ಹೂದ್ · 14/123
ಅನುವಾದ ಉಚ್ಚಾರಣೆ — ಸೂರಾ ಹೂದ್
فَإِلَّمْ يَسْتَجِيبُوا لَكُمْ فَاعْلَمُوا أَنَّمَا أُنزِلَ بِعِلْمِ اللَّهِ وَأَن لَّا إِلَٰهَ إِلَّا هُوَ ۖ فَهَلْ أَنتُم مُّسْلِمُونَ ١٤
Transliteration
Fa il lam yastajeeboo lakum fa`lamooo annamaaa unzilla bi`ilmil laahi wa al laaa ilaaha illaa Huwa fahal antum muslimoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
Additional reference in தமிழ்
🎧 ಆಲಿಸಿ
📜 ಆಯತ್ 12-16 — ಸೂರಾ ಹೂದ್
12فَلَعَلَّكَ تَارِكٌ بَعْضَ مَا يُوحَىٰ إِلَيْكَ وَضَائِقٌ بِهِ صَدْرُكَ أَن يَقُولُوا لَوْلَا أُنزِلَ عَلَيْهِ كَنزٌ أَوْ جَاءَ مَعَهُ مَلَكٌ ۚ إِنَّمَا أَنتَ نَذِيرٌ ۚ وَاللَّهُ عَلَىٰ كُلِّ شَيْءٍ وَكِيلٌ
ಈ ವ್ಯಕ್ತಿಯ (ಪೈಗಂಬರ್) ಮೇಲೆ ನಿಧಿಯೊಂದು ಏಕೆ ಇಳಿಸಲಾಗಿಲ್ಲ ? ಅಥವ ಅವನ ಜೊತೆ ದೇವಚರನೋರ್ವನು ಏಕೆ ಬರಲಿಲ್ಲ? ಎಂದು ನಿಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮ್ಮೆಡೆಗೆ ಅವತೀರ್ಣವಾಗುತ್ತಿರುವುದರಲ್ಲಿ ಕೆಲವೊಂದು ಭಾಗವನ್ನು ನೀವು ತೊರೆದು ಬಿಡಬಹುದು. ಮತ್ತು ನಿಮ್ಮ ಮನಸ್ಸು ಸಂಕುಚಿತಗೊಳ್ಳಬಹುದು. ನೀವಂತೂ ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ ಮತ್ತು ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುವನು.
13أَمْ يَقُولُونَ افْتَرَاهُ ۖ قُلْ فَأْتُوا بِعَشْرِ سُوَرٍ مِّثْلِهِ مُفْتَرَيَاتٍ وَادْعُوا مَنِ اسْتَطَعْتُم مِّن دُونِ اللَّهِ إِن كُنتُمْ صَادِقِينَ
ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.
14فَإِلَّمْ يَسْتَجِيبُوا لَكُمْ فَاعْلَمُوا أَنَّمَا أُنزِلَ بِعِلْمِ اللَّهِ وَأَن لَّا إِلَٰهَ إِلَّا هُوَ ۖ فَهَلْ أَنتُم مُّسْلِمُونَ
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
15مَن كَانَ يُرِيدُ الْحَيَاةَ الدُّنْيَا وَزِينَتَهَا نُوَفِّ إِلَيْهِمْ أَعْمَالَهُمْ فِيهَا وَهُمْ فِيهَا لَا يُبْخَسُونَ
ಯಾರು ಐಹಿಕ ಜೀವನ ಮತ್ತು ಅದರ ವೈಭವವನ್ನು ಬಯಸುತ್ತಾರೋ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಸಂಪೂರ್ಣವಾಗಿ ನೀಡುವೆವು ಮತ್ತು ಅವರಿಗೆ ಅದರಲ್ಲಿ ಸ್ವಲ್ಪವೂ ಕಡಿಮೆ ಮಾಡಲಾಗುವುದಿಲ್ಲ.
16أُولَٰئِكَ الَّذِينَ لَيْسَ لَهُمْ فِي الْآخِرَةِ إِلَّا النَّارُ ۖ وَحَبِطَ مَا صَنَعُوا فِيهَا وَبَاطِلٌ مَّا كَانُوا يَعْمَلُونَ
ಇಂಥವರಿಗೆ ಪರಲೋಕದಲ್ಲಿ ನರಕವಲ್ಲದೆ ಇನ್ನೇನೂ ಇಲ್ಲ . ಇವರು (ಸತ್ಯನಿಷೇಧಿಗಳು) ಇಲ್ಲಿ ಮಾಡಿದ್ದೆಲ್ಲವೂ ವ್ಯರ್ಥವಾಗಿಬಿಟ್ಟಿತ್ತು. ಮತ್ತು ಅವರ ಕರ್ಮಗಳೆಲ್ಲವೂ ನಿರರ್ಥಕವಾದವು.
ಹೂದ್ಕುರಾನ್ ಸೂಚಿ
123ಆಯತ್
MeccanRevelation
14ಆಯತ್
ಅನುವಾದ — ಹೂದ್ 14
ಸೂರಾ ಹೂದ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ…ಸೂರಾ ಆಯತ್ 14/123 — ಸೂರಾ ಹೂದ್ هود (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಹೂದ್ ಆಲಿಸಿ, ಸೂರಾ ಹೂದ್ ಅನುವಾದ, ಸೂರಾ ಹೂದ್ mp3, ಸೂರಾ ಹೂದ್ pdf. ಆಯತ್ 12–16. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers








