ಆಲ್-ಇಮ್ರಾನ್ · 183/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
الَّذِينَ قَالُوا إِنَّ اللَّهَ عَهِدَ إِلَيْنَا أَلَّا نُؤْمِنَ لِرَسُولٍ حَتَّىٰ يَأْتِيَنَا بِقُرْبَانٍ تَأْكُلُهُ النَّارُ ۗ قُلْ قَدْ جَاءَكُمْ رُسُلٌ مِّن قَبْلِي بِالْبَيِّنَاتِ وَبِالَّذِي قُلْتُمْ فَلِمَ قَتَلْتُمُوهُمْ إِن كُنتُمْ صَادِقِينَ ۝١٨٣
Allazeena qaalooo innal laaha `ahida ilainaaa allaa nu`mina liRasoolin hatta yaa tiyanaa biqurbaanin taa kuluhun naar; qul qad jaaa`akum Rusulum min qablee bilbaiyinaati wa billazee qultum falima qataltumoohum in kuntum saadiqeen
📖 ಕನ್ನಡ ಅರ್ಥ
ಸಂದೇಶವಾಹಕರು ನಮ್ಮ ಮುಂದೆ ಬಲಿಯನ್ನರ್ಪಿಸಿ ಅದನ್ನು ಅಗ್ನಿಯು ಭಕ್ಷಿಸುವುದನ್ನು ನಾವು (ಕಣ್ಣಾರೆ ಕಾಣುವ ತನಕ) ಅವರನ್ನು ಅಂಗೀಕರಿಸಬಾರದೆAದು ಅಲ್ಲಾಹನು ನಮ್ಮೊಂದಿಗೆ ಕರಾರು ಪಡೆದಿದ್ದಾನೆಂದು ಅವರು ಹೇಳಿದವರಾಗಿದ್ದಾರೆ. ನೀವು ಹೇಳಿರಿ: ನೀವು ಸತ್ಯ ಸಂಧರಾಗಿದ್ದರೆ ನನಗಿಂತ ಮುಂಚೆ ಬಂದ ಸಂದೇಶವಾಹಕರು ನಿಮ್ಮೆಡೆಗೆ ಸ್ಪಷ್ಟ ದೃಷ್ಟಾಂತಗಳನ್ನು ಮತ್ತು ನೀವು ಹೇಳಿದ್ದನ್ನು (ಅಗ್ನಿಪರೀಕ್ಷೆಯನ್ನು) ಸಹ ತಂದಿದ್ದರು. ಹಾಗಿರುವಾಗ ನೀವು ಅವರನ್ನೇಕೆ ವಧಿಸಿದಿರಿ.

🎧 ಆಲಿಸಿ


📜 ಆಯತ್ 181-185 — ಸೂರಾ ಆಲ್-ಇಮ್ರಾನ್

181لَّقَدْ سَمِعَ اللَّهُ قَوْلَ الَّذِينَ قَالُوا إِنَّ اللَّهَ فَقِيرٌ وَنَحْنُ أَغْنِيَاءُ ۘ سَنَكْتُبُ مَا قَالُوا وَقَتْلَهُمُ الْأَنبِيَاءَ بِغَيْرِ حَقٍّ وَنَقُولُ ذُوقُوا عَذَابَ الْحَرِيقِ
ಅಲ್ಲಾಹನು ನಿರ್ಗತಿಕನಾಗಿದ್ದಾನೆ. ಮತ್ತು ನಾವು ಧನಿಕರಾಗಿದ್ದೇವೆಂದು ಹೇಳಿದವÀರ ಮಾತನ್ನು ಖಂಡಿತವಾಗಿಯು ಅಲ್ಲಾಹನು ಆಲಿಸಿದ್ದಾನೆ. ಅವರು ಹೇಳಿರುವ ಮಾತನ್ನು ಮತ್ತು ಅವರು ಅನ್ಯಾಯವಾಗಿ ಪೈಗಂಬರರನ್ನು ಕೊಂದಿರುವುದನ್ನು ನಾವು ದಾಖಲಿಸುತ್ತೇವೆ. ಮತ್ತು ಪುನರುತ್ಥಾನದ ದಿನ ಧಗಧಗಿಸುತ್ತಿರುವ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳುವೆವು.
182ذَٰلِكَ بِمَا قَدَّمَتْ أَيْدِيكُمْ وَأَنَّ اللَّهَ لَيْسَ بِظَلَّامٍ لِّلْعَبِيدِ
ಇದು ನಿಮ್ಮ ಕೈಗಳು ಮಾಡಿದ ಕರ್ಮಗಳ ಫಲವಾಗಿದೆ ಮತ್ತು ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ.
183الَّذِينَ قَالُوا إِنَّ اللَّهَ عَهِدَ إِلَيْنَا أَلَّا نُؤْمِنَ لِرَسُولٍ حَتَّىٰ يَأْتِيَنَا بِقُرْبَانٍ تَأْكُلُهُ النَّارُ ۗ قُلْ قَدْ جَاءَكُمْ رُسُلٌ مِّن قَبْلِي بِالْبَيِّنَاتِ وَبِالَّذِي قُلْتُمْ فَلِمَ قَتَلْتُمُوهُمْ إِن كُنتُمْ صَادِقِينَ
ಸಂದೇಶವಾಹಕರು ನಮ್ಮ ಮುಂದೆ ಬಲಿಯನ್ನರ್ಪಿಸಿ ಅದನ್ನು ಅಗ್ನಿಯು ಭಕ್ಷಿಸುವುದನ್ನು ನಾವು (ಕಣ್ಣಾರೆ ಕಾಣುವ ತನಕ) ಅವರನ್ನು ಅಂಗೀಕರಿಸಬಾರದೆAದು ಅಲ್ಲಾಹನು ನಮ್ಮೊಂದಿಗೆ ಕರಾರು ಪಡೆದಿದ್ದಾನೆಂದು ಅವರು ಹೇಳಿದವರಾಗಿದ್ದಾರೆ. ನೀವು ಹೇಳಿರಿ: ನೀವು ಸತ್ಯ ಸಂಧರಾಗಿದ್ದರೆ ನನಗಿಂತ ಮುಂಚೆ ಬಂದ ಸಂದೇಶವಾಹಕರು ನಿಮ್ಮೆಡೆಗೆ ಸ್ಪಷ್ಟ ದೃಷ್ಟಾಂತಗಳನ್ನು ಮತ್ತು ನೀವು ಹೇಳಿದ್ದನ್ನು (ಅಗ್ನಿಪರೀಕ್ಷೆಯನ್ನು) ಸಹ ತಂದಿದ್ದರು. ಹಾಗಿರುವಾಗ ನೀವು ಅವರನ್ನೇಕೆ ವಧಿಸಿದಿರಿ.
184فَإِن كَذَّبُوكَ فَقَدْ كُذِّبَ رُسُلٌ مِّن قَبْلِكَ جَاءُوا بِالْبَيِّنَاتِ وَالزُّبُرِ وَالْكِتَابِ الْمُنِيرِ
ಇನ್ನೂ ಅವರು ನಿಮ್ಮನ್ನು ನಿಷೇಧಿಸುವುದಾದರೆ, ನಿಮಗಿಂತ ಮುಂಚೆ ಸ್ಪಷ್ಟಪುರಾವೆಗಳೊಂದಿಗೆ, ಪ್ರಕಾಶ ಬೀರುವ ಗ್ರಂಥದೊAದಿಗೆ ಬಂದ ಸಂದೇಶವಾಹಕರು ಸಹ ನಿಷೇಧಕ್ಕೊಳಗಾಗಿದ್ದಾರೆ.
185كُلُّ نَفْسٍ ذَائِقَةُ الْمَوْتِ ۗ وَإِنَّمَا تُوَفَّوْنَ أُجُورَكُمْ يَوْمَ الْقِيَامَةِ ۖ فَمَن زُحْزِحَ عَنِ النَّارِ وَأُدْخِلَ الْجَنَّةَ فَقَدْ فَازَ ۗ وَمَا الْحَيَاةُ الدُّنْيَا إِلَّا مَتَاعُ الْغُرُورِ
ಪ್ರತಿಯೊಂದು ಜೀವವೂ ಮರಣದ ರುಚಿ ಸವಿಯಲಿದೆ ಮತ್ತು ನಿಮಗೆ ಪುನರುತ್ಥಾನ ದಿನದಂದು ನಿಮ್ಮ ಪ್ರತಿಫಲಗಳನ್ನು ಸಂಪೂರ್ಣವಾಗಿ ನೀಡÀಲಾಗುವುದು. ಇನ್ನು ಯಾರು ನರಕದಿಂದ ದೂರ ಸರಿಸಲಾದನೋ ಮತ್ತು ಸ್ವರ್ಗದಲ್ಲಿ ಪ್ರವೇಶಿಸಲಾದನೋ ಖಂಡಿತವಾಗಿಯು ಅವನು ಯಶಸ್ಸು ಪಡೆದನು ಮತ್ತು ಐಹಿಕ ಜೀವನವು ಕೇವಲ ಮೋಸದ ವಸ್ತುವಾಗಿದೆ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
183ಆಯತ್

ಅನುವಾದ — ಆಲ್-ಇಮ್ರಾನ್ 183

ಸೂರಾ ಆಲ್-ಇಮ್ರಾನ್ ಆಯತ್ 183 - ಓದಿ, ಆಲಿಸಿ, ಅನುವಾದ, ಕನ್ನಡ : ಸಂದೇಶವಾಹಕರು ನಮ್ಮ ಮುಂದೆ ಬಲಿಯನ್ನರ್ಪಿಸಿ ಅದನ್ನು ಅಗ್ನಿಯು ಭಕ್ಷಿಸುವುದನ್ನು ನಾವು (ಕಣ್ಣಾರೆ ಕಾಣುವ…

ಸೂರಾ ಆಯತ್ 183/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 181–185. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers