ಅಲ್-ಆರಾಫ್ · 24/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
قَالَ اهْبِطُوا بَعْضُكُمْ لِبَعْضٍ عَدُوٌّ ۖ وَلَكُمْ فِي الْأَرْضِ مُسْتَقَرٌّ وَمَتَاعٌ إِلَىٰ حِينٍ ۝٢٤
Qaalah bitoo ba`dukum liba`din aduwwunw wa lakum fil ardi mmustaqarrunw wa mataa`un ilaaheen
📖 ಕನ್ನಡ ಅರ್ಥ
ಅವನು ಹೇಳಿದನು: ನೀವು (ಸ್ವರ್ಗದಿಂದ) ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿರುವಿರಿ. ನಿಮಗೆ ಭೂಮಿಯಲ್ಲಿ ವಾಸಸ್ಥಳವಿರುವುದು ಮತ್ತು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಸುಖ ಭೋಗವಿರುವುದು.

🎧 ಆಲಿಸಿ


📜 ಆಯತ್ 22-26 — ಸೂರಾ ಅಲ್-ಆರಾಫ್

22فَدَلَّاهُمَا بِغُرُورٍ ۚ فَلَمَّا ذَاقَا الشَّجَرَةَ بَدَتْ لَهُمَا سَوْآتُهُمَا وَطَفِقَا يَخْصِفَانِ عَلَيْهِمَا مِن وَرَقِ الْجَنَّةِ ۖ وَنَادَاهُمَا رَبُّهُمَا أَلَمْ أَنْهَكُمَا عَن تِلْكُمَا الشَّجَرَةِ وَأَقُل لَّكُمَا إِنَّ الشَّيْطَانَ لَكُمَا عَدُوٌّ مُّبِينٌ
ಹೀಗೆ ಅವನು ಅವರಿಬ್ಬರನ್ನೂ ಮೋಸದಿಂದ ತನ್ನ ಧಾಟಿಗೆ ತಂದನು. ಅವರಿಬ್ಬರೂ ಕೊನೆಗೆ ಆ ಮರದಿಂದ ರುಚಿಯನ್ನು ಸವಿದಾಗ ಅವರ ಗುಹ್ಯಾಂಗಗಳು ಅವರ ಮುಂದೆ ಪ್ರಕಟವಾದವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮರೆಮಾಚತೊಡಗಿದರು. ಮತ್ತು ಅವರ ಪ್ರಭು ಅವರನ್ನು ಕರೆದನು: ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಮತ್ತು ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
23قَالَا رَبَّنَا ظَلَمْنَا أَنفُسَنَا وَإِن لَّمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ
ಅವರಿಬ್ಬರೂ ಪ್ರಾರ್ಥಿಸಿದರು: ಓ ನಮ್ಮ ಪ್ರಭೂ, ನಾವು ನಮಗೇ ಆತ್ಮ ದ್ರೋಹ ಮಾಡಿರುವೆವು. ನೀನು ನಮಗೆ ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ಖಂಡಿತವಾಗಿಯು ನಾವು ನಷ್ಟ ಹೊಂದುವವರಲ್ಲಾಗುವೆವು.
24قَالَ اهْبِطُوا بَعْضُكُمْ لِبَعْضٍ عَدُوٌّ ۖ وَلَكُمْ فِي الْأَرْضِ مُسْتَقَرٌّ وَمَتَاعٌ إِلَىٰ حِينٍ
ಅವನು ಹೇಳಿದನು: ನೀವು (ಸ್ವರ್ಗದಿಂದ) ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿರುವಿರಿ. ನಿಮಗೆ ಭೂಮಿಯಲ್ಲಿ ವಾಸಸ್ಥಳವಿರುವುದು ಮತ್ತು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಸುಖ ಭೋಗವಿರುವುದು.
25قَالَ فِيهَا تَحْيَوْنَ وَفِيهَا تَمُوتُونَ وَمِنْهَا تُخْرَجُونَ
ಅವನು ಹೇಳಿದನು: ಅಲ್ಲೇ (ಭೂಮಿಯಲ್ಲೇ) ನೀವು ಜೀವನ ಮಾಡುವಿರಿ ಮತ್ತು ಅಲ್ಲೇ ಮರÀಣ ಹೊಂದುವಿರಿ. ಮತ್ತು ಅಲ್ಲಿಂದಲೇ ನಿಮ್ಮನ್ನು ಪುನರುತ್ಥಾನದದಿನ ಹೊರತರಲಾಗುವುದು.
26يَا بَنِي آدَمَ قَدْ أَنزَلْنَا عَلَيْكُمْ لِبَاسًا يُوَارِي سَوْآتِكُمْ وَرِيشًا ۖ وَلِبَاسُ التَّقْوَىٰ ذَٰلِكَ خَيْرٌ ۚ ذَٰلِكَ مِنْ آيَاتِ اللَّهِ لَعَلَّهُمْ يَذَّكَّرُونَ
ಓ ಆದಮ್‌ನ ಸಂತತಿಗಳೇ, ನಿಮ್ಮ ಗುಹ್ಯಾಂಗಗಳನ್ನು ಮರೆಮಾಚಲಿಕ್ಕೂ ಮತ್ತು ಅಲಂಕಾರದ ಸಾಧನವನ್ನಾಗಿಯೂ ನಾವು ನಿಮ್ಮ ಮೇಲೆ ಉಡುಪನ್ನು ಇಳಿಸಿದ್ದೇವೆ. ಮತ್ತು ಭಯಭಕ್ತಿಯ ಉಡುಪು ಅತ್ಯುತ್ತಮವಾದುದು. ಇದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಇದು ಜನರು ಸ್ಮರಿಸಿಕೊಳ್ಳಲ್ಲೆಂದಾಗಿದೆ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
24ಆಯತ್

ಅನುವಾದ — ಅಲ್-ಆರಾಫ್ 24

ಸೂರಾ ಅಲ್-ಆರಾಫ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಹೇಳಿದನು: ನೀವು (ಸ್ವರ್ಗದಿಂದ) ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿರುವಿರಿ. ನಿಮಗೆ…

ಸೂರಾ ಆಯತ್ 24/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 22–26. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers