ಅನ್-ನಿಸಾ · 78/176
ಅನುವಾದ ಉಚ್ಚಾರಣೆ — ಸೂರಾ ಅನ್-ನಿಸಾ
أَيْنَمَا تَكُونُوا يُدْرِككُّمُ الْمَوْتُ وَلَوْ كُنتُمْ فِي بُرُوجٍ مُّشَيَّدَةٍ ۗ وَإِن تُصِبْهُمْ حَسَنَةٌ يَقُولُوا هَٰذِهِ مِنْ عِندِ اللَّهِ ۖ وَإِن تُصِبْهُمْ سَيِّئَةٌ يَقُولُوا هَٰذِهِ مِنْ عِندِكَ ۚ قُلْ كُلٌّ مِّنْ عِندِ اللَّهِ ۖ فَمَالِ هَٰؤُلَاءِ الْقَوْمِ لَا يَكَادُونَ يَفْقَهُونَ حَدِيثًا ۝٧٨
Ainamaa takoonoo yudrikkumul mawtu wa law kuntum fee buroojim mushai yadah; wa in tusibhum hasanatuny yaqooloo haazihee min indil laahi wa in tusibhum saiyi`atuny yaqooloo haazihee min `indik; qul kullum min `indillaahi famaa lihaaa `ulaaa`il qawmi laa yakkaadoona yafqahoona hadeesaa
📖 ಕನ್ನಡ ಅರ್ಥ
ನೀವೆಲ್ಲೇ ಇದ್ದರೂ ಮರಣವು ನಿಮ್ಮನ್ನು ಹಿಡಿಯುವುದು. ನೀವು ಸುಭದ್ರ ಕೋಟೆಯೊಳಗಿದ್ದರೂ ಸರಿಯೇ. ಅವರಿಗೇನಾದರೂ ಒಳಿತು ಲಭಿಸಿದರೆ ಇದು ಅಲ್ಲಾಹನಿಂದ ಲಭಿಸಿದೆ ಮತ್ತು ಏನಾದರೂ ಕೆಡುಕು ಬಾಧಿಸಿದರೆ ಇದು ನಿನ್ನಿಂದಾಗಿ ಉಂಟಾಗಿದೆAದು ಹೇಳುತ್ತಾರೆ. ಅವರಿಗೆ ಹೇಳಿರಿ: ಇವೆಲ್ಲವೂ ಅಲ್ಲಾಹನ ಕಡೆಯಿಂದಾಗಿದೆ. ಅವರಿಗೇನಾಗಿಬಿಟ್ಟಿದೆ? ಅವರು ಯಾವುದೇ ಮಾತನ್ನು ಅರ್ಥ ಮಾಡಿಕೊಳ್ಳುವ ಸನಿಹದಲ್ಲಿಲ್ಲವಲ್ಲಾ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 76-80 — ಸೂರಾ ಅನ್-ನಿಸಾ

76الَّذِينَ آمَنُوا يُقَاتِلُونَ فِي سَبِيلِ اللَّهِ ۖ وَالَّذِينَ كَفَرُوا يُقَاتِلُونَ فِي سَبِيلِ الطَّاغُوتِ فَقَاتِلُوا أَوْلِيَاءَ الشَّيْطَانِ ۖ إِنَّ كَيْدَ الشَّيْطَانِ كَانَ ضَعِيفًا
ಸತ್ಯವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಮತ್ತು ಸತ್ಯನಿಷೇಧಿಗಳು ಅಲ್ಲಾಹನ ಹೊರತಾದ ಮಿಥ್ಯಾರಾಧ್ಯರ ಮಾರ್ಗದಲ್ಲಿ ಯುದ್ಧ ಮಾಡುತ್ತಿದ್ದಾರೆ. ಆದ್ದರಿಂದ ನೀವು ಶೈತಾನನ ಮಿತ್ರರೊಂದಿಗೆ ಯುದ್ಧ ಮಾಡಿರಿ. ಖಂಡಿತವಾಗಿಯು ಶೈತಾನನ ಕುತಂತ್ರವು ದುರ್ಬಲವಾಗಿದೆ.
77أَلَمْ تَرَ إِلَى الَّذِينَ قِيلَ لَهُمْ كُفُّوا أَيْدِيَكُمْ وَأَقِيمُوا الصَّلَاةَ وَآتُوا الزَّكَاةَ فَلَمَّا كُتِبَ عَلَيْهِمُ الْقِتَالُ إِذَا فَرِيقٌ مِّنْهُمْ يَخْشَوْنَ النَّاسَ كَخَشْيَةِ اللَّهِ أَوْ أَشَدَّ خَشْيَةً ۚ وَقَالُوا رَبَّنَا لِمَ كَتَبْتَ عَلَيْنَا الْقِتَالَ لَوْلَا أَخَّرْتَنَا إِلَىٰ أَجَلٍ قَرِيبٍ ۗ قُلْ مَتَاعُ الدُّنْيَا قَلِيلٌ وَالْآخِرَةُ خَيْرٌ لِّمَنِ اتَّقَىٰ وَلَا تُظْلَمُونَ فَتِيلًا
(ಯುದ್ಧಕ್ಕೆ ಹಾತೊರೆಯುತ್ತಿದ್ದವರಿಗೆ) ನಿಮ್ಮ ಕೈಗಳನ್ನು ತಡೆಹಿಡಿದುಕೊಳ್ಳಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ ಎಂಬ ಆದೇಶ ನೀಡಲಾದ ಜನರನ್ನು ನೀವು ನೋಡಿಲ್ಲವೇ? ನಂತರ ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರ ಪೈಕಿಯ ಒಂದು ಗುಂಪು ಅಲ್ಲಾಹನನ್ನು ಭಯಪಡುವಂತೆ ಜನರನ್ನು ಭಯಪಡಲಾರಂಭಿಸಿದರು ಅಥವಾ ಅದಕ್ಕಿಂತಲೂ ತೀವ್ರವಾಗಿ ಹೇಳಿದರು: 'ಓ ನಮ್ಮ ಪ್ರಭೂ, ನೀನು ನಮ್ಮ ಮೇಲೆ ಯುದ್ಧವನ್ನು ಏಕೆ ಕಡ್ಡಾಯಗೊಳಿಸಿದೆ? ನಮಗೆ ಇನ್ನೊಂದಿಷ್ಟು ಕಾಲವಕಾಶವೇಕೆ ನೀಡಲಿಲ್ಲ'. ನೀವು ಹೇಳಿರಿ:; ಇಹಲೋಕದ ಸುಖಾನುಭವವು ಅತ್ಯಲ್ಪವಾಗಿದೆ ಮತ್ತು ಭಯಭಕ್ತಿಯುಳ್ಳವರಿಗೆ ಪರಲೋಕವೇ ಅತ್ಯುತ್ತಮವಾಗಿದೆ. ನಿಮ್ಮೊಂದಿಗೆ ಒಂದು ನೂಲಿನಷ್ಟು ಅನ್ಯಾಯ ಮಾಡಲಾಗದು.
78أَيْنَمَا تَكُونُوا يُدْرِككُّمُ الْمَوْتُ وَلَوْ كُنتُمْ فِي بُرُوجٍ مُّشَيَّدَةٍ ۗ وَإِن تُصِبْهُمْ حَسَنَةٌ يَقُولُوا هَٰذِهِ مِنْ عِندِ اللَّهِ ۖ وَإِن تُصِبْهُمْ سَيِّئَةٌ يَقُولُوا هَٰذِهِ مِنْ عِندِكَ ۚ قُلْ كُلٌّ مِّنْ عِندِ اللَّهِ ۖ فَمَالِ هَٰؤُلَاءِ الْقَوْمِ لَا يَكَادُونَ يَفْقَهُونَ حَدِيثًا
ನೀವೆಲ್ಲೇ ಇದ್ದರೂ ಮರಣವು ನಿಮ್ಮನ್ನು ಹಿಡಿಯುವುದು. ನೀವು ಸುಭದ್ರ ಕೋಟೆಯೊಳಗಿದ್ದರೂ ಸರಿಯೇ. ಅವರಿಗೇನಾದರೂ ಒಳಿತು ಲಭಿಸಿದರೆ ಇದು ಅಲ್ಲಾಹನಿಂದ ಲಭಿಸಿದೆ ಮತ್ತು ಏನಾದರೂ ಕೆಡುಕು ಬಾಧಿಸಿದರೆ ಇದು ನಿನ್ನಿಂದಾಗಿ ಉಂಟಾಗಿದೆAದು ಹೇಳುತ್ತಾರೆ. ಅವರಿಗೆ ಹೇಳಿರಿ: ಇವೆಲ್ಲವೂ ಅಲ್ಲಾಹನ ಕಡೆಯಿಂದಾಗಿದೆ. ಅವರಿಗೇನಾಗಿಬಿಟ್ಟಿದೆ? ಅವರು ಯಾವುದೇ ಮಾತನ್ನು ಅರ್ಥ ಮಾಡಿಕೊಳ್ಳುವ ಸನಿಹದಲ್ಲಿಲ್ಲವಲ್ಲಾ?
79مَّا أَصَابَكَ مِنْ حَسَنَةٍ فَمِنَ اللَّهِ ۖ وَمَا أَصَابَكَ مِن سَيِّئَةٍ فَمِن نَّفْسِكَ ۚ وَأَرْسَلْنَاكَ لِلنَّاسِ رَسُولًا ۚ وَكَفَىٰ بِاللَّهِ شَهِيدًا
ಓ ಮಾನವ ಲಭಿಸುವ ಪ್ರತಿಯೊಂದು ಒಳಿತು ನಿನಗೆ ಅಲ್ಲಾಹನ ಕಡೆಯಿಂದಾಗಿದೆ ಮತ್ತು ನಿನಗೆ ಬಾಧಿಸುವ ಪ್ರತಿಯೊಂದು ಕೆಡುಕು ಸ್ವತಃ ನಿನ್ನಿಂದಲೇ ಉಂಟಾಗಿರುತ್ತದೆ. ಓ ಪೈಗಂಬರÀರೇ ನಾವು ನಿಮ್ಮನ್ನು ಸಕಲ ಮನುಷ್ಯರಿಗೆ ಸಂದೇಶವಾಹಕರಾಗಿ ಕಳುಹಿಸಿದ್ದೇವೆ ಮತ್ತು ಸಾಕ್ಷಿಯಾಗಿ ಅಲ್ಲಾಹನೇ ಸಾಕು.
80مَّن يُطِعِ الرَّسُولَ فَقَدْ أَطَاعَ اللَّهَ ۖ وَمَن تَوَلَّىٰ فَمَا أَرْسَلْنَاكَ عَلَيْهِمْ حَفِيظًا
ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಖಂಡಿತವಾಗಿಯು ಅವನು ಅಲ್ಲಾಹನನ್ನು ಅನುಸರಿಸಿದನು ಮತ್ತು ಯಾರು ವಿಮುಖನಾಗುತ್ತಾನೊ ಅವರ ಮೇಲೆ ನಾವು ನಿಮ್ಮನ್ನು ಕಾವಲುಗಾರನಾಗಿ ನಿಯೋಗಿಸಿಲ್ಲ.
ಅನ್-ನಿಸಾಕುರಾನ್ ಸೂಚಿ
176ಆಯತ್
MedinanRevelation
78ಆಯತ್

ಅನುವಾದ — ಅನ್-ನಿಸಾ 78

ಸೂರಾ ಅನ್-ನಿಸಾ ಆಯತ್ 78 - ಓದಿ, ಆಲಿಸಿ, ಅನುವಾದ, ಕನ್ನಡ : ನೀವೆಲ್ಲೇ ಇದ್ದರೂ ಮರಣವು ನಿಮ್ಮನ್ನು ಹಿಡಿಯುವುದು. ನೀವು ಸುಭದ್ರ ಕೋಟೆಯೊಳಗಿದ್ದರೂ ಸರಿಯೇ. ಅವರಿಗೇನಾದರೂ…

ಸೂರಾ ಆಯತ್ 78/176 — ಸೂರಾ ಅನ್-ನಿಸಾ النساء (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಿಸಾ ಆಲಿಸಿ, ಸೂರಾ ಅನ್-ನಿಸಾ ಅನುವಾದ, ಸೂರಾ ಅನ್-ನಿಸಾ mp3, ಸೂರಾ ಅನ್-ನಿಸಾ pdf. ಆಯತ್ 76–80. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers