜನರಿಗೆ ಮುನ್ನೆಚ್ಚರಿಕೆ ಕೊಡುವವರಲ್ಲಾಗಬೇಕೆಂದು.
ﮣﮤﮥﮦ
26:195
ಸುಸ್ಪಷ್ಟ ಅರಬೀ ಭಾಷೆಯಲ್ಲಿ.
ﮧﮨﮩﮪﮫ
26:196
ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.
ﮬﮭﮮﮯﮰﮱﯓﯔﯕﯖ
26:197
ಇಸ್ರಾಯೀಲ್ ಸಂತತಿಗಳ ಧರ್ಮ ಪಂಡಿತರು ಸಹ ಇದನ್ನು ಅರಿತಿರುವುದು ಬಹದೇವಾರಾಧಕರಿಗೆ ಒಂದು ನಿದರ್ಶನವಲ್ಲವೇ?
ﯗﯘﯙﯚﯛﯜ
26:198
ನಾವೇನಾದರೂ ಇದನ್ನು ಒಬ್ಬ ಅರಬೇತರನ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ.
ﯝﯞﯟﯠﯡﯢﯣ
26:199
ಹಾಗೆಯೇ ಅವನು ಅವರ ಮುಂದೆ ಇದನ್ನು ಓದಿ ಹೇಳಿರುತ್ತಿದ್ದರೆ ಅವರು ಅದರಲ್ಲಿ ವಿಶ್ವಾಸಿವಿಡುವವರಾಗುತ್ತಿರಲಿಲ್ಲ.
ﯤﯥﯦﯧﯨﯩ
26:200
ಇದೇ ಪ್ರಕಾರ ನಾವು ಇದನ್ನು (ನಿರಾಕರಣೆಯನ್ನು) ಅಪರಾಧಿಗಳ ಹೃದಯಗಳಲ್ಲಿ ಹಾಕಿ ಬಿಟ್ಟಿರುತ್ತೇವೆ.
ﯪﯫﯬﯭﯮﯯﯰﯱ
26:201
ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೆ ಅದರಲ್ಲಿ ವಿಶ್ವಾಸವಿಡಲಾರರು.
ﯲﯳﯴﯵﯶﯷ
26:202
ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು ಸಹ ಇರಲಾರದು.
ﯸﯹﯺﯻﯼ
26:203
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
ﯽﯾﯿ
26:204
ಅವರಾಗ ಹೇಳದತೊಡಗುವರು: ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?
ﰀﰁﰂﰃﰄ
26:205
ನೀವು ನೋಡಿದಿರಾ? ನಾವು ಅವರನ್ನು ವರ್ಷಗಟ್ಟಲೇ ಸುಖ ಭೋಗ ಅನುಭವಿಸಲು ಬಿಟ್ಟರೂ..
ﰅﰆﰇﰈﰉﰊ
26:206
ಆ ಬಳಿಕ ಅವರಲ್ಲಿಗೆ ಅವರು ಎಚ್ಚರಿಕೆ ನೀಡಲಾಗುತ್ತಿದ್ದಂತಹ ಯಾತನೆಯು ಬಂದೆರಗಿದಾಗ.
ﭑﭒﭓﭔﭕﭖﭗ
26:207
ಅವರು ಏನೇ ಸುಖಭೋಗಿಸುತ್ತಿರಲಿ, ಅದಾವುದೂ ಅವರಿಗೆ ಯಾವ ಪ್ರಯೋಜನಕ್ಕೂ ಬರಲಾರದು.
ﭘﭙﭚﭛﭜﭝﭞﭟ
26:208
ನಾವು ಯಾವುದೇ ನಾಡನ್ನೂ ಅದಕ್ಕೆ ಎಚ್ಚರಿಕೆ ನೀಡುವವರಿಲ್ಲದೇ ನಾಶ ಮಾಡಿರುವುದಿಲ್ಲ.
ﭠﭡﭢﭣﭤ
26:209
ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.
ﭥﭦﭧﭨﭩ
26:210
ಈ ಕುರ್‌ಆನನ್ನು ಶೈತಾನರು ತಂದಿಳಿಸಲಿಲ್ಲ.
ﭪﭫﭬﭭﭮﭯ
26:211
ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.
ﭰﭱﭲﭳﭴ
26:212
ಖಂಡಿತವಾಗಿಯು ಅವರಂತು ಇದನ್ನು (ದೈವವಾಣಿಯನ್ನು) ಆಲಿಸುವುದರಿಂದಲೂ ತಡೆಯಲ್ಪಟ್ಟಿರುವರು.
ﭵﭶﭷﭸﭹﭺﭻﭼﭽﭾ
26:213
ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.
ﭿﮀﮁﮂ
26:214
ನಿಮ್ಮ ಅಂತ್ಯದ ನಿಕಟ ಸಂಬAಧಿಕರಿಗೆ ಎಚ್ಚರಿಕೆ ನೀಡಿರಿ.
ﮃﮄﮅﮆﮇﮈﮉ
26:215
ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.
ﮊﮋﮌﮍﮎﮏﮐﮑ
26:216
ಇನ್ನು ಅವರು ನಿಮ್ಮನ್ನು ಧಿಕ್ಕರಿಸಿದರೆ ನೀವು ಮಾಡುತ್ತಿರುವ ಕಾರ್ಯಗಳಿಂದ ನಾನು ಹೊಣೆ ಮುಕ್ತನಾಗಿದ್ದೇನೆ ಎಂದು ಹೇಳಿರಿ.
ﮒﮓﮔﮕﮖ
26:217
ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.
ﮗﮘﮙﮚﮛ
26:218
ನೀವು (ನಮಾಜ್‌ಗಾಗಿ) ನಿಲ್ಲುವಾಗ ನಿಮ್ಮನ್ನು ಅವನು ನೋಡುತ್ತಾನೆ.
ﮜﮝﮞﮟ
26:219
ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)
ﮠﮡﮢﮣﮤ
26:220
ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.
ﮥﮦﮧﮨﮩﮪﮫ
26:221
ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿ ಕೊಡಲೇ?
ﮬﮭﮮﮯﮰﮱ
26:222
ಅವರು ಪ್ರತಿಯೊಬ್ಬ ಸುಳ್ಳುಗಾರನಾದ ಪಾಪಿಯ ಮೇಲೆ ಇಳಿಯುತ್ತಾರೆ.
ﯓﯔﯕﯖﯗ
26:223
ಅವರು (ಆಕಾಶದೆಡೆಗೆ) ಕಿವಿಗೊಟ್ಟು ಕೇಳುತ್ತಾರೆ ಆದರೆ ಅವರಲ್ಲಿ ಹೆಚ್ಚಿನವರು ಸುಳ್ಳುಗಾರಾಗಿದ್ದಾರೆ.
ﯘﯙﯚﯛ
26:224
ಕವಿಗಳನ್ನು ಪಥಭ್ರಷ್ಟರು ಅನುಸರಿಸುತ್ತಾರೆ.
ﯜﯝﯞﯟﯠﯡﯢﯣ
26:225
ಅವರು ಪ್ರತಿಯೊಂದು ಕಣಿವೆಯಲ್ಲೂ ಅಲೆದಾಡುತ್ತಿರುವುದನ್ನು ನೀವು ಕಾಣುವುದಿಲ್ಲವೇ?
ﯤﯥﯦﯧﯨﯩ
26:226
ಮತ್ತು ಖಂಡಿತವಾಗಿಯೂ ಅವರು ಮಾಡದ್ದನ್ನು ಆಡುತ್ತಾರೆ.
ﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼﯽﯾ
26:227
ಆದರೆ (ಕವಿಗಳಲ್ಲಿ) ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರ ಹೊರತು, ಅವರು ಮತ್ತು ತಾವು ಅಕ್ರಮಕ್ಕೊಳಗಾದ ಬಳಿಕ ಪ್ರತಿಕಾರ ಕೈಗೊಂಡವರ ಹೊರತು. ಯಾರು ಅಕ್ರಮ ಕೈಗೊಂಡಿರುವರೋ ಅವರು ಯಾವ ಕಡೆಗೆ ಮರಳಿಸಲಾಗುತ್ತಾರೆಂಬುದನ್ನು ಸದ್ಯದಲ್ಲೇ ತಿಳಿಯುವರು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







