ಯೂನುಸ್ · 26/109
ಅನುವಾದ ಉಚ್ಚಾರಣೆ — ಸೂರಾ ಯೂನುಸ್
۞ لِّلَّذِينَ أَحْسَنُوا الْحُسْنَىٰ وَزِيَادَةٌ ۖ وَلَا يَرْهَقُ وُجُوهَهُمْ قَتَرٌ وَلَا ذِلَّةٌ ۚ أُولَٰئِكَ أَصْحَابُ الْجَنَّةِ ۖ هُمْ فِيهَا خَالِدُونَ ۝٢٦
Lillazeena ahsanul husnaa wa ziyaadahtunw wa laa yarhaqu wujoohahum qatarunw wa laa zillah; ulaaa`ika ashaabul jannnati hum feehaa khaalidoon
📖 ಕನ್ನಡ ಅರ್ಥ
ಒಳಿತನ್ನು ಮಾಡಿದವರಿಗೆ ಅತ್ತುö್ಯತ್ತಮ ಪ್ರತಿಫಲವಿದೆ, ಇನ್ನೂ ಹೆಚ್ಚು ಅನುಗ್ರಹವೂ ಇದೆ ಮತ್ತು ಅವರ ಮುಖಗಳಿಗೆ ಕಪ್ಪು ಛಾಯೆಯಾಗಲಿ ನಿಂದ್ಯತೆಯಾಗಲಿ ಆವರಿಸದು. ಅವರು ಸ್ವರ್ಗವಾಸಿಗಳಾಗಿರುವರು, ಅದರಲ್ಲವರು ಶಾಶ್ವತರಾಗಿರುತ್ತಾರೆ.

🎧 ಆಲಿಸಿ


📜 ಆಯತ್ 24-28 — ಸೂರಾ ಯೂನುಸ್

24إِنَّمَا مَثَلُ الْحَيَاةِ الدُّنْيَا كَمَاءٍ أَنزَلْنَاهُ مِنَ السَّمَاءِ فَاخْتَلَطَ بِهِ نَبَاتُ الْأَرْضِ مِمَّا يَأْكُلُ النَّاسُ وَالْأَنْعَامُ حَتَّىٰ إِذَا أَخَذَتِ الْأَرْضُ زُخْرُفَهَا وَازَّيَّنَتْ وَظَنَّ أَهْلُهَا أَنَّهُمْ قَادِرُونَ عَلَيْهَا أَتَاهَا أَمْرُنَا لَيْلًا أَوْ نَهَارًا فَجَعَلْنَاهَا حَصِيدًا كَأَن لَّمْ تَغْنَ بِالْأَمْسِ ۚ كَذَٰلِكَ نُفَصِّلُ الْآيَاتِ لِقَوْمٍ يَتَفَكَّرُونَ
ವಾಸ್ತವದಲ್ಲಿ ಐಹಿಕ ಜೀವನದ ಉದಾಹರಣೆಯು ಆಕಾಶದಿಂದ ನಾವು ಸುರಿಸಿರುವಂತಹಾ ಮಳೆಯಂತಿದೆ. ಬಳಿಕ ಅದರೊಂದಿಗೆ ಮನುಷ್ಯರು ಮತ್ತು ಪ್ರಾಣಿಗಳು ತಿನ್ನುವ ಭೂಮಿಯ ಬೆಳೆಗಳು ಮಿಶ್ರಿತಗೊಂಡು ಹುಲುಸಾಗಿ ಬೆಳೆದವು. ಕೊನೆಗೆ ಭೂಮಿಯು ತನ್ನ ಸಂಪೂರ್ಣ ಶೋಭಾಲಂಕಾರವನ್ನು ಪಡೆದಾಗ ಹಾಗು ಸುಂದರವಾಗಿ ಕಂಗೊಳಿಸಿದಾಗ ಮತ್ತು ಅದರ ಮೇಲೆ ನಾವು ಸಾಮರ್ಥ್ಯವುಳ್ಳವರೆಂದು ಅದರ ಮಾಲೀಕರು ಭಾವಿಸಿಕೊಂಡಾಗ ನಮ್ಮ ಕಡೆಯಿಂದ ಒಂದು ಆಜ್ಞೆಯು(ಶಿಕ್ಷೆಯು) ರಾತ್ರಿ ಅಥವ ಹಗಲಿನ ವೇಳೆಯಲ್ಲಿ ಬಂದುಬಿಟ್ಟಿತು. ಕೊನೆಗೆ ನಾವದನ್ನು ನಿನ್ನೆಯ ದಿನ ಇರಲೇ ಇಲ್ಲವೆಂಬAತೆ ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟೆವು, ಇದೇ ಪ್ರಕಾರ ನಾವು ಚಿಂತಿಸುವ ಜನರಿಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
25وَاللَّهُ يَدْعُو إِلَىٰ دَارِ السَّلَامِ وَيَهْدِي مَن يَشَاءُ إِلَىٰ صِرَاطٍ مُّسْتَقِيمٍ
ಅಲ್ಲಾಹನು ಶಾಂತಿಧಾಮದೆಡೆಗೆ ಕರೆಯುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅವನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
26۞ لِّلَّذِينَ أَحْسَنُوا الْحُسْنَىٰ وَزِيَادَةٌ ۖ وَلَا يَرْهَقُ وُجُوهَهُمْ قَتَرٌ وَلَا ذِلَّةٌ ۚ أُولَٰئِكَ أَصْحَابُ الْجَنَّةِ ۖ هُمْ فِيهَا خَالِدُونَ
ಒಳಿತನ್ನು ಮಾಡಿದವರಿಗೆ ಅತ್ತುö್ಯತ್ತಮ ಪ್ರತಿಫಲವಿದೆ, ಇನ್ನೂ ಹೆಚ್ಚು ಅನುಗ್ರಹವೂ ಇದೆ ಮತ್ತು ಅವರ ಮುಖಗಳಿಗೆ ಕಪ್ಪು ಛಾಯೆಯಾಗಲಿ ನಿಂದ್ಯತೆಯಾಗಲಿ ಆವರಿಸದು. ಅವರು ಸ್ವರ್ಗವಾಸಿಗಳಾಗಿರುವರು, ಅದರಲ್ಲವರು ಶಾಶ್ವತರಾಗಿರುತ್ತಾರೆ.
27وَالَّذِينَ كَسَبُوا السَّيِّئَاتِ جَزَاءُ سَيِّئَةٍ بِمِثْلِهَا وَتَرْهَقُهُمْ ذِلَّةٌ ۖ مَّا لَهُم مِّنَ اللَّهِ مِنْ عَاصِمٍ ۖ كَأَنَّمَا أُغْشِيَتْ وُجُوهُهُمْ قِطَعًا مِّنَ اللَّيْلِ مُظْلِمًا ۚ أُولَٰئِكَ أَصْحَابُ النَّارِ ۖ هُمْ فِيهَا خَالِدُونَ
ಮತ್ತು ದುಷ್ಕೃತ್ಯಗಳನ್ನು ಮಾಡಿದವರಿಗೆ ದುಷ್ಕೃತ್ಯಗಳ ಪ್ರತಿಫಲವು ಅದಕ್ಕೆ ಸಮಾನವಾಗಿಯೇ ಇರುವುದು ಮತ್ತು ಅವರನ್ನು ನಿಂದ್ಯತೆಯು ಆವರಿಸುವುದು ಅವರನ್ನು ಅಲ್ಲಾಹನಿಂದ ಯಾವೊಬ್ಬನೂ ರಕ್ಷಿಸಲಾರನು. ಅವರ ಮುಖಗಳ ಮೇಲೆ ಅಂಧಕಾರದ ರಾತ್ರಿಯ ತುಣುಕುಗಳು ಆವರಿಸಿದಂತಿವೆ. ಅವರು ನರಕವಾಸಿಗಳಾಗಿರುವರು. ಅದರಲ್ಲವರು ಶಾಶ್ವತವಾಗಿರುವರು.
28وَيَوْمَ نَحْشُرُهُمْ جَمِيعًا ثُمَّ نَقُولُ لِلَّذِينَ أَشْرَكُوا مَكَانَكُمْ أَنتُمْ وَشُرَكَاؤُكُمْ ۚ فَزَيَّلْنَا بَيْنَهُمْ ۖ وَقَالَ شُرَكَاؤُهُم مَّا كُنتُمْ إِيَّانَا تَعْبُدُونَ
ಅವರೆಲ್ಲರನ್ನು ಒಟ್ಟುಗೂಡಿಸುವ ದಿನದಂದು ನಾವು ನಮ್ಮ ಜೊತೆ ಸಹಭಾಗಿಗಳನ್ನು ನಿಶ್ಚಯಿಸಿದವರೊಂದಿಗೆ ಹೇಳುವೆವು; “ನೀವು ಮತ್ತು ನಿಮ್ಮ ಸಹಭಾಗಿ ದೇವರುಗಳು ನಿಂತಲ್ಲೇ ನಿಲ್ಲಿರಿ. ಅನಂತರ ನಾವು ಅವರನ್ನು ಪರಸ್ಪರ ಬೇರ್ಪಡಿಸಿಬಿಡುವೆವು ಮತ್ತು (ಅವರೊಂದಿಗೆ) ಅವರ ಸಹಭಾಗಿ ದೇವರುಗಳೆನ್ನುವರು; ನೀವು ನಮ್ಮನ್ನಂತು ಆರಾಧಿಸುತ್ತಿರಲಿಲ್ಲ”
ಯೂನುಸ್ಕುರಾನ್ ಸೂಚಿ
109ಆಯತ್
MeccanRevelation
26ಆಯತ್

ಅನುವಾದ — ಯೂನುಸ್ 26

ಸೂರಾ ಯೂನುಸ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಒಳಿತನ್ನು ಮಾಡಿದವರಿಗೆ ಅತ್ತುö್ಯತ್ತಮ ಪ್ರತಿಫಲವಿದೆ, ಇನ್ನೂ ಹೆಚ್ಚು ಅನುಗ್ರಹವೂ ಇದೆ ಮತ್ತು ಅವರ…

ಸೂರಾ ಆಯತ್ 26/109 — ಸೂರಾ ಯೂನುಸ್ يونس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂನುಸ್ ಆಲಿಸಿ, ಸೂರಾ ಯೂನುಸ್ ಅನುವಾದ, ಸೂರಾ ಯೂನುಸ್ mp3, ಸೂರಾ ಯೂನುಸ್ pdf. ಆಯತ್ 24–28. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers