ಅತ್-ತೌಬಾ · 98/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
وَمِنَ الْأَعْرَابِ مَن يَتَّخِذُ مَا يُنفِقُ مَغْرَمًا وَيَتَرَبَّصُ بِكُمُ الدَّوَائِرَ ۚ عَلَيْهِمْ دَائِرَةُ السَّوْءِ ۗ وَاللَّهُ سَمِيعٌ عَلِيمٌ ۝٩٨
Wa minal A`raabi mai yattakhizu maa yunfiqu maghramanw wa yatarabbasu bikumud dawaaa`ir; alaihim daaa`iratus saw`; wallaahu Samee`un `Aleem
📖 ಕನ್ನಡ ಅರ್ಥ
ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ದಂಡವೆAದು ಭಾವಿಸುವ ಮತ್ತು ನಿಮ್ಮ ಮೇಲೆ ವಿಪತ್ತುಗಳು ಎರಗಲೆಂದು ನಿರೀಕ್ಷಿಸುವ ಕೂಟವೂ ಗ್ರಾಮೀಣವಾಸಿಗಳಲ್ಲಿದೆ. ವಿಪತ್ತುಗಳಂತೂ ಅವರ ಮೇಲೆಯೇ ಎರಗಲಿವೆ ಮತ್ತು ಅಲ್ಲಾಹನು ಸರ್ವವನ್ನು ಆಲಿಸುವವನು, ಅರಿಯುವವನೂ ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 96-100 — ಸೂರಾ ಅತ್-ತೌಬಾ

96يَحْلِفُونَ لَكُمْ لِتَرْضَوْا عَنْهُمْ ۖ فَإِن تَرْضَوْا عَنْهُمْ فَإِنَّ اللَّهَ لَا يَرْضَىٰ عَنِ الْقَوْمِ الْفَاسِقِينَ
ನೀವು ಅವರ ಬಗ್ಗೆ ಸಂತೃಪ್ತರಾಗುವುದಕ್ಕಾಗಿ ಅವರು ನಿಮ್ಮ ಮುಂದೆ ಆಣೆ ಹಾಕುತ್ತಾರೆ. ನೀವು ಅವರ ಬಗ್ಗೆ ಸಂತೃಪ್ತರಾದರೂ ಅಲ್ಲಾಹನಂತು ಅಂತಹ ಧಿಕ್ಕಾರಿಗಳಾದ ಜನರ ಬಗ್ಗೆ ಸಂತೃಪ್ತನಾಗುವುದಿಲ್ಲ.
97الْأَعْرَابُ أَشَدُّ كُفْرًا وَنِفَاقًا وَأَجْدَرُ أَلَّا يَعْلَمُوا حُدُودَ مَا أَنزَلَ اللَّهُ عَلَىٰ رَسُولِهِ ۗ وَاللَّهُ عَلِيمٌ حَكِيمٌ
ಗ್ರಾಮೀಣ ನಿವಾಸಿಗಳು ಸತ್ಯನಿಷೇಧ ಮತ್ತು ಕಾಪಟ್ಯದಲ್ಲಿ ಅತ್ಯಂತ ಕಠಿಣರಾಗಿದ್ದಾರೆ. ಅಲ್ಲಾಹನು ತನ್ನ ಸಂದೇಶವಾಹಕರ ಮೇಲೆ ಅವತೀರ್ಣಗೊಳಿಸಿದ (ಮೇರೆ) ನಿಯಮಗಳನ್ನು ಅವರು ಅರಿಯದಿರುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
98وَمِنَ الْأَعْرَابِ مَن يَتَّخِذُ مَا يُنفِقُ مَغْرَمًا وَيَتَرَبَّصُ بِكُمُ الدَّوَائِرَ ۚ عَلَيْهِمْ دَائِرَةُ السَّوْءِ ۗ وَاللَّهُ سَمِيعٌ عَلِيمٌ
ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ದಂಡವೆAದು ಭಾವಿಸುವ ಮತ್ತು ನಿಮ್ಮ ಮೇಲೆ ವಿಪತ್ತುಗಳು ಎರಗಲೆಂದು ನಿರೀಕ್ಷಿಸುವ ಕೂಟವೂ ಗ್ರಾಮೀಣವಾಸಿಗಳಲ್ಲಿದೆ. ವಿಪತ್ತುಗಳಂತೂ ಅವರ ಮೇಲೆಯೇ ಎರಗಲಿವೆ ಮತ್ತು ಅಲ್ಲಾಹನು ಸರ್ವವನ್ನು ಆಲಿಸುವವನು, ಅರಿಯುವವನೂ ಆಗಿದ್ದಾನೆ.
99وَمِنَ الْأَعْرَابِ مَن يُؤْمِنُ بِاللَّهِ وَالْيَوْمِ الْآخِرِ وَيَتَّخِذُ مَا يُنفِقُ قُرُبَاتٍ عِندَ اللَّهِ وَصَلَوَاتِ الرَّسُولِ ۚ أَلَا إِنَّهَا قُرْبَةٌ لَّهُمْ ۚ سَيُدْخِلُهُمُ اللَّهُ فِي رَحْمَتِهِ ۗ إِنَّ اللَّهَ غَفُورٌ رَّحِيمٌ
ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವ ಕೂಟವೊಂದು ಗ್ರಾಮೀಣವಾಸಿಗಳಲ್ಲಿದೆ. ಮತ್ತು ಅವÀರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಅಲ್ಲಾಹನ ಸಾಮೀಪ್ಯ ಸಾಧನವನ್ನಾಗಿಯೂ, ಮತ್ತು ಸಂದೇಶವಾಹಕರ ಕಡೆಯಿಂದ ಕೃಪಾಶೀರ್ವಾದ ಪಡೆಯುವ ಸಾಧನ ವನ್ನಾಗಿಯೂ ಮಾಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ: ನಿಸ್ಸಂಶಯವಾಗಿಯೂ ಇದು ಅವರಿಗೆ ಸಾಮೀಪ್ಯಕ್ಕಿರುವ ಸಾಧನವಾಗಿದೆ. ಸಧ್ಯದಲ್ಲೇ ಅಲ್ಲಾಹನು ಅವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
100وَالسَّابِقُونَ الْأَوَّلُونَ مِنَ الْمُهَاجِرِينَ وَالْأَنصَارِ وَالَّذِينَ اتَّبَعُوهُم بِإِحْسَانٍ رَّضِيَ اللَّهُ عَنْهُمْ وَرَضُوا عَنْهُ وَأَعَدَّ لَهُمْ جَنَّاتٍ تَجْرِي تَحْتَهَا الْأَنْهَارُ خَالِدِينَ فِيهَا أَبَدًا ۚ ذَٰلِكَ الْفَوْزُ الْعَظِيمُ
ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯವಿಶ್ವಾಸದಲ್ಲಿ) ಮೂಂಚೂಣಿ ಯಲ್ಲಿರುವ ಮತ್ತು ಅವರನ್ನು ನಿಷ್ಕಳಂಕದೊAದಿಗೆ ಅನುಸರಿಸಿದವರ ಬಗ್ಗೆ ಅಲ್ಲಾಹನು ಸಂತುಷ್ಟನಾಗಿರುವನು ಮತ್ತು ಅವರೆಲ್ಲರೂ ಅವನ ಬಗ್ಗೆ ಸಂತೃಪ್ತರಾಗಿರುವರು ಮತ್ತು ಅಲ್ಲಾಹನು ಅವರಿಗೋಸ್ಕರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ತೋಟಗಳನ್ನು ಸಿದ್ಧಗೊಳಿಸಿಟ್ಟಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಇದು ಮಹಾ ಯಶಸ್ಸಾಗಿದೆ.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
98ಆಯತ್

ಅನುವಾದ — ಅತ್-ತೌಬಾ 98

ಸೂರಾ ಅತ್-ತೌಬಾ ಆಯತ್ 98 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ದಂಡವೆAದು ಭಾವಿಸುವ ಮತ್ತು ನಿಮ್ಮ ಮೇಲೆ ವಿಪತ್ತುಗಳು…

ಸೂರಾ ಆಯತ್ 98/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 96–100. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers