ಅಲ್-ಬಕರಾ · 245/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
مَّن ذَا الَّذِي يُقْرِضُ اللَّهَ قَرْضًا حَسَنًا فَيُضَاعِفَهُ لَهُ أَضْعَافًا كَثِيرَةً ۚ وَاللَّهُ يَقْبِضُ وَيَبْسُطُ وَإِلَيْهِ تُرْجَعُونَ ۝٢٤٥
Man zal lazee yuqridul laaha qardan hasanan fayudaa `ifahoo lahoo ad`aafan kaseerah; wallaahu yaqbidu wa yabsut-u wa ilaihi turja`oon
📖 ಕನ್ನಡ ಅರ್ಥ
ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವನಾರಿದ್ದಾನೆ? ಹಾಗೆಯೇ ಮಾಡುವುದಾದರೆ ಅಲ್ಲಾಹನು ಅವನಿಗೆ ಅನೇಕ ಪಟ್ಟು ಹೆಚ್ಚಿಸಿ ಕೊಡುವವನಾಗಿದ್ದಾನೆ. ಮತ್ತು ಸಂಕುಚಿತಗೊಳಿಸುವವನು ಹಾಗೂ ವೃದ್ಧಿಸುವವನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.

🎧 ಆಲಿಸಿ


📜 ಆಯತ್ 243-247 — ಸೂರಾ ಅಲ್-ಬಕರಾ

243۞ أَلَمْ تَرَ إِلَى الَّذِينَ خَرَجُوا مِن دِيَارِهِمْ وَهُمْ أُلُوفٌ حَذَرَ الْمَوْتِ فَقَالَ لَهُمُ اللَّهُ مُوتُوا ثُمَّ أَحْيَاهُمْ ۚ إِنَّ اللَّهَ لَذُو فَضْلٍ عَلَى النَّاسِ وَلَٰكِنَّ أَكْثَرَ النَّاسِ لَا يَشْكُرُونَ
ಸಾವಿರಾರು ಸಂಖ್ಯೆಯಲ್ಲಿದ್ದು ಮೃತ್ಯುಭಯದಿಂದ ತಮ್ಮ ಮನೆಗಳಿಂದ ಹೊರಟು ಹೋದವರನ್ನು ನೀವು ನೋಡಲಿಲ್ಲವೇ? ಅಲ್ಲಾಹನು ಅವರಿಗೆ ನೀವು ಮರಣ ಹೊಂದಿರಿ ಎಂದು ಹೇಳಿದನು. ಬಳಿಕ ಅವನು ಅವರನ್ನು ಜೀವಂತಗೊಳಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಜನರ ಮೇಲೆ ಮಹಾ ಅನುಗ್ರಹದಾತನಾಗಿದ್ದಾನೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
244وَقَاتِلُوا فِي سَبِيلِ اللَّهِ وَاعْلَمُوا أَنَّ اللَّهَ سَمِيعٌ عَلِيمٌ
ನೀವು ಅಲ್ಲಾಹನ ಮಾರ್ಗದಲ್ಲಿ (ದೌರ್ಜನ್ಯವೆಸಗುವವರ ಮೇಲೆ) ಯುದ್ಧ ಮಾಡಿರಿ ಮತ್ತು ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
245مَّن ذَا الَّذِي يُقْرِضُ اللَّهَ قَرْضًا حَسَنًا فَيُضَاعِفَهُ لَهُ أَضْعَافًا كَثِيرَةً ۚ وَاللَّهُ يَقْبِضُ وَيَبْسُطُ وَإِلَيْهِ تُرْجَعُونَ
ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವನಾರಿದ್ದಾನೆ? ಹಾಗೆಯೇ ಮಾಡುವುದಾದರೆ ಅಲ್ಲಾಹನು ಅವನಿಗೆ ಅನೇಕ ಪಟ್ಟು ಹೆಚ್ಚಿಸಿ ಕೊಡುವವನಾಗಿದ್ದಾನೆ. ಮತ್ತು ಸಂಕುಚಿತಗೊಳಿಸುವವನು ಹಾಗೂ ವೃದ್ಧಿಸುವವನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
246أَلَمْ تَرَ إِلَى الْمَلَإِ مِن بَنِي إِسْرَائِيلَ مِن بَعْدِ مُوسَىٰ إِذْ قَالُوا لِنَبِيٍّ لَّهُمُ ابْعَثْ لَنَا مَلِكًا نُّقَاتِلْ فِي سَبِيلِ اللَّهِ ۖ قَالَ هَلْ عَسَيْتُمْ إِن كُتِبَ عَلَيْكُمُ الْقِتَالُ أَلَّا تُقَاتِلُوا ۖ قَالُوا وَمَا لَنَا أَلَّا نُقَاتِلَ فِي سَبِيلِ اللَّهِ وَقَدْ أُخْرِجْنَا مِن دِيَارِنَا وَأَبْنَائِنَا ۖ فَلَمَّا كُتِبَ عَلَيْهِمُ الْقِتَالُ تَوَلَّوْا إِلَّا قَلِيلًا مِّنْهُمْ ۗ وَاللَّهُ عَلِيمٌ بِالظَّالِمِينَ
ಮೂಸಾರ ನಂತರ ಇಸ್ರಾಯೀಲ್ ಸಂತತಿಗಳ ಒಂದು ಸಮೂಹದೆಡೆಗೆ ನೀವು ನೋಡಿಲ್ಲವೇ? ಅವರು ತಮ್ಮ ಸಂದೇಶವಾಹಕರಿಗೆ ಹೇಳಿದರು ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿಕ್ಕಾಗಿ ನೀವು ನಮಗಾಗಿ ಒಬ್ಬ ರಾಜನನ್ನು ನಿಯೋಗಿಸಿರಿ ಎಂದು ಹೇಳಿದ ಸಂದರ್ಭ. ಸಂದೇಶವಾಹಕರು ಹೇಳಿದರು; ನಿಮ್ಮ ಮೇಲೆ ಯುದ್ಧವು ಕಡ್ಡಾಯಗೊಳಿಸಿದಾಗ ನೀವು ಯುದ್ಧ ಮಾಡದಿರಲೂ ಸಾಧ್ಯತೆಯಿದೆ ಅವರು ಹೇಳಿದರು. ನಮ್ಮನ್ನು ನಮ್ಮ ಮನೆಗಳಿಂದ ಹಾಗೂ ನಮ್ಮ ಮಕ್ಕಳಿಂದ ದೂರ ಮಾಡಲಾಗಿರುವಾಗ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ನಮಗೇನಾಗಿದೆ. ಹಾಗೆಯೇ ಅವರ ಮೇಲೆ ಯುದ್ಧವು ಕಡ್ಡಾಯಗೊಳಿಸಿದಾಗ ಅವರಲ್ಲಿ ಅತ್ಯಲ್ಪ ಮಂದಿಯನ್ನು ಬಿಟ್ಟು ಉಳಿದವರೆಲ್ಲಾ ವಿಮುಖರಾಗಿಬಿಟ್ಟರು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.
247وَقَالَ لَهُمْ نَبِيُّهُمْ إِنَّ اللَّهَ قَدْ بَعَثَ لَكُمْ طَالُوتَ مَلِكًا ۚ قَالُوا أَنَّىٰ يَكُونُ لَهُ الْمُلْكُ عَلَيْنَا وَنَحْنُ أَحَقُّ بِالْمُلْكِ مِنْهُ وَلَمْ يُؤْتَ سَعَةً مِّنَ الْمَالِ ۚ قَالَ إِنَّ اللَّهَ اصْطَفَاهُ عَلَيْكُمْ وَزَادَهُ بَسْطَةً فِي الْعِلْمِ وَالْجِسْمِ ۖ وَاللَّهُ يُؤْتِي مُلْكَهُ مَن يَشَاءُ ۚ وَاللَّهُ وَاسِعٌ عَلِيمٌ
ಅವರೊಂದಿಗೆ ಅವರ ಪೈಗಂಬರರು ಹೇಳಿದರು; ಅಲ್ಲಾಹನು ತಾಲೂತರನ್ನು ನಿಮ್ಮ ರಾಜನಾಗಿ ನೇಮಿಸಿರುವನು. ಅವರು ಹೇಳಿದರು; ನಮ್ಮ ಮೇಲೆ ಅವನಿಗೆ ಆಡಳಿತ ಸಿಗುವುದಾದರೂ ಹೇಗೆ? ಆಡಳಿತಕ್ಕೆ ಅವನಿಗಿಂತ ಹೆಚ್ಚು ಯೋಗ್ಯರು ನಾವಾಗಿದ್ದೇವೆ ಮತ್ತು ಅವನ ಬಳಿ ಸಂಪತ್ತೂ ಇಲ್ಲ. ಪೈಗಂಬರರು ಹೇಳಿದರು; ಕೇಳಿರಿ, ಅಲ್ಲಾಹನು ಅವನನ್ನೇ ನಿಮ್ಮ ಮೇಲೆ ಆಯ್ಕೆ ಮಾಡಿರುವನು ಮತ್ತು ಅವನಿಗೆ ಅಪಾರ ಜ್ಞಾನ, ದೇಹದಾರ್ಢ್ಯವನ್ನು ನೀಡಲಾಗಿದೆ. ಮತ್ತು ಅಲ್ಲಾಹನು ತನ್ನ ಅಧಿಪತ್ಯವನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಅತಿ ವಿಶಾಲನೂ ಸರ್ವಜ್ಞಾನಿಯೂ ಆಗಿದ್ದಾನೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
245ಆಯತ್

ಅನುವಾದ — ಅಲ್-ಬಕರಾ 245

ಸೂರಾ ಅಲ್-ಬಕರಾ ಆಯತ್ 245 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವನಾರಿದ್ದಾನೆ? ಹಾಗೆಯೇ ಮಾಡುವುದಾದರೆ ಅಲ್ಲಾಹನು ಅವನಿಗೆ ಅನೇಕ ಪಟ್ಟು…

ಸೂರಾ ಆಯತ್ 245/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 243–247. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers