ಅಲ್-ಆರಾಫ್ · 25/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
قَالَ فِيهَا تَحْيَوْنَ وَفِيهَا تَمُوتُونَ وَمِنْهَا تُخْرَجُونَ ۝٢٥
Qaala feehaa tahyawna wa feehaa tamootoona wa minhaa tukhrajoon
📖 ಕನ್ನಡ ಅರ್ಥ
ಅವನು ಹೇಳಿದನು: ಅಲ್ಲೇ (ಭೂಮಿಯಲ್ಲೇ) ನೀವು ಜೀವನ ಮಾಡುವಿರಿ ಮತ್ತು ಅಲ್ಲೇ ಮರÀಣ ಹೊಂದುವಿರಿ. ಮತ್ತು ಅಲ್ಲಿಂದಲೇ ನಿಮ್ಮನ್ನು ಪುನರುತ್ಥಾನದದಿನ ಹೊರತರಲಾಗುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ಅಲ್-ಆರಾಫ್

23قَالَا رَبَّنَا ظَلَمْنَا أَنفُسَنَا وَإِن لَّمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ
ಅವರಿಬ್ಬರೂ ಪ್ರಾರ್ಥಿಸಿದರು: ಓ ನಮ್ಮ ಪ್ರಭೂ, ನಾವು ನಮಗೇ ಆತ್ಮ ದ್ರೋಹ ಮಾಡಿರುವೆವು. ನೀನು ನಮಗೆ ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ಖಂಡಿತವಾಗಿಯು ನಾವು ನಷ್ಟ ಹೊಂದುವವರಲ್ಲಾಗುವೆವು.
24قَالَ اهْبِطُوا بَعْضُكُمْ لِبَعْضٍ عَدُوٌّ ۖ وَلَكُمْ فِي الْأَرْضِ مُسْتَقَرٌّ وَمَتَاعٌ إِلَىٰ حِينٍ
ಅವನು ಹೇಳಿದನು: ನೀವು (ಸ್ವರ್ಗದಿಂದ) ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿರುವಿರಿ. ನಿಮಗೆ ಭೂಮಿಯಲ್ಲಿ ವಾಸಸ್ಥಳವಿರುವುದು ಮತ್ತು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಸುಖ ಭೋಗವಿರುವುದು.
25قَالَ فِيهَا تَحْيَوْنَ وَفِيهَا تَمُوتُونَ وَمِنْهَا تُخْرَجُونَ
ಅವನು ಹೇಳಿದನು: ಅಲ್ಲೇ (ಭೂಮಿಯಲ್ಲೇ) ನೀವು ಜೀವನ ಮಾಡುವಿರಿ ಮತ್ತು ಅಲ್ಲೇ ಮರÀಣ ಹೊಂದುವಿರಿ. ಮತ್ತು ಅಲ್ಲಿಂದಲೇ ನಿಮ್ಮನ್ನು ಪುನರುತ್ಥಾನದದಿನ ಹೊರತರಲಾಗುವುದು.
26يَا بَنِي آدَمَ قَدْ أَنزَلْنَا عَلَيْكُمْ لِبَاسًا يُوَارِي سَوْآتِكُمْ وَرِيشًا ۖ وَلِبَاسُ التَّقْوَىٰ ذَٰلِكَ خَيْرٌ ۚ ذَٰلِكَ مِنْ آيَاتِ اللَّهِ لَعَلَّهُمْ يَذَّكَّرُونَ
ಓ ಆದಮ್‌ನ ಸಂತತಿಗಳೇ, ನಿಮ್ಮ ಗುಹ್ಯಾಂಗಗಳನ್ನು ಮರೆಮಾಚಲಿಕ್ಕೂ ಮತ್ತು ಅಲಂಕಾರದ ಸಾಧನವನ್ನಾಗಿಯೂ ನಾವು ನಿಮ್ಮ ಮೇಲೆ ಉಡುಪನ್ನು ಇಳಿಸಿದ್ದೇವೆ. ಮತ್ತು ಭಯಭಕ್ತಿಯ ಉಡುಪು ಅತ್ಯುತ್ತಮವಾದುದು. ಇದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಇದು ಜನರು ಸ್ಮರಿಸಿಕೊಳ್ಳಲ್ಲೆಂದಾಗಿದೆ.
27يَا بَنِي آدَمَ لَا يَفْتِنَنَّكُمُ الشَّيْطَانُ كَمَا أَخْرَجَ أَبَوَيْكُم مِّنَ الْجَنَّةِ يَنزِعُ عَنْهُمَا لِبَاسَهُمَا لِيُرِيَهُمَا سَوْآتِهِمَا ۗ إِنَّهُ يَرَاكُمْ هُوَ وَقَبِيلُهُ مِنْ حَيْثُ لَا تَرَوْنَهُمْ ۗ إِنَّا جَعَلْنَا الشَّيَاطِينَ أَوْلِيَاءَ لِلَّذِينَ لَا يُؤْمِنُونَ
ಓ ಆದಮ್ ಸಂತತಿಗಳೇ ಶೈತಾನನು ನಿಮ್ಮ ಮಾತಾಪಿತರನ್ನು ಒಬ್ಬರ ಮುಂದೆ ಇನ್ನೊಬ್ಬರ ಗುಹ್ಯಾಂಗಗಳನ್ನು ಗೋಚರಿಸುವಂತೆ ಮಾಡಿ, ಸ್ವರ್ಗದಿಂದ ಹೊರಗಟ್ಟಿದಂತೆ ನಿಮ್ಮನ್ನೂ ದಾರಿಗೆಡಿಸದಿರಲಿ. ಖಂಡಿತವಾಗಿಯು ಅವನು ಮತ್ತು ಅವನ ಸೈನ್ಯದವರು ನೀವು ಅವರನ್ನು ನೋಡದ ಸ್ಥಿತಿಯಲ್ಲಿ ನಿಮ್ಮನ್ನು ನೋಡುತ್ತಾರೆ. ನಾವು ಶೈತಾನರನ್ನು ಸತ್ಯವಿಶ್ವಾಸವಿಡದಂತಹ ಜನರಿಗೆ ಆಪ್ತಮಿತ್ರರನ್ನಾಗಿ ಮಾಡಿದ್ದೇವೆ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
25ಆಯತ್

ಅನುವಾದ — ಅಲ್-ಆರಾಫ್ 25

ಸೂರಾ ಅಲ್-ಆರಾಫ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಹೇಳಿದನು: ಅಲ್ಲೇ (ಭೂಮಿಯಲ್ಲೇ) ನೀವು ಜೀವನ ಮಾಡುವಿರಿ ಮತ್ತು ಅಲ್ಲೇ ಮರÀಣ…

ಸೂರಾ ಆಯತ್ 25/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers