ಅಲ್-ಬಕರಾ · 100/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
أَوَكُلَّمَا عَاهَدُوا عَهْدًا نَّبَذَهُ فَرِيقٌ مِّنْهُم ۚ بَلْ أَكْثَرُهُمْ لَا يُؤْمِنُونَ ۝١٠٠
Awa kullamaa `aahadoo ahdan nabazahoo fareequm minhum; bal aksaruhum laa u`minoon
📖 ಕನ್ನಡ ಅರ್ಥ
ಅವರು (ಯಹೂದಿಗಳು) ಯಾವುದಾದರೂ ಒಪ್ಪಂದವನ್ನು ಮಾಡಿದಾಗ ಅವರ ಪೈಕಿಯ ಒಂದಲ್ಲಾ ಒಂದು ಪಂಗಡವು ಅದನ್ನು ಮುರಿದು ಹಾಕಲಿಲ್ಲವೇ? ವಾಸ್ತವದಲ್ಲಿ ಅವರಲ್ಲಿ ಅಧಿಕ ಮಂದಿ ವಿಶ್ವಾಸವಿರಿಸುವುದಿಲ್ಲ.

🎧 ಆಲಿಸಿ


📜 ಆಯತ್ 98-102 — ಸೂರಾ ಅಲ್-ಬಕರಾ

98مَن كَانَ عَدُوًّا لِّلَّهِ وَمَلَائِكَتِهِ وَرُسُلِهِ وَجِبْرِيلَ وَمِيكَالَ فَإِنَّ اللَّهَ عَدُوٌّ لِّلْكَافِرِينَ
ಯಾರು ಅಲ್ಲಾಹನಿಗೂ ಅವನ ದೂತರಿಗೂ, ಅವನ ಸಂದೇಶವಾಹಕರಿಗೂ, ಜಿಬ್ರೀಲನಿಗೂ, ಮೀಕಾಯೀಲನಿಗೂ ಶತ್ರುವಾಗಿರುತ್ತಾನೋ ಅಲ್ಲಾಹನು ಸಹ ಅಂತಹ ಸತ್ಯನಿಷೇಧಿಗಳ ಶತ್ರ‍್ರುವಾಗಿರುತ್ತಾನೆ.
99وَلَقَدْ أَنزَلْنَا إِلَيْكَ آيَاتٍ بَيِّنَاتٍ ۖ وَمَا يَكْفُرُ بِهَا إِلَّا الْفَاسِقُونَ
(ಓ ಪೈಗಂಬರರೇ) ನಿಸ್ಸಂಶಯವಾಗಿಯು ನಾವು ನಿಮ್ಮೆಡೆಗೆ ಸುಸ್ಪಷ್ಟವಾದ ಪ್ರಮಾಣಗಳನ್ನು ಅವತೀರ್ಣಗೊಳಿಸಿರುತ್ತೇವೆ. ಮತ್ತು ದುಷ್ಟರ ಹೊರತು ಅವುಗಳನ್ನು ಇನ್ನಾರೂ ನಿಷೇಧಿಸುವುದಿಲ್ಲ.
100أَوَكُلَّمَا عَاهَدُوا عَهْدًا نَّبَذَهُ فَرِيقٌ مِّنْهُم ۚ بَلْ أَكْثَرُهُمْ لَا يُؤْمِنُونَ
ಅವರು (ಯಹೂದಿಗಳು) ಯಾವುದಾದರೂ ಒಪ್ಪಂದವನ್ನು ಮಾಡಿದಾಗ ಅವರ ಪೈಕಿಯ ಒಂದಲ್ಲಾ ಒಂದು ಪಂಗಡವು ಅದನ್ನು ಮುರಿದು ಹಾಕಲಿಲ್ಲವೇ? ವಾಸ್ತವದಲ್ಲಿ ಅವರಲ್ಲಿ ಅಧಿಕ ಮಂದಿ ವಿಶ್ವಾಸವಿರಿಸುವುದಿಲ್ಲ.
101وَلَمَّا جَاءَهُمْ رَسُولٌ مِّنْ عِندِ اللَّهِ مُصَدِّقٌ لِّمَا مَعَهُمْ نَبَذَ فَرِيقٌ مِّنَ الَّذِينَ أُوتُوا الْكِتَابَ كِتَابَ اللَّهِ وَرَاءَ ظُهُورِهِمْ كَأَنَّهُمْ لَا يَعْلَمُونَ
ಅವರ ಬಳಿಗೆ ಅಲ್ಲಾಹನ ವತಿಯಿಂದ ಯಾವೊಬ್ಬ ಸಂದೇಶವಾಹಕನು ಅವರ ಬಳಿಯಿರುವ ಗ್ರಂಥವನ್ನು ಸತ್ಯವೆಂದು ಧೃಢೀಕರಿಸುವವನಾಗಿ ಬಂದಾಗ, ಗ್ರಂಥದವರ ಪೈಕಿ ಒಂದು ಗುಂಪು ತಮಗೇನೂ ತಿಳಿದಿಲ್ಲವೆಂಬAತೆ ಅಲ್ಲಾಹನ ಗ್ರಂಥವನ್ನು ತಮ್ಮ ಬೆನ್ನ ಹಿಂದೆ ಎಸೆದು ಬಿಟ್ಟಿತು.
102وَاتَّبَعُوا مَا تَتْلُو الشَّيَاطِينُ عَلَىٰ مُلْكِ سُلَيْمَانَ ۖ وَمَا كَفَرَ سُلَيْمَانُ وَلَٰكِنَّ الشَّيَاطِينَ كَفَرُوا يُعَلِّمُونَ النَّاسَ السِّحْرَ وَمَا أُنزِلَ عَلَى الْمَلَكَيْنِ بِبَابِلَ هَارُوتَ وَمَارُوتَ ۚ وَمَا يُعَلِّمَانِ مِنْ أَحَدٍ حَتَّىٰ يَقُولَا إِنَّمَا نَحْنُ فِتْنَةٌ فَلَا تَكْفُرْ ۖ فَيَتَعَلَّمُونَ مِنْهُمَا مَا يُفَرِّقُونَ بِهِ بَيْنَ الْمَرْءِ وَزَوْجِهِ ۚ وَمَا هُم بِضَارِّينَ بِهِ مِنْ أَحَدٍ إِلَّا بِإِذْنِ اللَّهِ ۚ وَيَتَعَلَّمُونَ مَا يَضُرُّهُمْ وَلَا يَنفَعُهُمْ ۚ وَلَقَدْ عَلِمُوا لَمَنِ اشْتَرَاهُ مَا لَهُ فِي الْآخِرَةِ مِنْ خَلَاقٍ ۚ وَلَبِئْسَ مَا شَرَوْا بِهِ أَنفُسَهُمْ ۚ لَوْ كَانُوا يَعْلَمُونَ
ಶೈತಾನರು ಸುಲೈಮಾನರ ರಾಜ್ಯಭಾರದಲ್ಲಿ ಓದುತ್ತಿದ್ದಂತಹದನ್ನು (ಯಹೂದಿಯರು) ಹಿಂಬಾಲಿಸಿದರು. ಸುಲೈಮಾನರಂತು ಸತ್ಯನಿಷೇಧಿಸಿರಲಿಲ್ಲ. ಆದರೆ ಸತ್ಯ ನಿಷೇಧವು ಶೈತಾನರದ್ದಾಗಿತ್ತು. ಅವರು ಜನರಿಗೆ ಮಾಟವನ್ನು (ಜಾದುವನ್ನು) ಕಲಿಸುತ್ತಿದ್ದರು. ಮತ್ತು ಬಾಬಿಲೋನಿಯಾದಲ್ಲಿದ್ದ ಹಾರೂತ್-ಮಾರೂತ್‌ರೆಂಬ ಇಬ್ಬರು ದೂತರ ಮೇಲೆ ಅವತೀರ್ಣಗೊಳಿಸಲಾಗಿದ್ದನ್ನೂ (ಯಹೂದಿಯರು) ಹಿಂಬಾಲಿಸಿದರು. ನಾವು (ಹಾರೂತ್-ಮಾರೂತ್) ಒಂದು ಪರೀಕ್ಷೆಯಾಗಿದ್ದೇವೆ. ಆದ್ದರಿಂದ “ನೀನು ಸತ್ಯ ನಿಷೇಧಿಸಬೇಡ” ಎಂದು ಹೇಳದೆ ಅವರಿಬ್ಬರೂ ಯಾವೊಬ್ಬನಿಗೂ ಜಾದುವನ್ನು ಕಲಿಸುತ್ತಿರಲಿಲ್ಲ. ನಂತರ ಜನರು ಅವರಿಂದ ಪತಿ ಪತ್ನಿಯ ನಡುವೆ ಒಡಕುಂಟು ಮಾಡುವುದನ್ನು ಕಲಿತುಕೊಳ್ಳುತ್ತಿದ್ದರು. ವಸ್ತುತಃ ಅವರು ಅಲ್ಲಾಹನು ಬಯಸದ ವಿನಃ ಅದರ ಮೂಲಕ ಯಾರೊಬ್ಬರಿಗೂ ಯಾವ ತೊಂದರೆಯನ್ನೂ ನೀಡಲಾರರು. ಅವರು ತಮಗೆ ಹಾನಿಯೊದಗಿಸುವುದನ್ನು ಮತ್ತು ಲಾಭ ನೀಡದಂತಹದನ್ನೂ ಕಲಿಯುತ್ತಿದ್ದರು ಮತ್ತು ಜಾದುವನ್ನು ಕಲಿಯುವವನಿಗೆ ಪರಲೋಕದಲ್ಲಿ ಯಾವುದೇ ಪಾಲು ಇಲ್ಲವೆಂಬುದನ್ನು ನಿಶ್ಚಯವಾಗಿಯು ಅವರು ತಿಳಿದಿದ್ದರು ಮತ್ತು ಅವರು ತಮ್ಮ ಆತ್ಮಗಳ ಬದಲಿಗೆ ಖರೀದಿಸಿದ್ದು ಎಷ್ಟೋ ನಿಕೃಷ್ಟವಾಗಿದೆ. ಅವರು ಅರಿಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
100ಆಯತ್

ಅನುವಾದ — ಅಲ್-ಬಕರಾ 100

ಸೂರಾ ಅಲ್-ಬಕರಾ ಆಯತ್ 100 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು (ಯಹೂದಿಗಳು) ಯಾವುದಾದರೂ ಒಪ್ಪಂದವನ್ನು ಮಾಡಿದಾಗ ಅವರ ಪೈಕಿಯ ಒಂದಲ್ಲಾ ಒಂದು ಪಂಗಡವು…

ಸೂರಾ ಆಯತ್ 100/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 98–102. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers