ಅಲ್-ಬಕರಾ · 24/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
فَإِن لَّمْ تَفْعَلُوا وَلَن تَفْعَلُوا فَاتَّقُوا النَّارَ الَّتِي وَقُودُهَا النَّاسُ وَالْحِجَارَةُ ۖ أُعِدَّتْ لِلْكَافِرِينَ ۝٢٤
Fail lam taf`aloo wa lan taf`aloo fattaqun Naaral latee waqooduhan naasu walhijaaratu u`iddat lilkaafireen
📖 ಕನ್ನಡ ಅರ್ಥ
ಇನ್ನು ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತ ನೀವು ಹಾಗೆಂದಿಗೂ ಮಾಡಲಾರಿರಿ. ಆದ್ದರಿಂದ ನೀವು ಮನುಷ್ಯರನ್ನು ಮತ್ತು ಶಿಲೆಗಳÀನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗೆ ಸಿದ್ಧsಗೊಳಿಸಲಾಗಿದೆ.

🎧 ಆಲಿಸಿ


📜 ಆಯತ್ 22-26 — ಸೂರಾ ಅಲ್-ಬಕರಾ

22الَّذِي جَعَلَ لَكُمُ الْأَرْضَ فِرَاشًا وَالسَّمَاءَ بِنَاءً وَأَنزَلَ مِنَ السَّمَاءِ مَاءً فَأَخْرَجَ بِهِ مِنَ الثَّمَرَاتِ رِزْقًا لَّكُمْ ۖ فَلَا تَجْعَلُوا لِلَّهِ أَندَادًا وَأَنتُمْ تَعْلَمُونَ
ಅವನೆ ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯು, ಆಕಾಶವನ್ನು ಮೇಲ್ಛಾವಣಿಯನ್ನಾಗಿಯು ಮಾಡಿರುವನು ಮತ್ತು ಆಕಾಶದಿಂದ ನೀರನ್ನು ಸುರಿಸಿ ಅದರ ಮೂಲಕ ಫಲ ಬೆಳೆಗಳನ್ನು ಹೊರತಂದು ನಿಮಗೆ ಅನ್ನಾಧಾರವನ್ನು ನೀಡಿದನು. ಜಾಗೃತೆ! ನೀವು (ಈ ಸತ್ಯವನ್ನು) ಅರಿತವರಾಗಿದ್ದೂ ಅಲ್ಲಾಹನಿಗೆ ಸರಿಸಮಾನರನ್ನು (ಉಪದೇವರುಗಳನ್ನು) ಮಾಡದಿರಿ.
23وَإِن كُنتُمْ فِي رَيْبٍ مِّمَّا نَزَّلْنَا عَلَىٰ عَبْدِنَا فَأْتُوا بِسُورَةٍ مِّن مِّثْلِهِ وَادْعُوا شُهَدَاءَكُم مِّن دُونِ اللَّهِ إِن كُنتُمْ صَادِقِينَ
ನಾವು ನಮ್ಮ ದಾಸನ (ಮುಹಮ್ಮದ್(ಸ) ರವರ) ಮೇಲೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್) ನಿಮಗೆ ಸಂದೇಹವಿದ್ದರೆ ನೀವು ಅದರಂತಹ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ. ಮತ್ತು ಅಲ್ಲಾಹನ ಹೊರತು ನಿಮ್ಮ ಸಹಾಯಕರನ್ನೂ ಕರೆದುಕೊಳ್ಳಿರಿ ನೀವು ಸತ್ಯವಂತರಾಗಿದ್ದರೆ.
24فَإِن لَّمْ تَفْعَلُوا وَلَن تَفْعَلُوا فَاتَّقُوا النَّارَ الَّتِي وَقُودُهَا النَّاسُ وَالْحِجَارَةُ ۖ أُعِدَّتْ لِلْكَافِرِينَ
ಇನ್ನು ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತ ನೀವು ಹಾಗೆಂದಿಗೂ ಮಾಡಲಾರಿರಿ. ಆದ್ದರಿಂದ ನೀವು ಮನುಷ್ಯರನ್ನು ಮತ್ತು ಶಿಲೆಗಳÀನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗೆ ಸಿದ್ಧsಗೊಳಿಸಲಾಗಿದೆ.
25وَبَشِّرِ الَّذِينَ آمَنُوا وَعَمِلُوا الصَّالِحَاتِ أَنَّ لَهُمْ جَنَّاتٍ تَجْرِي مِن تَحْتِهَا الْأَنْهَارُ ۖ كُلَّمَا رُزِقُوا مِنْهَا مِن ثَمَرَةٍ رِّزْقًا ۙ قَالُوا هَٰذَا الَّذِي رُزِقْنَا مِن قَبْلُ ۖ وَأُتُوا بِهِ مُتَشَابِهًا ۖ وَلَهُمْ فِيهَا أَزْوَاجٌ مُّطَهَّرَةٌ ۖ وَهُمْ فِيهَا خَالِدُونَ
ಓ ಪೈಗಂಬರರೇ ! ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ ಎಂದು ಸುವಾರ್ತೆ ನೀಡಿರಿ. ಅವರಿಗೆ ಅವುಗಳಲ್ಲಿಂದ ಫಲಗಳನ್ನು ಆಹಾರವಾಗಿ ನೀಡಲಾದಾಗಲೆಲ್ಲಾ ಅವರು (ಅದರ ಬಾಹ್ಯ ರೂಪವನ್ನು ನೋಡಿ) ಇದು ಮೊದಲು ನಮಗೆ ನೀಡಲಾದಂತಹದ್ದೇ ಆಗಿದೆ ಎನ್ನುವರು. ಮತ್ತು ಅವರಿಗೆ ಪರಸ್ಪರ ಸಾದೃಷ್ಯವಿರುವಂತಹ ಫಲಗಳನ್ನು ನೀಡಲಾಗುವುದು ಮತ್ತು ಅವರಿಗೆ ಅದರಲ್ಲಿ ಪರಿಶುದ್ಧರಾದ ಪತ್ನಿಯರಿರುವರು ಹಾಗೂ ಅವರು ಅದರಲ್ಲಿ (ಆ ಸ್ವರ್ಗದಲ್ಲಿ) ಶಾಶ್ವತವಾಗಿರುವರು.
26۞ إِنَّ اللَّهَ لَا يَسْتَحْيِي أَن يَضْرِبَ مَثَلًا مَّا بَعُوضَةً فَمَا فَوْقَهَا ۚ فَأَمَّا الَّذِينَ آمَنُوا فَيَعْلَمُونَ أَنَّهُ الْحَقُّ مِن رَّبِّهِمْ ۖ وَأَمَّا الَّذِينَ كَفَرُوا فَيَقُولُونَ مَاذَا أَرَادَ اللَّهُ بِهَٰذَا مَثَلًا ۘ يُضِلُّ بِهِ كَثِيرًا وَيَهْدِي بِهِ كَثِيرًا ۚ وَمَا يُضِلُّ بِهِ إِلَّا الْفَاسِقِينَ
ನಿಸ್ಸಂದೇಹವಾಗಿಯೂ ಅಲ್ಲಾಹನು ಯಾವುದೇ ಉಪಮೆಯನ್ನು ನೀಡಲು ನಾಚಿಕೆ ಪಡುವುದಿಲ್ಲ. ಅದು ಸೊಳ್ಳೆಯದ್ದಾಗಿರಲಿ, ಅಥವಾ ಅದಕ್ಕಿಂತ ಕ್ಷುಲ್ಲಕ ವಸ್ತುವಿನದ್ದೇ ಆಗಲಿ, ಆದರೆ ಸತ್ಯವಿಶ್ವಾಸಿಗಳು ಅದನ್ನು ತಮ್ಮ ಪ್ರಭುವಿನ ಕಡೆಯ ಸತ್ಯವೆಂದು ತಿಳಿಯುತ್ತಾರೆ. ಮತ್ತು ಸತ್ಯನಿಷೇಧಿಗಳು ಈ ಉಪಮೆಯ ಮೂಲಕ ಅಲ್ಲಾಹನು ಉದ್ದೇಶಿಸಿರುವುದಾದರೂ ಏನು ಎನ್ನುತ್ತಾರೆ. ಇದರ ಮೂಲಕ ಅವನು ಬಹುತೇಕ ಜನರನ್ನು ಪಥಭ್ರಷ್ಟಗೊಳಿಸುತ್ತಾನೆ. ಹಾಗೂ ಇದರ ಮೂಲಕ ಅನೇಕ ಜನರನ್ನು ಸ್ವರ್ಗಕ್ಕೆ ಮುನ್ನಡೆಸುತ್ತಾನೆ. ಮತ್ತು ಇದರ ಮೂಲಕ ಅವನು ಕರ್ಮ ಭ್ರಷ್ಟರನ್ನು ಮಾತ್ರ ಪಥಭ್ರಷ್ಟಗೊಳಿಸುತ್ತಾನೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
24ಆಯತ್

ಅನುವಾದ — ಅಲ್-ಬಕರಾ 24

ಸೂರಾ ಅಲ್-ಬಕರಾ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಇನ್ನು ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತ ನೀವು ಹಾಗೆಂದಿಗೂ ಮಾಡಲಾರಿರಿ. ಆದ್ದರಿಂದ…

ಸೂರಾ ಆಯತ್ 24/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 22–26. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers