ಆಲ್-ಇಮ್ರಾನ್ · 165/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
أَوَلَمَّا أَصَابَتْكُم مُّصِيبَةٌ قَدْ أَصَبْتُم مِّثْلَيْهَا قُلْتُمْ أَنَّىٰ هَٰذَا ۖ قُلْ هُوَ مِنْ عِندِ أَنفُسِكُمْ ۗ إِنَّ اللَّهَ عَلَىٰ كُلِّ شَيْءٍ قَدِيرٌ ۝١٦٥
Awa lammaaa asaabatkum museebatun qad asabtum mislaihaa qultum annaa haazaa qul huwa min `indi anfusikum; innal laaha `alaa kulli shai`in Qadeer
📖 ಕನ್ನಡ ಅರ್ಥ
ಉಹುದ್ ಸಮಯದಲ್ಲಿ ನಿಮಗೊಂದು ವಿಪತ್ತು ಬಾಧಿಸಿದಾಗ ನೀವು ಇದೆಲ್ಲಿಂದ ಬಂತು ಎನ್ನತೊಡಗಿದಿರಾ ? ವಸ್ತುತಃ ನಿಮ್ಮ ಕೈಗಳಿಂದ ಅವರಿಗೆ (ಖುರೈಷರಿಗೆ) ಇಮ್ಮಡಿ ವಿಪತ್ತು ಬಾಧಿಸಿತ್ತು. ಓ ಪೈಗಂಬರರೇ ಹೇಳಿರಿ; ಅದು ಸ್ವತಃ ನಿಮ್ಮ ಕಡೆಯಿಂದ ಬಂದಿರುವುದಾಗಿದೆ, ಖಂಡಿತವಾಗಿಯೂ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 163-167 — ಸೂರಾ ಆಲ್-ಇಮ್ರಾನ್

163هُمْ دَرَجَاتٌ عِندَ اللَّهِ ۗ وَاللَّهُ بَصِيرٌ بِمَا يَعْمَلُونَ
ಅಲ್ಲಾಹನ ಬಳಿ ಅವರಿಗೆ ವಿವಿಧ ಪದವಿಗಳಿವೆ ಮತ್ತು ಅಲ್ಲಾಹನು ಅವರು ಮಾಡುತ್ತಿರುವುದೆಲ್ಲವನ್ನೂ ನೋಡುತ್ತಿರುವನು.
164لَقَدْ مَنَّ اللَّهُ عَلَى الْمُؤْمِنِينَ إِذْ بَعَثَ فِيهِمْ رَسُولًا مِّنْ أَنفُسِهِمْ يَتْلُو عَلَيْهِمْ آيَاتِهِ وَيُزَكِّيهِمْ وَيُعَلِّمُهُمُ الْكِتَابَ وَالْحِكْمَةَ وَإِن كَانُوا مِن قَبْلُ لَفِي ضَلَالٍ مُّبِينٍ
ಸತ್ಯವಿಶ್ವಾಸಿಗಳಿಗೆ ಅವರಿಂದಲೇ ಆದ ಒಬ್ಬ ಸಂದೇಶವಾಹಕನನ್ನು ಅವರ ನಡುವೆ ಕಳುಹಿಸುವ ಮೂಲಕ ಖಂಡಿತವಾಗಿಯು ಅವರ ಮೇಲೆ ಅಲ್ಲಾಹನು ಮಹಾ ಉಪಕಾರ ಮಾಡಿದ್ದಾನೆ. ಅವರು ಅವರಿಗೆ ಅಲ್ಲಾಹನ ಸೂಕ್ತಿಗಳನ್ನು ಓದಿ ಕೇಳಿಸುತ್ತಾರೆ ಮತ್ತು ಅವರನ್ನು ಸಂಸ್ಕರಿಸುತ್ತಾರೆ. ಮತ್ತು ಅವರಿಗೆ ಗ್ರಂಥವನ್ನೂ, ಸುಜ್ಞಾನವನ್ನೂ ಕಲಿಸಿಕೊಡುತ್ತಾರೆ. ಖಂಡಿತವಾಗಿಯೂ ಅವರೆಲ್ಲರೂ ಇದಕ್ಕೆ ಮೊದಲು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿದ್ದರು.
165أَوَلَمَّا أَصَابَتْكُم مُّصِيبَةٌ قَدْ أَصَبْتُم مِّثْلَيْهَا قُلْتُمْ أَنَّىٰ هَٰذَا ۖ قُلْ هُوَ مِنْ عِندِ أَنفُسِكُمْ ۗ إِنَّ اللَّهَ عَلَىٰ كُلِّ شَيْءٍ قَدِيرٌ
ಉಹುದ್ ಸಮಯದಲ್ಲಿ ನಿಮಗೊಂದು ವಿಪತ್ತು ಬಾಧಿಸಿದಾಗ ನೀವು ಇದೆಲ್ಲಿಂದ ಬಂತು ಎನ್ನತೊಡಗಿದಿರಾ ? ವಸ್ತುತಃ ನಿಮ್ಮ ಕೈಗಳಿಂದ ಅವರಿಗೆ (ಖುರೈಷರಿಗೆ) ಇಮ್ಮಡಿ ವಿಪತ್ತು ಬಾಧಿಸಿತ್ತು. ಓ ಪೈಗಂಬರರೇ ಹೇಳಿರಿ; ಅದು ಸ್ವತಃ ನಿಮ್ಮ ಕಡೆಯಿಂದ ಬಂದಿರುವುದಾಗಿದೆ, ಖಂಡಿತವಾಗಿಯೂ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
166وَمَا أَصَابَكُمْ يَوْمَ الْتَقَى الْجَمْعَانِ فَبِإِذْنِ اللَّهِ وَلِيَعْلَمَ الْمُؤْمِنِينَ
ಎರಡು ಸೈನ್ಯಗಳು ಪರಸ್ಪರ ಎದುರುಗೊಂಡ ದಿನ ನಿಮಗೆ ಬಾಧಿಸಿದೆಲ್ಲವೂ ಅಲ್ಲಾಹನ ಅಪ್ಪಣೆಯಿಂದಾಗಿದೆ. ಇದೇಕೆಂದರೆ ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲೆಂದಾಗಿದೆ.
167وَلِيَعْلَمَ الَّذِينَ نَافَقُوا ۚ وَقِيلَ لَهُمْ تَعَالَوْا قَاتِلُوا فِي سَبِيلِ اللَّهِ أَوِ ادْفَعُوا ۖ قَالُوا لَوْ نَعْلَمُ قِتَالًا لَّاتَّبَعْنَاكُمْ ۗ هُمْ لِلْكُفْرِ يَوْمَئِذٍ أَقْرَبُ مِنْهُمْ لِلْإِيمَانِ ۚ يَقُولُونَ بِأَفْوَاهِهِم مَّا لَيْسَ فِي قُلُوبِهِمْ ۗ وَاللَّهُ أَعْلَمُ بِمَا يَكْتُمُونَ
ಮತ್ತು ಕಪಟವಿಶ್ವಾಸಿಗಳನ್ನು ಅರಿತುಕೊಳ್ಳಲೆಂದಾಗಿದೆ. 'ಬನ್ನಿರಿ, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಅಥವಾ ಸತ್ಯನಿಷೇಧಿಗಳನ್ನು ದೂರಮಾಡಿರಿ' ಎಂದು ಅವರಿಗೆ ಹೇಳಲಾದರೆ ಅವರು ಹೇಳುತ್ತಾರೆ. ನಮಗೆ ಯುದ್ಧ ಮಾಡುವುದು ಗೊತ್ತಿರುತ್ತಿದ್ದರೆ ಖಂಡಿತ ನಾವು ನಿಮ್ಮ ಜೊತೆ ನಡೆಯುತ್ತಿದ್ದೆವು. ಅಂದು ಅವರು ಸತ್ಯವಿಶ್ವಾಸಕ್ಕಿಂತಲು ಹೆಚ್ಚಾಗಿ ಸತ್ಯನಿಷೇಧಕ್ಕೆ ನಿಕಟವಾಗಿದ್ದರು. ಅವರು ತಮ್ಮ ಮನಸ್ಸಿನಲ್ಲಿ ಇಲ್ಲದಿರುವುದನ್ನು ತಮ್ಮ ಬಾಯಿಯಿಂದ ಹೇಳುತ್ತಾರೆ. ಅವರು ಬಚ್ಚಿಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
165ಆಯತ್

ಅನುವಾದ — ಆಲ್-ಇಮ್ರಾನ್ 165

ಸೂರಾ ಆಲ್-ಇಮ್ರಾನ್ ಆಯತ್ 165 - ಓದಿ, ಆಲಿಸಿ, ಅನುವಾದ, ಕನ್ನಡ : ಉಹುದ್ ಸಮಯದಲ್ಲಿ ನಿಮಗೊಂದು ವಿಪತ್ತು ಬಾಧಿಸಿದಾಗ ನೀವು ಇದೆಲ್ಲಿಂದ ಬಂತು ಎನ್ನತೊಡಗಿದಿರಾ ?…

ಸೂರಾ ಆಯತ್ 165/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 163–167. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers