ಹೂದ್ · 13/123
ಅನುವಾದ ಉಚ್ಚಾರಣೆ — ಸೂರಾ ಹೂದ್
أَمْ يَقُولُونَ افْتَرَاهُ ۖ قُلْ فَأْتُوا بِعَشْرِ سُوَرٍ مِّثْلِهِ مُفْتَرَيَاتٍ وَادْعُوا مَنِ اسْتَطَعْتُم مِّن دُونِ اللَّهِ إِن كُنتُمْ صَادِقِينَ ۝١٣
Am yaqooloonaf taraahu qul faatoo bi`ashri Suwarim mislihee muftarayaatinw wad`oo manis tata`tum min doonil laahi in kuntum saadiqeen
📖 ಕನ್ನಡ ಅರ್ಥ
ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.

🎧 ಆಲಿಸಿ


📜 ಆಯತ್ 11-15 — ಸೂರಾ ಹೂದ್

11إِلَّا الَّذِينَ صَبَرُوا وَعَمِلُوا الصَّالِحَاتِ أُولَٰئِكَ لَهُم مَّغْفِرَةٌ وَأَجْرٌ كَبِيرٌ
ಆದರೆ ಸಹನೆ ವಹಿಸಿ ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರಿಗೆ ಕ್ಷಮೆ ಮತ್ತು ಅತ್ಯುತ್ತಮ ಪ್ರತಿಫಲವಿದೆ.
12فَلَعَلَّكَ تَارِكٌ بَعْضَ مَا يُوحَىٰ إِلَيْكَ وَضَائِقٌ بِهِ صَدْرُكَ أَن يَقُولُوا لَوْلَا أُنزِلَ عَلَيْهِ كَنزٌ أَوْ جَاءَ مَعَهُ مَلَكٌ ۚ إِنَّمَا أَنتَ نَذِيرٌ ۚ وَاللَّهُ عَلَىٰ كُلِّ شَيْءٍ وَكِيلٌ
ಈ ವ್ಯಕ್ತಿಯ (ಪೈಗಂಬರ್) ಮೇಲೆ ನಿಧಿಯೊಂದು ಏಕೆ ಇಳಿಸಲಾಗಿಲ್ಲ ? ಅಥವ ಅವನ ಜೊತೆ ದೇವಚರನೋರ್ವನು ಏಕೆ ಬರಲಿಲ್ಲ? ಎಂದು ನಿಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮ್ಮೆಡೆಗೆ ಅವತೀರ್ಣವಾಗುತ್ತಿರುವುದರಲ್ಲಿ ಕೆಲವೊಂದು ಭಾಗವನ್ನು ನೀವು ತೊರೆದು ಬಿಡಬಹುದು. ಮತ್ತು ನಿಮ್ಮ ಮನಸ್ಸು ಸಂಕುಚಿತಗೊಳ್ಳಬಹುದು. ನೀವಂತೂ ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ ಮತ್ತು ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುವನು.
13أَمْ يَقُولُونَ افْتَرَاهُ ۖ قُلْ فَأْتُوا بِعَشْرِ سُوَرٍ مِّثْلِهِ مُفْتَرَيَاتٍ وَادْعُوا مَنِ اسْتَطَعْتُم مِّن دُونِ اللَّهِ إِن كُنتُمْ صَادِقِينَ
ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.
14فَإِلَّمْ يَسْتَجِيبُوا لَكُمْ فَاعْلَمُوا أَنَّمَا أُنزِلَ بِعِلْمِ اللَّهِ وَأَن لَّا إِلَٰهَ إِلَّا هُوَ ۖ فَهَلْ أَنتُم مُّسْلِمُونَ
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
15مَن كَانَ يُرِيدُ الْحَيَاةَ الدُّنْيَا وَزِينَتَهَا نُوَفِّ إِلَيْهِمْ أَعْمَالَهُمْ فِيهَا وَهُمْ فِيهَا لَا يُبْخَسُونَ
ಯಾರು ಐಹಿಕ ಜೀವನ ಮತ್ತು ಅದರ ವೈಭವವನ್ನು ಬಯಸುತ್ತಾರೋ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಸಂಪೂರ್ಣವಾಗಿ ನೀಡುವೆವು ಮತ್ತು ಅವರಿಗೆ ಅದರಲ್ಲಿ ಸ್ವಲ್ಪವೂ ಕಡಿಮೆ ಮಾಡಲಾಗುವುದಿಲ್ಲ.
ಹೂದ್ಕುರಾನ್ ಸೂಚಿ
123ಆಯತ್
MeccanRevelation
13ಆಯತ್

ಅನುವಾದ — ಹೂದ್ 13

ಸೂರಾ ಹೂದ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ?…

ಸೂರಾ ಆಯತ್ 13/123 — ಸೂರಾ ಹೂದ್ هود (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಹೂದ್ ಆಲಿಸಿ, ಸೂರಾ ಹೂದ್ ಅನುವಾದ, ಸೂರಾ ಹೂದ್ mp3, ಸೂರಾ ಹೂದ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers