ಅಲ್-ಬಕರಾ · 127/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
وَإِذْ يَرْفَعُ إِبْرَاهِيمُ الْقَوَاعِدَ مِنَ الْبَيْتِ وَإِسْمَاعِيلُ رَبَّنَا تَقَبَّلْ مِنَّا ۖ إِنَّكَ أَنتَ السَّمِيعُ الْعَلِيمُ ۝١٢٧
Wa iz yarfa`u Ibraaheemul qawaa`ida minal Baitiwa Ismaa`eelu Rabbanaa taqabbal minnaa innaka Antas Samee`ul Aleem
📖 ಕನ್ನಡ ಅರ್ಥ
ಸ್ಮರಿಸಿರಿ ಇಬ್ರಾಹೀಮ್(ಅ) ಮತ್ತು ಇಸ್ಮಾಯೀಲ(ಅ)ರು ಕಾಅಬಾದ ಅಡಿಪಾಯವನ್ನು ಎರಿಸುತ್ತಾ ಹೀಗೆ ಪ್ರಾರ್ಥಿಸುತ್ತಿದ್ದರು; ನಮ್ಮ ಪ್ರಭುವೇ, ನಮ್ಮಿಂದ ಈ ಕಾರ್ಯವನ್ನು ಸ್ವೀಕರಿಸು. ನೀನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯು ಆಗಿರುವೆ.

🎧 ಆಲಿಸಿ


📜 ಆಯತ್ 125-129 — ಸೂರಾ ಅಲ್-ಬಕರಾ

125وَإِذْ جَعَلْنَا الْبَيْتَ مَثَابَةً لِّلنَّاسِ وَأَمْنًا وَاتَّخِذُوا مِن مَّقَامِ إِبْرَاهِيمَ مُصَلًّى ۖ وَعَهِدْنَا إِلَىٰ إِبْرَاهِيمَ وَإِسْمَاعِيلَ أَن طَهِّرَا بَيْتِيَ لِلطَّائِفِينَ وَالْعَاكِفِينَ وَالرُّكَّعِ السُّجُودِ
ನಾವು ಕಾಬಾಭವನವನ್ನು ಜನರಿಗೆ ಪುಣ್ಯ ಹಾಗೂ ಶಾಂತಿಯ ಸಮ್ಮಿಲನ ಕೇಂದ್ರವನ್ನಾಗಿ ನಿಶ್ಚಿಯಿಸಿದೆವು. ನೀವು ಇಬ್ರಾಹೀಮರ ಆರಾಧನ ಸ್ಥಳವನ್ನು ನಮಾಝ್‌ನ ಸ್ಥಳವನ್ನಾಗಿ ಮಾಡಿಕೊಳ್ಳಿರಿ ಮತ್ತು ನನ್ನ ಭವನವನ್ನು ಪ್ರದಕ್ಷಣೆಗೈಯ್ಯುವವರಿಗಾಗಿಯು, ಧ್ಯಾನಸ್ಥರಾಗಿ ಕುಳಿತುಕೊಳ್ಳುವವರಿಗಾಗಿಯು ಬಾಗುವವರಿಗಾಗಿಯು ಮತ್ತು ಸಾಷ್ಟಾಂಗ ಮಾಡುವವರಿಗಾಗಿಯು ಸ್ವಚ್ಛವಾಗಿಡಿರಿ ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಯೀಲರಿಗೆ ಆದೇಶ ನೀಡಿದೆವು.
126وَإِذْ قَالَ إِبْرَاهِيمُ رَبِّ اجْعَلْ هَٰذَا بَلَدًا آمِنًا وَارْزُقْ أَهْلَهُ مِنَ الثَّمَرَاتِ مَنْ آمَنَ مِنْهُم بِاللَّهِ وَالْيَوْمِ الْآخِرِ ۖ قَالَ وَمَن كَفَرَ فَأُمَتِّعُهُ قَلِيلًا ثُمَّ أَضْطَرُّهُ إِلَىٰ عَذَابِ النَّارِ ۖ وَبِئْسَ الْمَصِيرُ
(ಆಗ ಇಬ್ರಾಹೀಮ್(ಅ) ಹೇಳಿದರು) ನನ್ನ ಪ್ರಭುವೇ, ಈ ಪ್ರದೇಶವನ್ನು ಶಾಂತಿಯ ನಾಡನ್ನಾಗಿ ಮಾಡು ಮತ್ತು ಇದರ ವಾಸಿಗಳ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಿಗೆ ಫಲ ವೃಕ್ಷಾದಿಗಳಿಂದ ಆಹಾರವನ್ನು ನೀಡು ಎಂದು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹನು ಹೇಳಿದನು. ನಾನು ಸತ್ಯನಿಷೇಧಿಗಳಿಗೂ ತಾತ್ಕಾಲಿಕ ಸುಖಭೋಗವನ್ನು ನೀಡುವೆನು ಅನಂತರ (ಸತ್ಯನಿಷೇಧದ ನಿಮಿತ್ತ) ಅವರನ್ನು ನರಕ ಯಾತನೆಯೆಡೆಗೆ ಬರಲು ಅನಿವಾರ್ಯಗೊಳಿಸುವೆನು. ಅವರು ತಲುಪುವ ಸ್ಥಳವು ಅತೀ ನಿಕೃಷ್ಟವಾಗಿದೆ.
127وَإِذْ يَرْفَعُ إِبْرَاهِيمُ الْقَوَاعِدَ مِنَ الْبَيْتِ وَإِسْمَاعِيلُ رَبَّنَا تَقَبَّلْ مِنَّا ۖ إِنَّكَ أَنتَ السَّمِيعُ الْعَلِيمُ
ಸ್ಮರಿಸಿರಿ ಇಬ್ರಾಹೀಮ್(ಅ) ಮತ್ತು ಇಸ್ಮಾಯೀಲ(ಅ)ರು ಕಾಅಬಾದ ಅಡಿಪಾಯವನ್ನು ಎರಿಸುತ್ತಾ ಹೀಗೆ ಪ್ರಾರ್ಥಿಸುತ್ತಿದ್ದರು; ನಮ್ಮ ಪ್ರಭುವೇ, ನಮ್ಮಿಂದ ಈ ಕಾರ್ಯವನ್ನು ಸ್ವೀಕರಿಸು. ನೀನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯು ಆಗಿರುವೆ.
128رَبَّنَا وَاجْعَلْنَا مُسْلِمَيْنِ لَكَ وَمِن ذُرِّيَّتِنَا أُمَّةً مُّسْلِمَةً لَّكَ وَأَرِنَا مَنَاسِكَنَا وَتُبْ عَلَيْنَا ۖ إِنَّكَ أَنتَ التَّوَّابُ الرَّحِيمُ
ನಮ್ಮ ಪ್ರಭುವೇ, ನಮ್ಮನ್ನು ನಿನ್ನ ವಿಧೇಯದಾಸರನ್ನಾಗಿ ಮಾಡು ಮತ್ತು ನಮ್ಮ ಸಂತತಿಗಳಿAದಲೂ ಒಂದು ಸಮುದಾಯವನ್ನು ನಿನಗೆ ವಿಧೇಯರನ್ನಾಗಿ ಮಾಡು ಹಾಗೂ ನಮಗೆ ಆರಾಧನಾ ಕ್ರಮಗಳನ್ನು ತೋರಿಸಿ ಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನಿಸ್ಸಂಶಯವಾಗಿಯು ನೀನೇ ಪಶ್ಚಾತ್ತಾಪ ಸ್ವೀಕರಿಸುವವನು, ಕರುಣಾನಿಧಿಯು ಆಗಿರುವೆ.
129رَبَّنَا وَابْعَثْ فِيهِمْ رَسُولًا مِّنْهُمْ يَتْلُو عَلَيْهِمْ آيَاتِكَ وَيُعَلِّمُهُمُ الْكِتَابَ وَالْحِكْمَةَ وَيُزَكِّيهِمْ ۚ إِنَّكَ أَنتَ الْعَزِيزُ الْحَكِيمُ
ನಮ್ಮ ಪ್ರಭುವೇ ಅವರಿಂದಲೇ ಒಬ್ಬ ಸಂದೇಶವಾಹಕನನ್ನು (ಅವರ ಮಾರ್ಗದರ್ಶನಕ್ಕಾಗಿ) ಅವರಲ್ಲಿ ನಿಯೋಗಿಸು. ಅವರು ಅವರ ಮುಂದೆ ನಿನ್ನ ಸೂಕ್ತಿಗಳನ್ನು ಓದಿ ಹೇಳುತ್ತಾ ಅವರಿಗೆ ಗ್ರಂಥವನ್ನು, ಸುಜ್ಞಾನವನ್ನೂ ಕಲಿಸುತ್ತಾ ಅವರನ್ನು ಸಂಸ್ಕರಿಸಲಿ. ವಾಸ್ತವದಲ್ಲಿ ನೀನು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆಗಿರುವೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
127ಆಯತ್

ಅನುವಾದ — ಅಲ್-ಬಕರಾ 127

ಸೂರಾ ಅಲ್-ಬಕರಾ ಆಯತ್ 127 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ಮರಿಸಿರಿ ಇಬ್ರಾಹೀಮ್(ಅ) ಮತ್ತು ಇಸ್ಮಾಯೀಲ(ಅ)ರು ಕಾಅಬಾದ ಅಡಿಪಾಯವನ್ನು ಎರಿಸುತ್ತಾ ಹೀಗೆ ಪ್ರಾರ್ಥಿಸುತ್ತಿದ್ದರು; ನಮ್ಮ…

ಸೂರಾ ಆಯತ್ 127/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 125–129. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers