ಅಲ್-ಅಂಬಿಯಾ · 78/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَدَاوُودَ وَسُلَيْمَانَ إِذْ يَحْكُمَانِ فِي الْحَرْثِ إِذْ نَفَشَتْ فِيهِ غَنَمُ الْقَوْمِ وَكُنَّا لِحُكْمِهِمْ شَاهِدِينَ ۝٧٨
Wa Daawooda wa Sulaimaana iz yahkumaani fil harsi iz nafashat feehi ghanamul qawmi wa kunnaa lihukmihim shaahideen
📖 ಕನ್ನಡ ಅರ್ಥ
ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಒಂದು ಜನಾಂಗದ ಅಡುಗಳು ಒಂದು ಹೊಲದಲ್ಲಿ ರಾತ್ರಿ ಹೊತ್ತಲ್ಲಿ ಮೇಯ್ದಿದ್ದವು ಮತ್ತು ನಾವು ಅವರ ತೀರ್ಪಿನ ಕುರಿತು ಸಾಕ್ಷಿಯಾಗಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 76-80 — ಸೂರಾ ಅಲ್-ಅಂಬಿಯಾ

76وَنُوحًا إِذْ نَادَىٰ مِن قَبْلُ فَاسْتَجَبْنَا لَهُ فَنَجَّيْنَاهُ وَأَهْلَهُ مِنَ الْكَرْبِ الْعَظِيمِ
ನೂಹರವರು ಇದಕ್ಕೆ ಮೊದಲು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರನ್ನು, ಅವರ ಮನೆಯವರನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
77وَنَصَرْنَاهُ مِنَ الْقَوْمِ الَّذِينَ كَذَّبُوا بِآيَاتِنَا ۚ إِنَّهُمْ كَانُوا قَوْمَ سَوْءٍ فَأَغْرَقْنَاهُمْ أَجْمَعِينَ
ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದ ವಿರುದ್ಧ ಸಹಾಯ ನೀಡಿದೆವು. ನಿಜವಾಗಿಯು ಅವರು ಕೆಟ್ಟ ಜನರಾಗಿದ್ದರು.ಆದ್ದರಿಂದ ನಾವು ಅವರೆಲ್ಲರನ್ನು ಮುಳಿಗಿಸಿ ಬಿಟ್ಟೆವು.
78وَدَاوُودَ وَسُلَيْمَانَ إِذْ يَحْكُمَانِ فِي الْحَرْثِ إِذْ نَفَشَتْ فِيهِ غَنَمُ الْقَوْمِ وَكُنَّا لِحُكْمِهِمْ شَاهِدِينَ
ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಒಂದು ಜನಾಂಗದ ಅಡುಗಳು ಒಂದು ಹೊಲದಲ್ಲಿ ರಾತ್ರಿ ಹೊತ್ತಲ್ಲಿ ಮೇಯ್ದಿದ್ದವು ಮತ್ತು ನಾವು ಅವರ ತೀರ್ಪಿನ ಕುರಿತು ಸಾಕ್ಷಿಯಾಗಿದ್ದೆವು.
79فَفَهَّمْنَاهَا سُلَيْمَانَ ۚ وَكُلًّا آتَيْنَا حُكْمًا وَعِلْمًا ۚ وَسَخَّرْنَا مَعَ دَاوُودَ الْجِبَالَ يُسَبِّحْنَ وَالطَّيْرَ ۚ وَكُنَّا فَاعِلِينَ
ನಾವದರ ಸರಿಯಾದ ತೀರ್ಪನ್ನು ಸುಲೈಮಾನರಿಗೆ ತಿಳಿಸಿಕೊಟ್ಟೆವು. ನಾವು ಇಬ್ಬರಿಗೂ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಿದ್ದೆವು ಮತ್ತು ದಾವೂದರವರೊಂದಿಗೆ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ಪರ್ವತಗಳನ್ನು, ಪಕ್ಷಿಗಳನ್ನು ವಿಧೇಯಗೊಳಿಸಿ ಕೊಟ್ಟೆವು ಮತ್ತು ನಾವು ಹೀಗೆ ಮಾಡುವವರಾಗಿದ್ದೆವು.
80وَعَلَّمْنَاهُ صَنْعَةَ لَبُوسٍ لَّكُمْ لِتُحْصِنَكُم مِّن بَأْسِكُمْ ۖ فَهَلْ أَنتُمْ شَاكِرُونَ
ನಾವು ದಾವೂದರಿಗೆ ಯುದ್ಧಗಳ ಸಂದರ್ಭದಲ್ಲಿ ನಿಮ್ಮನ್ನು ಅಪಾಯದಿಂದ ರಕ್ಷಿಸಲು ನಿಮಗೋಸ್ಕರ ಎದೆಗವಚ ನಿರ್ಮಾಣ ಕೌಶಲ್ಯವನ್ನು ಕಲಿಸಿಕೊಟ್ಟೆವು. ನೀವು ಕೃತಜ್ಞತೆ ತೋರುವಿರಾ?
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
78ಆಯತ್

ಅನುವಾದ — ಅಲ್-ಅಂಬಿಯಾ 78

ಸೂರಾ ಅಲ್-ಅಂಬಿಯಾ ಆಯತ್ 78 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು…

ಸೂರಾ ಆಯತ್ 78/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 76–80. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers