ಅಲ್-ಆರಾಫ್ · 28/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
وَإِذَا فَعَلُوا فَاحِشَةً قَالُوا وَجَدْنَا عَلَيْهَا آبَاءَنَا وَاللَّهُ أَمَرَنَا بِهَا ۗ قُلْ إِنَّ اللَّهَ لَا يَأْمُرُ بِالْفَحْشَاءِ ۖ أَتَقُولُونَ عَلَى اللَّهِ مَا لَا تَعْلَمُونَ ٢٨
Transliteration
Wa izaa fa`aloo faahishatan qaaloo wajadnaa `alaihaaa aabaaa`ana wallaahu amaranaa bihaa; qul innal laaha laa yaamuru bilfahshaaa`i a-taqooloona `alal laahi mmaa laa ta`lamoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವರು ಯಾವುದಾದರು ನೀಚ ಕೃತ್ಯವನ್ನು ಮಾಡಿದರೆ ಹೇಳುತ್ತಾರೆ: ನಾವು ನಮ್ಮ ಪೂರ್ವಿಕರನ್ನು ಹೀಗೆ ಮಾಡುತ್ತಿರುವುದಾಗಿ ಕಂಡಿದ್ದೇವೆ ಮತ್ತು ಅಲ್ಲಾಹನು ನಮಗೆ ಇದರ ಆಜ್ಞೆಯನ್ನು ನೀಡಿದ್ದಾನೆ. ನೀವು ಹೇಳಿರಿ: ಅಲ್ಲಾಹನು ನೀಚ ಕೃತ್ಯಗಳ ಆದೇಶ ನೀಡುವುದಿಲ್ಲ. ನಿಮಗೆ ಅರಿವಿಲ್ಲದ್ದನ್ನು ನೀವು ಅಲ್ಲಾಹನ ಹೆಸರಿನಲ್ಲಿ ಹೇಳುತ್ತಿರುವಿರಾ?
Additional reference in தமிழ்
🎧 ಆಲಿಸಿ
📜 ಆಯತ್ 26-30 — ಸೂರಾ ಅಲ್-ಆರಾಫ್
26يَا بَنِي آدَمَ قَدْ أَنزَلْنَا عَلَيْكُمْ لِبَاسًا يُوَارِي سَوْآتِكُمْ وَرِيشًا ۖ وَلِبَاسُ التَّقْوَىٰ ذَٰلِكَ خَيْرٌ ۚ ذَٰلِكَ مِنْ آيَاتِ اللَّهِ لَعَلَّهُمْ يَذَّكَّرُونَ
ಓ ಆದಮ್‌ನ ಸಂತತಿಗಳೇ, ನಿಮ್ಮ ಗುಹ್ಯಾಂಗಗಳನ್ನು ಮರೆಮಾಚಲಿಕ್ಕೂ ಮತ್ತು ಅಲಂಕಾರದ ಸಾಧನವನ್ನಾಗಿಯೂ ನಾವು ನಿಮ್ಮ ಮೇಲೆ ಉಡುಪನ್ನು ಇಳಿಸಿದ್ದೇವೆ. ಮತ್ತು ಭಯಭಕ್ತಿಯ ಉಡುಪು ಅತ್ಯುತ್ತಮವಾದುದು. ಇದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಇದು ಜನರು ಸ್ಮರಿಸಿಕೊಳ್ಳಲ್ಲೆಂದಾಗಿದೆ.
27يَا بَنِي آدَمَ لَا يَفْتِنَنَّكُمُ الشَّيْطَانُ كَمَا أَخْرَجَ أَبَوَيْكُم مِّنَ الْجَنَّةِ يَنزِعُ عَنْهُمَا لِبَاسَهُمَا لِيُرِيَهُمَا سَوْآتِهِمَا ۗ إِنَّهُ يَرَاكُمْ هُوَ وَقَبِيلُهُ مِنْ حَيْثُ لَا تَرَوْنَهُمْ ۗ إِنَّا جَعَلْنَا الشَّيَاطِينَ أَوْلِيَاءَ لِلَّذِينَ لَا يُؤْمِنُونَ
ಓ ಆದಮ್ ಸಂತತಿಗಳೇ ಶೈತಾನನು ನಿಮ್ಮ ಮಾತಾಪಿತರನ್ನು ಒಬ್ಬರ ಮುಂದೆ ಇನ್ನೊಬ್ಬರ ಗುಹ್ಯಾಂಗಗಳನ್ನು ಗೋಚರಿಸುವಂತೆ ಮಾಡಿ, ಸ್ವರ್ಗದಿಂದ ಹೊರಗಟ್ಟಿದಂತೆ ನಿಮ್ಮನ್ನೂ ದಾರಿಗೆಡಿಸದಿರಲಿ. ಖಂಡಿತವಾಗಿಯು ಅವನು ಮತ್ತು ಅವನ ಸೈನ್ಯದವರು ನೀವು ಅವರನ್ನು ನೋಡದ ಸ್ಥಿತಿಯಲ್ಲಿ ನಿಮ್ಮನ್ನು ನೋಡುತ್ತಾರೆ. ನಾವು ಶೈತಾನರನ್ನು ಸತ್ಯವಿಶ್ವಾಸವಿಡದಂತಹ ಜನರಿಗೆ ಆಪ್ತಮಿತ್ರರನ್ನಾಗಿ ಮಾಡಿದ್ದೇವೆ.
28وَإِذَا فَعَلُوا فَاحِشَةً قَالُوا وَجَدْنَا عَلَيْهَا آبَاءَنَا وَاللَّهُ أَمَرَنَا بِهَا ۗ قُلْ إِنَّ اللَّهَ لَا يَأْمُرُ بِالْفَحْشَاءِ ۖ أَتَقُولُونَ عَلَى اللَّهِ مَا لَا تَعْلَمُونَ
ಅವರು ಯಾವುದಾದರು ನೀಚ ಕೃತ್ಯವನ್ನು ಮಾಡಿದರೆ ಹೇಳುತ್ತಾರೆ: ನಾವು ನಮ್ಮ ಪೂರ್ವಿಕರನ್ನು ಹೀಗೆ ಮಾಡುತ್ತಿರುವುದಾಗಿ ಕಂಡಿದ್ದೇವೆ ಮತ್ತು ಅಲ್ಲಾಹನು ನಮಗೆ ಇದರ ಆಜ್ಞೆಯನ್ನು ನೀಡಿದ್ದಾನೆ. ನೀವು ಹೇಳಿರಿ: ಅಲ್ಲಾಹನು ನೀಚ ಕೃತ್ಯಗಳ ಆದೇಶ ನೀಡುವುದಿಲ್ಲ. ನಿಮಗೆ ಅರಿವಿಲ್ಲದ್ದನ್ನು ನೀವು ಅಲ್ಲಾಹನ ಹೆಸರಿನಲ್ಲಿ ಹೇಳುತ್ತಿರುವಿರಾ?
29قُلْ أَمَرَ رَبِّي بِالْقِسْطِ ۖ وَأَقِيمُوا وُجُوهَكُمْ عِندَ كُلِّ مَسْجِدٍ وَادْعُوهُ مُخْلِصِينَ لَهُ الدِّينَ ۚ كَمَا بَدَأَكُمْ تَعُودُونَ
ಹೇಳಿರಿ: ನನ್ನ ಪ್ರಭುವು ನ್ಯಾಯವನ್ನು ಪಾಲಿಸಬೇಕೆಂದು ನನಗೆ ಆದೇಶಿಸಿದ್ದಾನೆ. ಪ್ರತಿಯೊಂದು ನಮಾಜಿನ ವೇಳೆಯಲ್ಲಿ ನೀವು ಏಕಾಗ್ರಚಿತ್ತರಾಗಿ ಮುಖವನ್ನು ಕಿಬ್ಲದೆಡೆಗೆ ತಿರುಗಿಸಿರಿ ಮತ್ತು ಆರಾಧನೆಯನ್ನು ಅವನಿಗೆ ಮಿಸಲಿಟ್ಟು ಅವನನ್ನು ಪ್ರಾರ್ಥಿಸಿರಿ. ನಿಮ್ಮನ್ನು ಅವನು ಮೊದಲ ಬಾರಿ ಸೃಷ್ಟಿಸಿದಂತೆ (ಮರಣದ ಬಳಿಕ) ನೀವು ಪುನಃ ಸೃಷ್ಟಿಸಲಾಗುವಿರಿ.
30فَرِيقًا هَدَىٰ وَفَرِيقًا حَقَّ عَلَيْهِمُ الضَّلَالَةُ ۗ إِنَّهُمُ اتَّخَذُوا الشَّيَاطِينَ أَوْلِيَاءَ مِن دُونِ اللَّهِ وَيَحْسَبُونَ أَنَّهُم مُّهْتَدُونَ
ಒಂದು ಪಂಗಡವನ್ನು ಅವನು ಸನ್ಮಾರ್ಗಕ್ಕೆ ಸೇರಿಸಿದನು. ಮತ್ತೊಂದು ಪಂಗಡಕ್ಕೆ ಪಥಭ್ರಷ್ಟತೆಯು ನಿಜಗೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ಮಿತ್ರರನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅವರು ತಾವು ಸನ್ಮಾರ್ಗದಲ್ಲಿದ್ದೇವೆಂದು ಭಾವಿಸುತ್ತಾರೆ.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
28ಆಯತ್
ಅನುವಾದ — ಅಲ್-ಆರಾಫ್ 28
ಸೂರಾ ಅಲ್-ಆರಾಫ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಯಾವುದಾದರು ನೀಚ ಕೃತ್ಯವನ್ನು ಮಾಡಿದರೆ ಹೇಳುತ್ತಾರೆ: ನಾವು ನಮ್ಮ ಪೂರ್ವಿಕರನ್ನು ಹೀಗೆ…ಸೂರಾ ಆಯತ್ 28/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 26–30. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers








