ಆಲ್-ಇಮ್ರಾನ್ · 38/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
هُنَالِكَ دَعَا زَكَرِيَّا رَبَّهُ ۖ قَالَ رَبِّ هَبْ لِي مِن لَّدُنكَ ذُرِّيَّةً طَيِّبَةً ۖ إِنَّكَ سَمِيعُ الدُّعَاءِ ۝٣٨
Hunaaalika da`aa Zakariyyaa Rabbahoo qaala Rabbi hab lee mil ladunka zurriyyatan taiyibatan innaka samee`ud du`aaa
📖 ಕನ್ನಡ ಅರ್ಥ
ಅದೇ ಸಮಯದಲ್ಲಿ ಝಕರಿಯ್ಯಾ(ಅ) ತನ್ನ ಪ್ರಭುವಿನೊಡನೆ ಪ್ರಾರ್ಥಿಸಿದರು: 'ಓ ನನ್ನ ಪ್ರಭುವೇ, ನಿನ್ನವತಿಯಿಂದ ನನಗೆ ಸುನೀತವಾದ ಸಂತತಿಯನ್ನು ದಯಪಾಲಿಸು. ನಿಸ್ಸಂದೇಹವಾಗಿಯು ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ'.

🎧 ಆಲಿಸಿ


📜 ಆಯತ್ 36-40 — ಸೂರಾ ಆಲ್-ಇಮ್ರಾನ್

36فَلَمَّا وَضَعَتْهَا قَالَتْ رَبِّ إِنِّي وَضَعْتُهَا أُنثَىٰ وَاللَّهُ أَعْلَمُ بِمَا وَضَعَتْ وَلَيْسَ الذَّكَرُ كَالْأُنثَىٰ ۖ وَإِنِّي سَمَّيْتُهَا مَرْيَمَ وَإِنِّي أُعِيذُهَا بِكَ وَذُرِّيَّتَهَا مِنَ الشَّيْطَانِ الرَّجِيمِ
ಆಕೆ ಹೆಣ್ಣು ಮಗುವನ್ನು ಜನ್ಮ ನೀಡಿದಾಗ ಹೇಳಿದಳು: 'ನನ್ನ ಪ್ರಭು ನನಗೆ ಹೆಣ್ಣು ಮಗುವಾಗಿದೆ-ವಾಸ್ತವದಲ್ಲಿ ಅವಳು ಜನ್ಮವಿತ್ತಿರುವುದೇನೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ ಮತ್ತು ಗಂಡು ಮಗು (ಹರಕೆಗೆ ತಕ್ಕದ್ದಾಗಿತ್ತು ಏಕೆಂದರೆ ಅದು) ಹೆಣ್ಣಿನಂತೆ ದುರ್ಬಲವಾಗಿರುವುದಿಲ್ಲ. ನಿಸ್ಸಂಶಯವಾಗಿ ನಾನು ಅದರ ಹೆಸರು ಮರ್ಯಮ್ ಎಂದು ಇಟ್ಟಿರುವೆನು. ಆಕೆಯನ್ನು ಮತ್ತು ಆಕೆಯ ಸಂತತಿಗಳನ್ನೂ ಬಹಿಷ್ಕೃತ ಶೈತಾನನಿಂದ ನಿನ್ನ ಅಭಯ ಬೇಡುತ್ತೇನೆ.
37فَتَقَبَّلَهَا رَبُّهَا بِقَبُولٍ حَسَنٍ وَأَنبَتَهَا نَبَاتًا حَسَنًا وَكَفَّلَهَا زَكَرِيَّا ۖ كُلَّمَا دَخَلَ عَلَيْهَا زَكَرِيَّا الْمِحْرَابَ وَجَدَ عِندَهَا رِزْقًا ۖ قَالَ يَا مَرْيَمُ أَنَّىٰ لَكِ هَٰذَا ۖ قَالَتْ هُوَ مِنْ عِندِ اللَّهِ ۖ إِنَّ اللَّهَ يَرْزُقُ مَن يَشَاءُ بِغَيْرِ حِسَابٍ
ಹಾಗೆಯೇ ಅವಳ ಪ್ರಭು ಆಕೆಯನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದನು ಮತ್ತು ಉತ್ತಮ ರೀತಿಯಲ್ಲಿ ಆಕೆಯ ಪೋಷಣೆಯನ್ನು ಮಾಡಿದನು ಮತ್ತು ಆಕೆಯ ಪರಿಪಾಲನೆಯ ಹೊಣೆಗಾರಿಕೆ ಝಕರಿಯ್ಯಾ(ಅ)ರಿಗೆ ವಹಿಸಿದನು. ಝಕರಿಯ್ಯಾ(ಅ) ಆಕೆಯ ಆರಾಧನೆ ಕೋಣೆಗೆ ಹೋದಾಗಲೆಲ್ಲಾ ಆಕೆಯ ಬಳಿ ಯಾವುದಾದರೂ ಆಹಾರ ಇಡಲಾಗಿರುವುದನ್ನು ಕಾಣುತ್ತಿದ್ದರು. ಒಮ್ಮೆ ಅವರು ಕೇಳಿದರು. ಓ ಮರ್ಯಮ್, ಈ ಆಹಾರವು ನಿನ್ನಲ್ಲಿಗೆ ಎಲ್ಲಿಂದ ಬಂತು? ಆಕೆ ಉತ್ತರಿಸಿದಳು 'ಇದು ಅಲ್ಲಾಹನ ಬಳಿಯಿಂದಾಗಿದೆ'. ನಿಸ್ಸಂದೇಹವಾಗಿಯು ಅಲ್ಲಾಹನು ತಾನಿಚ್ಛಿಸುವವರಿಗೆ ಲೆಕ್ಕವಿಲ್ಲದ್ದಷ್ಟು ನೀಡುತ್ತಾನೆ.
38هُنَالِكَ دَعَا زَكَرِيَّا رَبَّهُ ۖ قَالَ رَبِّ هَبْ لِي مِن لَّدُنكَ ذُرِّيَّةً طَيِّبَةً ۖ إِنَّكَ سَمِيعُ الدُّعَاءِ
ಅದೇ ಸಮಯದಲ್ಲಿ ಝಕರಿಯ್ಯಾ(ಅ) ತನ್ನ ಪ್ರಭುವಿನೊಡನೆ ಪ್ರಾರ್ಥಿಸಿದರು: 'ಓ ನನ್ನ ಪ್ರಭುವೇ, ನಿನ್ನವತಿಯಿಂದ ನನಗೆ ಸುನೀತವಾದ ಸಂತತಿಯನ್ನು ದಯಪಾಲಿಸು. ನಿಸ್ಸಂದೇಹವಾಗಿಯು ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ'.
39فَنَادَتْهُ الْمَلَائِكَةُ وَهُوَ قَائِمٌ يُصَلِّي فِي الْمِحْرَابِ أَنَّ اللَّهَ يُبَشِّرُكَ بِيَحْيَىٰ مُصَدِّقًا بِكَلِمَةٍ مِّنَ اللَّهِ وَسَيِّدًا وَحَصُورًا وَنَبِيًّا مِّنَ الصَّالِحِينَ
ತರುವಾಯ ಅವರು ಕೋಣೆಯಲ್ಲಿ ನಮಾಝ್ ಮಾಡುತ್ತಾ ನಿಂತಿದ್ದಾಗ ಮಲಕ್ (ದೂತರು) ಅವರಿಗೆ ಕರೆದು ಹೇಳಿದರು: ನಿಸ್ಸಂಶಯವಾಗಿಯು ಅಲ್ಲಾಹನು ನಿಮಗೆ 'ಯಾಹ್ಯಾರ (ಪುತ್ರನ) ಕುರಿತು ಶುಭವಾರ್ತೆಯನ್ನು ನೀಡುತ್ತಾನೆ. ಅವರು (ಯಾಹ್ಯಾ) ಅಲ್ಲಾಹನ ವಚನವನ್ನು (ಈಸಾರವರನ್ನು) ಸತ್ಯವೆಂದು ಸಮರ್ಥಿಸುವವರೂ, ನಾಯಕರೂ, ಆತ್ಮಸಂಯಮಿಯೂ, ಸಜ್ಜನರಲ್ಲಿ ಸೇರಿದ ಪೈಗಂಬರರಾಗಿರುವರು'.
40قَالَ رَبِّ أَنَّىٰ يَكُونُ لِي غُلَامٌ وَقَدْ بَلَغَنِيَ الْكِبَرُ وَامْرَأَتِي عَاقِرٌ ۖ قَالَ كَذَٰلِكَ اللَّهُ يَفْعَلُ مَا يَشَاءُ
ಝಕರಿಯ್ಯಾ ಹೇಳಿದರು: 'ಓ ನನ್ನ ಪ್ರಭು, ನನಗೆ ಮಗು ಆಗುವುದಾದರೂ ಹೇಗೆ” ನಾನು ವೃದ್ಧನಾಗಿರುವೆನು ಮತ್ತು ನನ್ನ ಪತ್ನಿಯು ಬಂಜೆಯಾಗಿದ್ದಾಳೆ'. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
38ಆಯತ್

ಅನುವಾದ — ಆಲ್-ಇಮ್ರಾನ್ 38

ಸೂರಾ ಆಲ್-ಇಮ್ರಾನ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ಅದೇ ಸಮಯದಲ್ಲಿ ಝಕರಿಯ್ಯಾ(ಅ) ತನ್ನ ಪ್ರಭುವಿನೊಡನೆ ಪ್ರಾರ್ಥಿಸಿದರು: 'ಓ ನನ್ನ ಪ್ರಭುವೇ, ನಿನ್ನವತಿಯಿಂದ…

ಸೂರಾ ಆಯತ್ 38/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 36–40. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers