ಅತ್-ತೌಬಾ · 27/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
ثُمَّ يَتُوبُ اللَّهُ مِن بَعْدِ ذَٰلِكَ عَلَىٰ مَن يَشَاءُ ۗ وَاللَّهُ غَفُورٌ رَّحِيمٌ ۝٢٧
Summa yatoobul laahu mim ba`di zaalika `alaa mai yashaaa`; wallaahu Ghafoorur Raheem
📖 ಕನ್ನಡ ಅರ್ಥ
ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅತ್-ತೌಬಾ

25لَقَدْ نَصَرَكُمُ اللَّهُ فِي مَوَاطِنَ كَثِيرَةٍ ۙ وَيَوْمَ حُنَيْنٍ ۙ إِذْ أَعْجَبَتْكُمْ كَثْرَتُكُمْ فَلَمْ تُغْنِ عَنكُمْ شَيْئًا وَضَاقَتْ عَلَيْكُمُ الْأَرْضُ بِمَا رَحُبَتْ ثُمَّ وَلَّيْتُم مُّدْبِرِينَ
ಖಂಡಿತವಾಗಿಯು ಅಲ್ಲಾಹನು ಅನೇಕ ರಣರಂಗಗಳಲ್ಲಿ ನಿಮಗೆ ಸಹಾಯವನ್ನು ಮಾಡಿದ್ದಾನೆ. ಮತ್ತು ಹುನೈನ್ ಕಾಳಗದ ದಿನ ನಿಮಗೆ ನಿಮ್ಮ ಅಧಿಕ ಸಂಖ್ಯೆಯು ಅಭಿಮಾನ ಪಡುವಂತೆ ಮಾಡಿತು. ಆದರೆ ಅದು ನಿಮಗೆ ಯಾವುದೇ ಪ್ರಯೋಜನವನ್ನೂ ನೀಡಲಿಲ್ಲ. ಮಾತ್ರವಲ್ಲ ಭೂಮಿಯು ವಿಶಾಲವಾಗಿದ್ದರೂ ನಿಮ್ಮ ಪಾಲಿಗೆ ಇಕ್ಕಟ್ಟಾಗಿ ಪರಿಣಮಿಸಿತು. ನಂತರ ನೀವು ಬೆನ್ನು ತಿರುಗಿಸಿ ಓಡಿದಿರಿ.
26ثُمَّ أَنزَلَ اللَّهُ سَكِينَتَهُ عَلَىٰ رَسُولِهِ وَعَلَى الْمُؤْمِنِينَ وَأَنزَلَ جُنُودًا لَّمْ تَرَوْهَا وَعَذَّبَ الَّذِينَ كَفَرُوا ۚ وَذَٰلِكَ جَزَاءُ الْكَافِرِينَ
ನಂತರ ಅಲ್ಲಾಹನು ತನ್ನ ಕಡೆಯಿಂದ ತನ್ನ ಸಂದೇಶವಾಹಕರ ಮತ್ತು ಸತ್ಯವಿಶ್ವಾಸಿಗಳ ಮೇಲೆ ಮನಃಶಾಂತಿಯನ್ನು ಇಳಿಸಿದನು ಮತ್ತು ನೀವು ನೋಡಲು ಸಾಧ್ಯವಿಲ್ಲದಂತಹ ಕೆಲವು ಸೈನ್ಯಗಳನ್ನೂ ಇಳಿಸಿದನು ಮತ್ತು ಅವನು ಸತ್ಯನಿಷೇಧಿಗಳನ್ನು ಪರಿಪೂರ್ಣವಾಗಿ ಶಿಕ್ಷಿಸಿದನು. ಆ ಸತ್ಯನಿಷೇಧಿಗಳಿಗಿರುವ ಪ್ರತಿಕಾರವು ಇದೇ ಆಗಿದೆ.
27ثُمَّ يَتُوبُ اللَّهُ مِن بَعْدِ ذَٰلِكَ عَلَىٰ مَن يَشَاءُ ۗ وَاللَّهُ غَفُورٌ رَّحِيمٌ
ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.
28يَا أَيُّهَا الَّذِينَ آمَنُوا إِنَّمَا الْمُشْرِكُونَ نَجَسٌ فَلَا يَقْرَبُوا الْمَسْجِدَ الْحَرَامَ بَعْدَ عَامِهِمْ هَٰذَا ۚ وَإِنْ خِفْتُمْ عَيْلَةً فَسَوْفَ يُغْنِيكُمُ اللَّهُ مِن فَضْلِهِ إِن شَاءَ ۚ إِنَّ اللَّهَ عَلِيمٌ حَكِيمٌ
ಓ ಸತ್ಯವಿಶ್ವಾಸಿಗಳೇ, ನಿಸ್ಸಂಶಯವಾಗಿಯು ಬಹುದೇವವಿಶ್ವಾಸಿಗಳು ಮಲಿನರಾಗಿದ್ದಾರೆ. ಆದ್ದರಿಂದ ಅವರು ಈ ವರ್ಷದ ಬಳಿಕ ಮಸ್ಜಿದುಲ್ ಹರಾಮ್‌ನ ಸಮೀಪಕ್ಕು ಬರದಿರಲಿ. ನಿಮಗೆ ದಾರಿದ್ರö್ಯದ ಭಯವಿದ್ದರೆ ಅಲ್ಲಾಹನು ಇಚ್ಛಿಸಿದರೆ ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನಗೊಳಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
29قَاتِلُوا الَّذِينَ لَا يُؤْمِنُونَ بِاللَّهِ وَلَا بِالْيَوْمِ الْآخِرِ وَلَا يُحَرِّمُونَ مَا حَرَّمَ اللَّهُ وَرَسُولُهُ وَلَا يَدِينُونَ دِينَ الْحَقِّ مِنَ الَّذِينَ أُوتُوا الْكِتَابَ حَتَّىٰ يُعْطُوا الْجِزْيَةَ عَن يَدٍ وَهُمْ صَاغِرُونَ
ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು ನಿಷಿದ್ಧಗೊಳಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸಿದವರೊಡನೆ ಯುದ್ಧ ಮಾಡಿರಿ. ಹಾಗೂ ಸತ್ಯ ಧರ್ಮವನ್ನು ಸ್ವೀಕರಿಸದವರು ಯಾರೋ ಅವರು ಅಪಮಾನಿತರೂ, ನಿಂದ್ಯರೂ ಆಗಿ ತಮ್ಮ ಕೈಯಿಂದ ಜಿಜಿಯಾ (ತೆರಿಗೆ) ಪಾವತಿಸುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
27ಆಯತ್

ಅನುವಾದ — ಅತ್-ತೌಬಾ 27

ಸೂರಾ ಅತ್-ತೌಬಾ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು…

ಸೂರಾ ಆಯತ್ 27/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers