ಅಲ್-ಕಹ್ಫ್ · 47/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
وَيَوْمَ نُسَيِّرُ الْجِبَالَ وَتَرَى الْأَرْضَ بَارِزَةً وَحَشَرْنَاهُمْ فَلَمْ نُغَادِرْ مِنْهُمْ أَحَدًا ۝٤٧
Wa yawma nusaiyirul jibaala wa taral arda baariza tanw wa hasharnaahum falam nughaadir minhum ahadaa
📖 ಕನ್ನಡ ಅರ್ಥ
ನಾವು ಪರ್ವತಗಳನ್ನು ಚಲಾಯಿಸುವ ದಿನದಂದು ನೀವು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಕಾಣುವಿರಿ ಮತ್ತು ನಾವು ಸಕಲ ಜನರನ್ನು ಒಟ್ಟುಗೂಡಿಸುವೆವು. ಅವರ ಪೈಕಿ ಯಾರನ್ನೂ ಬಿಡಲಾರೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 45-49 — ಸೂರಾ ಅಲ್-ಕಹ್ಫ್

45وَاضْرِبْ لَهُم مَّثَلَ الْحَيَاةِ الدُّنْيَا كَمَاءٍ أَنزَلْنَاهُ مِنَ السَّمَاءِ فَاخْتَلَطَ بِهِ نَبَاتُ الْأَرْضِ فَأَصْبَحَ هَشِيمًا تَذْرُوهُ الرِّيَاحُ ۗ وَكَانَ اللَّهُ عَلَىٰ كُلِّ شَيْءٍ مُّقْتَدِرًا
(ಓ ಪೈಗಂಬರರೇ) ಅವರಿಗೆ ಲೌಕಿಕ ಜೀವನದ ಉಪಮೆಯನ್ನು ವಿವರಿಸಿಕೊಡಿ. ಅದು ಆಕಾಶದಿಂದ ನಾವು ಸುರಿಸುವಂತಹ ಒಂದು ಮಳೆಯಂತೆ. ಅದರ ಮೂಲಕ ಭೂಮಿಯ ಬೆಳೆಗಳು ದಟ್ಟವಾದವು. ಪರಿಣಾಮವಾಗಿ ಅವು (ಒಣಗಿ) ಗಾಳಿಯು ಹಾರಿಸುತ್ತಾ ಹೋಗುವ ಹೊಟ್ಟಾಗಿ ಬಿಡುತ್ತದೆ. ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
46الْمَالُ وَالْبَنُونَ زِينَةُ الْحَيَاةِ الدُّنْيَا ۖ وَالْبَاقِيَاتُ الصَّالِحَاتُ خَيْرٌ عِندَ رَبِّكَ ثَوَابًا وَخَيْرٌ أَمَلًا
ಸೊತ್ತು ಸಂತಾನಗಳು ಐಹಿಕ ಜೀವನದ ಅಲಂಕಾರವಾಗಿದೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಹಾಗೂ ನಿರೀಕ್ಷೆಯಿಡುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ.
47وَيَوْمَ نُسَيِّرُ الْجِبَالَ وَتَرَى الْأَرْضَ بَارِزَةً وَحَشَرْنَاهُمْ فَلَمْ نُغَادِرْ مِنْهُمْ أَحَدًا
ನಾವು ಪರ್ವತಗಳನ್ನು ಚಲಾಯಿಸುವ ದಿನದಂದು ನೀವು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಕಾಣುವಿರಿ ಮತ್ತು ನಾವು ಸಕಲ ಜನರನ್ನು ಒಟ್ಟುಗೂಡಿಸುವೆವು. ಅವರ ಪೈಕಿ ಯಾರನ್ನೂ ಬಿಡಲಾರೆವು.
48وَعُرِضُوا عَلَىٰ رَبِّكَ صَفًّا لَّقَدْ جِئْتُمُونَا كَمَا خَلَقْنَاكُمْ أَوَّلَ مَرَّةٍ ۚ بَلْ زَعَمْتُمْ أَلَّن نَّجْعَلَ لَكُم مَّوْعِدًا
ಮತ್ತು ಸಕಲರೂ ನಿಮ್ಮ ಪ್ರಭುವಿನ ಮುಂದೆ ಸಾಲು ಸಾಲಾಗಿ ಹಾಜರುಗೊಳಿಸಲಾಗುವರು. ಖಂಡಿತವಾಗಿಯು ಮೊದಲ ಬಾರಿಗೆ ನಾವು ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿರುವಿರಿ. ಆದರೆ ನೀವಂತು ನಾವು ನಿಮಗೆ ಪುನರುತ್ಥಾನದ ಯಾವ ವಾಗ್ದಾನವನ್ನೂ ನಿಶ್ಚಯಿಸಿಲ್ಲವೆಂದು ಭಾವಿಸಿದ್ದಿರಿ.
49وَوُضِعَ الْكِتَابُ فَتَرَى الْمُجْرِمِينَ مُشْفِقِينَ مِمَّا فِيهِ وَيَقُولُونَ يَا وَيْلَتَنَا مَالِ هَٰذَا الْكِتَابِ لَا يُغَادِرُ صَغِيرَةً وَلَا كَبِيرَةً إِلَّا أَحْصَاهَا ۚ وَوَجَدُوا مَا عَمِلُوا حَاضِرًا ۗ وَلَا يَظْلِمُ رَبُّكَ أَحَدًا
ಮತ್ತು ಕರ್ಮ ಗ್ರಂಥವನ್ನು ಮುಂದಿಡಲಾಗುವುದು. ಆಗ ನೀವು ಅಪರಾಧಿಗಳನ್ನು ಅದರಲ್ಲಿರುವುದರ ನಿಮಿತ್ತ ಭಯಭೀತರಾಗುತ್ತಿರುವುದನ್ನು ಕಾಣುವಿರಿ. ಅವರು ಹೇಳುತ್ತಿರುವರು: ಅಯ್ಯೋ, ನಮ್ಮ ದುರ್ಗತಿಯೇ, ಇದೆಂತಹ ಗ್ರಂಥ! ಚಿಕ್ಕದಿರಲಿ, ದೊಡ್ಡದಿರಲಿ ಯಾವೊಂದನ್ನೂ ಇದು ದಾಖಲಿಸದೆ ಬಿಟ್ಟಿಲ್ಲವಲ್ಲ. ಅವರು ಮಾಡಿದ್ದನ್ನೆಲ್ಲಾ ಅದರಲ್ಲಿ ಕಾಣುವರು ಮತ್ತು ನಿಮ್ಮ ಪ್ರಭವು ಯಾರ ಮೇಲೂ ಅನ್ಯಾಯ ಮಾಡುವುದಿಲ್ಲ.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
47ಆಯತ್

ಅನುವಾದ — ಅಲ್-ಕಹ್ಫ್ 47

ಸೂರಾ ಅಲ್-ಕಹ್ಫ್ ಆಯತ್ 47 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಪರ್ವತಗಳನ್ನು ಚಲಾಯಿಸುವ ದಿನದಂದು ನೀವು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಕಾಣುವಿರಿ ಮತ್ತು…

ಸೂರಾ ಆಯತ್ 47/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 45–49. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers