ಅತ್-ತೌಬಾ · 108/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
لَا تَقُمْ فِيهِ أَبَدًا ۚ لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ ۝١٠٨
Laa taqum feehi abadaa; lamasjidun ussisa `alat taqwaa min awwali yawmin ahaqqu an taqooma feeh; feehi rijaaluny yuhibbona ai yatatahharoo, wallaahu yuhibbul mmuttah hireen
📖 ಕನ್ನಡ ಅರ್ಥ
ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ ಮೇಲೆ ಬುನಾದಿಯನ್ನು ಹಾಕಲಾದ ಮಸೀದಿಯೇ ನಿಮಗೆ (ನಮಾಜ್‌ಗಾಗಿ) ನಿಲ್ಲಲು ಅತ್ಯಂತ ಯೋಗ್ಯವಾಗಿದೆ. ಅದರಲ್ಲಿ ಪರಿಶುದ್ಧತೆಯನ್ನು ಬಯಸುವ ಜನರಿದ್ದಾರೆ. ಮತ್ತು ಅಲ್ಲಾಹನು ಪರಿಶುದ್ಧರನ್ನು ಪ್ರೀತಿಸುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 106-110 — ಸೂರಾ ಅತ್-ತೌಬಾ

106وَآخَرُونَ مُرْجَوْنَ لِأَمْرِ اللَّهِ إِمَّا يُعَذِّبُهُمْ وَإِمَّا يَتُوبُ عَلَيْهِمْ ۗ وَاللَّهُ عَلِيمٌ حَكِيمٌ
ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
107وَالَّذِينَ اتَّخَذُوا مَسْجِدًا ضِرَارًا وَكُفْرًا وَتَفْرِيقًا بَيْنَ الْمُؤْمِنِينَ وَإِرْصَادًا لِّمَنْ حَارَبَ اللَّهَ وَرَسُولَهُ مِن قَبْلُ ۚ وَلَيَحْلِفُنَّ إِنْ أَرَدْنَا إِلَّا الْحُسْنَىٰ ۖ وَاللَّهُ يَشْهَدُ إِنَّهُمْ لَكَاذِبُونَ
ಮತ್ತು (ಸತ್ಯವಿಶ್ವಾಸಿಗಳಿಗೆ) ಕೇಡು ಬಗೆಯುವ ಉದ್ದೇಶದಿಂದಲೂ, ಸತ್ಯನಿಷೇಧವನ್ನು ಬಲಪಡಿಸುವ ಉದ್ದೇಶದಿಂದಲೂ, ಸತ್ಯವಿಶ್ವಾಸಿಗಳ ನಡುವೆ ಭಿನ್ನತೆಯನ್ನುಂಟು ಮಾಡುವ ಉದ್ದೇಶದಿಂದಲೂ ಮತ್ತು ಅಲ್ಲಾಹನ ಹಾಗೂ ಅವನ ಸಂದೇಶವಾಹಕರಿಗೆ ವಿರೋಧಿಯಾಗಿ ಈ ಮೊದಲಿನಿಂದಲೇ ಹೋರಾಡುತ್ತಾ ಬಂದಿರುವ ವ್ಯಕ್ತಿಯೊಬ್ಬನಿಗೆ ಹೊಂಚು ತಾಣವನ್ನಾಗಿಡುವ ಉದ್ದೇಶದಿಂದಲೂ ಮಸೀದಿಯೊಂದನ್ನು ನಿರ್ಮಿಸಿದವರು ಸಹ ಆ ಕಪಟ ವಿಶ್ವಾಸಿಗಳ ಪೈಕಿಯಲ್ಲಿದ್ದಾರೆ. ಮತ್ತು ಅವರು ಒಳಿತಿನ ಹೊರತು ಇನ್ನಾವುದೇ ಉದ್ದೇಶ ನಮಗಿರಲಿಲ್ಲ ಎಂದು ಆಣೆಯಿಟ್ಟು ಹೇಳುವರು. ಅವರು ಸಂಪೂರ್ಣ ಸುಳ್ಳುಗಾರರಾಗಿದ್ದಾರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
108لَا تَقُمْ فِيهِ أَبَدًا ۚ لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ
ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ ಮೇಲೆ ಬುನಾದಿಯನ್ನು ಹಾಕಲಾದ ಮಸೀದಿಯೇ ನಿಮಗೆ (ನಮಾಜ್‌ಗಾಗಿ) ನಿಲ್ಲಲು ಅತ್ಯಂತ ಯೋಗ್ಯವಾಗಿದೆ. ಅದರಲ್ಲಿ ಪರಿಶುದ್ಧತೆಯನ್ನು ಬಯಸುವ ಜನರಿದ್ದಾರೆ. ಮತ್ತು ಅಲ್ಲಾಹನು ಪರಿಶುದ್ಧರನ್ನು ಪ್ರೀತಿಸುತ್ತಾನೆ.
109أَفَمَنْ أَسَّسَ بُنْيَانَهُ عَلَىٰ تَقْوَىٰ مِنَ اللَّهِ وَرِضْوَانٍ خَيْرٌ أَم مَّنْ أَسَّسَ بُنْيَانَهُ عَلَىٰ شَفَا جُرُفٍ هَارٍ فَانْهَارَ بِهِ فِي نَارِ جَهَنَّمَ ۗ وَاللَّهُ لَا يَهْدِي الْقَوْمَ الظَّالِمِينَ
ಅನಂತರ ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯಭಕ್ತಿ ಮತ್ತು ಅವನ ಸಂತೃಪ್ತಿಯ ಮೇಲೆ ನಿರ್ಮಿಸುವವನು ಉತ್ತಮನೋ ಅಥವಾ ಕಟ್ಟಡವನ್ನು ಯಾವುದಾದರೂ ಕುಸಿದುಬೀಳಲಿಕ್ಕಿರುವ ಅಸ್ಥಿರ ಅಂಚಿನಲ್ಲಿ ನಿರ್ಮಿಸಿ ಕೊನೆಗೆ ಅದರೊಂದಿಗೆ ನರಕಾಗ್ನಿಯಲ್ಲಿ ಬೀಳುವವನೋ? ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗವನ್ನು ತೋರಲಾರನು.
110لَا يَزَالُ بُنْيَانُهُمُ الَّذِي بَنَوْا رِيبَةً فِي قُلُوبِهِمْ إِلَّا أَن تَقَطَّعَ قُلُوبُهُمْ ۗ وَاللَّهُ عَلِيمٌ حَكِيمٌ
ಅವರ ಹೃದಯಗಳು ನುಚ್ಚು ನೂರಾಗುವವರೆಗೂ ಅವರು ನಿರ್ಮಿಸಿದಂತಹ ಈ ಕಟ್ಟಡವು (ಮಸೀದಿ) ಅವರ ಹೃದಯಗಳಲ್ಲಿ ಸದಾ ಸಂಶಯ ಮೂಲವಾಗಿ ಉಳಿಯುವುದು. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
108ಆಯತ್

ಅನುವಾದ — ಅತ್-ತೌಬಾ 108

ಸೂರಾ ಅತ್-ತೌಬಾ ಆಯತ್ 108 - ಓದಿ, ಆಲಿಸಿ, ಅನುವಾದ, ಕನ್ನಡ : ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ…

ಸೂರಾ ಆಯತ್ 108/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 106–110. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers