ಅಲ್-ಅನ್ಫಾಲ್ · 32/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
وَإِذْ قَالُوا اللَّهُمَّ إِن كَانَ هَٰذَا هُوَ الْحَقَّ مِنْ عِندِكَ فَأَمْطِرْ عَلَيْنَا حِجَارَةً مِّنَ السَّمَاءِ أَوِ ائْتِنَا بِعَذَابٍ أَلِيمٍ ۝٣٢
Wa iz qaalul laahumma in kaana haazaa huwal haqqa min `indika fa amtir `alainaa hijaaratam minas samaaa`i awi`tinaa bi `azaabin alaeem
📖 ಕನ್ನಡ ಅರ್ಥ
ಓ ಅಲ್ಲಾಹ್, ಈ ಖುರ್‌ಆನ್ ನಿಜವಾಗಿಯು ನಿನ್ನ ಬಳಿಯಿಂದಾಗಿದ್ದರೆ ನೀನು ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮ್ಮ ಮೇಲೆ ವೇದನಾಜನಕ ಶಿಕ್ಷೆಯನ್ನು ಎರಗಿಸು ಎಂದು ಅವರು ಹೇಳಿದ ಸಂದರ್ಭ.

🎧 ಆಲಿಸಿ


📜 ಆಯತ್ 30-34 — ಸೂರಾ ಅಲ್-ಅನ್ಫಾಲ್

30وَإِذْ يَمْكُرُ بِكَ الَّذِينَ كَفَرُوا لِيُثْبِتُوكَ أَوْ يَقْتُلُوكَ أَوْ يُخْرِجُوكَ ۚ وَيَمْكُرُونَ وَيَمْكُرُ اللَّهُ ۖ وَاللَّهُ خَيْرُ الْمَاكِرِينَ
ನಿಮ್ಮನ್ನು ಬಂಧಿಸಲು ಅಥವಾ ವಧಿಸಲು ಅಥವಾ ನಿಮ್ಮನ್ನು ನಾಡಿನಿಂದ ಹೊರಗಟ್ಟಲು ನಿಮ್ಮ ವಿರುದ್ಧ ಸತ್ಯನಿಷೇಧಿಗಳು ತಂತ್ರಗಳನ್ನು ಹೂಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವರು ತಮ್ಮ ತಂತ್ರವನ್ನು ಹೂಡುತ್ತಿದ್ದರು ಮತ್ತು ಅಲ್ಲಾಹನು ತನ್ನ ತಂತ್ರವನ್ನು ಹೂಡುತ್ತಿದ್ದನು. ತಂತ್ರ ಹೂಡುವವರಲ್ಲಿ ಅಲ್ಲಾಹನು ಅತ್ಯುತ್ತಮನಾಗಿದ್ದಾನೆ.
31وَإِذَا تُتْلَىٰ عَلَيْهِمْ آيَاتُنَا قَالُوا قَدْ سَمِعْنَا لَوْ نَشَاءُ لَقُلْنَا مِثْلَ هَٰذَا ۙ إِنْ هَٰذَا إِلَّا أَسَاطِيرُ الْأَوَّلِينَ
ಮತ್ತು ಅವರ ಮುಂದೆ ನಮ್ಮ ಸೂಕ್ತಿಗಳನ್ನು ಪಠಿಸಲಾದಾಗ ನಾವು ಆಲಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಇದರಂತಿರುವುದನ್ನು ರಚಿಸಿ ಹೇಳುತ್ತಿದ್ದೆವು. ಮತ್ತು ಇದು ಪೂರ್ವಿಕರಿಂದ ಬಂದ ಕಟ್ಟು ಕತೆಗಳಲ್ಲದೆ ಇನ್ನೇನೂ ಅಲ್ಲ ಎಂದು ಅವರು ಹೇಳುತ್ತಾರೆ.
32وَإِذْ قَالُوا اللَّهُمَّ إِن كَانَ هَٰذَا هُوَ الْحَقَّ مِنْ عِندِكَ فَأَمْطِرْ عَلَيْنَا حِجَارَةً مِّنَ السَّمَاءِ أَوِ ائْتِنَا بِعَذَابٍ أَلِيمٍ
ಓ ಅಲ್ಲಾಹ್, ಈ ಖುರ್‌ಆನ್ ನಿಜವಾಗಿಯು ನಿನ್ನ ಬಳಿಯಿಂದಾಗಿದ್ದರೆ ನೀನು ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮ್ಮ ಮೇಲೆ ವೇದನಾಜನಕ ಶಿಕ್ಷೆಯನ್ನು ಎರಗಿಸು ಎಂದು ಅವರು ಹೇಳಿದ ಸಂದರ್ಭ.
33وَمَا كَانَ اللَّهُ لِيُعَذِّبَهُمْ وَأَنتَ فِيهِمْ ۚ وَمَا كَانَ اللَّهُ مُعَذِّبَهُمْ وَهُمْ يَسْتَغْفِرُونَ
ನೀವು ಅವರ ನಡುವೆಯಿರುವಾಗ, ಅಲ್ಲಾಹನು ಅವರನ್ನು ಶಿಕ್ಷಿಸುವುದಿಲ್ಲ. ಮತ್ತು ಅವರು ಪಾಪವಿಮೋಚನೆಯನ್ನು ಬೇಡುತ್ತಿರುವಾಗಲೂ ಅಲ್ಲಾಹನು ಅವರಿಗೆ ಶಿಕ್ಷಿಸುವುದಿಲ್ಲ.
34وَمَا لَهُمْ أَلَّا يُعَذِّبَهُمُ اللَّهُ وَهُمْ يَصُدُّونَ عَنِ الْمَسْجِدِ الْحَرَامِ وَمَا كَانُوا أَوْلِيَاءَهُ ۚ إِنْ أَوْلِيَاؤُهُ إِلَّا الْمُتَّقُونَ وَلَٰكِنَّ أَكْثَرَهُمْ لَا يَعْلَمُونَ
ಅಲ್ಲಾಹನು ಅವರಿಗೆ ಶಿಕ್ಷಿಸದಿರಲು ಅವರಲ್ಲಿ ಯಾವ ಅರ್ಹತೆಯಿದೆ? ವಸ್ತುತಃ ಅವರು ಮಸ್ಜಿದುಲ್ ಹರಾಮ್‌ನಿಂದ ಜನರನ್ನು ತಡೆಯುತ್ತಾರೆ. ಅವರು ಅದರ ಮೇಲ್ವಿಚಾರಕರೂ ಅಲ್ಲ. ಭಯಭಕ್ತಿಯುಳ್ಳವರ ಹೊರತು ಇನ್ನಾರೂ ಅದರ ಮೇಲ್ವಿಚಾರಕರಾಗಲಾರರು. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
32ಆಯತ್

ಅನುವಾದ — ಅಲ್-ಅನ್ಫಾಲ್ 32

ಸೂರಾ ಅಲ್-ಅನ್ಫಾಲ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಅಲ್ಲಾಹ್, ಈ ಖುರ್‌ಆನ್ ನಿಜವಾಗಿಯು ನಿನ್ನ ಬಳಿಯಿಂದಾಗಿದ್ದರೆ ನೀನು ನಮ್ಮ ಮೇಲೆ…

ಸೂರಾ ಆಯತ್ 32/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 30–34. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers